FASTag: ಕಾರ್​ ಕ್ಲೀನ್​ ಮಾಡೋ ನೆಪದಲ್ಲಿ ಫಾಸ್ಟ್ಯಾಗ್​ನಿಂದ ಹಣ ಎಗರಿಸಿದ ಬಾಲಕ! ವಾಹನ ಮಾಲೀಕರೇ ಹುಷಾರ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಫಾಸ್ಟ್ಯಾಗ್​ ಕದಿಯುವ ಕಳ್ಳರಿದ್ದಾರೆ ಅಂದರೆ ನೀವು ನಂಬುತ್ತೀರಾ? ಹೌದು, ಫಾಸ್ಟ್ಯಾಗ್​ ಸ್ಕ್ಯಾನ್​ ಮಾಡಿ ಹಣ ವರ್ಗಾಯಿಸುವ ಗ್ಯಾಂಗ್​ ಒಂದಿದೆ. ಇದೆನಪ್ಪಾ ಇದು ನಿಜಕ್ಕೂ ಸಾಧ್ಯನಾ? ಫಾಸ್ಟ್ಯಾಗ್​ನಿಂದ ಹಣ ಕದಿಯೋಕೆ ಆಗುತ್ತಾ? ಎಂದು ನೀವು ಪ್ರಶ್ನೆ ಮಾಡಬಹುದು. ಅದಕ್ಕೆ ಇಲ್ಲಿದೆ ನೋಡಿ ವಿಡಿಯೋ ಸಾಕ್ಷಿ.

ಮುಂದೆ ಓದಿ ...
  • Share this:

ಟೋಲ್ (Toll) ಪಾವತಿಸಲು ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಟೋಲ್​ ಪ್ಲಾಜಾಗಳಲ್ಲಿ ಟ್ರಾಫಿಕ್ (Traffic)​ ಸಮಸ್ಯೆ, ಚಿಲ್ಲರೆ ಸಮಸ್ಯೆಯನ್ನು ಸಾರ್ವಜನಿಕರು ಎದುರಿಸುತ್ತಿದ್ದರು. ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರವು ಫಾಸ್ಟ್ಯಾಗ್ (FASTag) ಅನ್ನು ಪರಿಚಯಿಸಿದೆ. ಫಾಸ್ಟ್ಯಾಗ್ ಸಹಾಯದಿಂದ, ಟೋಲ್ ಪ್ಲಾಜಾದಲ್ಲಿ ನಿಲ್ಲದೆ ಟೋಲ್ ತೆರಿಗೆಯನ್ನು ಪಾವತಿಸಬಹುದು. ಫಾಸ್ಟ್ಯಾಗ್ ಸ್ಟಿಕರ್ (FASTag Sticket)​ ಅನ್ನು ಸ್ಕ್ಯಾನ್ (Scan) ಮಾಡಿದರೆ ಸಾಕು ಟೋಲ್​ ತೆರಿಗೆ ಪಾವತಿಯಾಗಿರುತ್ತೆ. ಇದರಿಂದ ನೀವು ಹೆಚ್ಚು ಹೊತ್ತು ಟೋಲ್​ ಬಳಿ ನಿಲ್ಲಬೇಕಿಲ್ಲ. ಆದರೆ, ಈ ಫಾಸ್ಟ್ಯಾಗ್​ ಕದಿಯುವ ಕಳ್ಳರಿದ್ದಾರೆ ಅಂದರೆ ನೀವು ನಂಬುತ್ತೀರಾ? ಹೌದು, ಫಾಸ್ಟ್ಯಾಗ್​ ಸ್ಕ್ಯಾನ್​ ಮಾಡಿ ಹಣ ವರ್ಗಾಯಿಸುವ ಗ್ಯಾಂಗ್​ ಒಂದಿದೆ. ಇದೆನಪ್ಪಾ ಇದು ನಿಜಕ್ಕೂ ಸಾಧ್ಯನಾ? ಫಾಸ್ಟ್ಯಾಗ್​ನಿಂದ ಹಣ ಕದಿಯೋಕೆ ಆಗುತ್ತಾ? ಎಂದು ನೀವು ಪ್ರಶ್ನೆ ಮಾಡಬಹುದು. ಅದಕ್ಕೆ ಇಲ್ಲಿದೆ ನೋಡಿ ವಿಡಿಯೋ ಸಾಕ್ಷಿ.


2014ರಲ್ಲಿ ಆರಂಭವಾದ ಫಾಸ್ಟ್ಯಾಗ್​ ಸಿಸ್ಟಮ್​!


ಟೋಲ್ ಸಂಗ್ರಹ ವ್ಯವಸ್ಥೆಯು ಹಲವು ತೊಂದರೆಗಳನ್ನು ಎದುರಿಸುತ್ತಿತ್ತು. ಈ ಸಮಸ್ಯೆಗಳನ್ನು ನಿವಾರಿಸಲು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ದೇಶಾದ್ಯಂತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಪರಿಚಯಿಸಿತು. ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಸಿಸ್ಟಮ್ (ಫಾಸ್ಟ್ಯಾಗ್) ಯೋಜನೆಯನ್ನು 2014 ರಲ್ಲಿ ಪ್ರಾರಂಭಿಸಲಾಯಿತು. ನಂತರ ಯೋಜನೆಯನ್ನು ವಿಸ್ತರಿಸಲಾಯಿತು.


ಫಾಸ್ಟ್ಯಾಗ್​ನೂ ಬಿಡ್ತಿಲ್ಲ ಖತರ್ನಾಕ್​ ಖದೀಮರು!


FASTag ಅನ್ನು ಯಾವುದೇ ಅಧಿಕೃತ ಟ್ಯಾಗ್ ಪಾಲುದಾರ ಬ್ಯಾಂಕ್‌ನಿಂದ ಖರೀದಿಸಬಹುದು. ವಾಹನಗಳಿಗೆ ಈಗ ಫಾಸ್ಟ್ಯಾಗ್ ಅಳವಡಿಸಬೇಕಾಗಿದೆ. ಹಾಗಾಗಿ ನಾವು ಟೋಲ್ ಪ್ಲಾಜಾ ಮೂಲಕ ಹಾದು ಹೋದರೆ, ಸ್ಕ್ಯಾನರ್ ಈ ಫಾಸ್ಟ್ಯಾಗ್ ಅನ್ನು ಸ್ಕ್ಯಾನ್ ಮಾಡುತ್ತದೆ ಮತ್ತು ಹಣವನ್ನು ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಇದೀಗ ಹ್ಯಾಕರ್​ಗಳ ತುಂಬಾ ಆ್ಯಕ್ಟೀವ್ ಆಗಿದ್ದಾರೆ. ಯಾರಿಗೂ ತಿಳಿಯದಂತೆ ಫಾಸ್ಟ್ಯಾಗ್​ನಿಂದ ಹಣ ಎಗರಿಸುತ್ತಿದ್ದಾರೆ.


ಇದನ್ನೂ ಓದಿ: ಅಂದು ಡಾಕ್ಟರ್, ಇಂದು ಫಾರ್ಮರ್! 2 ಎಕರೆಯಲ್ಲಿ ಸೋಲಾರ್ ಪ್ಲಾಂಟ್​ನಲ್ಲಿ 6 ಲಕ್ಷ ದುಡಿಯುತ್ತಿದ್ದಾರೆ ಈ ಸಾಧಕ


ಬಾಲಕನ ವಿಡಿಯೋ ಸಿಕ್ಕಾಪಟ್ಟೆ ವೈರಲ್!


ಫಾಸ್ಟ್‌ಟ್ಯಾಗ್‌ನಲ್ಲಿ ಹಣ ದುರುಪಯೋಗವಾಗುತ್ತಿದೆ ಎಂದು ಹಲವರು ದೂರಿದ್ದಾರೆ. ಟೋಲ್ ಪ್ಲಾಜಾ ಮೂಲಕ ಹಾದುಹೋಗದೆ ಮೊತ್ತವನ್ನು ಹೇಗೆ ಕಡಿತಗೊಳಿಸಲಾಯಿತು ಎಂದು ಹಲವರು ಆಶ್ಚರ್ಯ ಪಡುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದಾಗ ಪ್ರತ್ಯೇಕ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಹೊರಬಿದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಕೂಡ ಸಿಕ್ಕಾಪಟ್ಟ ವೈರಲ್​ ಆಗುತ್ತಿದೆ. ಇದು ಸತ್ಯಾನಾ? ಸುಳ್ಳಾ? ಎಂಬ ಚರ್ಚೆ ಜೋರಾಗಿದೆ.ಕಾರು ಕ್ಲೀನ್​ ನೆಪದಲ್ಲಿ ಹಣ ಎಗರಿಸಿದ ಬಾಲಕ?


ಬಾಲಕನೊಬ್ಬ ಕಾರನ್ನು ಸ್ವಚ್ಛಗೊಳಿಸುವ ನೆಪದಲ್ಲಿ ಫಾಸ್ಟ್ಯಾಗ್​ ಸ್ಕ್ಯಾನ್​ ಮಾಡಿದ್ದಾರೆ. ವಿಡಿಯೋದಲ್ಲಿ ನೀವು ನೋಡಬಹುದು. ಕ್ಲೀನ್​ ಮಾಡುವ ನೆಪದಲ್ಲಿ ಗಾಜಿನ ಮೇಲಿರುವ ಫಾಸ್ಟ್ಯಾಗ್​ನ ತನ್ನ ಕೈಯಲ್ಲಿರುವ ವಾಚ್​ನಿಂದ ಸ್ಕ್ಯಾನ್​ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತೆ. ಬಾಲಕ ಕಾರನ್ನು ಸ್ವಚ್ಛಗೊಳಿಸುತ್ತಿದ್ದಾರೆ ಎಂದು ತೋರುತ್ತದೆ, ಆದರೆ ಅವನು ಗಾಜಿನ ಮೇಲಿನ ಫಾಸ್ಟ್ಯಾಗ್​ ಅನ್ನು ಸ್ಕ್ಯಾನ್ ಮಾಡುವ ಮೂಲಕ ಖಾತೆಗೆ ಹಣವನ್ನು ವರ್ಗಾಯಿಸುತ್ತಿದ್ದಾನೆ.


ಇದನ್ನೂ ಓದಿ: Bengaluru ನಲ್ಲಿ ಬದುಕೋಕೆ ವರ್ಷಕ್ಕೆ 1 ಕೋಟಿ ಸಂಬಳ ಇದ್ರೂ ಸಾಲಲ್ವಂತೆ! ವೈರಲ್ ಆಯ್ತು ವ್ಯಕ್ತಿಯೊಬ್ಬ ಕೇಳಿದ್ದ ಪ್ರಶ್ನೆ


ಮಗು ಕೈಯಲ್ಲಿ ಗಡಿಯಾರದಂತಹ ಗೆಜೆಟ್ ಧರಿಸಿದ್ದಾನೆ. ಇದು ಸ್ಕ್ಯಾನರ್ ಆಗಿದೆ, ಈ ಸ್ಕ್ಯಾನರ್ ಅನ್ನು ಫಾಸ್ಟ್ಯಾಗ್ನಲ್ಲಿ ಎಷ್ಟು ಬಾರಿ ಉಜ್ಜಿದ್ದಾನೆ ನೋಡಿ.ಅಷ್ಟು ಬಾರಿಯೂ ಖಾತೆಯಿಂದ ಹಣ ಕಟ್​ ಆಗಿದೆ. ಮೊಬೈಲ್ ಫೋನ್‌ಗೆ ಸಂದೇಶ ಬರುವವರೆಗೆ ಬಾಲಕ ಕಾರನ್ನು ಸ್ವಚ್ಛಗೊಳಿಸುತ್ತಿರುತ್ತಾನೆ. ನಂತರ ಕಾರಿನ ಮಾಲೀಕರು ಪ್ರಶ್ನೆ ಮಾಡುತ್ತಿದ್ದಂತೆ ಓಡಿ ಹೋಗಿದ್ದಾನೆ. ಆದರೆ, ಯಾವುದೇ ಸಾಧನದಿಂದ ಫಾಸ್ಟ್ಯಾಗ್​ ಸ್ಕ್ಯಾನ್​ ಮಾಡಿ ಹಣ ವರ್ಗಾಯಿಸಲು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು.

First published: