• Home
 • »
 • News
 • »
 • business
 • »
 • Budget 2023: ಕೇಂದ್ರ ಬಜೆಟ್‌ ಮೇಲಿರುವ ನಿರೀಕ್ಷೆಗಳೇನು? ಉದ್ಯೋಗಿಗಳು, ತೆರಿಗೆದಾರರಿಗೆ ಸಿಗುತ್ತಾ ಗುಡ್ ನ್ಯೂಸ್?

Budget 2023: ಕೇಂದ್ರ ಬಜೆಟ್‌ ಮೇಲಿರುವ ನಿರೀಕ್ಷೆಗಳೇನು? ಉದ್ಯೋಗಿಗಳು, ತೆರಿಗೆದಾರರಿಗೆ ಸಿಗುತ್ತಾ ಗುಡ್ ನ್ಯೂಸ್?

ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)​

ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)​

ಈ ಬಾರಿಯ ಬಜೆಟ್‌ ವಿಶೇಷತೆಗಳೇನು? ಕೇಂದ್ರದ ಆಯವ್ಯಯದ ಮೇಲಿರುವ ನಿರೀಕ್ಷೆಗಳೇನು? ತೆರಿಗೆದಾರರು, ಉದ್ಯೋಗಿಗಳಿಗೆ ಗುಡ್ ನ್ಯೂಸ್ ಕೊಡ್ತಾರಾ ನಿರ್ಮಲಾ ಸೀತಾರಾಮನ್? ಈ ಬಗ್ಗೆ ಮಾಹಿತಿ ಇಲ್ಲಿದೆ…

 • Trending Desk
 • 2-MIN READ
 • Last Updated :
 • Share this:

  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Union Finance Minister Nirmala Sitharaman) ಅವರು 2023ರ ಕೇಂದ್ರ ಬಜೆಟ್ (Union Budget) ಅನ್ನು ಫೆಬ್ರವರಿ 1, 2023 ರಂದು ಸಂಸತ್ತಿನಲ್ಲಿ (Parliament) ಮಂಡಿಸಲಿದ್ದಾರೆ. ವಿವಿಧ ವಲಯದ ಉದ್ಯಮಗಳ ನಾಯಕರು 2023 ರ ಬಜೆಟ್‌ನ ಮೇಲೆ ತಮ್ಮ ಚಿತ್ತ ನೆಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಸರಕಾರದ ಅಧಿಪತ್ಯದಲ್ಲಿ ಹಣಕಾಸು ಸಚಿವರು ಕೆಲವೊಂದು ಪ್ರಮುಖ ಘೋಷಣೆಗಳನ್ನು ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಹಾಗಾದರೆ ಈ ಬಾರಿಯ ಬಜೆಟ್‌ ವಿಶೇಷತೆಗಳೇನು? ಕೇಂದ್ರದ ಆಯವ್ಯಯದ ಮೇಲಿರುವ ನಿರೀಕ್ಷೆಗಳೇನು? ತೆರಿಗೆದಾರರು, ಉದ್ಯೋಗಿಗಳಿಗೆ ಗುಡ್ ನ್ಯೂಸ್ ಕೊಡ್ತಾರಾ ನಿರ್ಮಲಾ ಸೀತಾರಾಮನ್? ಈ ಬಗ್ಗೆ ಮಾಹಿತಿ ಇಲ್ಲಿದೆ…

  ತೆರಿಗೆ ವಿನಾಯಿತಿಗಳಲ್ಲಿ ಸುಧಾರಣೆ


  ಆದಾಯ ತೆರಿಗೆ ವಿಷಯದಲ್ಲಿ ಸಂಬಳ ಪಡೆಯುವ ತೆರಿಗೆದಾರ ವರ್ಗವು ಬಜೆಟ್‌ನಲ್ಲಿ ಏನನ್ನು ನಿರೀಕ್ಷಿಸುತ್ತಿದೆ ಎಂಬುದನ್ನು ಗಮನ ಹರಿಸಿದಾಗ ಸೆಕ್ಷನ್ 80 ಸಿ ಅಡಿಯಲ್ಲಿ ಉಳಿತಾಯ ಆಧಾರಿತ ತೆರಿಗೆ ವಿನಾಯಿತಿಗಳ ಸುಧಾರಣೆಯನ್ನು ಬಯಸುತ್ತಿದ್ದಾರೆ. ಹೀಗಂತ ತೆರಿಗೆ, ಲೆಕ್ಕಪತ್ರ ನಿರ್ವಹಣೆ ಮತ್ತು ಸಲಹಾ ಸಂಸ್ಥೆಯಾದ ಆರ್‌ಎಸ್‌ಎಂ ಇಂಡಿಯಾದ ಸಂಸ್ಥಾಪಕ ಡಾ. ಸುರೇಶ್ ಸುರಾನಾ ತಿಳಿಸಿದ್ದಾರೆ.


  ಸಂಬಳ ಪಡೆಯುವ ತೆರಿಗೆದಾರರಿಂದ ದೊಡ್ಡ ನಿರೀಕ್ಷೆ


  ಸಂಬಳ ಪಡೆಯುವ ಉದ್ಯೋಗಿಗಳು ತೆರಿಗೆಗೆ ಅತಿದೊಡ್ಡ ಕೊಡುಗೆದಾರರು ಎಂದೆನಿಸಿದ್ದು ಕೆಲವೇ ಕೆಲವು ತೆರಿಗೆ ವಿನಾಯಿತಿಗಳಿಗೆ ಅರ್ಹರಾಗಿದ್ದಾರೆ. 2023 ರ ಬಜೆಟ್‌ನಲ್ಲಿ ಉದ್ಯೋಗಿಗಳು ಹಲವು ದೊಡ್ಡ ನಿರೀಕ್ಷೆಗಳನ್ನು ಹೊಂದಿದ್ದಾರೆ ಎಂದು ಸುರೇಶ್ ತಿಳಿಸಿದ್ದಾರೆ. ಆದಾಯ-ತೆರಿಗೆ ಕಾಯಿದೆ, 1961 ರ 80C ಕಡಿತಗೊಳಿಸುವಿಕೆ ('ಐಟಿ ಕಾಯಿದೆ') ಬಹು ಉಳಿತಾಯ/ಹೂಡಿಕೆ ಆಧಾರಿತ ಕಡಿತಗಳಾದ ಎಲ್‌ಐಸಿ, ಪಿಪಿಎಫ್, ಆರ್‌ಪಿಎಫ್/ನಿವೃತ್ತಿ ಫಂಡ್‌ಗೆ ನೌಕರರ ಕೊಡುಗೆ ಇತ್ಯಾದಿಗಳನ್ನು ಒಳಗೊಂಡಿದೆ. ಆದರೆ ಒಟ್ಟಾರೆ ಮಿತಿ 1,50,000 ವಾರ್ಷಿಕ ಆದಾಯಕ್ಕೆ ನಿರ್ಬಂಧಿಸಲಾಗಿದೆ ಮತ್ತು 2014 ರ ಬಜೆಟ್‌ನಲ್ಲಿ ಇದನ್ನು ಕೊನೆಯ ಬಾರಿಗೆ ಪರಿಷ್ಕರಿಸಲಾಗಿದೆ ಎಂಬುದು ಸುರೇಶ್ ಸುರಾನಾ ಅಭಿಪ್ರಾಯವಾಗಿದೆ.


  ಇದನ್ನೂ ಓದಿ: Budget 2023: ಚಿನ್ನಾಭರಣ ಸೇರಿ 35 ವಸ್ತುಗಳ ಸುಂಕ ಏರಿಕೆ ಸಾಧ್ಯತೆ: ಅನಗತ್ಯ ಆಮದಿಗೆ ಕಡಿವಾಣ ಹಾಕಲು ಕ್ರಮ


  ತೆರಿಗೆದಾರ ಸ್ನೇಹಿ ಬಜೆಟ್ ಆಗಬಹುದೇ?


  2023-24 ರ ಬಜೆಟ್ ತೆರಿಗೆದಾರರಿಗೆ ಪ್ರಯೋಜನಕಾರಿಯಾಗಿರುವ ತೆರಿಗೆದಾರ ಸ್ನೇಹಿ ಬಜೆಟ್ ಆಗಿದೆ ಎಂದು ನಾವು ನಿರೀಕ್ಷಿಸಬಹುದು ಎಂಬುದು ಸುರೇಶ್ ಮಾತಾಗಿದೆ. ಕೋವಿಡ್-19 ಸಾಂಕ್ರಾಮಿಕದ ನಂತರ ದೇಶವು ಆರ್ಥಿಕವಾಗಿ ಚೇತರಿಕೆಯಾಗುತ್ತಿದ್ದು ಈ ಅಂಶವನ್ನು ಗಮನದಲ್ಲಿರಿಸಿಕೊಂಡು ಬಜೆಟ್ ಮಂಡನೆಯಾಗಬೇಕಾಗಿದೆ. ನಿರೀಕ್ಷೆಗಳಿಗೆ ತಕ್ಕಂತೆ ಆರ್ಥಿಕ ಗುರಿಗಳನ್ನು ಈಡೇರಿಸುವಂತಹ ಹಾಗೂ ಉತ್ತೇಜನ ನೀಡುವಂತಹ ಬಜೆಟ್ ಅನ್ನು ಸರಕಾರ ಖಚಿತಪಡಿಸುತ್ತದೆ ಎಂದು ಐಪಿಯ ಪಾಲುದಾರ ಮನೀತ್ ಪಾಲ್ ಸಿಂಗ್ ತಿಳಿಸಿದ್ದಾರೆ..


  ಸಂಬಳ ಪಡೆಯುವ ಉದ್ಯೋಗಿಗಳ ನಿರೀಕ್ಷೆಗಳು


  ತಜ್ಞರ ಪ್ರಕಾರ ಬಜೆಟ್ 2023 ರಿಂದ ಸಂಬಳ ಪಡೆಯುವ ಉದ್ಯೋಗಿಗಳ ಉನ್ನತ ನಿರೀಕ್ಷೆಗಳು ಹೀಗಿವೆ…


  ಎಚ್‌ಆರ್‌ಎ (HRA) ಹೆಚ್ಚಳ


  ವರ್ಕ್ – ಫ್ರಮ್ ಹೋಮ್‌ಗೆ ತಕ್ಕಂತೆ ಕೆಲಸದ ವಿಧಾನವನ್ನು ಬದಲಾಯಿಸಿಕೊಳ್ಳಲು ಮತ್ತು ಕೋವಿಡ್ ನಂತರದ ಹೆಚ್ಚುವರಿ ಮನೆ ಬಾಡಿಗೆಗಳಿಗೆ ಸರಿಹೊಂದುವಂತೆ ವಸತಿ ಬಾಡಿಗೆ ಭತ್ಯೆಯಲ್ಲಿ ಹೆಚ್ಚಳ.


  ಹೊಸ ತೆರಿಗೆ ಪದ್ಧತಿಯಲ್ಲಿ ಬದಲಾವಣೆ


  ಸಂಬಳ ಪಡೆಯುವ ತೆರಿಗೆದಾರರಿಗೆ ಹೆಚ್ಚು ಆಕರ್ಷಕವಾಗಿಸಲು ವಿಶೇಷ ತೆರಿಗೆ ಪದ್ಧತಿಯಲ್ಲಿ ಬದಲಾವಣೆ


  ಸೆಕ್ಷನ್ 80ಸಿ ಮಿತಿಯಲ್ಲಿ ಹೆಚ್ಚಳ


  ಹೆಚ್ಚಿನ ಹಣದುಬ್ಬರದ ದೃಷ್ಟಿಯಿಂದ ಮತ್ತು ವೈಯಕ್ತಿಕ ಉಳಿತಾಯ ಮತ್ತು ಹೂಡಿಕೆಗಳನ್ನು ಉತ್ತೇಜಿಸಲು ಸೆಕ್ಷನ್ 80C ಕಡಿತದ (ಪ್ರಸ್ತುತ ರೂ. 150,000 ಕ್ಕೆ ಮಿತಿಗೊಳಿಸಲಾಗಿದೆ) ಮಿತಿಯಲ್ಲಿ ಹೆಚ್ಚಳವನ್ನು ನಿರೀಕ್ಷಿಸಲಾಗಿದೆ.


  ಸಂಬಳದ ವರ್ಗಕ್ಕೆ ತೆರಿಗೆ ಪ್ರೋತ್ಸಾಹ


  ಹಿಂದಿನ ವರ್ಷದ ಬಜೆಟ್‌ನಲ್ಲಿ ಯಾವುದೇ ಗಮನಾರ್ಹ ಪ್ರಯೋಜನಗಳಿಲ್ಲದ ಕಾರಣ ಸಂಬಳ ಪಡೆಯುವ ಉದ್ಯೋಗಿಗಳಿಗೆ 2023 ರ ಬಜೆಟ್ ಪ್ರೋತ್ಸಾಹಿಸುತ್ತದೆ ಎಂದು ನಿರೀಕ್ಷಿಸಬಹುದು.


  ಇದನ್ನೂ ಓದಿ: Income Tax: 73 ವರ್ಷ ಹಳೆಯ ಆದಾಯ ತೆರಿಗೆ ನಿಯಮ ಬದಲಾವಣೆ, ತೆರಿಗೆದಾರರಿಗೆ ಏನೆಲ್ಲ ಪ್ರಯೋಜನ?


  ವರ್ಕ್ ಫ್ರಮ್ ಹೋಮ್ ಭತ್ಯೆ


  ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಅನೇಕ ಕಂಪನಿಗಳು "ವರ್ಕ್ ಫ್ರಮ್ ಹೋಮ್" ವಿಧಾನವನ್ನು ಆಶ್ರಯಿಸಿವೆ. ಸಾಂಪ್ರದಾಯಿಕ ಕೆಲಸದ ಮಾದರಿಗಳಿಗಿಂತ ಭಿನ್ನವಾಗಿ, ಈ ವಿಧಾನವು ಮಿತಿಗಳನ್ನು ಹೊಂದಿದೆ ಮತ್ತು ಉದ್ಯೋಗಿಗಳ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಈ ಬಜೆಟ್ 'ವರ್ಕ್ ಫ್ರಮ್ ಹೋಮ್ ಭತ್ಯೆ' ತರುತ್ತದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಸಂಬಳದ ವರ್ಗಕ್ಕೆ ತೆರಿಗೆ ಪ್ರಯೋಜನವನ್ನು ತರಲು ತರ್ಕಬದ್ಧಗೊಳಿಸಬಹುದು ಎಂದು ನಿರೀಕ್ಷಿಸಲಾಗಿದೆ.

  Published by:Annappa Achari
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು