• Home
  • »
  • News
  • »
  • business
  • »
  • Poultry Farming: ಕೋಳಿ ಸಾಕಣೆ ಉದ್ಯಮ ಆರಂಭಿಸುವ ಮುನ್ನ ಈ ಅಂಶಗಳು ನೆನಪಿರಲಿ, ಲಾಭ ಪಡೆಯೋಕೆ ಇಷ್ಟು ಮಾಡಿ

Poultry Farming: ಕೋಳಿ ಸಾಕಣೆ ಉದ್ಯಮ ಆರಂಭಿಸುವ ಮುನ್ನ ಈ ಅಂಶಗಳು ನೆನಪಿರಲಿ, ಲಾಭ ಪಡೆಯೋಕೆ ಇಷ್ಟು ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

How to Get Profit in Poultry Farming: ಕಳೆದ ಕೆಲವು ವರ್ಷಗಳಲ್ಲಿ, ಕೋಳಿ ಸಾಕಣೆ ಕೇಂದ್ರಗಳ ನಿರ್ಮಾಣಕ್ಕೆ US ನಲ್ಲಿ ಹಣಕಾಸು ಹೊಂದಿಸುವುದು ಹೆಚ್ಚು ಕಷ್ಟವಾಗಿದೆ. ಉಕ್ಕು ಮತ್ತು ಮರದ ದಿಮ್ಮಿಗಳಂತಹ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ನಂತರ ಕೋವಿಡ್ -19 ಸಾಂಕ್ರಾಮಿಕದ ಪ್ರಭಾವದಿಂದಾಗಿ ಈ ಸಮಸ್ಯೆಯು ಗಣನೀಯವಾಗಿ ಹೆಚ್ಚಾಗಿದೆ.

ಮುಂದೆ ಓದಿ ...
  • Share this:

ಇತ್ತೀಚಿನ ದಿನಗಳಲ್ಲಿ ಜಗತ್ತಿನ ಹಲವೆಡೆ ನಿರುದ್ಯೋಗ ಸಮಸ್ಯೆ (Unemployment Problem) ತುಂಬಾ ಇದ್ದು, ಉದ್ಯೋಗ ಹಿಡಿಯುವ ಬದಲು ಕೆಲವರು ಸಣ್ಣ ಉದ್ಯಮಗಳನ್ನು ಆರಂಭಿಸಿ ಅದರಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಅದರಲ್ಲೂ ಹೈನುಗಾರಿಕೆ ಜೊತೆ ಮಾಡಬಹುದಾದ ಆಡು ಸಾಕಣೆ, ಕುರಿ ಸಾಕಣೆ ಮತ್ತು ಕೋಳಿ ಸಾಕಣೆಯಲ್ಲಿ ಸಾಕಷ್ಟು ಲಾಭವನ್ನು (Profit) ಗಳಿಸಬಹುದಾಗಿದೆ. ಈ ಉದ್ಯಮಗಳು ತುಂಬಾ ಲಾಭಕಾರಿಯೂ ಹೌದು ಮತ್ತು ವೆಚ್ಚ ಕಡಿಮೆ ಆಗಿರುವುದರಿಂದ ಯಾರು ಬೇಕಾದರೂ ಈ ಉದ್ಯಮಗಳನ್ನು ಪ್ರಾರಂಭಿಸಬಹುದಾಗಿದೆ. ಅದರಲ್ಲಿ ಹೆಚ್ಚು ಲಾಭ ನೀಡುವ ಕೋಳಿ ಸಾಕಣೆಯ (Poultry Farming) ಬಗ್ಗೆ ತಜ್ಞರು ಏನ್‌ ಹೇಳ್ತಾರೆ ಎಂಬುದರ ಬಗ್ಗೆ ತಿಳಿಯೋಣ ಬನ್ನಿ.


ಇತ್ತೀಚಿನ ದಿನಗಳಲ್ಲಿ ಪ್ರಮುಖವಾಗಿರುವ ಉದ್ಯಮವಾಗಿ ರೂಪುಗೊಳ್ಳುತ್ತಿರುವ ಕೋಳಿ ಸಾಕಾಣಿಕೆ ಹಲವು ರೀತಿಯಲ್ಲಿ ಪ್ರಯೋಜನ ಮತ್ತು ಹೆಚ್ಚು ಆದಾಯವನ್ನು ಹೊಂದಿದ್ದು ನೀವು ಸುಲಭವಾಗಿ ಪ್ರಾರಂಭಿಸಬಹುದಾಗಿದೆ.


ತಜ್ಞರ ಅಭಿಪ್ರಾಯವೇನು?


ಕಳೆದ ಒಂದೂವರೆ ವರ್ಷಗಳಲ್ಲಿ, ಪ್ರಾಣಿ ಸಾಕಾಣಿಕಾ ತಜ್ಞರಾದ ಯೂಸೆಫ್ ದಾವೂದ್ ಅಮೆರಿಕಾದ ಕೋಳಿ ವಲಯ ಆರಂಭಿಸಿ ಅದರಲ್ಲಿ ಸಾಕಷ್ಟು ಲಾಭ ಗಳಿಸುತ್ತಿರುವ ಅನೇಕ ಜನರೊಂದಿಗೆ ಕೋಳಿ ಸಾಕಾಣಿಕೆ ಬಗ್ಗೆ ಕೂಲಂಕುಷವಾಗಿ ಮಾತನಾಡಿದ್ದಾರೆ. ಅಲ್ಲಿನ ಸಮಗ್ರ ಪರಿಸ್ಥಿತಿಯನ್ನು ವಿಶ್ಲೇಷಿಸಿದ ನಂತರ, ಅವರು ಕೋಳಿ ಸಾಕಣೆ ಕೇಂದ್ರಗಳಲ್ಲಿ ಮತ್ತಷ್ಟು ಲಾಭದಾಯಕತೆಯನ್ನು ಸ್ಥಾಪಿಸಲು ವಿವಿಧ ಪರಿಹಾರಗಳನ್ನು ಸಹ ಗುರುತಿಸಿ ರೈತರಿಗೆ ಹೇಳುವ ಕೆಲಸವನ್ನು ಕೂಡ ಮಾಡುತ್ತಿದ್ದಾರೆ.


ಕೋಳಿ ಸಾಕಣೆ ಉದ್ಯಮ ಆರಂಭಿಸಲು ಅಮೇರಿಕಾದಲ್ಲಿರುವ ಸವಾಲುಗಳೇನು?


“ಯುಎಸ್‌ನಲ್ಲಿ ಚಿಕನ್‌ಗೆ ಬೇಡಿಕೆ ಹೆಚ್ಚುತ್ತಿದೆ. ಅದಕ್ಕೆ ಹೊಸ ಕೋಳಿ ಸಾಕಾಣಿಕೆ ಕೇಂದ್ರಗಳನ್ನು ಆರಂಭಿಸುವುದು ಬಹಳ ಮುಖ್ಯವಾಗಿದೆ. ಏಕೆಂದರೆ ಅದರಲ್ಲೂ ಸಮಸ್ಯೆ ಇದೆ. ಯುರೋಪ್ ಮತ್ತು US ನಲ್ಲಿ, ಸಾರಜನಕ ಹೊರಸೂಸುವಿಕೆಯ ನೀತಿಯಿಂದಾಗಿ ಕೋಳಿ ಸಾಕಾಣಿಕೆ ಕೇಂದ್ರಗಳನ್ನು ನಿರ್ಮಿಸುವುದು ದೊಡ್ಡ ಸಮಸ್ಯೆಯಾಗಿದೆ” ಎಂದು ಕೋಳಿ ಸಾಕಣೆ ತಜ್ಞ ಯೂಸೆಫ್‌ ಹೇಳುತ್ತಾರೆ.


ಇದನ್ನೂ ಓದಿ: ನಿಮ್ಮ ಜಿಲ್ಲೆಯ ಪೆಟ್ರೋಲ್ - ಡೀಸೆಲ್​ ಬೆಲೆ ಇಲ್ಲಿದೆ, ಎಷ್ಟಿದೆ ಚೆಕ್ ಮಾಡ್ಕೊಳಿ


ಅದರ ಜೊತೆಗೆ, ಕಳೆದ ಕೆಲವು ವರ್ಷಗಳಲ್ಲಿ, ಕೋಳಿ ಸಾಕಣೆ ಕೇಂದ್ರಗಳ ನಿರ್ಮಾಣಕ್ಕೆ US ನಲ್ಲಿ ಹಣಕಾಸು ಹೊಂದಿಸುವುದು ಹೆಚ್ಚು ಕಷ್ಟವಾಗಿದೆ. ಉಕ್ಕು ಮತ್ತು ಮರದ ದಿಮ್ಮಿಗಳಂತಹ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ನಂತರ ಕೋವಿಡ್ -19 ಸಾಂಕ್ರಾಮಿಕದ ಪ್ರಭಾವದಿಂದಾಗಿ ಈ ಸಮಸ್ಯೆಯು ಗಣನೀಯವಾಗಿ ಹೆಚ್ಚಾಗಿದೆ.


ಆದ್ದರಿಂದ, ಕೋಳಿ ಸಾಕಣೆ ಹೊಸ ಕೇಂದ್ರಗಳ ನಿರ್ಮಾಣಕ್ಕಾಗಿ ಲಾಭದಾಯಕ ವ್ಯಾಪಾರವನ್ನು ಮರು ಸೃಷ್ಟಿಸುವುದು ಕೋಳಿ ಸಾಕಣೆದಾರರಿಗೆ ನಿಜವಾದ ಸವಾಲಾಗಿದೆ. ಈಗ ಹೊಸ ಕೋಳಿ ಸಾಕಣೆ ಕೇಂದ್ರಗಳ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಅಲ್ಲದೆ, ಸರ್ಕಾರದಿಂದ ನವೀಕರಣ ಮತ್ತು ವಿಸ್ತರಣೆ ಯೋಜನೆಗಳು ಅನುಮೋದನೆ ಪಡೆಯಲು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿವೆ. US ನಲ್ಲಿ ದೇಶೀಯ ಕೋಳಿ ಉತ್ಪಾದನೆಗೆ ಇರುವ ಬಹು ದೊಡ್ಡ ಸವಾಲು ಇದಾಗಿದೆ.


ಕೋಳಿ ಸಾಕಣೆ ಕೇಂದ್ರಗಳಿಂದ ಲಾಭವನ್ನು ಗಳಿಸುವುದು ಹೇಗೆ?


“ಯುರೋಪ್‌ನಲ್ಲಿ ಕೋಳಿಯ ಗುಂಪು ಗೂಡುಗಳನ್ನು ಪ್ರಧಾನವಾಗಿ ಬಳಸಲಾಗುತ್ತಿದ್ದರೆ, US ನಲ್ಲಿ ಪ್ರತ್ಯೇಕ ವಿಭಾಗಗಳು ಇನ್ನೂ ರೂಢಿಯಲ್ಲಿವೆ. ಇದು ಯುರೋಪ್‌ನಲ್ಲಿ 10% ರಷ್ಟು ಅಧಿಕವಾಗಿರುವ ಬ್ರೈಲರ್ ಬ್ರೀಡರ್‌ಗಳ ಸರಾಸರಿ ಸಂಗ್ರಹ ಸಾಂದ್ರತೆಗೆ ಕಾರಣವಾಗುತ್ತದೆ. ಆದರೆ ಈಗ US ರೈತರು ಪುನರಾವರ್ತಿಸಬಹುದಾದ ಅತ್ಯಂತ ಸರಳ ಪರಿಹಾರ ಇದಾಗಿದೆ” ಎಂದು ಯೂಸೆಫ್‌ ವಿವರಿಸುತ್ತಾರೆ.


ಇದನ್ನೂ ಓದಿ: ಸಾಲು ಸಾಲು ಸೋಲುಗಳ ನಂತರ ಸ್ಟಾರ್ಟ್​ಅಪ್​ನಲ್ಲಿ ಯಶಸ್ಸು, ಸಾರಾ ಟೌಕನ್‌ ಎಂಬ ಮಹಿಳೆಯ ಸಾಧನೆ ಕಥೆ


ಕೋಳಿ ಸಾಕಣೆ ತಜ್ಞ ಯೂಸೆಫ್ ದಾವೂದ್ ಅವರ ವಿವರ


ಯೂಸೆಫ್ ದಾವೂದ್ ಅವರು ತಮ್ಮ ಇಡೀ ವೃತ್ತಿಜೀವನದಲ್ಲಿ ಕೋಳಿ ವಲಯದಲ್ಲಿ ಕೆಲಸ ಮಾಡಿದ್ದಾರೆ. ಅವರು ಕಳೆದ 4 ವರ್ಷಗಳಿಂದ ವ್ಯಾಪಾರ ಅಭಿವೃದ್ಧಿ ವ್ಯವಸ್ಥಾಪಕರಾಗಿದ್ದಾರೆ. US ನಲ್ಲಿ, ಅವರು ಕೋಳಿಗಳನ್ನು ಪೂರೈಸುವ ಮತ್ತು ಗುತ್ತಿಗೆ ಪಡೆದ ರೈತರಿಗೆ ಆಹಾರವನ್ನು ನೀಡುವ ದೊಡ್ಡ ಕೋಳಿ ಸಂಸ್ಥೆಗಳೊಂದಿಗೆ ಹೆಚ್ಚಿನ ಸಂಪರ್ಕವನ್ನು ಹೊಂದಿದ್ದಾರೆ.

Published by:Sandhya M
First published: