ಕಳೆದ ಮೂರು ವರ್ಷಗಳಿಂದ ಬಾವಲಿಗಳು (Bats) ಭಾರೀ ಸುದ್ದಿಯಲ್ಲಿದೆ. ಕೊರೋನಾ (Corona) ಹರಡುವುದಕ್ಕೂ ಈ ಬಾವಲಿಗಳೇ ಕಾರಣ ಅಂತ ಮೊದಲು ಹೇಳಲಾಗುತ್ತಿತ್ತು. ನಂತರ, ಈ ಬಗ್ಗೆ ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆ ಆಯ್ತು. ಕೊನೆಯಲ್ಲಿ, ಕೊರೋನಾ ಮತ್ತು ಬಾವಲಿಗಳ ನಡುವೆ ಯಾವುದೇ ಸಂಬಂಧ ಇಲ್ಲ ಹೇಳಲಾಯ್ತು. ಇದೀಗ ಮತ್ತೊಮ್ಮೆ ಬಾವಲಿಗಳು ಸುದ್ದಿ ಮಾಡುತ್ತಿವೆ. ಮಹಾರಾಷ್ಟ್ರ (Maharashtra) ದಲ್ಲಿ ಬಾವಲಿಗಳದ್ದೇ ಮಾತು ಕೇಳಿ ಬರುತ್ತಿದ್ದು, ಈ ಬಾರಿಯೂ ಬಾವಲಿಗಳದ್ದೇ ಹಾವಳಿ ಎಂದರೆ ತಪ್ಪಾಗಲ್ಲ. ಮಹಾರಾಷ್ಟ್ರದಲ್ಲಿ ಕಪ್ಪು ದ್ರಾಕ್ಷಿ (Black Grapes) ಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು, ಇದೀಗ ಬಾವಲಿಗಳು ಕಣ್ಣು ಈ ಬೆಳೆಗಳ ಮೇಲೆ ಬಿದ್ದಿವೆ.
ಕಪ್ಪು ದ್ರಾಕ್ಷಿ ಮೇಲೆ ಬಾವಲಿಗಳ ಕಣ್ಣು!
ರಾತ್ರಿ ವೇಳೆ ಬಾವಲಿಗಳು ಬೆಳೆ ಸಂಪೂರ್ಣ ಹಾಳು ಮಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಈ ಸಮಸ್ಯೆಯಿಂದ ಪಾರಾಗಲು ರೈತರೊಬ್ಬರು ಒಳ್ಳೆ ಉಪಾಯ ಮಾಡಿದ್ದು, ಬಾವಲಿಗಳ ದಾಳಿಯೂ ವಿಫಲವಾಗುತ್ತಿದೆ. ಬಾವಲಿಗಳ ದಾಳಿಯಿಂದ ಕಪ್ಪು ದ್ರಾಕ್ಷಿಯ ಬೆಳೆಯನ್ನು ಉಳಿಸುವ ಈ ವಿಶಿಷ್ಟ ಮಾರ್ಗವು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿದೆ. ಇಲ್ಲಿ ವಾಲ್ವಾ ಪ್ರದೇಶದಲ್ಲಿ 2500 ರಿಂದ 3000 ಎಕರೆ ಪ್ರದೇಶದಲ್ಲಿ ದ್ರಾಕ್ಷಿಯನ್ನು ಬೆಳೆಯಲಾಗುತ್ತದೆ.
ಬಾವಲಿ ದಾಳಿ ತಪ್ಪಿಸಲು ಮಾಸ್ಟರ್ ಪ್ಲ್ಯಾನ್!
ಇದು ಹೆಚ್ಚಾಗಿ ಕಪ್ಪು ದ್ರಾಕ್ಷಿ ಬೆಳೆಯನ್ನು ಒಳಗೊಂಡಿದೆ. ಮಹಾರಾಷ್ಟ್ರದ ಈ ಪ್ರದೇಶದಲ್ಲಿ ಹೆಚ್ಚಿನ ಆರ್ದ್ರತೆಯು ದ್ರಾಕ್ಷಿ ಬೆಳೆಗೆ ಅನುಕೂಲಕರವಾಗಿದೆ. ಇದರಿಂದ ಇಲ್ಲಿನ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿದೆ. ಉತ್ತಮ ಗುಣಮಟ್ಟದ ಕಪ್ಪು ದ್ರಾಕ್ಷಿಯಿಂದಾಗಿ ಇಲ್ಲಿನ ದ್ರಾಕ್ಷಿಯನ್ನು ಹಲವು ದೇಶಗಳಿಗೆ ರಫ್ತು ಮಾಡಲಾಗುತ್ತಿದ್ದು, ಇದರಿಂದ ದೇಶಕ್ಕೆ ವಿದೇಶಿ ವಿನಿಮಯವೂ ದೊರೆಯುತ್ತಿದೆ.
ಇದನ್ನೂ ಓದಿ: ಅಂಜೂರ ಬೆಳೆಸಿದ ಮೊದಲ ಮಹಿಳೆ, ಇದ್ರಿಂದಲೇ ಲಕ್ಷ ಲಕ್ಷ ಆದಾಯ!
ಈ ವರ್ಷವೂ ಅದೇ ಭರವಸೆಯನ್ನು ರೈತರು ಇಟ್ಟುಕೊಂಡಿದ್ದು, ಮೊನ್ನೆಯಷ್ಟೇ ಸುರಿದ ಅಕಾಲಿಕ ಮಳೆ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಮಳೆಯಿಂದ ರೈತರು ಹೇಗೋ ಬೆಳೆ ಉಳಿಸಿಕೊಂಡಿದ್ದು, ಇದೀಗ ರಾತ್ರಿ ವೇಳೆ ಬಾವಲಿಗಳು ಬೆಳೆ ಹಾನಿ ಮಾಡಲಾರಂಭಿಸಿವೆ.
ಬೆಳೆಗೆ ಬಲೆ ಹಾಕಿದ ರೈತರು!
ಬಾವಲಿಗಳು ಹೊಲದಲ್ಲಿ ಇರುವ ಬೆಳೆಗಳನ್ನು ಕೊಕ್ಕಿನಿಂದ ಹಾಳು ಮಾಡುತ್ತಿವೆ. ರೈತ ಬೆಳಗ್ಗೆ ಹೊಲಕ್ಕೆ ಬರುವಷ್ಟರಲ್ಲಿ ಬೆಳೆ ಹಾಳಾಗಿದೆ. ಹೀಗಿರುವಾಗ ರೈತರು ತಂತ್ರವೊಂದನ್ನು ಮಾಡಿದ್ದಾರೆ. ತನ್ನ ಬೆಳೆಗೆ ಮೀನುಗಾರಿಕೆ ಬಲೆ ಬೀಸಿದ್ದಾನೆ. ಈ ಮೂಲಕ ಬಾವಲಿ ದಾಳಿಯನ್ನು ಸಂಪೂರ್ಣ ವಿಫಲಗೊಳಿಸಲಾಗಿದೆ. ಇದರಿಂದಾಗಿ ಬೆಳೆ ಸಂಪೂರ್ಣ ಸುರಕ್ಷಿತವಾಗಿದ್ದು, ರೈತ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ರೋಹನ್ ಮಾನೆ, ಇಂದ್ರಜಿತ್ ಮಾನೆ, ರಾಹುಲ್ ರಾಸ್ಕರ್, ಪ್ರಲ್ಹಾದ್ ಮಾಂಗ್ಲೇಕರ್, ಸತೀಶ್ ಜಾಧವ್ ಮತ್ತು ಶಿವರಾಮ್ ಮದನೆ ವಾಲ್ವಾ ಮತ್ತು ನಾಗಠಾಣೆ ಪ್ರದೇಶದಲ್ಲಿ 10 ರಿಂದ 12 ರೈತರು ತಮ್ಮ ಬೆಳೆಗಳನ್ನು ಬಾವಲಿ ಮತ್ತು ಇತರ ಪಕ್ಷಿಗಳಿಂದ ರಕ್ಷಿಸಲು ಮೀನುಗಾರಿಕೆ ಬಲೆಗಳನ್ನು ಬಳಸುತ್ತಿದ್ದಾರೆ.
ಹೈವೋಲ್ಟೇಜ್ ಬಲ್ಬ್ ಬಲು ದುಬಾರಿ!
ರಾತ್ರಿ ವೇಳೆ ಹೈವೋಲ್ಟೇಜ್ ಬಲ್ಬ್ ಗಳನ್ನು ಅಳವಡಿಸಿ ಬಾವಲಿಗಳನ್ನು ಬೆಳೆಗಳಿಂದ ದೂರವಿಡಲು ರೈತರು ಎಲ್ಲ ರೀತಿಯ ಪ್ರಯತ್ನ ನಡೆಸಿದರು. ದುಬಾರಿಯಾಗಿರುವುದರಿಂದ ಪ್ರತಿಯೊಬ್ಬ ರೈತರಿಗೂ ಇದನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ, ಇದು ಸಂಪೂರ್ಣವಾಗಿ ಪರಿಣಾಮಕಾರಿ ವಿಧಾನವಾಗಿರಲಿಲ್ಲ. ಪಟಾಕಿಗಳನ್ನು ಸುಟ್ಟು ಬಾವಲಿಗಳನ್ನು ಓಡಿಸಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಹೊಸ ಐಡಿಯಾದಿಂದ ಬೆಳೆ ಭದ್ರವಾಗಿರುವುದಲ್ಲದೆ ರೈತರನ್ನು ಲಕ್ಷಗಟ್ಟಲೆ ನಷ್ಟದಿಂದ ಪಾರು ಮಾಡುತ್ತಿದೆ.
ಇದನ್ನೂ ಓದಿ: ನಕಲಿ ಬೀಜ, ಅಕಾಲಿಕ ಮಳೆ ಹೊಡೆತಕ್ಕೆ ನಲುಗಿದ ಆಂಧ್ರದ ಹತ್ತಿ ಬೆಳೆಗಾರರು!
ಇಲ್ಲಿ ಕಪ್ಪು ಮತ್ತು ಹಸಿರು ದ್ರಾಕ್ಷಿಯನ್ನು ಬೆಳೆಯಲಾಗುತ್ತದೆ. ಇಲ್ಲಿನ ದ್ರಾಕ್ಷಿ ತುಂಬಾ ಸಿಹಿಯಾಗಿರುತ್ತದೆ. ಇದರಿಂದಾಗಿ ದೇಶವಲ್ಲದೆ ಹೊರ ದೇಶಗಳಲ್ಲೂ ಇದಕ್ಕೆ ಸಾಕಷ್ಟು ಬೇಡಿಕೆ ಇದೆ. ದೊಡ್ಡ ಪ್ರಮಾಣದಲ್ಲಿ ದ್ರಾಕ್ಷಿ ಉತ್ಪಾದನೆಯಾಗುವುದರಿಂದ ಒಣದ್ರಾಕ್ಷಿ ಉತ್ಪಾದನೆಯೂ ಇಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ