• Home
  • »
  • News
  • »
  • business
  • »
  • Wai Wai Noodles: ನೀವು ಬಾಯಿ ಚಪ್ಪರಿಸಿ ತಿನ್ನೋ ವಾಯ್​ ವಾಯ್​ ನೂಡಲ್ಸ್​ ಬಂದಿದ್ದು ನೇಪಾಳದಿಂದ, ಟರ್ನ್ ​ಓವರ್​ ಎಷ್ಟು ನೋಡಿ!

Wai Wai Noodles: ನೀವು ಬಾಯಿ ಚಪ್ಪರಿಸಿ ತಿನ್ನೋ ವಾಯ್​ ವಾಯ್​ ನೂಡಲ್ಸ್​ ಬಂದಿದ್ದು ನೇಪಾಳದಿಂದ, ಟರ್ನ್ ​ಓವರ್​ ಎಷ್ಟು ನೋಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಾವು ತಿನ್ನುವ ವಾಯ್ ವಾಯ್ ನೂಡಲ್ಸ್ ನಿಜವಾಗಿಯೂ ನೇಪಾಳದಿಂದ ಬಂದಿದೆ ಎಂದು ನಿಮಗೆ ತಿಳಿದಿದೆಯೇ? ನಮ್ಮ ನೆರೆಯ ದೇಶದಲ್ಲಿ ತಯಾರಾಗುತ್ತಿರುವ ನೂಡಲ್ಸ್ ಪ್ಯಾಕೆಟ್ ಈಗಾಗಲೇ ಒಂದಲ್ಲ, ಎರಡಲ್ಲ ಬರೋಬ್ಬರಿ 32 ದೇಶಗಳಲ್ಲಿನ ಊಟದ ಟೇಬಲ್ ಗೆ ತಲುಪಿದೆ ಅಂತ ಹೇಳಲಾಗುತ್ತಿದೆ.

  • Share this:

ತ್ವರಿತವಾಗಿ ಮಾಡಿಕೊಳ್ಳುವ ಮತ್ತು ಸ್ವಾದಿಷ್ಟಕರವಾದ ನೂಡಲ್ಸ್ (Noodle's) ಎಂದರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ. ಈಗಂತೂ ಅನೇಕ ರೀತಿಯ ನೂಡಲ್ಸ್ ಗಳು ಮಾರುಕಟ್ಟೆ (Market) ಯಲ್ಲಿ ಸಿಗುತ್ತವೆ, ಆದರೆ ಅದರಲ್ಲಿ ಯಾವುದು ಎಂತ ರುಚಿ (Taste) ಯನ್ನು ಕೊಡುತ್ತೆ ಅಂತ ತಿಳಿದುಕೊಳ್ಳುವುದಕ್ಕೆ ಎಲ್ಲಾ ರೀತಿಯ ನೂಡಲ್ಸ್ ಗಳನ್ನ ಒಮ್ಮೆಯಾದರೂ ನಾವು ರುಚಿ ನೋಡಲೆಬೇಕು. ಮಾರುಕಟ್ಟೆಯಲ್ಲಿರುವ ವಾಯ್ ವಾಯ್ ನೂಡಲ್ಸ್ ಬಗ್ಗೆ ಒಮ್ಮೆಯಾದರೂ ನೀವು ಕೇಳಿಯೇ ಇರುತ್ತೀರಿ ಅಲ್ಲವೇ? ಬನ್ನಿ ಹಾಗಾದರೆ ಇದರ ರುಚಿ ಬಹುತೇಕರಿಗೆ ಈಗಾಗಲೇ ಗೊತ್ತಿರುತ್ತದೆ, ಆದರೆ ಇದು ಎಲ್ಲಿಂದ ಬಂದಿದ್ದು , ಏನಿದರ ಇತಿಹಾಸ ಅಂತ ಬಹುತೇಕರಿಗೆ ತಿಳಿದಿರುವುದಿಲ್ಲ.


ವಾಯ್​ ವಾಯ್​ ನೂಡಲ್ಸ್​ ಮೂಲ ಯಾವುದು?


ನಾವು ತಿನ್ನುವ ವಾಯ್ ವಾಯ್ ನೂಡಲ್ಸ್ ನಿಜವಾಗಿಯೂ ನೇಪಾಳದಿಂದ ಬಂದಿದೆ ಎಂದು ನಿಮಗೆ ತಿಳಿದಿದೆಯೇ? ನಮ್ಮ ನೆರೆಯ ದೇಶದಲ್ಲಿ ತಯಾರಾಗುತ್ತಿರುವ ನೂಡಲ್ಸ್ ಪ್ಯಾಕೆಟ್ ಈಗಾಗಲೇ ಒಂದಲ್ಲ, ಎರಡಲ್ಲ ಬರೋಬ್ಬರಿ 32 ದೇಶಗಳಲ್ಲಿನ ಊಟದ ಟೇಬಲ್ ಗೆ ತಲುಪಿದೆ ಅಂತ ಹೇಳಲಾಗುತ್ತಿದೆ.


ಇನ್ಸ್ಟಾಗ್ರಾಮ್ ನೂಡಲ್ಸ್​ ವಿಡಿಯೋ ವೈರಲ್!


ಇನ್‌ಸ್ಟಾಗ್ರಾಮ್ ಬಳಕೆದಾರರಾದ ಬೆರಿಲ್ ಶೆರೆಶೆವ್ಸ್ಕಿ ಈ ನೂಡಲ್ಸ್ ಇತಿಹಾಸದ ಬಗ್ಗೆ ಚರ್ಚಿಸುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ನೂಡಲ್ಸ್ ನೇಪಾಳದಲ್ಲಿ ಹುಟ್ಟಿಕೊಂಡಿತು ಎಂದು ಅವರು ಹೇಳಿದ್ದಾರೆ. ಬಿನೋದ್ ಚೌಧರಿ ಈ ಥಾಯ್ ನೂಡಲ್ ಬ್ರ್ಯಾಂಡ್ "ವಾಯ್ ವಾಯ್" ಅನ್ನು ಖರೀದಿಸಿದರು. ಚೌಧರಿ ಅವರು ನಂತರ ನೇಪಾಳದ ಜನರ ಆಹಾರ ಆದ್ಯತೆಗೆ ಹೊಂದಿಕೆಯಾಗುವಂತೆ ಈ ಬ್ರ್ಯಾಂಡ್ ನ ಪರಿಮಳವನ್ನು ಈ ನೂಡಲ್ಸ್ ನಲ್ಲಿ ಬದಲಾಯಿಸಿದರು.


ಇದು ಅವರನ್ನು ನೇಪಾಳದ ಮೊದಲ ಮತ್ತು ಏಕೈಕ ಬಿಲಿಯನೇರ್ ಆಗಿ ಮಾಡಿತು. ತ್ವರಿತ ನೂಡಲ್ಸ್ ನ ಎರಡನೇ ಅತಿದೊಡ್ಡ ತಲಾ ಗ್ರಾಹಕ ನೇಪಾಳ ಎಂದು ವೀಡಿಯೋ ಹೇಳಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ನೂಡಲ್ಸ್ ನ ಕೆಲವು ಪಾಕವಿಧಾನಗಳನ್ನು ಸಹ ಹಂಚಿಕೊಂಡಿದ್ದಾರೆ.




ಇದನ್ನೂ ಓದಿ: ಮನೆಯನ್ನೇ ಫಾರ್ಮ್ ಮಾಡಿದ ವ್ಯಕ್ತಿ, ವರ್ಷಕ್ಕೆ 70 ಲಕ್ಷ ರೂಪಾಯಿ ಆದಾಯ ಫಿಕ್ಸ್​!


ಈಗ ನೇಪಾಳದ ಬಿಲಿಯನೇರ್ ಉದ್ಯಮಿ, ರಾಜಕಾರಣಿ ಮತ್ತು ಲೋಕೋಪಕಾರಿಯಾಗಿರುವ ಚೌಧರಿ ಅವರ ಸಾಮ್ರಾಜ್ಯವು ಈ ನೂಡಲ್ಸ್ ಮೇಲೆ ನಿರ್ಮಿಸಲ್ಪಟ್ಟಿದೆ ಮತ್ತು ಪ್ರಸ್ತುತ ವಿಶ್ವದಾದ್ಯಂತ ಹರಡಿದೆ ಎಂದು ಹೇಳಲಾಗುತ್ತಿದೆ.


ಈ ನೂಡಲ್ಸ್ ಇತಿಹಾಸ ತಿಳಿದು ಆಶ್ಚರ್ಯಚಕಿತರಾದ ನೆಟ್ಟಿಗರು


ಈ ವೀಡಿಯೊಗೆ "ವಾಯ್ ವಾಯ್ ನೂಡಲ್ಸ್ ಜಾಗತಿಕ ತ್ವರಿತ ನೂಡಲ್ಸ್ ಕ್ರೇಜ್ ಗೆ ನೇಪಾಳದ ಸೇರ್ಪಡೆಯಾಗಿದೆ. ನನ್ನ ಚಾನಲ್ ನಲ್ಲಿ, ನಾನು ವಾಯ್ ವಾಯ್ ನೂಡಲ್ಸ್ ನೊಂದಿಗೆ ಒಂದೆರಡು ಭಕ್ಷ್ಯಗಳನ್ನು ಮಾಡಿದ್ದೇನೆ, ಆದರೆ ಈ ಮಸಾಲೆಯುಕ್ತ, ಖಾರವಾದ ಮತ್ತು ಉಮಾಮಿ ನೂಡಲ್ಸ್ ಗಳಿಗೆ ಕೊನೆಯಿಲ್ಲ. ನೀವು ಅವುಗಳನ್ನು ಹೇಗೆ ತಿನ್ನಲು ಇಷ್ಟಪಡುತ್ತೀರಿ?" ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.


ಈ ವೀಡಿಯೋವನ್ನು ಹಂಚಿಕೊಂಡಾಗಿನಿಂದ ಹಿಡಿದು ಇದುವರೆಗೆ 1.6 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ ಮತ್ತು 12,000 ಕ್ಕೂ ಹೆಚ್ಚು ಲೈಕ್ ಗಳನ್ನು ಸಹ ಗಳಿಸಿದೆ. ಹಲವಾರು ಬಳಕೆದಾರರು ಈ ಬ್ರ್ಯಾಂಡ್ ನ ಇತಿಹಾಸದ ಬಗ್ಗೆ ತಿಳಿದು ಆಶ್ಚರ್ಯಚಕಿತರಾದರು.


ಇದನ್ನೂ ಓದಿ: ಅರ್ಧ ಲಕ್ಷ ಜನರಿಗೆ ಉದ್ಯೋಗ ನೀಡಿದ ಬಾಂಧಣಿ ತಯಾರಿಸುವ ಕೆಲಸ


"ಇದು ನೇಪಾಳದಿಂದ ಬಂದಿದೆ ಎಂದು ನನಗೆ ತಿಳಿದಿರಲಿಲ್ಲ, ಆದರೆ ಅದ್ಭುತ ನೂಡಲ್ಸ್ ಅನ್ನು ಸೇವಿಸಲು ಸಾಕಷ್ಟು ವಿಭಿನ್ನ ವಿಧಾನಗಳನ್ನು ಹೊಂದಿದೆ" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.


"ನನ್ನ ಎವರೆಸ್ಟ್ ಬೇಸ್ ಕ್ಯಾಂಪ್ ಟ್ರೆಕ್ಕಿಂಗ್ ನಲ್ಲಿ ನಾನು ಇವುಗಳನ್ನೇ ತಿನ್ನುತ್ತಿದ್ದೆ. ಎತ್ತರದ ಪ್ರದೇಶಗಳಲ್ಲಿ ನನ್ನ ಹಸಿವನ್ನು ನೀಗಿಸಿದ್ದು ಇದೇ ನೂಡಲ್ಸ್. ಇದು ನನಗೆ ವಾಯ್ ವಾಯ್ ಪವರ್ ಆಗಿತ್ತು" ಎಂದು ಇನ್ನೊಬ್ಬ ಬಳಕೆದಾರರು ಹೇಳಿದರು."ಲವ್ ಯು ವಾಯ್ ವಾಯ್ ನೂಡಲ್ಸ್ ಮತ್ತು ಅದರ ಹಿಂದಿನ ಕಥೆಯನ್ನು ಕೇಳಲು ತುಂಬಾ ಆಸಕ್ತಿದಾಯಕವಾಗಿದೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು