Money Matters: ಈ ತಿಂಗಳಲ್ಲಿ ನಡೆಯಲಿರುವ 5 ಪ್ರಮುಖ ಆರ್ಥಿಕ ಬದಲಾವಣೆಗಳಿವು? ಸ್ವಲ್ಪ ಗಮನ ಇರಲಿ

ನಿಮ್ಮ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಹಲವಾರು ಪ್ರಮುಖ ಬದಲಾವಣೆಗಳು ಇದೇ ಸೆಪ್ಟೆಂಬರ್‌ ತಿಂಗಳಿನಲ್ಲಿ ಚಾಲ್ತಿಗೆ ಬರಲಿವೆ. ಅವುಗಳು ಯಾವುದೆಂದರೆ ಆದಾಯ ತೆರಿಗೆ ರಿಟರ್ನ್‌ ಪರಿಶೀಲಿಸಲು ನೀಡಿರುವ ದಿನ, ಸುರಕ್ಷಿತ ವಹಿವಾಟುಗಳಿಗಾಗಿ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ಗಳನ್ನು ಟೋಕನೈಸ್, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಶುಲ್ಕ ಹೆಚ್ಚಳ, ಬ್ಯಾಂಕ್‌ಗಳು ಡೆಬಿಟ್ ಕಾರ್ಡ್ ವಿತರಣೆ ಮತ್ತು ವಾರ್ಷಿಕ ಶುಲ್ಕಗಳ ಮೇಲಿನ ಶುಲ್ಕ ಹೆಚ್ಚಳ, ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಕೊನೆಯ ಅವಕಾಶ ನೀಡುತ್ತಿದೆ ಇವೆಲ್ಲಾ ಬದಲಾವಣೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ..

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:

ನೀವು ಆದಾಯ ತೆರಿಗೆ (Income Tax) ಪಾವತಿ ಮಾಡುವವರಾಗಿದ್ದರೆ, ಅಥವಾ ದಿನನಿತ್ಯದ ನಿಮ್ಮ ವ್ಯವಹಾರಗಳಿಗೆ ಡೆಬಿಟ್ ಕಾರ್ಡ್‌ಗಳನ್ನು (Debit Card) ಬಳಸುವವರಾಗಿದ್ದರೆ ಅಥವಾ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಹೂಡಿಕೆ ಮಾಡುವವರಾಗಿದ್ದರೆ, ನಿಮ್ಮ ಆರ್ಥಿಕತೆಯ (Economy) ಮೇಲೆ ಪರಿಣಾಮ ಬೀರುವ ಹಲವಾರು ಪ್ರಮುಖ ಬದಲಾವಣೆಗಳು ಇದೇ ಸೆಪ್ಟೆಂಬರ್‌ ತಿಂಗಳಿನಲ್ಲಿ ಚಾಲ್ತಿಗೆ ಬರಲಿವೆ. ಅವುಗಳು ಯಾವುದೆಂದರೆ ಆದಾಯ ತೆರಿಗೆ ರಿಟರ್ನ್‌ (Tax return) ಪರಿಶೀಲಿಸಲು ನೀಡಿರುವ ದಿನ, ಸುರಕ್ಷಿತ ವಹಿವಾಟುಗಳಿಗಾಗಿ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ಗಳನ್ನು ಟೋಕನೈಸ್, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಶುಲ್ಕ ಹೆಚ್ಚಳ, ಬ್ಯಾಂಕ್‌ಗಳು ಡೆಬಿಟ್ ಕಾರ್ಡ್ ವಿತರಣೆ ಮತ್ತು ವಾರ್ಷಿಕ ಶುಲ್ಕಗಳ ಮೇಲಿನ ಶುಲ್ಕ ಹೆಚ್ಚಳ, ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಕೊನೆಯ ಅವಕಾಶ ನೀಡುತ್ತಿದೆ ಇವೆಲ್ಲಾ ಬದಲಾವಣೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.


ಆದಾಯ ತೆರಿಗೆ ರಿಟರ್ನ್‌ ಪರಿಶೀಲಿಸಲು ನೀಡಿರುವ ಸಮಯ ಕೇವಲ 30 ದಿನಗಳು:
ಈ ಹಂತದಲ್ಲಿ ನೀವು ತೆರಿಗೆ ರಿಟರ್ನ್‌ಗಳನ್ನು ಪರಿಶೀಲಿಸುವ ಮೂಲಕ, ರಿಟರ್ನ್ ಫಾರ್ಮ್‌ನಲ್ಲಿ ನೀವು ನೀಡಿದ ಎಲ್ಲ ಮಾಹಿತಿಯು ಸರಿಯಾಗಿದೆ ಮತ್ತು ಸಂಪೂರ್ಣವಾಗಿದೆ ಎಂದು ಹೇಳುವುದರ ಜೊತೆಗೆ ಆದಾಯ ತೆರಿಗೆ ಕಾಯಿದೆ, 1961 ರ ನಿಬಂಧನೆಗಳಿಗೆ ಅನುಸಾರವಾಗಿದೆ ಎಂದು ದೃಢಿಕರಿಸುತ್ತೀರಿ.


20 ದಿನಗಳಿಂದ 30 ದಿನಕ್ಕೆ ಇಳಿಕೆ

ಆಗಸ್ಟ್ 1, 2022 ರಂದು ಅಥವಾ ನಂತರ ಸಲ್ಲಿಸಿದ ತೆರಿಗೆ ರಿಟರ್ನ್‌ಗಳ ಪರಿಶೀಲನೆಯ ಸಮಯ ಮಿತಿಯನ್ನು ಅಂದರೆ ಜುಲೈ 31 ಅಂತಿಮ ದಿನಾಂಕದ ನಂತರ ಸಲ್ಲಿಸಿದ ತೆರಿಗೆ ರಿಟರ್ನ್‌ಗಳ ಪರಿಶೀಲನೆಯ ಸಮಯವನ್ನು 120 ದಿನಗಳಿಂದ 30 ದಿನಕ್ಕೆ ಇಳಿಕೆ ಮಾಡಲಾಗಿದೆ.


ಇದರರ್ಥ ನೀವು ಆಗಸ್ಟ್ 8 ರಂದು ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸಿದ್ದರೆ, ನೀವು ಸೆಪ್ಟೆಂಬರ್ 7 ರ ಒಳಗಾಗಿ ತೆರಿಗೆ ರಿಟರ್ನ್ಸ್ ಫಾರ್ಮ್‌ ಅನ್ನು ಪರಿಶೀಲಿಸಬೇಕಾಗುತ್ತದೆ. ನೀವು ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸಿದ ದಿನದಿಂದ 30 ದಿನಗಳ ಒಳಗಾಗಿ ಪರಿಶೀಲನೆಯನ್ನು ಮಾಡಬೇಕಾಗುತ್ತದೆ.


ಇದನ್ನೂ ಓದಿ:   EPFO: ಡಿಜಿಲಾಕರ್‌ನಿಂದ UAN ಸೇರಿ ಪ್ರಮುಖ ದಾಖಲೆಗಳನ್ನು ಹೀಗೆ ಡೌನ್‌ಲೋಡ್ ಮಾಡಿ!

ನಿಗದಿತ ಸಮಯದೊಳಗೆ ಆದಾಯ ತೆರಿಗೆ ಸಲ್ಲಿಸಿ

ಜುಲೈ 31, 2022 ರಂದು ಅಥವಾ ಅದಕ್ಕೂ ಮೊದಲು ಸಲ್ಲಿಸಿದ ತೆರಿಗೆ ರಿಟರ್ನ್‌ಗಳಿಗೆ, ರಿಟರ್ನ್‌ಗಳನ್ನು ಪರಿಶೀಲಿಸಲು ಸಮಯದ ಮಿತಿಯು ಒಂದೇ ಆಗಿರುತ್ತದೆ. ಅಂದರೆ ತೆರಿಗೆ ರಿಟರ್ನ್ ಸಲ್ಲಿಸಿದ ದಿನಾಂಕದಿಂದ 120 ದಿನಗಳ ಸಮಯದ ಅವಕಾಶವನ್ನು ಅವರು ಪಡೆಯುತ್ತಾರೆ. ಆದಾಯ ತೆರಿಗೆ ಪಾವತಿ ಮಾಡುವವರು ನಿಗದಿತ ಸಮಯದೊಳಗೆ ಪರಿಶೀಲನೆ ಮಾಡದೇ ಹೋದಲ್ಲಿ, ನಿಮ್ಮ ಆದಾಯವನ್ನು ಐಟಿ ಇಲಾಖೆಯು ಪ್ರಕ್ರಿಯೆಗೊಳಿಸುವುದಿಲ್ಲ.


ವಿಳಂಬ ಮಾಡಿದಷ್ಟು ಕಷ್ಟ ಕಷ್ಟ

ಹೆಚ್ಚು ವಿಳಂಬ ಮಾಡಿದಷ್ಟು. ಆ ತೆರಿಗೆ ರಿಟರ್ನ್‌ ಹಣವು ಬ್ಯಾಂಕ್ ಖಾತೆಗೆ ಕ್ರೆಡಿಟ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದಲ್ಲದೆ, ನೀವು ಸಮಯಕ್ಕೆ ಸರಿಯಾಗಿ ಪರಿಶೀಲಿಸದಿದ್ದರೆ, ನೀವು ತೆರಿಗೆ ರಿಟರ್ನ್ ಅನ್ನು ಸಲ್ಲಿಸಲಾಗಿಲ್ಲ ಎಂದು ಪರಿಗಣಿಸಲಾಗುತ್ತದೆ ಮತ್ತು ರಿಟರ್ನ್‌ಗಳನ್ನು ಸಲ್ಲಿಸದಿರುವ ಎಲ್ಲಾ ಪರಿಣಾಮಗಳನ್ನು ನೀವು ಎದುರಿಸಬೇಕಾಗುತ್ತದೆ.


ದಂಡಗಳು ಮತ್ತು ಶುಲ್ಕಗಳು ಕೂಡ ಅನ್ವಯ

ಅಲ್ಲದೆ, ನಿಗದಿತ ಸಮಯವು ಮುಗಿದ ನಂತರ ಸಲ್ಲಿಸಿದ ತೆರಿಗೆ ರಿಟರ್ನ್‌ನ ಪರಿಶೀಲನೆಯನ್ನು ತಡವಾಗಿ ಸಲ್ಲಿಸಿದ ತೆರಿಗೆ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ದಂಡಗಳು ಮತ್ತು ಶುಲ್ಕಗಳು ಕೂಡ ಅನ್ವಯಿಸುತ್ತವೆ. ನೀವು ಇದರಲ್ಲಿ ಆಫ್‌ಲೈನ್ ವಿಧಾನದಿಂದ ತೆರಿಗೆ ರಿಟರ್ನ್‌ ಅನ್ನು ಪರೀಶಿಲನೆ ಮಾಡುವುದಕ್ಕಿಂತ ಆಧಾರ್ ಮತ್ತು ನೆಟ್ ಬ್ಯಾಂಕಿಂಗ್ ಬಳಸಿಕೊಂಡು ಇ-ಪರಿಶೀಲನೆ ಮಾಡಿಕೊಳ್ಳುವುದು ಹೆಚ್ಚು ಅನುಕೂಲಕರವಾಗಿದೆ.


ಸುರಕ್ಷಿತ ವಹಿವಾಟುಗಳಿಗಾಗಿ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ಗಳನ್ನು ಟೋಕನೈಸ್ ಮಾಡಿ:
ಸೆಪ್ಟೆಂಬರ್‌ನಲ್ಲಿ, ಸುರಕ್ಷಿತ ವಹಿವಾಟುಗಳಿಗಾಗಿ ತಮ್ಮ ಕಾರ್ಡ್‌ನ ಟೋಕನ್‌ಗಳೊಂದಿಗೆ ಆನ್‌ಲೈನ್, ಪಾಯಿಂಟ್-ಆಫ್-ಸೇಲ್ ಮತ್ತು ಅಪ್ಲಿಕೇಶನ್‌ನಲ್ಲಿನ ವಹಿವಾಟುಗಳಲ್ಲಿ ಬಳಸಲಾದ ಎಲ್ಲಾ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ದತ್ತಾಂಶವನ್ನು ಕೂಡಲೇ ಬದಲಾಯಿಸಿ ಏಕೆಂದರೆ ಈ ನಿಯಮ ಕೂಡ ಬದಲಾಗಲಿದೆ. ಅದೇನು ಎಂದು ಮುಂದೆ ತಿಳಿಯೋಣ ಬನ್ನಿ.


ಟೋಕನೈಸೇಶನ್ ನಿಯಮವು ಅಕ್ಟೋಬರ್ 1 ರಿಂದ ಜಾರಿ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಆದೇಶದ ಪ್ರಕಾರ, ಟೋಕನೈಸೇಶನ್ ನಿಯಮವು ಅಕ್ಟೋಬರ್ 1 ರಿಂದ ಜಾರಿಗೆ ಬರುತ್ತದೆ. ಇದರ ಅಡಿಯಲ್ಲಿ, ಎಲ್ಲಾ ವ್ಯಾಪಾರಿ ವೆಬ್‌ಸೈಟ್‌ಗಳು ಆನ್‌ಲೈನ್ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲು ತಮ್ಮ ಸರ್ವರ್‌ಗಳಲ್ಲಿ ನಿಮ್ಮ ಕಾರ್ಡ್ ಸಂಖ್ಯೆಗಳು, CVV ಅಥವಾ ಮುಕ್ತಾಯ ದಿನಾಂಕವನ್ನು ಉಳಿಸುವುದನ್ನು ನಿಷೇಧಿಸಲಾಗಿದೆ.


ಆದರೆ ವ್ಯಾಪಾರಿಗಳು ತಮ್ಮ ಪಾವತಿ ಗೇಟ್‌ವೇ ಪುಟದಲ್ಲಿ ಈ ಸೌಲಭ್ಯವನ್ನು ಒದಗಿಸಿದರೆ, ಕಾರ್ಡ್ ಬಳಕೆದಾರರು ತಮ್ಮ ಟೋಕನ್ ಅನ್ನು ಉಳಿಸಬೇಕು ಮತ್ತು ನಿರ್ದಿಷ್ಟ ವೆಬ್‌ಸೈಟ್‌ನಲ್ಲಿ ಮಾತ್ರ ಅದು ಭವಿಷ್ಯದ ಬಳಕೆಗಾಗಿ ತಮ್ಮ ಕಾರ್ಡ್‌ನ ಟೋಕನ್ ಅನ್ನು ಉಳಿಸಬೇಕು.


ಇದನ್ನೂ ಓದಿ:  Post Office Scheme: ದಿನಕ್ಕೆ 95 ರೂಪಾಯಿ ಉಳಿಸಿ, 14 ಲಕ್ಷ ಗಳಿಸಿ! ಇದಕ್ಕಿಂತ ಒಳ್ಳೆ ಯೋಜನೆ ಮತ್ತೊಂದಿಲ್ಲ

ಇಲ್ಲಿಯ ತನಕ, ನೀವು ಇ-ಕಾಮರ್ಸ್ ವೆಬ್‌ಸೈಟ್‌ಗಳಿಂದ ವಸ್ತುಗಳನ್ನು ಖರೀದಿಸಿದಾಗ ಅಥವಾ ಪ್ರಯಾಣ ವೆಬ್‌ಸೈಟ್ ಮೂಲಕ ರೈಲು ಅಥವಾ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿದಾಗ, ಮುಂದಿನ ವಹಿವಾಟುಗಳಿಗೆ ಸುಲಭವಾಗಲಿ ಎಂದು ನಿಮ್ಮ ಕಾರ್ಡ್ ವಿವರಗಳನ್ನು ಸೇವ್‌ ಮಾಡಬೇಕಿತ್ತು. ಆದರೆ ಈಗ ಯಾವುದೇ ವೆಬ್‌ಸೈಟ್‌ಗಳಲ್ಲಿ ಕಾರ್ಡ್ ವಿವರಗಳನ್ನು ಪ್ರಸ್ತುತ ರೂಪದಲ್ಲಿ ಉಳಿಸುವುದು ಅಪಾಯಕಾರಿ.


ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಶುಲ್ಕ ಹೆಚ್ಚಳ:
ರಾಷ್ಟ್ರೀಯ ಪಿಂಚಣಿ ಯೋಜನೆಗೆ (ಎನ್‌ಪಿಎಸ್‌) ಯಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಿದ್ದರೆ ಘಟಕಗಳ ರದ್ದತಿ ವ್ಯವಸ್ಥೆಯಿಂದ ಕಮಿಷನ್‌ ಅನ್ನು ಕಡಿತಗೊಳಿಸಲಾಗುತ್ತದೆ. ಸೆಪ್ಟೆಂಬರ್ 1 ರಂದು ಎನ್‌ಪಿಎಸ್‌ ನ ಅಡಿಯಲ್ಲಿ ಡೈರೆಕ್ಟ್-ರೆಮಿಟ್ ಮೋಡ್ ಮೂಲಕ ಮಾಡಿದ ಮೊತ್ತಗಳ ಮೇಲಿನ ಟ್ರಯಲ್ ಕಮೀಷನ್‌ಗಳನ್ನು ಪ್ರಸ್ತುತ 0.10 % ರಷ್ಟು ಹೂಡಿಕೆ ಮಾಡಿದ ಮೊತ್ತದಿಂದ 0.20 % ರಷ್ಟು ಹೆಚ್ಚಿಸಲಾಗುವುದು. ಈ ಶುಲ್ಕ ಹೆಚ್ಚಳವು ಡೈರೆಕ್ಟ್-ರೆಮಿಟ್ ಮೋಡ್‌ನಲ್ಲಿ ಹೂಡಿಕೆ ಮಾಡಿದವರಿಗೆ ಮಾತ್ರ ಅನ್ವಯಿಸುತ್ತದೆ.


ಬ್ಯಾಂಕ್‌ಗಳು ಡೆಬಿಟ್ ಕಾರ್ಡ್ ವಿತರಣೆ ಮತ್ತು ವಾರ್ಷಿಕ ಶುಲ್ಕಗಳ ಮೇಲಿನ ಶುಲ್ಕವನ್ನು ಹೆಚ್ಚಿಸುತ್ತಿವೆ :
ಸೆಪ್ಟೆಂಬರ್‌ನಿಂದ ಹಲವಾರು ಬ್ಯಾಂಕ್‌ಗಳು ಡೆಬಿಟ್ ಕಾರ್ಡ್‌ಗಳ ವಾರ್ಷಿಕ ಶುಲ್ಕಗಳು ಮತ್ತು ವಿತರಣಾ ಶುಲ್ಕವನ್ನು ಹೆಚ್ಚಿಸುವುದಾಗಿ ಘೋಷಿಸಿವೆ. ಕಾರ್ಡ್ ಮತ್ತು ಇತರ ಇನ್‌ಪುಟ್‌ಗಳಲ್ಲಿ ಬಳಸಲಾಗುವ ಸೆಮಿಕಂಡಕ್ಟರ್ ಚಿಪ್‌ಗಳ ಬೆಲೆಯಲ್ಲಿ ಆದ ಹೆಚ್ಚಳದಿಂದ ಶುಲ್ಕವನ್ನು ಹೆಚ್ಚಿಸಿವೆ ಎಂದು ಬ್ಯಾಂಕ್‌ಗಳು ಹೇಳಿಕೊಂಡಿವೆ.


ಇದನ್ನೂ ಓದಿ:  Business Idea: ಮನೆಯಿಂದಲೇ ಈ ಬ್ಯುಸಿನೆಸ್​ ಶುರು ಮಾಡಿ, ವರ್ಷಕ್ಕೆ 5 ಲಕ್ಷ ಸುಲಭವಾಗಿ ಗಳಿಸಿ!

ಉದಾಹರಣೆಗೆ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (IOB) ಸೆಪ್ಟೆಂಬರ್ 6 ರಿಂದ ತನ್ನ ಬ್ಯಾಂಕ್‌ನ ಡೆಬಿಟ್ ಕಾರ್ಡ್‌ಗಳ ಶುಲ್ಕವನ್ನು ಹೆಚ್ಚಿಸಿದೆ. IOB ಯಿಂದ ರೂಪೇ ಕ್ಲಾಸಿಕ್ ಡೆಬಿಟ್ ಕಾರ್ಡ್‌ಗೆ ವಿತರಣಾ ಶುಲ್ಕ ರೂ. 50 ಮತ್ತು ಎರಡನೇ ವರ್ಷದಿಂದ ವಾರ್ಷಿಕ ಶುಲ್ಕ ರೂ. 150 ಆಗಿತ್ತು. ಆದರೆ ಈಗ ವಿತರಣಾ ಶುಲ್ಕ ಮತ್ತು ಎರಡನೇ ವರ್ಷದಿಂದ ವಾರ್ಷಿಕ ಶುಲ್ಕವು ಕ್ರಮವಾಗಿ ರೂ.150 ಮತ್ತು ರೂ. 250 ಗಳಷ್ಟು ಹೆಚ್ಚಿಸಿದೆ.


ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಕೊನೆಯ ಅವಕಾಶ:
ಆದಾಯ ತೆರಿಗೆ ಪಾವತಿ ಮಾಡುವ 18-40 ವರ್ಷ ವಯಸ್ಸಿನವರಿಗೆ, ಸೆಪ್ಟೆಂಬರ್ 30, 2022, ಅಟಲ್ ಪಿಂಚಣಿ ಯೋಜನೆಗೆ ನೋಂದಾಯಿಸಲು ಕೊನೆಯ ದಿನವಾಗಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಆಡಳಿತದಿಂದ ನಿರ್ವಹಿಸಲ್ಪಡುವ ಪಿಂಚಣಿ ಯೋಜನೆಯು ಅಸಂಘಟಿತ ಕಾರ್ಮಿಕರಿಗೆ ತಿಂಗಳಿಗೆ 1,000 ರಿಂದ 5,000 ರೂ.ಗಳ ಕನಿಷ್ಠ ಖಾತರಿ ಪಿಂಚಣಿಯನ್ನು ನೀಡುತ್ತದೆ. ಕಡಿಮೆ ಆದಾಯ ಬರುವವರಿಗೆ ಸ್ವಾವಲಂಬನ್‌ ಯೋಜನೆ ಎಂದು 2015 ರಲ್ಲಿ ಇದನ್ನು ಪ್ರಾರಂಭಿಸಲಾಯಿತು.

Published by:Ashwini Prabhu
First published: