Startup: ಪಶ್ಚಿಮ ಬಂಗಾಳದ ಹೊಸ ಸ್ಟಾರ್ಟಪ್; ನೀರಿನಿಂದ ಆಮ್ಲಜನಕ ಉತ್ಪಾದಿಸುವ ಸಾಧನದ ಆವಿಷ್ಕಾರ

ಇದೀಗ ಭಾರತದಲ್ಲಿ ನವೋದ್ಯಮಗಳ ಕ್ರಾಂತಿಯುಗ ಆರಂಭವಾಗಿದೆ ಅಂತಲೇ ಹೇಳಬಹುದು. ಅದರಲ್ಲೂ ವಿಶೇಷವಾಗಿ ಕೆಲವು ನವೋದ್ಯಮಗಳು ವಿಶಿಷ್ಟವಾದ ಆವಿಷ್ಕಾರಗಳನ್ನು, ನಾವೀನ್ಯತೆಯುಳ್ಳ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದು ಗಮನಸೆಳೆಯುತ್ತಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇದೀಗ ಭಾರತದಲ್ಲಿ ನವೋದ್ಯಮಗಳ ಕ್ರಾಂತಿಯುಗ ಆರಂಭವಾಗಿದೆ ಅಂತಲೇ ಹೇಳಬಹುದು. ಅದರಲ್ಲೂ ವಿಶೇಷವಾಗಿ ಕೆಲವು ನವೋದ್ಯಮಗಳು ವಿಶಿಷ್ಟವಾದ ಆವಿಷ್ಕಾರಗಳನ್ನು, ನಾವೀನ್ಯತೆಯುಳ್ಳ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದು ಗಮನಸೆಳೆಯುತ್ತಿವೆ. ಅಂತಹ ಒಂದು ಸಂದರ್ಭದಲ್ಲಿ ಇದೀಗ ಪಶ್ಚಿಮ ಬಂಗಾಳದ ಸ್ಟಾರ್ಟಪ್ (Startup of West Bengal) ಒಂದು ಕೇವಲ ಸ್ವಿಚ್ ಅನ್ನು ಒತ್ತುವ ಮೂಲಕ ನೀರಿನಿಂದ ಆಮ್ಲಜನಕವನ್ನು (Oxygen) ಉತ್ಪಾದಿಸುವ ಸಾಧನವನ್ನು ಸಂಶೋಧನೆ ಮಾಡಿ ಹೊರತಂದಿದೆ ಎಂದು ತಂತ್ರಜ್ಞಾನ (Technology) ಅಭಿವೃದ್ಧಿಪಡಿಸಿದವರು ಹೇಳಿಕೊಂಡಿದ್ದಾರೆ. ಸೋಲೇರ್ ಇನಿಶಿಯೇಟಿವ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸ್ಟಾರ್ಟಪ್ ಅಭಿವೃದ್ಧಿಪಡಿಸಿದ 'OM Redox' ಸಾಧನವು ಇಲ್ಲಿನ ವೆಬೆಲ್-ಬಿಸಿಸಿ ಮತ್ತು ಐ ಟೆಕ್ ಕೇಂದ್ರದಲ್ಲಿ ಇನ್‌ಕ್ಯುಬೇಶನ್ ಪ್ರಕ್ರಿಯೆಗೆ ಒಳಪಟ್ಟಿತ್ತು.

ನೀರಿನಿಂದ ಶುದ್ಧ ಆಮ್ಲಜನಕ ಉತ್ಪಾದನೆ
ಈಗ ನೀರಿನಿಂದ ಶುದ್ಧ ಆಮ್ಲಜನಕವನ್ನು ಒದಗಿಸುತ್ತದೆ ಎಂದು ಆವಿಷ್ಕಾರರು ಹೇಳಿದ್ದಾರೆ. ಸಾಧನಕ್ಕೆ ಸಂಬಂಧಿಸಿದಂತೆ ಇದು "ಸಾಂಪ್ರದಾಯಿಕ ಕಾನ್ಸಂಟ್ರೇಟರ್ ಗಳ ಮೂಲಕ ಸಾಮಾನ್ಯವಾಗಿ ಪಡೆಯುವ ಆಮ್ಲಜನಕಕ್ಕಿಂತ 3.5 ಪಟ್ಟು ಹೆಚ್ಚು ಶುದ್ಧವಾದ ಆಮ್ಲಜನಕವನ್ನು ಉತ್ಪಾದಿಸುವ ಆಳವಾದ ವಿಜ್ಞಾನದ ಆವಿಷ್ಕಾರ ಇದಾಗಿದೆ" ಎಂದು ಸಾಧನ ಅಭಿವೃದ್ಧಿಪಡಿಸಿದ ಸ್ಟಾರ್ಟಪ್ ವೆಂಚರ್‌ನ ಸಹಸಂಸ್ಥಾಪಕರಾಗಿರುವ ಡಾ.ಸೌಮ್ಯಜಿತ್ ರಾಯ್ ಮತ್ತು ಅವರ ಪತ್ನಿ ಡಾ.ಪೈ ಲಿಯಾಂಗ್ ಗುರುವಾರ ಹೇಳಿದ್ದಾರೆ.

ಈ ಸಾಧನವನ್ನು ಈಗಾಗಲೇ ಜೈವಿಕ ತಂತ್ರಜ್ಞಾನ ಇಲಾಖೆಯು ಅದರ 10ನೇ ಸ್ಥಾಪನೆಯ ದಿನದಂದು ಮತ್ತು 1 ನೇ ಬಯೋ-ಟೆಕ್ ಎಕ್ಸ್‌ಪೋ 2022 ರಲ್ಲಿ ಪ್ರದರ್ಶಿಸಲು ಮತ್ತು ಬಿಡುಗಡೆ ಮಾಡಲು ಆಯ್ಕೆ ಮಾಡಿದೆ.

ಎರಡು ಪ್ರಕ್ರಿಯೆಗಳಲ್ಲಿ ಆಮ್ಲಜನಕ ಉತ್ಪಾದನೆ
ಈ ಆವಿಷ್ಕಾರದಲ್ಲಿ ಭಾಗಿಯಾಗಿದ್ದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜ್ಯುಕೇಷನ್ ಆಂಡ್ ರಿಸರ್ಚ್, ಕೊಲ್ಕತ್ತಾದ ಪ್ರಾಧ್ಯಾಪಕರಾದ ರಾಯ್ ಈ ಸಂದರ್ಭದಲ್ಲಿ "ಆಮ್ಲಜನಕದ ಉತ್ಪಾದನೆಗೆ ಒತ್ತಡದ ಸ್ವಿಂಗ್ ಹೊರಹೀರುವಿಕೆ ವಿಧಾನವನ್ನು ಬಳಸಲಾಗುತ್ತದೆ ಹಾಗೂ ಅದು ಗಾಳಿಯ ದ್ರವೀಕರಣದೊಂದಿಗೆ ಕಾರ್ಯನಿರ್ವಹಿಸುತ್ತದೆ,

ಆದರೆ ಕಾನ್ಸಂಟ್ರೇಟರ್ ಸಂಕೋಚನ ಕ್ರಿಯೆಯಡಿಯಲ್ಲಿ ಗಾಳಿಯ ಸಾಂದ್ರತೆಯ ಮೂಲಕ ಕಾರ್ಯನಿರ್ವಹಿಸುತ್ತದೆ ಆ ನಂತರ ಅದು ವೇಗವರ್ಧಕದ ಮೂಲಕ ಹಾದುಹೋಗುತ್ತದೆ. ಈ ಎರಡು ಪ್ರಕ್ರಿಯೆಗಳಲ್ಲಿ, ಆಮ್ಲಜನಕವು ಗಾಳಿಯಿಂದ ಉತ್ಪತ್ತಿಯಾಗುತ್ತದೆ. ಆದರೆ, ನಮ್ಮದು ಪರ್ಯಾಯ ತಂತ್ರಜ್ಞಾನವಾಗಿದೆ ” ಎಂದು ಹೇಳಿದ್ದಾರೆ.

ನ್ಯೂಮ್ಯಾಟಿಕ್ ಕಪಲ್ಡ್ ವಾಟರ್ ಆಕ್ಸಿಡೇಶನ್
ಸದ್ಯ ಮಾಡಲಾಗಿರುವ ಆವಿಷ್ಕಾರವನ್ನು ಎಲೆಕ್ಟ್ರೋಕ್ಯಾಟಲಿಟಿಕ್ ರಿಯಾಕ್ಷನ್ (ಪವರ್) ಮೂಲಕ ನ್ಯೂಮ್ಯಾಟಿಕ್ ಕಪಲ್ಡ್ ವಾಟರ್ ಆಕ್ಸಿಡೇಶನ್ ಎಂದು ಕರೆಯಲಾಗುತ್ತದೆ, ಇದರಲ್ಲಿ ಜೀವ ಉಳಿಸುವ ಅನಿಲವನ್ನು ನೀರಿನಿಂದ ಉತ್ಪಾದಿಸಲಾಗುತ್ತದೆ ಎಂದು ರಾಯ್ ಹೇಳಿದ್ದಾರೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ ಜಿತೇಂದ್ರ ಸಿಂಗ್ ಅವರು ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥವಾಗಿ ಬಿಡುಗಡೆ ಮಾಡಿದ ಪುಸ್ತಕದಲ್ಲಿ ಕಾಣಿಸಿಕೊಂಡ ಉತ್ಪನ್ನಗಳಲ್ಲಿ ಈ ಯಂತ್ರವೂ ಸೇರಿದೆ.

ಉತ್ಪಾದನೆ ಮತ್ತು ಮಾರುಕಟ್ಟೆಗೆ ಪರಿಚಯಿಸಲು ವಿವಿಧ ಸಂಸ್ಥೆಗಳೊಂದಿಗೆ ಚರ್ಚೆ
"ಈ ತಂತ್ರಜ್ಞಾನವನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುರೋಪಿಯನ್ ಅನುಸರಣೆಯಿಂದ ಪೇಟೆಂಟ್ ಮಾಡಲಾಗಿದೆ ಮತ್ತು ಅನುಮೋದಿಸಲಾಗಿದೆ" ಎಂದು ಅವರು ಹೇಳಿದ್ದಾರೆ, ಈ ವಿಜ್ಞಾನಿ ದಂಪತಿಗಳು ಸಾಧನಕ್ಕೆ ಪರವಾನಗಿ ನೀಡಲು ಮತ್ತು ಅದರ ಉತ್ಪಾದನೆ ಮತ್ತು ಮಾರುಕಟ್ಟೆಗೆ ಪರಿಚಯಿಸಲು ವಿವಿಧ ಸಂಸ್ಥೆಗಳೊಂದಿಗೆ ಈಗಾಗಲೇ ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:  Maharashtra Politics: ಜುಲೈ 11ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಶಿಂಧೆ ಟೀಂ!

ಈ ಕುರಿತಂತೆ, "ನಾವು ಆಮ್ಲಜನಕವನ್ನು ಉತ್ಪಾದಿಸುವ ಸಾಧನದ ತಯಾರಿಕೆ ಮತ್ತು ಮಾರುಕಟ್ಟೆಯ ಪ್ರಸ್ತಾಪವನ್ನು ಸಕ್ರಿಯವಾಗಿ ಪರಿಗಣಿಸುತ್ತಿದ್ದೇವೆ. ನಾವು ತಂತ್ರಜ್ಞಾನದ ಬಗ್ಗೆ ಸಕಾರಾತ್ಮಕವಾಗಿದ್ದೇವೆ ಮತ್ತು ಅದರ ಸರಳತೆಯಿಂದ ಪ್ರಭಾವಿತರಾಗಿದ್ದೇವೆ. ಹೆಣ್ಣು ಅಥವಾ ಗಂಡು ಈ ಸಾಧನವನ್ನು ಸರಳವಾಗಿ ನಿರ್ವಹಿಸಬಹುದು. ಸ್ಟಾರ್ಟಪ್ ಸಾಧಿಸಿರುವ ಈ ಪ್ರಗತಿಯನ್ನು ಗಮನಿಸಿದರೆ, ಮುಂದಿನ ಮೂರು ತಿಂಗಳಲ್ಲಿ ಸಾಧನದ ವಾಣಿಜ್ಯೀಕರಣವನ್ನು ಖಂಡಿತ ನಿರೀಕ್ಷಿಸಬಹುದಾಗಿದೆ ಎಂದು ಪಶ್ಚಿಮ ಬಂಗಾಳದ ಎಲೆಕ್ಟ್ರಾನಿಕ್ಸ್ ಇಂಡಸ್ಟ್ರಿ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (ವೆಬೆಲ್) ವ್ಯವಸ್ಥಾಪಕ ನಿರ್ದೇಶಕಿಯಾದ ಸುನ್ರಿತಾ ಹಜ್ರಾ ಹೇಳಿದ್ದಾರೆ.

ಮಹಿಳಾ ಉದ್ಯಮಿಗಳ ಭಾಗವಹಿಸುವಿಕೆ  ಗಮನಾರ್ಹ
ವೆಬೆಲ್ ಸಂಸ್ಥೆ ಮತ್ತು ಬೆಂಗಾಲ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಜಂಟಿ ಉಪಕ್ರಮವಾದ ಇನ್ಕ್ಯುಬೇಶನ್ ಸೆಂಟರ್, ಕಳೆದ ಕೆಲವು ವರ್ಷಗಳಲ್ಲಿ ಸುಮಾರು 54 ಕಂಪನಿಗಳಿಗೆ ಇನ್ಕ್ಯುಬೇಷನ್ ಸೇವೆ ನೀಡಿದ್ದು, ಪ್ರಸ್ತುತ 18 ಘಟಕಗಳು ಈಗಲೂ ಈ ಪ್ರಕ್ರಿಯೆಯಲ್ಲಿ ಸಾಗುತ್ತಿವೆ ಎಂದು ಘಟಕದ ಮಾರ್ಗದರ್ಶಕ ಕಲ್ಯಾಣ್ ಕರ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:  Bombay High court: ಯುವತಿಯರು ಫ್ರೆಂಡ್​ಶಿಪ್ ಮಾಡಿದ್ರೆ ಅದು ದೈಹಿಕ ಸಂಪರ್ಕದ ಅನುಮತಿ ಅಲ್ಲ!

ಇನ್ಕುಬೇಷನ್ ಪ್ರಕ್ರಿಯೆ ಪೂರ್ಣಗೊಳಿಸಿದ ಕಂಪನಿಗಳ ಪೈಕಿ 10 ರಿಂದ 12 ವಾಣಿಜ್ಯ ಮಟಕ್ಕೆ ತಲುಪಿರುವುದಾಗಿ ಎಂದ ಅವರು, ರಾಜ್ಯದ II ಮತ್ತು III ಶ್ರೇಣಿಯ ನಗರಗಳಿಂದ ಹಲವಾರು ಕಂಪನಿಗಳು ಸದ್ಯ ಈ ಕೇಂದ್ರವನ್ನು ಸಂಪರ್ಕಿಸಿದ್ದು, ಮಹಿಳಾ ಉದ್ಯಮಿಗಳ ಭಾಗವಹಿಸುವಿಕೆಯೂ ಇದರಲ್ಲಿ ಗಮನಾರ್ಹವಾಗಿದೆ ಎಂದು ಅವರು ಹೇಳಿದ್ದಾರೆ.
Published by:Ashwini Prabhu
First published: