Wedding Insurance ಮಾಡ್ಕೊಳ್ಳಿ: Omicronನಿಂದ ಮದುವೆ ಕ್ಯಾನ್ಸಲ್ ಆದ್ರೆ ಮುಂಗಡ ವೆಚ್ಚದ ಹಣ ಸಿಗುತ್ತೆ

ವಿಮಾ ಕಂಪನಿಗಳ (Insurance Company) ವೆಡ್ಡಿಂಗ್ ಇನ್ಶುರೆನ್ಸ್ ಪಾಲಿಸಿಯು (Wedding Insurance Policy) ನಿಮ್ಮ ಹಣಕಾಸಿನ ನಷ್ಟವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಈ ವಿಮೆ ಮಾಡಿಸೋದರಿಂದ ಉಂಟಾಗುವ ನಷ್ಟವನ್ನು ತಡೆಯಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಶದಲ್ಲಿ ಓಮೈಕ್ರಾನ್ ಪ್ರಕರಣಗಳು (Omicron Cases) ನಿರಂತರವಾಗಿ ಹೆಚ್ಚುತ್ತಿವೆ. ಮತ್ತೆ ದೇಶದಲ್ಲಿ ಲಾಕ್  ಡೌನ್ (Lockdown) ಅಗುತ್ತಾ ಅನ್ನೋ ಆತಂಕ ಜನರಲ್ಲಿ ಮನೆ ಮಾಡಿದೆ. ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ನೈಟ್ ಕರ್ಫ್ಯೂ (Night Curfew) ಸೇರಿದಂತೆ ಕಠಿಣ ನಿಯಮಗಳನ್ನು ಜಾರಿಗೆ ತಂದಿವೆ. ಹೀಗಾಗಿ ಜನವರಿ  ಮತ್ತು ಫೆಬ್ರವರಿಯಲ್ಲಿ ಮದುವೆ (Wedding Plan) ನಿಶ್ಚಯ ಮಾಡಿರೋ ಕುಟುಂಬಸ್ಥರ ಎದೆ ಬಡಿತ ಹೆಚ್ಚಾಗ ತೊಡಗಿದೆ. ಈ ಸಮಯದಲ್ಲಿ ಕೊರೊನಾ ಮೂರನೇ ಅಲೆ (Corona Third Wave)ಹರಡಿದರೆ ಮದುವೆಯನ್ನು ರದ್ದುಗೊಳಿಸಬೇಕಾಗುತ್ತಾ ಅಥವಾ ಸ್ಥಳಾಂತರಿಸಬೇಕಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಇಂತಹ ಪರಿಸ್ಥಿತಿಯಲ್ಲಿ, ವಿಮಾ ಕಂಪನಿಗಳ (Insurance Company) ವೆಡ್ಡಿಂಗ್ ಇನ್ಶುರೆನ್ಸ್ ಪಾಲಿಸಿಯು (Wedding Insurance Policy) ನಿಮ್ಮ ಹಣಕಾಸಿನ ನಷ್ಟವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಈ ವಿಮೆ ಮಾಡಿಸೋದರಿಂದ ಉಂಟಾಗುವ ನಷ್ಟವನ್ನು ತಡೆಯಬಹುದು.

ವೆಡ್ಡಿಂಗ್ ಇನ್ಶೂರೆನ್ಸ್

ಭಾರತದಲ್ಲಿ ಮದುವೆಯ ವೆಚ್ಚ ತುಂಬಾ ಹೆಚ್ಚಾಗಿರುತ್ತದೆ. ಇದು ಮದುವೆ ಮನೆ, ಸ್ಟೇಜ್, ಬ್ಯಾಂಡ್, ಆಹಾರ ಮತ್ತು ಪಾನೀಯ, ಉಡುಗೊರೆಗಳು ಮತ್ತು ಪ್ರಯಾಣ ಮತ್ತು ಸಂಬಂಧಿಕರ ವಾಸ್ತವ್ಯದಂತಹ ಅನೇಕ ದೊಡ್ಡ ವೆಚ್ಚಗಳನ್ನು ಒಳಗೊಂಡಿದೆ. ಇದರಲ್ಲಿಯೂ ಹೆಚ್ಚಿನವರಿಗೆ ಮುಂಗಡ ಹಣ ಪಾವತಿಸಿ ಬುಕ್ಕಿಂಗ್ ಮಾಡಬೇಕು. ಅಂದರೆ ಮದುವೆ ಕಾರ್ಯಕ್ರಮಕ್ಕೂ ಮುನ್ನವೇ ಸಾಕಷ್ಟು ಹಣ ಖರ್ಚಾಗುತ್ತದೆ.

ಇದನ್ನೂ ಓದಿ:  ಜನವರಿ 1ರಿಂದ GST ನಿಯಮಗಳಲ್ಲಿ ಬದಲಾವಣೆ: ಯಾವುದರ ಬೆಲೆ ಏರಿಕೆ? ಇಳಿಕೆ?

ವಿದೇಶಗಳಲ್ಲಿ ಮದುವೆಯ ವೆಚ್ಚಗಳಿಗೆ ವಿಮಾ ರಕ್ಷಣೆಯನ್ನು ಒದಗಿಸುವ ವ್ಯವಸ್ಥೆ  ಬಹಳ ಹಿಂದೆಯೇ ಇತ್ತು, ಆದರೆ ಇದು ಭಾರತದಲ್ಲಿ ಹೊಸ ಪರಿಕಲ್ಪನೆಯಾಗಿದೆ. ಕರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡಿದ ನಂತರ ಈ ವಿಮೆ ಬೇಡಿಕೆಯು ಇದ್ದಕ್ಕಿದ್ದಂತೆ ಹೆಚ್ಚಾಗಿದೆ.

ವಿಮೆ ನೀಡುವ ಕಂಪನಿಗಳು

ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರೆನ್ಸ್, ಫ್ಯೂಚರ್ ಜೆನರಲಿ ಮತ್ತು ಎಚ್‌ಡಿಎಫ್‌ಸಿ ಇಆರ್‌ಜಿಒಗಳಂತಹ ಹಲವಾರು ಕಂಪನಿಗಳು ಈ ರೀತಿಯ ವಿಮಾ ರಕ್ಷಣೆಯನ್ನು ನೀಡುತ್ತವೆ. ಸಾಮಾನ್ಯವಾಗಿ ವಿವಾಹ ವಿಮೆಯು ವಿಭಿನ್ನ ಸಂದರ್ಭಗಳಲ್ಲಿ ಮದುವೆಯನ್ನು ರದ್ದುಗೊಳಿಸಿದರೆ ವೆಚ್ಚಗಳ ನಷ್ಟದಿಂದ ನಿಮಗೆ ಪರಿಹಾರವನ್ನು ನೀಡುತ್ತದೆ.

ಯಾವ ಪರಿಸ್ಥಿತಿಯಲ್ಲಿ ವಿಮೆ ಹಣ ಸಿಗುತ್ತದೆ?

ಮದುವೆ ಮನೆಯಲ್ಲಿ ಕಳ್ಳತನ ಅಥವಾ ಆಕಸ್ಮಿಕ ಮರಣ ಅಥವಾ ವಧು ಮತ್ತು ವರನ ಅಂಗವೈಕಲ್ಯ ಮತ್ತು ಅವರ ಯಾವುದೇ ರಕ್ತ ಸಂಬಂಧಿಯ ನಿಧನದಿಂದ ಮದುವೆಯನ್ನು ರದ್ದುಗೊಳಿಸುವುದರಿಂದ ವಿಮೆ ಹಣ ಲಭ್ಯವಾಗುತ್ತದೆ.  ಮದುವೆ ಮನೆಯ ಆಸ್ತಿ ನೇರವಾಗಿ ಭೂಕಂಪ, ಬೆಂಕಿ ಅಥವಾ ಇನ್ನಾವುದೇ ರೀತಿಯಲ್ಲಿ ಹಾನಿಯಾದರೂ ವಿಮೆ ಸಿಗಲಿದೆ. ವಧು ಮತ್ತು ವರನ ಮರಣದ ಸಂದರ್ಭದಲ್ಲಿ ಅಥವಾ ಅವರ ಹೆಸರಿನಲ್ಲಿ ವಿಮೆ ಮಾಡಿಸಬೇಕು.

ಇದನ್ನೂ ಓದಿ:  ಮಗಳ ಮದುವೆಗೆ 7 ವರ್ಷಗಳಲ್ಲಿ 50 ಲಕ್ಷ ರೂಪಾಯಿ ಸಿದ್ಧಪಡಿಸಿಕೊಳ್ಳಿ: ಹೇಗೆ ಎಂಬುದರ ಮಾಹಿತಿ ಇಲ್ಲಿದೆ

ಮುಂಗಡ ವೆಚ್ಚದ ಮೇಲೆ ಪರಿಹಾರ

10 ದಿನಗಳ ಮುಂಚೆಯೇ ಮದುವೆ ಕ್ಯಾನ್ಸಲ್ ಆದ್ರೆ ಮುಂಗಡ ಪಾವತಿಗಳ ವೆಚ್ಚದ ಮೇಲೆ ನಿಮಗೆ ಹಣ ಸಿಗಲಿದೆ. ಕಾರ್ಡ್ ಪ್ರಿಂಟಿಂಗ್, ಸ್ಥಳದ ಮುಂಗಡ ಬುಕಿಂಗ್, ಕ್ಯಾಟರರ್‌ಗಳ ಮುಂಗಡ ಬುಕಿಂಗ್, ಅಲಂಕಾರ ಮತ್ತು ಡಿಜೆ ಮುಂಗಡ ಬುಕಿಂಗ್, ಹೋಟೆಲ್ ಅಥವಾ ಪ್ರಯಾಣದ ಮುಂಗಡ ಬುಕಿಂಗ್ ಮುಂತಾದ ಪ್ರಮುಖ ವೆಚ್ಚಗಳ ಮೇಲೆ ವಿಮಾ ರಕ್ಷಣೆಯನ್ನು ಪಡೆಯಬಹುದು.

ಯಾವ ಪರಿಸ್ಥಿತಿಯಲ್ಲಿ ವಿಮೆ ಹಣ ಸಿಗಲ್ಲ

ಮದುವೆಯ ದಿನದಂದು ಯಾವುದೇ ಮುಷ್ಕರ ಅಥವಾ ಬಂದ್ ಇದ್ದರೆ, ಭಯೋತ್ಪಾದಕ ದಾಳಿ, ವಧು ಅಥವಾ ವರನನ್ನು ಅಪಹರಿಸಿದ್ರೆ ಹಣ ಸಿಗಲ್ಲ. ನಿಮ್ಮ ತಪ್ಪಿನಿಂದಾಗಿ ನಿಮ್ಮ ರೈಲು ಅಥವಾ ವಿಮಾನ ತಪ್ಪಿಸಿಕೊಂಡರೆ, ನಿಮ್ಮ ವಾಹನ ಅಥವಾ ಸಾರಿಗೆ ಸೇವೆಯ ಸ್ಥಗಿತಗೊಂಡು ಮದುವೆ ರದ್ದುಗೊಳಿಸಿದ್ರೆ ವಿಮಾ ಕಂಪನಿ ಯಾವುದೇ ವೆಚ್ಚವನ್ನು ಭರಿಸಲ್ಲ.

ವಿಮೆ ಪಡೆಯೋದು ಹೇಗೆ?

ನೀವು ವಿವಾಹ ವಿಮೆಗಾಗಿ ವಿಮಾ ಮೊತ್ತದ ಸುಮಾರು 0.7% ರಿಂದ 2% ರಷ್ಟು ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ. ಅದೇ ಸಮಯದಲ್ಲಿ, ಮದುವೆಗೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಮಾಹಿತಿಯನ್ನು ವಿಮಾ ಕಂಪನಿಗೆ ನೀಡಬೇಕು.

ವಿವಾಹ ವಿಮೆಯ ಕ್ಲೈಮ್ ಪಡೆಯಲು, ನೀವು ವಿಮೆಯ ಸಮಯದಲ್ಲಿಯೇ ಕಂಪನಿಗೆ ಮದುವೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ನೀಡಬೇಕು. ಕಳ್ಳತನದ ಸಂದರ್ಭದಲ್ಲಿ, ನೀವು ಮೊದಲು ಪೊಲೀಸ್ ವರದಿ ಜೊತೆಗೆ ಎಫ್ಐಆರ್ ಪ್ರತಿಯನ್ನು ನೀಡಬೇಕು.
Published by:Mahmadrafik K
First published: