Billionaire: 10 ವರ್ಷಗಳಲ್ಲಿ ಕೋಟ್ಯಾಧಿಪತಿ ಆಗಬೇಕೇ? ಈ ಸಲಹೆಗಳನ್ನು ಪಾಲಿಸಿ

ಫಿರೋಜ್ ಅಜೀಜ್ ಅವರ ಹೂಡಿಕೆಯ ವಿಚಾರಗಳು ಆನಂದ್ ರಾಠಿ ಗ್ರೂಪ್‌ಗೆ ರೂ 5,000 ಕೋಟಿಗಿಂತಲೂ ಹೆಚ್ಚಿನ ಆದಾಯವನ್ನು ತಂದುಕೊಟ್ಟಿದೆ ಮತ್ತು ಕಳೆದ ಮೂರು ವರ್ಷಗಳಲ್ಲಿ 15-17% ದಷ್ಟು ವಾರ್ಷಿಕ ಆದಾಯವನ್ನು ಒದಗಿಸಲು ನೆರವಾಗಿದೆ. ಇಂದಿನ ಲೇಖನದಲ್ಲಿ ಫಿರೋಜ್ ಅವರು ಹೂಡಿಕೆದಾರರಿಗೆ ಕೆಲವೊಂದು ಮಹತ್ವದ ಸಲಹೆಗಳನ್ನು ನೀಡಿದ್ದು, ಹತ್ತು ವರ್ಷಗಳಲ್ಲಿ ಕೋಟ್ಯಾಧಿಪತಿಯಾಗಲು ಅನುಸರಿಸಬೇಕಾದ ಸಲಹೆಗಳು ಹಾಗೆಯೇ ನಿರ್ಲಕ್ಷಿಸಬೇಕಾದ ಅಂಶಗಳನ್ನು ವಿವರಿಸಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
"ಅನಿರೀಕ್ಷಿತ ಬದಲಾವಣೆ ಎಂಬುದು ಈಕ್ವಿಟಿ ಹೂಡಿಕೆಯ (Investment) ಒಂದು ಭಾಗವಾಗಿದೆ. ಹೂಡಿಕೆಯ ವಿಚಾರ ಬಂದಾಗ ತಡಮಾಡದೇ ಆರಂಭಿಸಿ ಅಂತೆಯೇ ಪೋಷಕರ ದಾರಿಯಲ್ಲಿ ನಡೆಯದಿರಿ ಎಂಬುದು ಆನಂದ್ ರಾಠಿ ಪ್ರೈವೇಟ್ ವೆಲ್ತ್ ಮ್ಯಾನೇಜ್‌ಮೆಂಟ್‌ನ ಡೆಪ್ಯುಟಿ ಸಿಇಒ (CEO) ಫಿರೋಜ್ ಅಜೀಜ್ ಮಾತಾಗಿದೆ. ಫಿರೋಜ್ ಅಜೀಜ್ (Feroze Aziz) ಅವರ ಹೂಡಿಕೆಯ ವಿಚಾರಗಳು ಆನಂದ್ ರಾಠಿ ಗ್ರೂಪ್‌ಗೆ ರೂ 5,000 ಕೋಟಿಗಿಂತಲೂ ಹೆಚ್ಚಿನ ಆದಾಯವನ್ನು (Income) ತಂದುಕೊಟ್ಟಿದೆ ಮತ್ತು ಕಳೆದ ಮೂರು ವರ್ಷಗಳಲ್ಲಿ 15-17% ದಷ್ಟು ವಾರ್ಷಿಕ ಆದಾಯವನ್ನು ಒದಗಿಸಲು ನೆರವಾಗಿದೆ. ಇಂದಿನ ಲೇಖನದಲ್ಲಿ ಫಿರೋಜ್ ಅವರು ಹೂಡಿಕೆದಾರರಿಗೆ ಕೆಲವೊಂದು ಮಹತ್ವದ ಸಲಹೆಗಳನ್ನು ನೀಡಿದ್ದು, ಹತ್ತು ವರ್ಷಗಳಲ್ಲಿ ಕೋಟ್ಯಾಧಿಪತಿಯಾಗಲು (Billionaire) ಅನುಸರಿಸಬೇಕಾದ ಸಲಹೆಗಳು ಹಾಗೆಯೇ ನಿರ್ಲಕ್ಷಿಸಬೇಕಾದ ಅಂಶಗಳನ್ನು ವಿವರಿಸಿದ್ದಾರೆ.

ಕೆಲವೊಬ್ಬರು ಹೂಡಿಕೆದಾರರಿಗೆ ಈಕ್ವಿಟಿ ತುಂಬಾ ಅಪಾಯಕಾರಿಯೇ? ಹೂಡಿಕೆದಾರರು ಕಡಿಮೆ ಅಪಾಯದ ಪರಿಣಾಮದೊಂದಿಗೆ ಆದಾಯವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು
ನನ್ನ ಅಭಿಪ್ರಾಯದಲ್ಲಿ, ಈಕ್ವಿಟಿ ಎಲ್ಲರಿಗೂ ಸಮಾನವೇ. ಪ್ರಮುಖ ಅಂಶವೆಂದರೆ ಈಕ್ವಿಟಿಯು ಸಮಯದೊಂದಿಗೆ ಶೂನ್ಯ ಅಥವಾ ಅತ್ಯಲ್ಪ ಅಪಾಯವನ್ನು ಒದಗಿಸುತ್ತದೆ. ಭಾರತದಲ್ಲಿರುವ ಅತ್ಯಂತ ಹಳೆಯ ಈಕ್ವಿಟಿ ಫಂಡ್‌ಗಳ ಕುರಿತು 30 ವರ್ಷಗಳ ಅಧ್ಯಯನವನ್ನು ನಡೆಸಿದ್ದು ದುರದೃಷ್ಟಕರ ಅಂಶವೆಂದರೆ 10-ವರ್ಷದ ಹೂಡಿಕೆದಾರರು 10 ವರ್ಷಗಳಲ್ಲಿ ವರ್ಷಕ್ಕೆ 11% ರಿಂದ 12% ಗಳಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ 10-ವರ್ಷದ ಹೂಡಿಕೆದಾರರ ಆದಾಯ ಕೇವಲ ಎರಡು ಅಂಕಿಯಾದಲ್ಲಿ ಇಲ್ಲಿ ಪ್ರಮುಖವಾಗಿ ನಿರ್ಧರಿಸಬೇಕಾದ ಅಂಶವೆಂದರೆ ಹತ್ತು ವರ್ಷಗಳ ಕಾಲ ಹೂಡಿಕೆ ಮಾಡಬಹುದೇ ಎಂಬುದಾಗಿದೆ.

ಉತ್ತಮ ಆದಾಯಕ್ಕಾಗಿ ವೈವಿಧ್ಯೀಕರಣವೂ ಮುಖ್ಯವಾಗಿದೆ. ವೈವಿಧ್ಯೀಕರಣಕ್ಕಾಗಿ ಪರಿಗಣಿಸಬೇಕಾದ ಅಂಶಗಳು ಯಾವುವು?
ವೈವಿಧ್ಯೀಕರಣಕ್ಕಾಗಿ ರಿಟರ್ನ್ ಟಾರ್ಗೆಟ್ ಅಗತ್ಯವಾಗಿರುತ್ತದೆ. ರಿಟರ್ನ್‌ನಲ್ಲಿ ಹಾಗೂ ರಿಸ್ಕ್‌ನಲ್ಲಿ ನಿಮ್ಮ ಟಾರ್ಗೆಟ್ ಏನು ಎಂಬುದನ್ನು ಮನದಟ್ಟು ಮಾಡಿಕೊಳ್ಳಿ. ರಿಟರ್ನ್ ಬಗ್ಗೆ ಹೇಳುವಾಗ ಪೂರ್ಣಾಂಕಗಳಲ್ಲಿ ಒದಗಿಸಲಾಗುತ್ತದೆ ಇನ್ನು ರಿಸ್ಕ್‌ನ ಅಂಶಗಳನ್ನು ಇಂಗ್ಲೀಷ್‌ನಲ್ಲಿ ವಿವರಿಸಲಾಗುತ್ತದೆ. ಇದು ಸರಿಯಾದ ವಿಧಾನವಲ್ಲ ಎರಡನ್ನೂ ಸಂಖ್ಯಾತ್ಮಕ ಅಳತೆಗಳ ಮೂಲಕ ಒದಗಿಸಬೇಕು ಹಾಗೂ ರಿಟರ್ನ್ ಮತ್ತು ರಿಸ್ಕ್ ಎರಡನ್ನೂ ಸಮಾನವಾಗಿ ಅಳೆಯಬೇಕು ಎಂಬುದು ಫಿರೋಜ್ ಅಭಿಪ್ರಾಯವಾಗಿದೆ.

ಅತ್ಯುತ್ತಮ ಆಸ್ತಿ ಹಂಚಿಕೆ ತಂತ್ರ ಯಾವುದು?
ನನ್ನ ಅನಿಸಿಕೆಯ ಪ್ರಕಾರ (ಫಿರೋಜ್ ಅಜೀಜ್) ನಾವು ಇಂದು ಐದು ವರ್ಷಗಳ ಮೇಲಿನ ಟಾರ್ಗೆಟ್‌ಗಾಗಿ ನೀವು ಕನಿಷ್ಟ 60% ಈಕ್ವಿಟಿಯನ್ನು ಹೊಂದಿರಬೇಕು, 40% ಸಾಲವನ್ನು ಹೊಂದಿರಬೇಕು. ರಿಯಲ್ ಎಸ್ಟೇಟ್‌ ಅನ್ನು ಹೂಡಿಕೆಯಂತೆ ಹೂಡಿಕೆ ಮಾಡುವುದಾದರೆ ಅದು ಶೂನ್ಯವಾಗಿರಬೇಕು. ಚಿನ್ನವನ್ನು ಹೂಡಿಕೆ ಮಾಡುವುದಿದ್ದರೆ ಕೂಡ ನಾನು ಅದಕ್ಕೆ ಶೂನ್ಯ ಬೆಲೆಯನ್ನೇ ಕಲ್ಪಿಸುತ್ತೇನೆ ಇದರಿಂದ 60/40 ಮಿಶ್ರಣದಲ್ಲಿ ಈಕ್ವಿಟಿ ಮತ್ತು ಸಾಲ ಹೀಗೆ ಎರಡರಲ್ಲೂ ಆದಾಯವನ್ನು ಪಡೆದುಕೊಳ್ಳಬಹುದು. ನೀವು 10 ವರ್ಷದ ಜೊತೆಗೆ ಉದ್ದೇಶವನ್ನು ಹೊಂದಿದ್ದಲ್ಲಿ ಈಕ್ವಿಟಿಯಲ್ಲಿ 80 ಹಾಗೂ ಸಾಲದಲ್ಲಿ 20% ಅನ್ನು ಕಂಡುಕೊಳ್ಳಬಹುದು.

ಇದನ್ನೂ ಓದಿ: 15 ಕೋಟಿ ಸ್ಯಾಲರಿ ಪಡೆಯುತ್ತಿದ್ದ Ambani ಈ ವರ್ಷ ಒಂದು ರೂಪಾಯಿ ತೆಗೆದುಕೊಂಡಿಲ್ಲ, ಕಾರಣವೇನು?

 2022 ರಲ್ಲಿ ಹೂಡಿಕೆ ಮಾಡಲು ನೀವು ಶಿಫಾರಸು ಮಾಡಲು ಬಯಸುವ ಯಾವುದೇ ಉನ್ನತ ಮ್ಯೂಚುಯಲ್ ಫಂಡ್‌ಗಳು?
ಸರಿಸುಮಾರು 480 ಫಂಡ್‌ಗಳು ಮುಕ್ತವಾಗಿವೆ. ಹೂಡಿಕೆದಾರರಾಗಿ ನೀವು 8,10, ಗರಿಷ್ಠ 11 ಅನ್ನು ಆಯ್ಕೆಮಾಡಿಕೊಳ್ಳಬಹುದು. ನಮ್ಮ ಪೋರ್ಟ್‌ಫೋಲಿಯೋದಲ್ಲಿ 11 ಫಂಡ್‌ಗಳಿದ್ದರೆ ಇದರ ಆಯ್ಕೆ ಹಿಂದಿನ ಕಾರ್ಯಕ್ಷಮತೆಯ ದೃಷ್ಟಿಕೋನವನ್ನು ಅವಲಂಬಿಸಿರಬಾರದು. ಭವಿಷ್ಯದಲ್ಲಿ ಯಾವುದು ಸಂಭಾವ್ಯವಾಗಿರಬಹುದು ಎಂಬುದನ್ನು ಪ್ರಯತ್ನಿಸಲು ಮತ್ತು ನೋಡಲು ನಾವು ಸಂಖ್ಯಾಶಾಸ್ತ್ರೀಯ ಸಾಧನಗಳನ್ನು ಬಳಸುತ್ತೇವೆ.

ಐದು ವಿಭಿನ್ನ ವರ್ಗಗಳಿಂದ ಐದು ಯೋಜನೆಗಳು ಬಹಳ ನಿರ್ಣಾಯಕವಾಗಿವೆ. ಫ್ಲೆಕ್ಸಿ ಕ್ಯಾಪ್ ವಿಭಾಗದಲ್ಲಿ, HDFC NSE 1.63 % ಫ್ಲೆಕ್ಸಿ ಕ್ಯಾಪ್, ಮಿಡ್‌ಕ್ಯಾಪ್ ಬದಿಯಲ್ಲಿ ಕೋಟಾಕ್ ಎಮರ್ಜಿಂಗ್ ಈಕ್ವಿಟಿ, ಸ್ಮಾಲ್-ಕ್ಯಾಪ್ ಬದಿಯಲ್ಲಿ ಆದಿತ್ಯ ಬಿರ್ಲಾ ಸ್ಮಾಲ್ ಕ್ಯಾಪ್ ಅನ್ನು ಬಳಸಿ ಎಂಬುದು ಫಿರೋಜ್ ಅವರ ಸಲಹೆಯಾಗಿದೆ.

10 ವರ್ಷಗಳಲ್ಲಿ ಕೋಟ್ಯಾಧಿಪತಿಯಾಗಲು ನಿಮ್ಮ ಸಲಹೆಗಳೇನು?
10 ವರ್ಷಗಳಲ್ಲಿ ಕೋಟ್ಯಾಧಿಪತಿಗಳಾಗಬೇಕೆಂಬ ಗುರಿ ನಿಮ್ಮದಾಗಿದ್ದರೆ ಖರ್ಚುಗಳನ್ನು ಆದಷ್ಟು ಕಡಿಮೆ ಮಾಡಬೇಕು ಆದಾಯವನ್ನು ಹೂಡಿಕೆಯಂತೆ ಹೂಡಿ ಇದ್ದುದರಲ್ಲಿಯೇ ತೃಪ್ತಿಯಿಂದ ಬದುಕಬೇಕು. ಬ್ಯಾಂಕ್‌ಗೆ ಒಟ್ಟು ಕ್ರೆಡಿಟ್‌ನ 30% ರಿಂದ 40% ಶ್ರೇಯಾಂಕವನ್ನು ಹೊಂದಿ ಇದರಿಂದ ಟಾರ್ಗೆಟ್ ತಲುಪಲು ನಿಮಗೆ ಸಾಧ್ಯವಾಗುತ್ತದೆ. ಜನರು ಉತ್ತಮ ಆದಾಯ ಹೊಂದಿದ್ದರೆ ಅದನ್ನು ಖರ್ಚುಮಾಡುತ್ತಾರೆ ನಂತರ ಹೂಡಿಕೆಯ ಮೂಲಕ್ಕಾಗಿ ಅನ್ವೇಷಿಸುತ್ತಾರೆ. ಕಡಿಮೆ ಖರ್ಚು ಉತ್ತಮ ಹೂಡಿಕೆ ನಿಮ್ಮ ಮಂತ್ರವಾಗಿರಲಿ ಎಂಬುದು ಫಿರೋಜ್ ಅವರ ಸಲಹೆಯಾಗಿದೆ.

ಇದನ್ನೂ ಓದಿ:  Cauvery: ಕಾವೇರಿ ನದಿಯಲ್ಲಿ ಯಾತ್ರಾರ್ಥಿಗಳು ಬಿಸಾಡಿದ ಬಟ್ಟೆಗಳೇ ಇವರ ಆದಾಯದ ಮೂಲ

ಮ್ಯೂಚುವಲ್ ಫಂಡ್‌ಗಳಲ್ಲಿ ಅದೇ ಫಂಡ್‌ಗಳು ಉಳಿಯುವುದಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ. ಪ್ರತಿಯೊಂದು ಫಂಡ್ ಒಂದು ಆವರ್ತನದ ಮೂಲಕ ಸಾಗುತ್ತದೆ ಈ ಸಮಯದಲ್ಲಿ ನಿಮ್ಮ ವಿತರಕರು ಇಲ್ಲವೇ ಸಲಹೆಗಾರರು ಫಂಡ್‌ನಿಂದ ಯಾವಾಗ ಹೊರಬರಬೇಕು ಎಂಬ ಸಲಹೆಯನ್ನು ನೀಡಬೇಕು. ಈಕ್ವಿಟಿ ಎಂದರೆ ದೀರ್ಘಾವಧಿ, ಅಂದರೆ ನೀವು 10 ವರ್ಷಗಳ ಕಾಲ ಒಂದೇ ಮ್ಯೂಚುವಲ್ ಫಂಡ್ ಅನ್ನು ಹೊಂದಿರುವಿರಿ ಎಂದಲ್ಲ.

ಎಲ್ಲಾ ಯುವ ಮತ್ತು ಹೊಸ ಹೂಡಿಕೆದಾರರಿಗೆ ನಿಮ್ಮ ಸಲಹೆ ಏನು? ಪರಿಗಣಿಸಬಾರದ ಅಂಶಗಳೇನು?
ಹೂಡಿಕೆಯ ವಿಷಯಕ್ಕೆ ಬಂದಾಗ ಹಿರಿಯರ ಇಲ್ಲವೇ ಪೋಷಕರ ದಾರಿಯನ್ನು ಅನುಸರಿಸುವುದನ್ನು ಬಿಟ್ಟುಬಿಡಬೇಕು. ಅಮೆರಿಕಾದಲ್ಲಿ GDP ಯು 100 ಆಗಿದ್ದರೆ ಮ್ಯೂಚುವಲ್ ಫಂಡ್ AUM 140 ಆಗಿರುತ್ತದೆ. ಆದರೆ ಭಾರತದಲ್ಲಿ GDP ಯು 100 ಆಗಿದ್ದರೆ ಮ್ಯೂಚುವಲ್ ಫಂಡ್‌ಗಳಲ್ಲಿ ನಾವು ಕೇವಲ ರೂ.16 ಅನ್ನು ಹೂಡಿಕೆ ಮಾಡುತ್ತೇವೆ. ನನ್ನ ವೃತ್ತಿಜೀವನದ ಮೊದಲ ನಾಲ್ಕು ವರ್ಷಗಳಲ್ಲಿ ನಾನು ಈಕ್ವಿಟಿಯಲ್ಲಿ ಹೂಡಿಕೆ ಮಾಡಲಿಲ್ಲ, ಏಕೆಂದರೆ ನನ್ನ ತಂದೆ ಅದರ ಹೊರತಾಗಿ ಬೇರೆ ವಿಷಯಗಳನ್ನು ತಿಳಿಸಿದ್ದರು. ಅವರು ನನಗೆ ಕಲಿಸಿದ ಕೌಶಲ್ಯ ತಪ್ಪು ಎಂಬುದು ನನ್ನ ಅಭಿಪ್ರಾಯವಲ್ಲ ಆದರೆ ಹೂಡಿಕೆ ಮಾಡುವಾಗ ನಾವು ಪೂರ್ವಿಕರ ಆಸ್ತಿಗಳನ್ನು ಪ್ರೀತಿಸುತ್ತೇವೆ, ಸರಿ ತಪ್ಪುಗಳ ಬಗ್ಗೆ ಯೋಚಿಸುವುದಿಲ್ಲ ಹಾಗಾಗಿ ತಡಮಾಡದೇ ಆದಷ್ಟು ಬೇಗನೇ ಹೂಡಿಕೆ ಮಾಡಿ.
Published by:Ashwini Prabhu
First published: