ತರಕಾರಿಯ(Vegetable)ನ್ನು ಅಡುಗೆಗೆ ಎಷ್ಟು ಬೇಕೋ ಅಷ್ಟು ಬಳಸಿ ಮಿಕ್ಕ ಭಾಗಗಳನ್ನು ಮತ್ತು ಸಿಪ್ಪೆಯನ್ನು ಕಸದ ಬುಟ್ಟಿಗೆ ಹಾಕುವ ರೂಢಿಯೇ ನಮ್ಮಲ್ಲಿದೆ. ಆದರೆ ಇಲ್ಲೋರ್ವ ಸಂಶೋಧಕ ಬಳಸಿಬಿಟ್ಟ ತರಕಾರಿಯ ಭಾಗಗಳಿಂದ ವಿಶೇಷ ಸಂಶೋದನೆ ಮಾಡಿದ್ದಾರೆ. ನೇರವಾದ ಸೂರ್ಯನ ಬೆಳಕಿನ ಅಗತ್ಯವಿಲ್ಲದೆಯೂ (Energy Without Light) ಸೌರ ಫಲಕಗಳ (Solar Panels) ಮೂಲಕ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವ ವಿಶೇಷ ಸಾಧನವೊಂದನ್ನು ಸಂಶೋದಕರೊಬ್ಬರು ತರಕಾರಿಯ ತ್ಯಾಜ್ಯಗಳಿಂದ (Recycled vegetables) ಕಂಡುಹಿಡಿದಿದ್ದಾರೆ. ಅರೇ! ಇದೇನಿದು ಅಂದಿರಾ? ಹೌದು ನೇರವಾಗಿ ಸೂರ್ಯನ ಕಿರಣಗಳು ತಗುಲದೆಯೂ ವಿದ್ಯುತ್ ಉತ್ಪಾದಿಸುವ ಸಂಶೋಧನೆ ಮಾಡಿರುವುದು ನಿಜಕ್ಕೂ ಹೌದು.
ಸೂರ್ಯನ ನೇರಳಾತೀತ ಕಿರಣಗಳನ್ನು ಹೀರಿಕೊಳ್ಳುತ್ತವೆ ಮತ್ತು ಅವುಗಳನ್ನು ಗೋಚರ ಬೆಳಕಾಗಿ ಪರಿವರ್ತಿಸುತ್ತವೆ. ಈಮೂಲಕ ಎಲೆಗಳು ಬೆಳಕನ್ನು ವಿದ್ಯುತ್ ಆಗಿ ಪರಿವರ್ತಿಸಲು ಸಾಧ್ಯವಾಗುತ್ತದೆ. ಇದು ಮೋಡ, ಮಳೆ ಇದ್ದಾಗಲೂ ವಿದ್ಯುತ್ ಉತ್ಪಾದಿಸುತ್ತದೆ. ಜೊತೆಗೆ ನೇರ ಸೂರ್ಯನ ಬೆಳಕಿನಿಂದ ಕೂಡ ಕೆಲಸ ಮಾಡುತ್ತದೆ.
ಅತಿನೇರಳೆ ಕಿರಣವನ್ನು ಗೋಚರ ಬೆಳಕನ್ನಾಗಿ ಪರಿವರ್ತನೆ! ತರಕಾರಿಗಳಲ್ಲಿನ ಅತ್ಯಂತ ಸೂಕ್ಷ್ಮ ರಾಸಾಯನಿಕಗಳಿಂದ ಸೂರ್ಯನಿಂದ ಅತಿನೇರಳೆ ಕಿರಣವನ್ನು ಗೋಚರ ಬೆಳಕನ್ನಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಕಂಡುಹಿಡಿಯಲಾಗಿದೆ. 29 ವರ್ಷದ ಕಾರ್ವೆ ಎಹ್ರೆನ್ ಮೈಗ್ ಅವರೇ ಈ ವಿದ್ಯುತ್ನ ಸಂಶೋಧಕ. 2020 ಡೈಸನ್ ಫೌಂಡೇಶನ್ ಸಂಸ್ಥೆಯ ವತಿಯಿಂದ ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ಪ್ರಶಸ್ತಿಯನ್ನು ಸಹ ಅವರು ಗೆದ್ದುಕೊಂಡಿದ್ದಾರೆ. ಮೈಗ್ಯು ಈ ಸಂಶೋಧನೆಗೆ AuREUS ಎಂದು ಹೆಸರಿಸಿದ್ದಾರೆ.
ಸೌರ ಫಲಕಗಳಿಗಿಂತ ಭಿನ್ನ ಸಸ್ಯಗಳು ಅಲ್ಟ್ರಾವೈಲೆಟ್ ಬೆಳಕಿನಿಂದ ಮೋಡಗಳ ಮೂಲಕ ವಿದ್ಯುತ್ ಉತ್ಪಾದಿಸುತ್ತವೆ. ಸಂಪೂರ್ಣವಾಗಿ ನೆರಳಿನಲ್ಲಿ ಛಾವಣಿಯ ಮೇಲೆ ಇರಿಸಿದರೆ, ಹತ್ತಿರದ ಗಗನಚುಂಬಿ ಕಟ್ಟಡ ಅಥವಾ ಮೈದಾನದಲ್ಲಿ UV ಬೆಳಕು ಪುಟಿಯುತ್ತಿದ್ದರೆ ಅವು ಇನ್ನೂ ಶಕ್ತಿಯನ್ನು ಉತ್ಪಾದಿಸಬಹುದು. ಇದು ನಾವು ಪ್ರಸ್ತುತ ಬಳಸುತ್ತಿರುವ ಸೌರ ಫಲಕಗಳಿಗಿಂತ ಬಹಳಷ್ಟು ಭಿನ್ನವಾಗಿವೆ. ಎರಡು ಸ್ಮಾರ್ಟ್ಫೋನ್ಗಳನ್ನು ಚಾರ್ಜ್ ಮಾಡಬಹುದು, ಒಂದು ಇಡೀ ಕಟ್ಟಡಕ್ಕೆ ವಿದ್ಯುತ್ ಪೂರೈಸಬಹುದು.
ಮಡಚಬಹುದು! AuREUS ಒಂದು ಸಸ್ಯಾಹಾರಿ ಪಾಲಿಮರ್ ಶೀಟ್ ಆಗಿದ್ದು, ನಾವೆಲ್ಲರೂ ನೋಡಿದ ಬೃಹತ್ ಸೌರ ಫಲಕಗಳಿಗಿಂತ ಭಿನ್ನವಾಗಿ ಯಾವುದೇ ಆಕಾರದಲ್ಲಿ ಮಡಚಬಹುದು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಬಹುದು.
ನಾವು ಎಲೆಕ್ಟ್ರಿಕ್ ಕಾರುಗಳು, ವಿಮಾನಗಳು ಮತ್ತು ದೋಣಿಗಳಲ್ಲಿ ಬಳಸಲು ಬಾಗಿದ ಆಕಾರದ ವಿದ್ಯುತ್ ಉತ್ಪಾದಿಸುವ ಪ್ಲೇಟ್ಗಳನ್ನು ತಯಾರಿಸಲು ಸಹ ಪ್ರಯತ್ನಿಸುತ್ತಿದ್ದೇವೆ. AuREUS ಸೌರ ಶಕ್ತಿಯ ಸೆರೆಹಿಡಿಯುವಿಕೆಯನ್ನು ಜಗತ್ತಿನ ಎಲ್ಲರಿಗೂ ವಿದ್ಯುತ್ ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ.
ಸೌರಶಕ್ತಿ ಕೊಯ್ಲು ಹೆಚ್ಚು ಸುಲಭವಾಗಿರಬೇಕೆಂದು ನಾನು ಬಯಸುತ್ತೇನೆ. ನಂತರ ಸರ್ಕಾರ ಅಥವಾ ಮಿಲಿಟರಿಯಿಂದ ಮಾತ್ರ ಬಳಸಲ್ಪಟ್ಟಿತ್ತು. ಈಗೀಗ ಸೋಲಾರ್ ಕಂಪ್ಯೂಟರ್ಗಳಲ್ಲಿ ನಮ್ಮ ಸೆಲ್ಫೋನ್ಗಳಲ್ಲಿ ಕಂಡುಬರುತ್ತವೆ.
ಇದಕ್ಕಿಂತ ಬಹು ದೊಡ್ಡ ಪ್ರಮಾಣದಲ್ಲಿ ನಾನು ಕಂಡುಹಿಡಿದ ಸಾಧದಿಂದ ಸೌರ ವಿದ್ಯುತ್ನ್ನು ಎಲ್ಲರಿಗೂ ಪೂರೈಸಹುದು ಎಂದು ಅವರು ಡೈಸನ್ ಫೌಂಡೇಶನ್ ಜೊತೆ 2020 ರಲ್ಲಿ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಬೇಸ್ ಪಾಲಿಮರ್ ಅನ್ನು ಬಟ್ಟೆಗಾಗಿ ದಾರವನ್ನು ತಯಾರಿಸಲು ಸಹ ಬಳಸಬಹುದು ಎಂದು ಅವರು ಹೇಳುತ್ತಾರೆ, ಈ ಸಾಧನದಿಂದ ಜನರು ಸುತ್ತಲೂ ನಡೆಯುವಾಗಲೂ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಬಹುದಾಗಿದೆ!
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ