• Home
  • »
  • News
  • »
  • business
  • »
  • Flight Ticket: ನಿಮ್ಮ ಫ್ಲೈಟ್​ ಲೇಟಾದ್ರೆ, ಕ್ಯಾನ್ಸಲ್​ ಆದ್ರೆ ಏನ್​ ಮಾಡ್ಬೇಕು? ನಿಮ್ಮ ರೈಟ್ಸ್​​ ಬಗ್ಗೆ ಇಲ್ಲಿ ತಿಳಿದುಕೊಳ್ಳಿ!

Flight Ticket: ನಿಮ್ಮ ಫ್ಲೈಟ್​ ಲೇಟಾದ್ರೆ, ಕ್ಯಾನ್ಸಲ್​ ಆದ್ರೆ ಏನ್​ ಮಾಡ್ಬೇಕು? ನಿಮ್ಮ ರೈಟ್ಸ್​​ ಬಗ್ಗೆ ಇಲ್ಲಿ ತಿಳಿದುಕೊಳ್ಳಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮ ವಿಮಾನ ರದ್ದುಗೊಂಡರೇ ಅಥವಾ ವಿಮಾನ ಬರುವುದು ತಡವಾದರೆ ನೀವು ಏನ್​ ಮಾಡಬೇಕು ಎಂದು ಗೊತ್ತಿದ್ಯಾ? ಈ ವಿಚಾರದಲ್ಲಿ ಪ್ರಯಾಣಿಕರ ಹಕ್ಕುಗಳು ಯಾವುವು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.

  • Share this:

ಚಳಿಗಾಲದಲ್ಲಿ ವಿಮಾನ (Flight) ಹಾರಾಟ ನಡೆಸುವುದು ಕಷ್ಟ ಅಂದರೆ ತಪ್ಪಾಗಲ್ಲ. ಚಳಿಗಾಲದಲ್ಲಿ ಮೋಡಗಳು ಹೆಚ್ಚಾಗಿರುತ್ತವೆ, ಕೆಟ್ಟ ಹವಾಮಾನ (Bad Weather) ದಿಂದಾಗಿ, ವಿಮಾನಗಳ ಟೇಕ್-ಆಫ್ (Flight Take Off) ಸಾಮಾನ್ಯವಾಗಿ ವಿಳಂಬವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ವಿಮಾನ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳುವುದು ಅಥವಾ ಫ್ಲೈಟ್ ರದ್ದತಿಯಿಂದಾಗಿ ಪ್ರಮುಖ ಕೆಲಸವನ್ನು ಕಳೆದುಕೊಳ್ಳುವುದು ನಿರಾಶಾದಾಯಕ ಅನುಭವವಾಗಿದೆ. 


ನಿಮ್ಮ ವಿಮಾನ ರದ್ದುಗೊಂಡರೆ ಅಥವಾ ವಿಮಾನ ಬರುವುದು ತಡವಾದರೆ ನೀವು ಏನ್​ ಮಾಡಬೇಕು ಎಂದು ಗೊತ್ತಿದ್ಯಾ? ಈ ವಿಚಾರದಲ್ಲಿ ಪ್ರಯಾಣಿಕರ ಹಕ್ಕುಗಳು ಯಾವುವು? ವಿಮಾನಯಾನ ಸಂಸ್ಥೆಯಿಂದ ನೀವು ಯಾವ ವಸ್ತುಗಳಿಗೆ ಬೇಡಿಕೆ ಇಡಬಹುದು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ. 2019 ರಲ್ಲಿ, ನಾಗರಿಕ ವಿಮಾನಯಾನ ಸಚಿವಾಲಯವು ಈ ನಿಟ್ಟಿನಲ್ಲಿ ಚಾರ್ಟರ್ ಅನ್ನು ಬಿಡುಗಡೆ ಮಾಡಿತು, ಅದು ಏನು ಹೇಳುತ್ತದೆ ಎಂಬುದನ್ನು ನೋಡೋಣ.


ವಿಮಾನ ಬರೊದು ತಡವಾದ್ರೆ ಏನ್​ ಮಾಡ್ಬೇಕು?


ಡಿಜಿಸಿಎ ಪ್ರಕಾರ, ವಿಮಾನವು 6 ಗಂಟೆಗಳಿಗಿಂತ ಹೆಚ್ಚು ವಿಳಂಬವಾದರೆ, ಪ್ರಯಾಣಿಕರಿಗೆ ಮರು ನಿಗದಿಪಡಿಸಲಾದ ಸಮಯದ ಬಗ್ಗೆ 24 ಗಂಟೆಗಳ ಮುಂಚಿತವಾಗಿ ತಿಳಿಸಬೇಕು. ಪ್ರಯಾಣಿಕರು ಅಷ್ಟು ಸಮಯ ಕಾಯಲು ಸಿದ್ಧರಿಲ್ಲದಿದ್ದರೆ ಅವರನ್ನು ಮತ್ತೊಂದು ವಿಮಾನದಲ್ಲಿ ಕಳುಹಿಸಬೇಕು. ಇಲ್ಲದಿದ್ದರೆ  ಸಂಪೂರ್ಣ ಮರುಪಾವತಿಯನ್ನು ನೀಡಬೇಕು. 24 ಗಂಟೆಗಳಿಗಿಂತ ಹೆಚ್ಚು ವಿಳಂಬವಾದರೆ, ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಗೆ ಉಚಿತ ಹೋಟೆಲ್ ವಸತಿ ವ್ಯವಸ್ಥೆ ಮಾಡುತ್ತದೆ.


ಊಟದ ವ್ಯವಸ್ಥೆಯನ್ನು ಸಂಸ್ಥೆಯೇ ಮಾಡಬೇಕು!


ಬೆಳಗ್ಗೆ 8 ರಿಂದ 3 ಗಂಟೆಯ ನಡುವೆ ವಿಮಾನ ಟೇಕ್ ಆಫ್ ಆಗಬೇಕಿದ್ದರೂ 6 ಗಂಟೆ ತಡವಾದರೆ, ಪ್ರಯಾಣಿಕರಿಗೆ ಉಚಿತ ಹೋಟೆಲ್ ಸೌಕರ್ಯವನ್ನು ಒದಗಿಸಲಾಗುತ್ತದೆ. ನಿಗದಿತ ಸಮಯಕ್ಕಿಂತ ವಿಳಂಬವಾದರೆ, ಕಂಪನಿಯು ಪ್ರಯಾಣಿಕರಿಗೆ ಉಪಾಹಾರವನ್ನು ಒದಗಿಸುತ್ತದೆ. ಈ ನಿಗದಿತ ಸಮಯವು ಹಾರಾಟದ ಬ್ಲಾಕ್ ಸಮಯವನ್ನು ಅವಲಂಬಿಸಿರುತ್ತದೆ.


ವಿಮಾನದ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ನಡುವಿನ ಸಮಯವನ್ನು ಬ್ಲಾಕ್ ಸಮಯ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಬ್ಲಾಕ್ ಸಮಯ 2:30 ಗಂಟೆಯಾಗಿದ್ದರೆ, 2 ಗಂಟೆ ತಡವಾದರೆ ಉಪಹಾರ ಮತ್ತು ಮಧ್ಯಾಹ್ನದ ಊಟವನ್ನು ಒದಗಿಸಬೇಕಾಗುತ್ತದೆ.


ಇದನ್ನೂ ಓದಿ: ರೈಲ್ವೆ ಪ್ಲಾಟ್​ಫಾರ್ಮ್ ಟಿಕೆಟ್​ ಇದ್ರೆ ಇಡೀ ದಿನ ಅಲ್ಲೇ ಇರಬಹುದಾ? ನಿಮ್ಗೆ ಗೊತ್ತಿರದ ಮಾಹಿತಿ ಇದು!


ವಿಮಾನ ರದ್ದಾದ್ರೆ ಏನ್​ ಮಾಡ್ಬೇಕು?


ಸಾಮಾನ್ಯವಾಗಿ, ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ವಿಮಾನ ರದ್ದತಿಯನ್ನು ನಿಜವಾದ ವಿಮಾನ ಸಮಯಕ್ಕಿಂತ 2 ವಾರಗಳ ಮೊದಲು ತಿಳಿಸುತ್ತವೆ. ಅಂತಹ ಸಂದರ್ಭದಲ್ಲಿ, ವಿಮಾನಯಾನ ಸಂಸ್ಥೆಯು ನಿಮಗಾಗಿ ಇನ್ನೊಂದು ವಿಮಾನವನ್ನು ಏರ್ಪಡಿಸುತ್ತದೆ. ಇಲ್ಲದಿದ್ದರೆ ನಿಮಗೆ ಮರುಪಾವತಿಯನ್ನು ನೀಡುತ್ತದೆ. ವಿಮಾನಯಾನ ಕಂಪನಿಯು 24 ಗಂಟೆಗಳ ಮುಂಚಿತವಾಗಿಯೂ ಸಹ ಪ್ರಯಾಣಿಕರಿಗೆ ವಿಮಾನ ರದ್ದತಿಯನ್ನು ತಿಳಿಸಲು ವಿಫಲವಾದರೆ ಪ್ರಯಾಣಿಕರಿಗೆ ಪರಿಹಾರ ನೀಡಬೇಕು


ಈ ಪರಿಹಾರವು 5,000-10,000 ನಡುವೆ ಇರಬಹುದು. ನೀವು ನಗದು ರೂಪದಲ್ಲಿ ಪಾವತಿಸಿದರೆ, ವಿಮಾನಯಾನ ಸಂಸ್ಥೆಯು ತಕ್ಷಣವೇ ಹಣವನ್ನು ಹಿಂದಿರುಗಿಸಬೇಕು. ಆದರೆ, ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಬುಕ್ ಮಾಡುವ ಸಂದರ್ಭದಲ್ಲಿ, ಈ ಮೊತ್ತವನ್ನು 1 ವಾರದೊಳಗೆ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ. ಮರುಪಾವತಿಯು ಪ್ರಯಾಣಿಕರ ಸೇವಾ ಶುಲ್ಕ, ವಿಮಾನ ನಿಲ್ದಾಣ ಅಭಿವೃದ್ಧಿ ಶುಲ್ಕ ಮತ್ತು ಸೇವಾ ತೆರಿಗೆಯನ್ನು ಒಳಗೊಂಡಿರುತ್ತದೆ.


(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಗೂ ನ್ಯೂಸ್​ 18 ಕನ್ನಡಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಇದು ಅನೇಕ ವರದಿಗಳ ಮಾಹಿತಿಯನ್ನು ಆಧರಿಸಿ ಇಲ್ಲಿ ಬರೆಯಲಾಗಿದೆ.)

Published by:ವಾಸುದೇವ್ ಎಂ
First published: