• Home
  • »
  • News
  • »
  • business
  • »
  • Viral Story: 1 ಕೋಟಿ ಕೊಟ್ಟು ಅಪಾರ್ಟ್​ಮೆಂಟ್​ ಖರೀದಿಸಿದ್ದ ದಂಪತಿ, ಎಲ್ಲವನ್ನೂ ಕಳೆದುಕೊಂಡು ಬಾಡಿಗೆ ಮನೆಗೆ ಬಂದಿದ್ದೇಕೆ?

Viral Story: 1 ಕೋಟಿ ಕೊಟ್ಟು ಅಪಾರ್ಟ್​ಮೆಂಟ್​ ಖರೀದಿಸಿದ್ದ ದಂಪತಿ, ಎಲ್ಲವನ್ನೂ ಕಳೆದುಕೊಂಡು ಬಾಡಿಗೆ ಮನೆಗೆ ಬಂದಿದ್ದೇಕೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಾವು ಖರೀದಿಸಿದ ಅಪಾರ್ಟ್‌ಮೆಂಟ್ (Apartment) ಕೆಲವೊಂದು ಕಾನೂನು ಹಗರಣಗಳಿಂದ ಇದೀಗ ಸ್ಥಗಿತಗೊಂಡಿರುವುದರಿಂದ ಈ ದಂಪತಿಗಳು ಸರಿ ಸುಮಾರು ರೂ 1 ಕೋಟಿ (One Crore) ಗಿಂತ ಹೆಚ್ಚು ಹಣ (Money) ವನ್ನು ಕಳೆದುಕೊಂಡಿದ್ದಾರೆ.

  • Share this:

ಜೀವನದಲ್ಲಿ ಮನೆ (House) ಖರೀದಿ ಎನ್ನುವುದು ಕೂಡ ಜೀವನದ ಅತ್ಯಂತ ಮಹತ್ವದ ಗುರಿಯಾಗಿರುತ್ತದೆ. ಹೆಚ್ಚಿನವರು ತಮಗಾಗಿ ಒಂದು ಸ್ವಂತ ಮನೆ (Own House) ಇರಬೇಕೆಂದು ತಮ್ಮ ಉಳಿತಾಯವನ್ನೆಲ್ಲಾ ಒತ್ತೆ ಇಟ್ಟು ಕಷ್ಟಪಡುತ್ತಾರೆ. ಇಷ್ಟು ಕಷ್ಟಪಟ್ಟು ಖರೀದಿಸಿದ ಮನೆ ನೆಮ್ಮದಿಗೆ ಭಂಗ ತರುತ್ತಿದೆ ಎಂದಾದಲ್ಲಿ ಅದರಷ್ಟು ನೋವು ಕೊಡುವ ಸಂಗತಿ ಇನ್ನೊಂದಿರಲಿಕ್ಕಿಲ್ಲ. ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿರುವ ದಂಪತಿಗಳ ಕಥೆ ಕೂಡ ಅಲ್ಪ ಸ್ವಲ್ಪ ದುಃಖಭರಿತವಾದುದೇ. ತಾವು ಖರೀದಿಸಿದ ಅಪಾರ್ಟ್‌ಮೆಂಟ್ (Apartment) ಕೆಲವೊಂದು ಕಾನೂನು ಹಗರಣಗಳಿಂದ ಇದೀಗ ಸ್ಥಗಿತಗೊಂಡಿರುವುದರಿಂದ ಈ ದಂಪತಿಗಳು ಸರಿ ಸುಮಾರು ರೂ 1 ಕೋಟಿ (One Crore) ಗಿಂತ ಹೆಚ್ಚು ಹಣ (Money) ವನ್ನು ಕಳೆದುಕೊಂಡಿದ್ದಾರೆ ಎಂದು ಮನಿಕಂಟ್ರೋಲ್‌ಗೆ ತಿಳಿಸಿದ್ದಾರೆ.


ನಗರದ ಜಂಜಾಟಗಳಿಂದ ದೂರವಿದ್ದು ಸ್ವಲ್ಪ ನೆಮ್ಮದಿಯನ್ನು ಅರಸಿಕೊಂಡು ಮುಂಬೈ ನಗರದ ಹೃದಯ ಭಾಗದಲ್ಲಿ ಪ್ರಸ್ತುತ ಅವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಹಾಗಿದ್ದರೆ ಇವರು ಹಣ ಕಳೆದುಕೊಳ್ಳಲು ಕಾರಣವೇನು? ಬಾಡಿಗೆ ಮನೆಯಲ್ಲಿ ಏಕೆ ವಾಸವಾಗಿದ್ದಾರೆ ಎಂಬ ಕಾರಣವನ್ನು ತಿಳಿದುಕೊಳ್ಳೋಣ.


ಸ್ವಂತ ಮನೆ ಹೊಂದುವ ಆಶಾಭಾವನೆ


ರಾಜೀವ್ ಮೋಹತ ಹಾಗೂ ದೇವಿಕಾ ದಂಪತಿಗಳು ಕಲ್ಪತರು ಪ್ರಾಜೆಕ್ಟ್‌ನಲ್ಲಿ ನಿವೇಶನವನ್ನು ಖರೀದಿಸಿ 1 ಕೋಟಿಗಿಂತ ಹೆಚ್ಚಿನ ಹಣ ನಷ್ಟಕ್ಕೆ ಒಳಗಾದ ದಂಪತಿಗಳಾಗಿದ್ದಾರೆ. ನಿವೇಶನದ ಪ್ರಾಜೆಕ್ಟ್ ಅನ್ನು ಸಂಸ್ಥೆಯು ಏಕಾಏಕಿ ನಿಲ್ಲಿಸಿರುವ ಕಾರಣ ಪ್ರಸ್ತುತ ದಂಪತಿಗಳು ತಾತ್ಕಾಲಿಕವಾಗಿ ಬಾಡಿಗೆ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಾಗಿರುವುದಾಗಿ ತಿಳಿಸಿದ್ದು, ಶೀಘ್ರದಲ್ಲೇ ನಾವು ನಮ್ಮ ಕನಸಿನ ನಿವೇಶನಕ್ಕೆ ತೆರಳಬಹುದು ಎಂಬ ಆಶಾಭಾವನೆಯನ್ನು ಹೊಂದಿದ್ದಾರೆ.


ರಾಜೀವ್ ಅವರು ಆರ್ಥಿಕ ಸೇವೆಗಳ ಪರಿಣಿತರಾಗಿ ಕೆಲಸ ಮಾಡುತ್ತಿದ್ದು, ತಾವಿರುವ ನಿವೇಶನ ಬಾಡಿಗೆಯದ್ದಾಗಿದ್ದರೂ ಇದು ತಮಗಿಬ್ಬರೂ ಅತ್ಯಂತ ಇಷ್ಟವಾದ ಸ್ಥಳವಾಗಿದೆ ಎಂದು ತಿಳಿಸಿದ್ದಾರೆ.


2017ರಲ್ಲಿ ಫ್ಲಾಟ್​ ಖರೀದಿ!


2017 ರಲ್ಲಿ ನಿವೇಶನವನ್ನು ಖರೀದಿಸಿದ್ದ ದಂಪತಿಗಳು ಇದೀಗ ಅಪಾರ್ಟ್‌ಮೆಂಟ್ ಯೋಜನೆಯ ಕೆಲಸ ಸ್ಥಗಿತಗೊಂಡಿದ್ದರಿಂದ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವುದಾಗಿ ತಿಳಿಸಿದ್ದಾರೆ. ಸ್ವಂತ ಅಪಾರ್ಟ್‌ಮೆಂಟ್ ಖರೀದಿಸುವ ಮೊದಲು ದಂಪತಿಗಳು ತಮ್ಮ ಇಬ್ಬರು ಮಕ್ಕಳೊಂದಿಗೆ ಸ್ವಂತ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಆದರೆ ಪ್ರತಿಷ್ಟಿತ ಕಲ್ಪತರು ಸಂಸ್ಥೆ ಅಪಾರ್ಟ್‌ಮೆಂಟ್‌ಗಳಲ್ಲಿ ಒದಗಿಸುವ ಸೌಕರ್ಯಗಳಿಗೆ ಮಾರುಹೋಗಿ ಸಂಸ್ಥೆಯಲ್ಲಿ ಅಪಾರ್ಟ್‌ಮೆಂಟ್‌ಗಾಗಿ ಹಣ ಹೂಡಿಕೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.


ಅಪಾರ್ಟ್‌ಮೆಂಟ್ ಖರೀದಿಸಲು 2 ಕೋಟಿಗಿಂತ ಹೆಚ್ಚು ಹಣ ವ್ಯಯ


ಕಲ್ಪತರು ಸಂಸ್ಥೆಯಲ್ಲಿ ಅಪಾರ್ಟ್‌ಮೆಂಟ್ ಕಾಯ್ದಿರಿಸಲು ರಾಜೀವ್ 18 ತಿಂಗಳುಗಳಲ್ಲಿ 2 ಕೋಟಿಗಿಂತ ಹೆಚ್ಚಿನ ಹಣವನ್ನು ನೀಡಿದ್ದಾರೆ ಎಂಬುದು ವರದಿಯಾಗಿದೆ. ಇಂದಿನ ಕಾಲಮಾನಕ್ಕೆ ಸೂಕ್ತವಾಗಿ ಹೇಳುವುದಾದರೆ ಅಪಾರ್ಟ್‌ಮೆಂಟ್‌ನಿಂದ 50% ರಿಟರ್ನ್‌ಗಳನ್ನು ತಾವು ಕಳೆದುಕೊಂಡಿರುವುದಾಗಿ ರಾಜೀವ್ ಹೇಳಿದ್ದಾರೆ. 2017 ರಲ್ಲಿ 3 ಬಿಎಚ್‌ಕೆ ಅಪಾರ್ಟ್‌ಮೆಂಟ್ ಅನ್ನು ತಾವು ಖರೀದಿಸದೇ ಇದ್ದಿದಲ್ಲಿ 2022 ರಲ್ಲಿ ನಮಗೆ 4 ಬಿಎಚ್‌ಕೆ ನಿವೇಶನವನ್ನು ಖರೀದಿಸಬಹುದಾಗಿತ್ತು ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ಉಪ್ಪಿನಕಾಯಿ ಬ್ಯುಸಿನೆಸ್‌ನಿಂದ ಲಕ್ಷಗಟ್ಟಲೆ ಆದಾಯ; ಇಳಿವಯಸ್ಸಿನಲ್ಲೂ ಉತ್ತಮ ಸಾಧನೆ!


ದಂಪತಿಗಳು ವಾಸವಾಗಿರುವ ಬಾಡಿಗೆ ಮನೆಯು ಪಟ್ಟಣದ ಜಂಜಾಟಗಳಿಂದ ದೂರವಿದ್ದು ಪ್ರಕೃತಿಯ ಮಧ್ಯದಲ್ಲಿದೆ ಹಾಗೂ 2.5 ಬಿಎಚ್‌ಕೆ ನಿವೇಶನಕ್ಕೆ ಪ್ರತೀ ತಿಂಗಳು ರೂ 90 ಸಾವಿರ ಬಾಡಿಗೆ ಎಂಬುದು ರಾಜೀವ್ ತಿಳಿಸಿದ್ದಾರೆ. ಎರಡು ವರ್ಷಗಳ ಒಪ್ಪಂದವನ್ನು ಮನೆ ಮಾಲೀಕರೊಂದಿಗೆ ರಾಜೀವ್ ಮಾಡಿದ್ದಾರೆ.


ಬಾಡಿಗೆ ಮನೆಯಲ್ಲಿದ್ದರೂ ಕೊಂಚ ಸಮಾಧಾನವಿದೆ


ಸ್ವಂತ ಮನೆಯನ್ನು ಶೀಘ್ರವೇ ಹೊಂದುವ ನಿರೀಕ್ಷೆಯಲ್ಲಿರುವ ದಂಪತಿಗಳು, ಬಾಡಿಗೆ ಮನೆಯಲ್ಲಿ ವಾಸವಾಗಿರುವುದು ನಮ್ಮ ಮನೆ ಎಂಬ ಭಾವನೆಯನ್ನು ಉಂಟುಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಬಾಡಿಗೆ ಮನೆಯಲ್ಲಿದ್ದರೂ ಕೆಲವೊಂದು ಧನಾತ್ಮಕ ಅಂಶಗಳನ್ನು ರಾಜೀವ್ ದಂಪತಿಗಳು ಹಂಚಿಕೊಂಡಿದ್ದು, ಒಂದು ರೀತಿಯ ಶಾಂತಿ ನಮಗೆ ದೊರಕಿದೆ ಆದರೆ ಎಷ್ಟಾದರೂ ಇದು ಬಾಡಿಗೆ ಮನೆ ಎಂಬ ಯೋಚನೆ ನಮ್ಮ ಮನಃಶಾಂತಿಗೆ ಭಂಗ ತರುತ್ತದೆ ಎಂದು ಹೇಳಿದ್ದಾರೆ. 2 ಕೋಟಿ ಕಳೆದುಕೊಂಡಿದ್ದನ್ನು ತಾವು ಇನ್ಯಾವುದಾದರೂ ಯೋಜನೆಗಳಿಗೆ ಹೂಡಿಕೆ ಮಾಡುತ್ತಿದ್ದೆವು ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ರಿಲಯನ್ಸ್ ಇಂಡಸ್ಟ್ರೀಸ್ ಪಾಲಿಗೆ ಶುಭ ದೀಪಾವಳಿ! ಸೆಪ್ಟೆಂಬರ್ ತ್ರೈಮಾಸಿಕಕ್ಕೆ 15,512 ಕೋಟಿ ರೂಪಾಯಿ ನಿವ್ವಳ ಲಾಭ


2.5 ಬಿಎಚ್‌ಕೆ ಬಾಡಿಗೆ ಅಪಾರ್ಟ್‌ಮೆಂಟ್‌ ವಿಸ್ತಾರವಾಗಿದ್ದು 3 ಬೆಡ್‌ರೂಮ್‌ಗಳನ್ನು ಹೊಂದಿದ್ದು, ಒಂದು ಬೆಡ್‌ರೂಮ್ ಸ್ವಲ್ಪ ಸಣ್ಣದಾಗಿದೆ. ಇನ್ನು ವಿಶಾಲವಾದ ಡೈನಿಂಗ್ ವಲಯ, ಹಾಲ್ ಇರುವುದರಿಂದ ನಮಗಿದು 2.5 ಬಿಎಚ್‌ಕೆ ಮನೆ ಎಂದನಿಸುವುದೇ ಇಲ್ಲ ಎಂಬುದು ರಾಜೀವ್ ದೇವಿಕಾ ಮಾತಾಗಿದೆ. ಅದೇ ರೀತಿ ಪ್ರತಿಯೊಂದು ಕೋಣೆಯು ವಿಸ್ತಾರವಾಗಿದ್ದು ಉತ್ತಮ ನೈಸರ್ಗಿಕ ಬೆಳಕನ್ನು ಹೊಂದಿದೆ. ಎಂಬುದು ದಂಪತಿಗಳ ಮಾತಾಗಿದೆ.

Published by:ವಾಸುದೇವ್ ಎಂ
First published: