Pension Plus scheme: LIC ಹೊಸ ಪಿಂಚಣಿ ಪ್ಲಸ್‌ ಯೋಜನೆ, ಈಗ ಹಣ ಉಳಿತಾಯ ಮಾಡಲು ಮತ್ತಷ್ಟು ಸುಲಭ!

LIC ತನ್ನ ಗ್ರಾಹಕರಿಗೆ ಅನೇಕ ಯೋಜನೆಗಳ ಲಾಭವನ್ನ ಕೊಟ್ಟಿದ್ದು ಜನರು ಈ ಯೋಜನೆಗಳ ಲಾಭವನ್ನ ಪಡೆದುಕೊಳ್ಳುತ್ತಿದ್ದಾರೆ.  ಇನ್ನು ಈಗ LIC ಹೊಸ ಯೋಜನೆಯನ್ನ ಜಾರಿಗೆ ತಂದಿದ್ದು ಈ ಯೋಜನೆಯ ಅಡಿಯಲ್ಲಿ ಎಲ್ಲಾ ಗ್ರಾಹಕರು ಸಾಯುವ ತನಕ ಪಿಂಚಣಿ ಹಣವನ್ನ ಪಡೆದುಕೊಳ್ಳಬಹುದಾಗಿದೆ.

LIC ಯ ಹೊಸ ಪಿಂಚಣಿ ಪ್ಲಸ್‌ ಯೋಜನೆ

LIC ಯ ಹೊಸ ಪಿಂಚಣಿ ಪ್ಲಸ್‌ ಯೋಜನೆ

  • Share this:
,ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮ (ಎಲ್‌ಐಸಿ) ಇಂಡಿಯಾ ಹೊಚ್ಚ ಹೊಸ ಪಿಂಚಣಿ ಯೋಜನೆಯೊಂದನ್ನು (Pension Scheme) ಪರಿಚಯಿಸಿದೆ. ಇದೇ ಸೆಪ್ಟೆಂಬರ್‌ 5 ರಂದು ಹೊಸ ಪಿಂಚಣಿ ಪ್ಲಸ್ ಅನ್ನು ಘೋಷಣೆ ಮಾಡಿದೆ. ಜೀವನದಲ್ಲಿ ಆರ್ಥಿಕ ಬದ್ಧತೆ ಬಹಳ ಮುಖು. ಆದ್ದರಿಂದ ಹಣಕಾಸಿನ ವಿಷಯದಲ್ಲಿ (Financial matters) ಕ್ರಮಬದ್ಧ ಮತ್ತು ಶಿಸ್ತಿನ ಉಳಿತಾಯದ ಮೂಲಕ ಆರ್ಥಿಕ ಸಮಸ್ಯೆಗಳನ್ನು ದೂರವಿಡಬಹುದು. ಇನ್ನು LIC ತನ್ನ ಗ್ರಾಹಕರಿಗೆ (customers) ಅನೇಕ ಯೋಜನೆಗಳ ಲಾಭವನ್ನ ಕೊಟ್ಟಿದ್ದು ಜನರು ಈ ಯೋಜನೆಗಳ ಲಾಭವನ್ನ (Profit) ಪಡೆದುಕೊಳ್ಳುತ್ತಿದ್ದಾರೆ.  ಇನ್ನು ಈಗ LIC ಹೊಸ ಯೋಜನೆಯನ್ನ ಜಾರಿಗೆ ತಂದಿದ್ದು ಈ ಯೋಜನೆಯ ಅಡಿಯಲ್ಲಿ ಎಲ್ಲಾ ಗ್ರಾಹಕರು ಸಾಯುವ ತನಕ ಪಿಂಚಣಿ ಹಣವನ್ನ ಪಡೆದುಕೊಳ್ಳಬಹುದಾಗಿದೆ.

ಈ ಕ್ರಮಬದ್ಧ ಉಳಿತಾಯವು ಘಟಕ-ಸಂಯೋಜಿತ, ವೈಯಕ್ತಿಕ ಪಿಂಚಣಿ ಯೋಜನೆಯು ವೃದ್ಯಾಪ್ಯದಲ್ಲಿ ಬಹಳಷ್ಟು ಸಹಾಯವನ್ನು ಮಾಡುತ್ತದೆ. ವೈಯಕ್ತಿಕ ಪಿಂಚಣಿಯನ್ನು ಅವಧಿಯ ನಂತರ ವರ್ಷಾಶನ ಯೋಜನೆಯಿಂದ ಖರೀದಿಸುವ ಮೂಲಕ ನಿಯಮಿತ ಆದಾಯವಾಗಿ ಪರಿವರ್ತಿಸಬಹುದು. ಹಾಗಾದರೆ ಈ ಹೊಸ ಯೋಜನೆ ಯಾವುದು ಮತ್ತು ಈ ಯೋಜನೆಯ ಅಡಿಯಲ್ಲಿ ಪಿಂಚಣಿ ಹಣವನ್ನ ಪಡೆದುಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ.

ಎಲ್‌ಐಸಿಯ ಹೊಸ ಪಿಂಚಣಿ ಪ್ಲಸ್‌ ಯೋಜನೆ
ಜನರು ಏಕ ಪ್ರೀಮಿಯಂ ಪಾವತಿ ನೀತಿ ಅಥವಾ ರೆಕ್ಯೂರ್‌ ಪ್ರೀಮಿಯಂ ಪಾವತಿ ನೀತಿಯ ಯೋಜನೆಯನ್ನು ಈ ಪಿಂಚಣಿ ಅಡಿಯಲ್ಲಿ ಪಡೆದುಕೊಳ್ಳಬಹುದು. ನಿಯಮಿತ ಪಾವತಿ ಆಯ್ಕೆಯ ಅಡಿಯಲ್ಲಿ ವಿಮೆಯ ಅವಧಿಯ ಸಮಯದಲ್ಲಿ ಪ್ರೀಮಿಯಂ ಅನ್ನು ಪಾವತಿಸಲಾಗುತ್ತದೆ. ವ್ಯಕ್ತಿಗಳಿಗೆ ಸಿಂಗಲ್‌ ಪ್ರೀಮಿಯಂ ಪಾಲಿಸಿ ಬೇಕೆಂದರೆ ಪ್ರೀಮಿಯಂ ಹಣವನ್ನು ಮುಂಗಡವಾಗಿ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ:  Indian Startups: ಸ್ಟಾರ್ಟಪ್‌ ಮತ್ತು ಯುನಿಕಾರ್ನ್ ಹಬ್ ಆಗುತ್ತಿದೆ ಭಾರತ! ಅಗ್ರಸ್ಥಾನ ಪಡೆಯಲು ಕಾರಣವೇನು ಗೊತ್ತಾ?

ಪಾಲಿಸಿದಾರರು ಪಾವತಿಸುವ ಪ್ರೀಮಿಯಂ ಮೊತ್ತ ಅವರ ಆಯ್ಕೆ ಆಗಿರುತ್ತದೆ. ಇನ್ನು ಹೆಚ್ಚಾಗಿ ಹೇಳಬೇಕೆಂದರೆ ಅವರು ಪಾಲಿಸಿ ಅವಧಿ, ವೆಸ್ಟಿಂಗ್ ಏಜ್‌ ಮತ್ತು ಕನಿಷ್ಠ ಮತ್ತು ಗರಿಷ್ಠ ಪ್ರೀಮಿಯಂ ಮಿತಿಗಳಿಗೆ ಅನುಗುಣವಾಗಿ ಪಾಲಿಸಿ ಅವಧಿಯನ್ನು ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ. ಪಾಲಿಸಿದಾರನು ನಿರ್ದಿಷ್ಟ ನಿರ್ಬಂಧಗಳಿಗೆ ಒಳಪಟ್ಟು ಅದೇ ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿ ಸಂಗ್ರಹಗೊಳ್ಳುವ ಸಮಯವನ್ನು ಸಹ ವಿಸ್ತರಿಸಬಹುದು.

ಇದರಲ್ಲಿ ಹೂಡಿಕೆ ಮಾಡುವುದು ಹೇಗೆ?
ಪಾಲಿಸಿದಾರರು ನಾಲ್ಕು ವಿಧದ ಫಂಡ್‌ಗಳಲ್ಲಿ ಒಂದರಲ್ಲಿ ಮಾತ್ರ ಪ್ರೀಮಿಯಂಗಳನ್ನು ಹೂಡಿಕೆ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ. ಪಾಲಿಸಿದಾರರು ಪಾವತಿಸಿದ ಪ್ರತಿ ಪ್ರೀಮಿಯಂಗೆ ಪ್ರೀಮಿಯಂ ಹಂಚಿಕೆ ಶುಲ್ಕ ವಿಧಿಸಲಾಗುತ್ತದೆ. ಪಾಲಿಸಿದಾರರ ಆಯ್ಕೆ ಮಾಡಿದ ಫಂಡ್‌ನ ಘಟಕಗಳನ್ನು ಖರೀದಿಸಲು ಬಳಸಿದ ಪ್ರೀಮಿಯಂ ಮೊತ್ತವು ಸಮವಾಗಿರುತ್ತದೆ. ಇದನ್ನು ಹಂಚಿಕೆ ದರ ಎಂದೂ ಕರೆಯಲಾಗುತ್ತದೆ. ಒಂದು ಪಾಲಿಸಿ ವರ್ಷದಲ್ಲಿ, ಫಂಡ್‌ ಅನ್ನು ಬದಲಾಯಿಸಲು ನಾಲ್ಕು ಸುಲಭವಾದ ಮಾರ್ಗಗಳು ಇರುತ್ತವೆ. ಪ್ರೀಮಿಯಂ ಯೋಜನೆಗಳು LIC ವೆಬ್‌ಸೈಟ್‌ನಲ್ಲಿ ಅಥವಾ ಏಜೆಂಟ್ ಮೂಲಕ ಖರೀದಿಸಲು ಲಭ್ಯ ಇವೆ.

ಇದನ್ನೂ ಓದಿ:  LIC ಪಾಲಿಸಿದಾರರಿಗೆ ಸಿಹಿಸುದ್ದಿ! ಆ ಶುಲ್ಕದಲ್ಲಿ ಭಾರೀ ರಿಯಾಯಿತಿ, ಈ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು

ಕಳೆದ ಮೇ ತಿಂಗಳಿನಲ್ಲಿ 5,53,721.92 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯದೊಂದಿಗೆ ತನ್ನ ಮಾರುಕಟ್ಟೆ ಪಟ್ಟಿಯ ದಿನದಂದು, ಜೀವ ವಿಮಾ ನಿಗಮವು ಮೌಲ್ಯಮಾಪನದ ಸಂಗತಿಯಲ್ಲಿ ಐದನೇ-ಅತಿದೊಡ್ಡ ನಿಗಮವಾಗಿ ಹೊರ ಹೊಮ್ಮಿದೆ. ಮಂಗಳವಾರ LIC ಯ ಷೇರುಗಳು BSE ನಲ್ಲಿ 8.61 ಶೇಕಡಾ ಅಥವಾ 867.20 ಷೇರಿನ ರಿಯಾಯಿತಿಯಲ್ಲಿ ವ್ಯಾಪಾರವನ್ನು ಪ್ರಾರಂಭಿಸಿದವು.

LIC ಕಂಪನಿ ಬಗ್ಗೆ ಒಂದಿಷ್ಟು ಮಾಹಿತಿ:
ಭಾರತ ಸರ್ಕಾರ ಲೈಫ್ ಇನ್ಸೂರೆನ್ಸ್ ಆಫ್ ಇಂಡಿಯಾ ಆಕ್ಟ್ ನ್ನು 1956 ರಲ್ಲಿ ಜಾರಿಗೆ ತಂದು, 245 ಪ್ರೈವೇಟ್ ಇನ್ಸೂರೆನ್ಸ್‌ನ ಎಲ್ಲ ಕಂಪನಿಗಳನ್ನು ಒಂದೇ ಕಡೆ ಸಂಯೋಜಿಸಿ ಲೈಫ್ ಇನ್ಸೂರೆನ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಎಂದು ನಾಮಕರಣ ಮಾಡಲಾಗುತ್ತದೆ.
Published by:Ashwini Prabhu
First published: