ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೆಟ್ಟಿಗರ ಮನ ಗೆದ್ದುಬಿಟ್ಟಿದ್ದಿದ್ದಾರೆ. ಅವರು ಬಜೆಟ್ ಮಂಡಿಸಿದಾಗಲೂ ಇಷ್ಟು ವೈರಲ್ ಆಗಿರಲಿಲ್ಲವೇನೋ! ಒಂದೇ ಒಂದು ವಿಡಿಯೋ ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರನ್ನು ಫುಲ್ ವೈರಲ್ ಮಾಡಿದೆ. ಅರೇ! ಅದ್ಯಾವ ವಿಡಿಯೋ? (Nirmala Sitharaman Viral Video) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಇಂಟರ್ನೆಟ್ ಬಳಕೆದಾರರು ಮೆಚ್ಚಿ ಹೊಗಳೋಕೆ ಏನು ಕಾರಣ? ಆ ವಿಡಿಯೋ ಆದರೂ ಯಾವ್ದು? ಇಲ್ಲಿದೆ ನೋಡಿ ಆ ವಿಡಿಯೋ ಮತ್ತು ಘಟನೆಯ ಸಂಪೂರ್ಣ ವಿವರ.
ಮುಂಬೈನಲ್ಲಿ ಶನಿವಾರ ನಡೆದ ಸಂಸ್ಥೆಯ ಬೆಳ್ಳಿಹಬ್ಬದ ಸಂಭ್ರಮಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಎನ್‌ಎಸ್‌ಡಿಎಲ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಪದ್ಮಜಾ ಚುಂಡೂರು ಅವರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಆಸನದಿಂದ ಎದ್ದು ನೀರಿನ ಬಾಟಲಿಯನ್ನು ನೀಡಿ ಆನ್‌ಲೈನ್ ಜಗತ್ತಿನಲ್ಲಿ ಭರ್ಜರಿ ಪ್ರಶಂಸೆ ಗಳಿಸಿದ್ದಾರೆ.
This graceful gesture by FM Smt. @nsitharaman ji reflects her large heartedness, humility and core values.
A heart warming video on the internet today. pic.twitter.com/isyfx98Ve8
— Dharmendra Pradhan (@dpradhanbjp) May 8, 2022
This shows the Real Character of person ! My father always tells Drinking Water is of utmost emergency !! And moreover Nirmala ji behaved as a Cultured Woman ! Thanks a lot.
— NIHAR MOHAPATRA (@mohapatranb) May 9, 2022
Really it's a great gesture of the Central Finance Minister Mrs. Nirmala Sitaraman @nsitharaman for her simplicity and ground to earth feeling besides following sabha maryada (సభా మర్యాద). A great nation and a great leaders associated with great values.
— Janapati Parthasarat (@JanapatiPartha2) May 8, 2022
ಇದನ್ನೂ ಓದಿ: Indian Railway: ರೈಲುಗಳ ಎಸಿ ಕೋಚ್, ಜನರಲ್ ಬೋಗಿಗಳು ಅಲ್ಲಲ್ಲೇ ಇರೋದೇಕೆ? ರೈಲುಗಳ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿ ಇದು!
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಾವು ಕುಳಿತ ಸ್ಥಳದಲಿಂದ ಎದ್ದು ಬಂದು ನೀರಿನ ಬಾಟಲಿ ತಂದುಕೊಡುವುದು ಎಂದರೆ ಸಣ್ಣ ಸಂಗತಿ ಅಲ್ಲ. ಅದು ಅವರಲ್ಲಿ ಇರುವ ಮಾನವೀಯತೆಗೆ ಸಾಕ್ಷಿ ಎಂದು ನೆಟ್ಟಿಗರು ಅಪಾರ ಸಂಖ್ಯೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ನೀರಿನ ಬಾಟಲಿಯನ್ನು ತಂದುಕೊಟ್ಟಿರುವುದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪದ್ಮಜಾ ಚುಂಡೂರು ಅವರು ಅದೇ ಸಂದರ್ಭದಲ್ಲೇ ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ: Toyota Invest in Karnataka: ಟೊಯೋಟಾ ಕರ್ನಾಟಕದಲ್ಲೇ 4,800 ಕೋಟಿ ಹೂಡಿಕೆ ಮಾಡಿದ್ದೇಕೆ?
ಬರೀ ನೀರಿನ ಬಾಟಲಿ ತಂದುಕೊಟ್ಟದ್ದು ಒಂದೇ ಅಲ್ಲ, ಕೇಂದ್ರ ಹಣಕಾಸು ಸಚಿವೆ ಎಂಬ ಯಾವ ಹಮ್ಮುಬಿಮ್ಮು ಏನೂ ಇಲ್ಲದೇ ನಿರ್ಮಲಾ ಸೀತಾರಾಮನ್ ಬಾಟಲಿ ತೆರೆದು ಲೋಟಕ್ಕೆ ನೀರು ಸುರಿದು ಕುಡಿಯಲು ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ಸಭಿಕರು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಚಪ್ಪಾಳೆ ತಟ್ಟಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ