Crypto Currency: ಕ್ರಿಪ್ಟೋ ಕರೆನ್ಸಿ ವಿಷಯವಾಗಿ ಗೊಂದಲಗಳಿಗೆ ತೆರೆ ಎಳೆದು, ವಿಶ್ವಾಸ ಮೂಡಿಸಲು ಪಾರದರ್ಶಕ ವರದಿ ಬಿಡುಗಡೆ ಮಾಡಿದ WazirX

"ಈ ಚಟುವಟಿಕೆಗಳಲ್ಲಿ ಶೇ. 90 ಬಳಕೆದಾರರಿಂದ ನಡೆಸಲ್ಪಟ್ಟವು (ಖಾತೆಗಳನ್ನು ಮುಚ್ಚಲು ಗ್ರಾಹಕರ ಮನವಿಗಳು) ಆದರೆ ಶೇ. 10 ರಷ್ಟನ್ನು ನಮ್ಮ ಕಾನೂನು ತಂಡವು ಪಾವತಿ ವಿವಾದಗಳು ಅಥವಾ LEA ಪ್ರಕರಣಗಳಿಗಾಗಿ ನಡೆಯುತ್ತಿರುವ ತನಿಖೆಗಳಿಂದಾಗಿ ಸಂಬಂಧಿತ ಖಾತೆಗಳನ್ನು ಲಾಕ್ ಮಾಡಬೇಕಾಯಿತು" ಎಂದು ಮಾಹಿತಿ ನೀಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಭಾರತದಲ್ಲಿ ಕ್ರಿಪ್ಟೋ ಉದ್ಯಮ Crypto industry ಗಮನಾರ್ಹ ರೀತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಇದರ ನಡುವೆಯೇ ದೇಶದಲ್ಲಿ ಏಕಕಾಲದಲ್ಲಿ ಕ್ರಿಪ್ಟೋ ಉದ್ಯಮವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಹೇಳಬಹುದು. ಆದ್ದರಿಂದ, ಈ ಉದ್ಯಮದ ಪ್ರಮುಖರು, ಹೂಡಿಕೆದಾರರು ಮತ್ತು ಅದರಲ್ಲಿ ಕೆಲಸ ಮಾಡುವ ಉದ್ಯಮಿಗಳನ್ನು ರಕ್ಷಿಸಲು ಮತ್ತು ಅವರಲ್ಲಿ ವಿಶ್ವಾಸ ಮೂಡಿಸಲು Crypto Transparency Report ಅನ್ನು WazirX ಬಿಡುಗಡೆ ಮಾಡಿದೆ. ಈ ವರದಿ ಕ್ರಿಪ್ಟೋ ಉದ್ಯಮದ ಬಗೆಗಿನ ಕಲ್ಪನೆಗಳು, ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.

    WazirX ಭಾರತದ ಮೊದಲ ಕ್ರಿಪ್ಟೋ ವಿನಿಮಯ ಸಂಸ್ಥೆ ಆಗಿದ್ದು, ಪಾಲಿಸಿ ಥಿಂಕ್ ಟ್ಯಾಂಕ್ ಹೆಚ್ಚು ಸ್ಪಷ್ಟತೆ ಮತ್ತು ಪಾರದರ್ಶಕತೆಯನ್ನು ತಂದಿದೆ. ಹೂಡಿಕೆದಾರರು, ನೀತಿ ನಿರೂಪಕರು ಮತ್ತು ಸಾಂಸ್ಥಿಕ ಪಾಲುದಾರರಲ್ಲಿ ಕ್ರಿಪ್ಟೋ ಬಗ್ಗೆ ಇದ್ದ ಹೆದರಿಕೆಗಳನ್ನು ಹೊರಹಾಕಿದೆ. WazirX  ಸರಿಯಾದ ಸನ್ನಿವೇಶಕ್ಕಾಗಿ ನಿಯಮಗಳನ್ನು ಹೆಚ್ಚು ಹೊಂದಿಸುವುದಲ್ಲದೆ ದೇಶದಲ್ಲಿ ನಾವೀನ್ಯತೆ ಬೆಳೆಸಿದೆ, ನಿಯಂತ್ರಕರಿಗೆ ವರದಿಯ ಮೂಲಕ ನೀತಿ ತಂತ್ರವನ್ನು ಅಭಿವೃದ್ಧಿಪಡಿಸಲು ಬೆಂಬಲಿಸಿದೆ. ಎಲ್ಲದರ ಜೊತೆಗೆ, ಇಂತಹ ಉಪಕ್ರಮಗಳು ಸರ್ಕಾರ ಮತ್ತು ಕಾನೂನು ಜಾರಿ ಸಂಸ್ಥೆಗಳ ಮಾಹಿತಿ ವಿನಂತಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ಇಡೀ ಉದ್ಯಮವನ್ನು ಪಾರದರ್ಶಕವಾಗಿರಲು ಪ್ರೇರೇಪಿಸಿದೆ.

    WazirX ಕಾನೂನು ಪ್ರಕ್ರಿಯೆಗಳನ್ನು ಎಚ್ಚರಿಕೆಯಿಂದ ಪರಿಶೀಲನೆ ನಡೆಸುತ್ತದೆ ಮತ್ತು ವಿವಿಧ ಏಜೆನ್ಸಿಗಳಿಂದ ಸ್ವೀಕರಿಸಿದ ಹಿಂದಿನ ಮನವಿಗಳ ಆಧಾರದ ಮೇಲೆ ಅವುಗಳನ್ನು ಇರಿಸುತ್ತದೆ. WazirX ನ ಕಾನೂನು ಜಾರಿ ವಿನಂತಿಗಳಿಗೆ ಅನುಸರಣೆ ದರವು 377 ಕ್ಕಿಂತ ಹೆಚ್ಚಿನ ವಿನಂತಿಗಳಿಗೆ ಶೇ 100 ರಷ್ಟಿದೆ. ಕ್ರಿಪ್ಟೋಕರೆನ್ಸಿ ವಿನಿಮಯದ ಮೊದಲ ಪಾರದರ್ಶಕ ವರದಿಯ ಪ್ರಕಾರ ಏಪ್ರಿಲ್ 2021 ಮತ್ತು ಸೆಪ್ಟೆಂಬರ್ 2021 ರ ನಡುವೆ ಇದುವರೆಗೆ 14,000 ಖಾತೆಗಳನ್ನು WazirX ಲಾಕ್ ಮಾಡಿದೆ.

    "ಏಪ್ರಿಲ್ 2021 ರಿಂದ ಸೆಪ್ಟೆಂಬರ್ 2021 ರವರೆಗಿನ ಅವಧಿಯಲ್ಲಿ, WazirX 377 ವಿನಂತಿಗಳನ್ನು ಕಾನೂನು ಜಾರಿ ಸಂಸ್ಥೆಗಳಿಂದ (LEAs) ಪಡೆಯಿತು. ಅದರಲ್ಲಿ 38 ವಿನಂತಿಗಳು ವಿದೇಶಿ ಕಾನೂನು ಜಾರಿ ಸಂಸ್ಥೆಗಳಿಂದ ಬಂದವು. ಸ್ವೀಕರಿಸಿದ ಎಲ್ಲಾ ಕಾನೂನು ಮಾಹಿತಿ ವಿನಂತಿಗಳು ಕ್ರಿಮಿನಲ್ ಸ್ವಭಾವದವು ಮತ್ತು 377 ವಿನಂತಿಗಳಿಗೆ ನಮ್ಮ ಅನುಸರಣೆ ದರವು 100 ಪ್ರತಿಶತವಾಗಿದೆ ಎಂದು WazirX ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. "ಮಾಹಿತಿ ವಿನಂತಿಗಳಿಗಾಗಿ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಮನ್ವಯಗೊಳಿಸುವಾಗ, ಸಂಬಂಧಿತ ಏಜೆನ್ಸಿಯವರು ವಿನಂತಿಸುವ ಡೇಟಾಗೆ ಅರ್ಹತೆ ಹೊಂದಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಾವು ಪ್ರತಿ ಮನವಿಯನ್ನು ಮಾನ್ಯ ಮಾಡುತ್ತೇವೆ" ಎಂದು ಸಂಸ್ಥೆ ಹೇಳಿದೆ.

    ಇದೇ ಅವಧಿಯಲ್ಲಿ 14,469 ಖಾತೆಗಳನ್ನು ಲಾಕ್ ಮಾಡಲಾಗಿದೆ ಎಂದು ಕಂಪನಿ ಹೇಳಿದೆ. "ಈ ಚಟುವಟಿಕೆಗಳಲ್ಲಿ ಶೇ. 90 ಬಳಕೆದಾರರಿಂದ ನಡೆಸಲ್ಪಟ್ಟವು (ಖಾತೆಗಳನ್ನು ಮುಚ್ಚಲು ಗ್ರಾಹಕರ ಮನವಿಗಳು) ಆದರೆ ಶೇ. 10 ರಷ್ಟನ್ನು ನಮ್ಮ ಕಾನೂನು ತಂಡವು ಪಾವತಿ ವಿವಾದಗಳು ಅಥವಾ LEA ಪ್ರಕರಣಗಳಿಗಾಗಿ ನಡೆಯುತ್ತಿರುವ ತನಿಖೆಗಳಿಂದಾಗಿ ಸಂಬಂಧಿತ ಖಾತೆಗಳನ್ನು ಲಾಕ್ ಮಾಡಬೇಕಾಯಿತು" ಎಂದು ಮಾಹಿತಿ ನೀಡಿದೆ.

    ಇದನ್ನು ಓದಿ: ಚಿನ್ನದ ರೇಟ್ ಹೆಚ್ಚಾಗೋಕೆ ಇದೇ ಕಾರಣ, ಈ ಲೆಕ್ಕ ತಿಳ್ಕೊಂಡ್ರೆ ಬೆಲೆ ಯಾವಾಗ ಕಮ್ಮಿಯಾಗುತ್ತೆ ಅಂತ ನಿಮ್ಗೆ ಮೊದ್ಲೇ ಗೊತ್ತಾಗುತ್ತೆ

    ಕಂಪನಿಯ ಪಾರದರ್ಶಕ ವರದಿಯು ತನ್ನ ಗ್ರಾಹಕರ ಮೇಲೆ ಪರಿಣಾಮ ಬೀರುವ ಕ್ರಮಗಳ ಬಗ್ಗೆ ಬಳಕೆದಾರರಿಗೆ ಅಪ್‌ಡೇಟ್ ಮಾಡಲು ವಿನಿಮಯದ ಒಂದು ಉಪಕ್ರಮವಾಗಿದೆ. ಕೆಲವು ವರ್ಗದ ಅಧಿಕಾರಿಗಳು ಕ್ರಿಪ್ಟೋಕರೆನ್ಸಿ ಅಳವಡಿಕೆಯಿಂದ ಬರುವ ಅಪಾಯಗಳನ್ನು ಫ್ಲ್ಯಾಗ್ ಮಾಡಿದ್ದರೂ, ವಿಶೇಷವಾಗಿ ಮನಿ ಲಾಂಡರಿಂಗ್ ಮತ್ತು ತೆರಿಗೆ ವಂಚನೆ ಇತ್ಯಾದಿಗಳಲ್ಲಿ ಆಸ್ತಿ ವರ್ಗವಾಗಿ ಕ್ರಿಪ್ಟೋಕರೆನ್ಸಿಗಳ ಮೇಲೆ ಹೆಚ್ಚಿನ ನಿಯಂತ್ರಣದ ಪರಿಶೀಲನೆಯ ನಡುವೆ ಇದು ಬರುತ್ತದೆ. ಭಾರತೀಯ ಕಾನೂನುಗಳಿಗೆ ಅನುಸಾರವಾಗಿ KYC ಪ್ರಕ್ರಿಯೆಯ ಮೂಲಕ ಎಲ್ಲಾ ಗ್ರಾಹಕರನ್ನು WazirX ನಿರ್ವಹಿಸುತ್ತದೆ.
    Published by:HR Ramesh
    First published: