• Home
  • »
  • News
  • »
  • business
  • »
  • Job Tips: ಉದ್ಯಮರಂಗದಲ್ಲಿ ಯಶಸ್ಸು ಸಾಧಿಸಲು ಈ 4 ರೂಲ್ಸ್​ಗಳನ್ನು ಫಾಲೋ ಮಾಡಿ ಸಾಕು

Job Tips: ಉದ್ಯಮರಂಗದಲ್ಲಿ ಯಶಸ್ಸು ಸಾಧಿಸಲು ಈ 4 ರೂಲ್ಸ್​ಗಳನ್ನು ಫಾಲೋ ಮಾಡಿ ಸಾಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉದ್ಯಮ ರಂಗದಲ್ಲಿ ನವೀನತೆ ವ್ಯಾಪಾರ-ವಹಿವಾಟನ್ನು ಹೇಗೆ ಇನ್ನಷ್ಟು ಪರಿಣಾಮಕಾರಿಯಾಗಿಸಬಹುದು, ಏನೆಲ್ಲ ಸೌಲಭ್ಯಗಳನ್ನು ಗ್ರಾಹಕರಿಗೆ ಸರಳವಾಗಿ ನೀಡಬಹುದು ಎಂಬ ಅಂಶಗಳನ್ನು ಪರಿಹರಿಸುತ್ತದೆ.

  • Share this:

ಯಾವುದೇ ಕ್ಷೇತ್ರದಲ್ಲಿ ನಾವೀನ್ಯತೆ (Innovation) ಅಥವಾ ಬದಲಾವಣೆ ಎಂಬುದು ಪ್ರಮುಖವಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ವಿಶೇಷವಾಗಿ ನಾವೀನ್ಯತೆ ಅಥವಾ ಇನ್ನೊವೇಷನ್ ಎಂಬುದು ಸಂಪೂರ್ಣ ಉದ್ಯಮದ ದಿಕ್ಕನ್ನೇ ಬದಲಾಯಿಸಿಬಿಡುವಂತಹ ಸಾಮರ್ಥ್ಯ ಹೊಂದಿದೆ ಎಂದರೂ ತಪ್ಪಿಲ್ಲ. ಏಕೆಂದರೆ, ಉದ್ಯಮ ರಂಗದಲ್ಲಿ ನವೀನತೆ ವ್ಯಾಪಾರ-ವಹಿವಾಟನ್ನು ಹೇಗೆ ಇನ್ನಷ್ಟು ಪರಿಣಾಮಕಾರಿಯಾಗಿಸಬಹುದು, ಏನೆಲ್ಲ ಸೌಲಭ್ಯಗಳನ್ನು ಗ್ರಾಹಕರಿಗೆ (consumers)  ಸರಳವಾಗಿ ನೀಡಬಹುದು ಎಂಬ ಅಂಶಗಳನ್ನು ಪರಿಹರಿಸುತ್ತದೆ. ಹೊಸತನ ಅಥವಾ ಉದ್ಯಮ ಕ್ಷೇತ್ರದಲ್ಲಿ ನವೀನತೆ ಎಂದಾಗ ಅದು ಎಲ್ಲಿ ಆಗಬೇಕು ಎಂಬುದು ದೊಡ್ಡ ಪ್ರಶ್ನೆಯಾಗುತ್ತದೆ (Question) ಎಂದರೆ ತಪ್ಪಿಲ್ಲ. ಅದಕ್ಕೆ ಪರಿಣಿತರು ಹೇಳುವಂತೆ, ಒಟ್ಟಾರೆ ಕೆಲಸದ ವ್ಯವಸ್ಥೆಯಲ್ಲಿ ಹೊಸತನ ಅಥವಾ ಬದಲಾವಣೆಯತ್ತ ಗಮನ ಹರಿಸದೇ ಅದರಲ್ಲಿ ತೊಡಗಿಕೊಂಡಿರುವ ಕಾರ್ಮಿಕ ಶಕ್ತಿಯನ್ನು ಬದಲಾವಣೆಯ ಹೊಸ ಅಸ್ತ್ರವನ್ನಾಗಿ ಬದಲಾಯಿಸಿಕೊಳ್ಳಬೇಕೆನ್ನುತ್ತಾರೆ.


ಒಂದು ಉದ್ಯಮ ಯಶಸ್ಸನ್ನು ಸಾಧಿಸಬೇಕೆಂದಲ್ಲಿ ಮೊದಲಿಗೆ ಅದರಲ್ಲಿ ಯಾವ ಪ್ರಕಾರದ ಬದಲಾವಣೆ ಮಾಡಬೇಕು ಎಂಬುದನ್ನು ಯೋಚಿಸಿ ಎಂಬುದು ಪರಿಣಿತರ ಕಿವಿಮಾತಾಗಿದೆ. ಒಂದೊಮ್ಮೆ ನಿಮಗೆ ಎಲ್ಲಿ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ತಿಳಿದಲ್ಲಿ ಅದನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ನವೀನತೆಯನ್ನು ಹೊರತನ್ನಿ.


ಜೊತೆಗೆ ತಂಡಗಳಲ್ಲಿ ನಾಯಕತ್ವದ ವಿಧಾನಗಳಲ್ಲಿ ಹೊಸತನವನ್ನು ಜಾರಿ ಮಾಡಿ ಎಂಬುದು ಪರಿಣಿತರ ಸಲಹೆಯಾಗಿದೆ. ಈ ರೀತಿಯ ಉಪಕ್ರಮಗಳು ಉದ್ಯಮಿಗೆ  ಯಶಸ್ಸನ್ನು ಒದಗಿಸುತ್ತದೆ ಎಂಬುದು ಅವರ ಸಲಹೆಯಾಗಿದೆ. ಹಾಗಾದರೆ ತಜ್ಞರ ಪ್ರಕಾರ, ಉದ್ಯಮದಲ್ಲಿ ನವೀನತೆಯನ್ನು ತರಲು ಮುಖ್ಯವಾಗಿರುವ ನಾಲ್ಕು ಸಲಹೆಗಳೇನು? ಈ ಲೇಖನದಲ್ಲಿ ತಿಳಿಯಿರಿ.


1. ಉದ್ಯೋಗಿಯ ಕೆಲಸದಲ್ಲಿ ಬದಲಾವಣೆ ಮಾಡುವುದು


ಯಾವುದೇ ಕೆಲಸದಲ್ಲಿ ಫಲಿತಾಂಶ ಪಡೆದುಕೊಳ್ಳಬೇಕು ಎಂದಾದರೆ ಆ ಕೆಲಸವನ್ನು ಸಮರ್ಥವಾಗಿ ನಿಭಾಯಿಸುವ ವ್ಯಕ್ತಿಯನ್ನು ಗುರುತಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ಹಾಗಾದರೆ ಅಂತಹ ವ್ಯಕ್ತಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಅವರಿಗೆ ಬೇಕಾದ ನವೀನತೆಯನ್ನು ಒದಗಿಸಿ.


ಅವರ ತಂತ್ರಜ್ಞಾನ ಕೌಶಲ್ಯಗಳನ್ನು ಸುಧಾರಿಸಲು ಅಗತ್ಯವಿರುವ ಪರಿಕರಗಳನ್ನು ಒದಗಿಸಿ. ತಂಡದ ಉಳಿದ ಸದಸ್ಯರನ್ನು ತರಬೇತಿ ಮಾಡುವ ಜವಬ್ದಾರಿಯನ್ನು ಆ ವ್ಯಕ್ತಿಗೆ ನೀಡಿ.


ಒಂದು ವೇಳೆ ಇಂತಹ ವ್ಯಕ್ತಿ ಸಂಸ್ಥೆಯಲ್ಲಿಲ್ಲ ಎಂದಾದಲ್ಲಿ ತಜ್ಞರ ಸಹಾಯ ಪಡೆದುಕೊಂಡು ಇದನ್ನು ಕಾರ್ಯರೂಪಕ್ಕೆ ತರುವುದು ಹೇಗೆ ಎಂಬುದನ್ನು ಅರಿತುಕೊಳ್ಳಿ. ಬದಲಾವಣೆಯನ್ನು ಉದ್ಯೋಗಳಿಂದಲೇ ನಡೆಸಿ ಇದರಿಂದ ನಿಮಗೂ ನಿಶ್ಚಿಂತೆಯಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ.


2. ಸ್ವಾತಂತ್ರ್ಯ ಹಾಗೂ ಅಧಿಕಾರ


ಸಂಸ್ಥೆಯಲ್ಲಿ ನವೀನತೆಯನ್ನು ತರುವ ಬದಲಿಗೆ ಉದ್ಯೋಗಿಗಳಲ್ಲಿ ಬದಲಾವಣೆಯನ್ನು ಮಾಡಿ ಎಂಬುದು ಪರಿಣಿತರ ಸಲಹೆಯಾಗಿದೆ. ಉದ್ಯೋಗಿಗಳು ಯೋಚಿಸುವ ಗುಣಮಟ್ಟವನ್ನು ಉತ್ತಮಗೊಳಿಸುವುದು, ಕ್ರಿಯಾತ್ಮಕ ಯೋಚನೆಗಳು ಅವರಿಂದ ಹೊರಬರುವಂತೆ ಮಾಡುವುದು ಪ್ರಮುಖವಾಗುತ್ತದೆ. ಆ ದಿಸೆಯಲ್ಲಿ ಅವರಿಗೆ ಕೆಲಸದ ವಿಷಯದಲ್ಲಿ ಬೇಕಾದ ಸ್ವಾತಂತ್ರ್ಯ ನೀಡಿ. ಎಲ್ಲರೂ ಸೇರಿಕೊಂಡು ಒಂದು ತಂಡವಾಗಿ ಕೆಲಸ ಮಾಡಿದಾಗ ಸಂಸ್ಥೆಗೆ ಯಾವ ರೀತಿಯ ಲಾಭವಿದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಿ.


ಇದನ್ನೂ ಓದಿ: ಜಸ್ಟ್​ 35 ಸಾವಿರಕ್ಕೆ ಸಿಗುತ್ತೆ ಈ ಬೈಕ್, ಒಮ್ಮೆ ಚಾರ್ಜ್ ಮಾಡಿದ್ರೆ 100 ಕಿಮೀ ಓಡುತ್ತೆ!


3. ಉದ್ಯೋಗಿಗಳಿಗೆ ಪ್ರಶ್ನಿಸಲು ಅವಕಾಶ ನೀಡಿ


ಯಾವುದೇ ಸಂಸ್ಥೆಯ ಅಭಿವೃದ್ಧಿಗೆ ಆ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಪಾತ್ರ ಹಿರಿದಾದುದಾಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಹಾಗಾಗಿ ನಿಮ್ಮ ಸಂಸ್ಥೆಯಲ್ಲಿರುವ ಉದ್ಯೋಗಿಗಳಿಗೆ ನೀವು ಕ್ರಿಯಾತ್ಮಕ ವಿಧಾನದಲ್ಲಿ ನೆರವು ನೀಡಿದಾಗ ಅವರು ಯೋಜನೆಗಳಿಗೆ ಅಗತ್ಯವಾಗಿರುವ ಕಾರ್ಯವಿಧಾನಗಳೊಂದಿಗೆ ಸಿದ್ಧರಾಗುತ್ತಾರೆ. ಅವರೊಳಗಿರುವ ಪ್ರಶ್ನೆ ಕೇಳುವ ಮನೋಭಾವವನ್ನು ಉತ್ತೇಜಿಸಿ. ಸವಾಲುಗಳನ್ನು ಪರಿಹರಿಸುವ ವಿಧಾನಗಳಿಗೆ ಸಲಹೆಗಳನ್ನು ಪಡೆದುಕೊಳ್ಳಿ.


4. ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ


ಸಮಸ್ಯೆಗಳು ಬಂದಾಗ ಅದನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವುದೂ ಕೂಡ ನವೀನತೆಯ ಒಂದು ಭಾಗವೇ ಆಗಿದೆ. ಸಮಸ್ಯೆಗಳನ್ನು ಹೇಗೆ ಎದುರಿಸಬಹುದು ಎಂಬುದನ್ನು ಕುರಿತು ಉದ್ಯೋಗಿಗಳ ತಂಡದೊಂದಿಗೆ ಸಮಾಲೋಚಿಸಿ.


ಈ ಸಮಯದಲ್ಲಿ ಹೊಸ ಹೊಸ ಸಲಹೆಗಳು ಬರಬಹುದು ಹಾಗೂ ಸಮಸ್ಯೆಯನ್ನು ಇನ್ನಷ್ಟು ಸುಲಭವಾಗಿ ಪರಿಹರಿಸಲು ದಾರಿ ಸಿಗಬಹುದು. ಸಮಸ್ಯೆಯು ಕಷ್ಟಕರವಾಗಿದೆ ಎಂಬುದಾಗಿ ಯೋಚಿಸುವ ಮೊದಲು ಒಗ್ಗಟ್ಟಾಗಿ ತಂಡದ ಸಹಾಯದೊಂದಿಗೆ ಹೇಗೆ ಸುಲಭವಾಗಿ ಪರಿಹರಿಸಬಹುದು ಎಂಬುದನ್ನು ಯೋಚಿಸಿ ಎಂದು ಪರಿಣಿತರು ಸಲಹೆ ನೀಡುತ್ತಾರೆ.




ಯಾವುದೇ ಯೋಜನೆಗಳಲ್ಲಿ ಬದಲಾವಣೆಯನ್ನು ತರಲು ನಿಮ್ಮಲ್ಲಿ ಸಂದೇಹಗಳು ಹಾಗೂ ಪ್ರಶ್ನೆಗಳು ಇರಬಾರದು. ಸಂದೇಹ ಹಾಗೂ ಊಹೆ ಇದ್ದಷ್ಟು ಯಶಸ್ಸು ದೊರೆಯುವುದಿಲ್ಲ, ಒಂದು ರೀತಿಯ ಮಾನಸಿಕ ತೊಳಲಾಟ ಉಂಟಾಗುತ್ತಿರುತ್ತದೆ.


ಪ್ರತಿ ಉದ್ಯೋಗವು ಹೊಸತನವನ್ನು ಬಯಸುತ್ತದೆ, ಆದರೆ ಕೆಲವು ನಾಯಕರು ಉದ್ಯಮದ ನವೋದ್ಯಮಿಗಳಾಗಿ ಹೊರಹೊಮ್ಮಲು ತಮ್ಮ ಸಂಸ್ಥೆಗಳಲ್ಲಿ ಬದಲಾವಣೆಗಳನ್ನು ಮಾಡುತ್ತಾರೆ. ಸಮಸ್ಯೆಗಳನ್ನು ನೋಡುವ ನೋಟ ಹಾಗೂ ಅದನ್ನು ಪರಿಹರಿಸುವ ಶೈಲಿಯಲ್ಲಿ ಭಿನ್ನತೆಯನ್ನು ನವೀನತೆ ಎಂದು ಕರೆಯಬಹುದಾಗಿದೆ.

First published: