• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Success Story: ಬಿರ್ಲಾ ಕಂಪನಿ ಸಿಇಒ ಹುದ್ದೆ ತೊರೆದು ಸ್ವಂತ ಕಂಪೆನಿ ಸ್ಥಾಪನೆ, 15 ಸಾವಿರ ಕೋಟಿ ಲಾಭ ಪಡೆಯುತ್ತಿದ್ದಾರೆ ವಿನೋದ್ ಸರಾಫ್!

Success Story: ಬಿರ್ಲಾ ಕಂಪನಿ ಸಿಇಒ ಹುದ್ದೆ ತೊರೆದು ಸ್ವಂತ ಕಂಪೆನಿ ಸ್ಥಾಪನೆ, 15 ಸಾವಿರ ಕೋಟಿ ಲಾಭ ಪಡೆಯುತ್ತಿದ್ದಾರೆ ವಿನೋದ್ ಸರಾಫ್!

ವಿನೋದ್ ಸರಾಫ್​

ವಿನೋದ್ ಸರಾಫ್​

38 ನೇ ವಯಸ್ಸಿನಲ್ಲಿ ತಮ್ಮ ಉನ್ನತ ಮಟ್ಟದ ಕಾರ್ಪೊರೇಟ್ ಉದ್ಯೋಗವನ್ನು ತೊರೆದ ವಿನೋದ್ ಸರಾಫ್ ತಮ್ಮ ಸ್ವಂತ ವ್ಯವಹಾರವನ್ನು ಸ್ಥಾಪಿಸಿ ಇಂದು 15 ಸಾವಿರ ಕೋಟಿಗೂ ಹೆಚ್ಚು ಲಾಭಗಳಿಸುತ್ತಿದ್ದಾರೆ. ಹಾಗಿದ್ರೆ ಇವರ ಯಶಸ್ಸಿನ ಹಿಂದಿನ ಕಥೆಯೇನು ಎಂಬುದನ್ನು ಈ ಲೇಖನದಲ್ಲಿ ಓದಿ.

  • Share this:

ಕೆಲವೊಬ್ಬರು ಅವರ ಜೀವನದಲ್ಲಿ (Life) ಒಳ್ಳೆಯ ಹುದ್ದೆಯಲ್ಲಿದ್ದು (Designation), ಕೈ ತುಂಬಾ ಸಂಬಳ (Salary) ಬರುತ್ತಿದ್ದರೂ ಸಹ ಅವರದ್ದೇ ಆದ ಸ್ವಂತ ಉದ್ಯಮವನ್ನು ಶುರು ಮಾಡಬೇಕು ಅನ್ನೋ ಹಂಬಲ ಅವರಿಗೆ ತುಂಬಾನೇ ಇರುತ್ತದೆ. ಇದರರ್ಥ ಅವರಿಗೆ ತಮ್ಮದು ಸ್ವಂತ ಕಂಪೆನಿಯೊಂದನ್ನು ಕಟ್ಟಿ ಬೆಳೆಸಬೇಕು ಅನ್ನೋ ಗುರಿ ಇರುತ್ತದೆ. ಇಂತಹದೇ ಗುರಿಯನ್ನು ಇಟ್ಟುಕೊಂಡ ವ್ಯಕ್ತಿಯೊಬ್ಬರು ತಮ್ಮ ಸಿಇಒ ಕೆಲಸವನ್ನು ಬಿಟ್ಟು ತಮ್ಮದೇ ಆದ ಕಂಪೆನಿಯನ್ನು ಕಟ್ಟಿ ಬೆಳೆಸಿದ್ದಾರೆ. 20,000 ಕೋಟಿ ರೂಪಾಯಿಗಳ ಮಾರುಕಟ್ಟೆ ಕ್ಯಾಪ್ ಹೊಂದಿರುವ ವಿನೋದ್ ಸರಾಫ್ (Vinod Saraf) ಅವರ ಜೀವನದ ಕಥೆ ತುಂಬಾನೇ ಆಸಕ್ತಿದಾಯಕವಾಗಿದೆ ಮತ್ತು ಇದು ಅನೇಕರಿಗೆ ಸ್ಪೂರ್ತಿಯಾಗುತ್ತದೆ.


ದೊಡ್ಡ ಹುದ್ದೆಯನ್ನು ಬಿಟ್ಟು ತಮ್ಮದೇ ಆದ ಕಂಪೆನಿಯನ್ನು ಸ್ಥಾಪಿಸಲು ನಿರ್ಧರಿಸಿದ್ರಂತೆ


ಸಾಧಾರಣ ಆದಾಯದ, ಮಧ್ಯಮ ವರ್ಗದ ಕುಟುಂಬದಿಂದ ಬಂದಂತಹ ವಿನೋದ್ ಸರಾಫ್ ಅವರು ಆದಿತ್ಯ ಬಿರ್ಲಾ ಗ್ರೂಪ್ ನ ಪ್ರಮುಖ ಕಂಪೆನಿಯ ಮುಖ್ಯಸ್ಥರಾಗಿ ಪ್ರಸಿದ್ಧ ವ್ಯಾಪಾರ ನಾಯಕರಾಗಿ ಬೆಳೆದರು. ಆದರೆ 38ನೇ ವಯಸ್ಸಿನಲ್ಲಿ, ಅವರು ತಮ್ಮದೇ ಆದ ವ್ಯವಹಾರವನ್ನು ತೆರೆಯುವ ದೀರ್ಘಕಾಲದ ಕನಸನ್ನು ಬೆನ್ನಟ್ಟಿ ಎಲ್ಲವನ್ನೂ ತ್ಯಜಿಸಲು ನಿರ್ಧರಿಸಿದರು.


ವಿನೋದ್ ಸರಾಫ್ ಅವರ ಕಥೆ ರಾಜಸ್ಥಾನದಲ್ಲಿ ಪ್ರಾರಂಭವಾಗುತ್ತದೆ. ಅಲ್ಲಿ ಅವರು ಸಣ್ಣ ವ್ಯಾಪಾರಿಯೊಬ್ಬರಿಗೆ ಜನಿಸಿದರು. ಅವರು ಏಳು ಜನ ಒಡಹುಟ್ಟಿದವರಲ್ಲಿ ಹಿರಿಯರಾಗಿದ್ದರು. ಅವರ ಸಾಧಾರಣ ಪರಿಸ್ಥಿತಿಯಿಂದ ಜೀವನದಲ್ಲಿ ಮೇಲೆ ಬರುವುದಕ್ಕೆ ಸಹಾಯ ಮಾಡುವ ಏಕೈಕ ಮಾರ್ಗವೆಂದರೆ ಅದು ಉತ್ತಮ ಶಿಕ್ಷಣ ಪಡೆಯುವುದಾಗಿತ್ತು.


ಇದನ್ನೂ ಓದಿ: ಈ ಲಿಂಕ್ ಕ್ಲಿಕ್ ಮಾಡಿ ಆಧಾರ್​ ಕಾರ್ಡ್​ ಅನ್ನು ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಿ


ಅದರಂತೆಯೇ ವಿನೋದ್ ಓದಿನಲ್ಲಿ ಉತ್ತಮ ಸಾಧನೆ ಮಾಡಿದರು. ಅವರು ಕೇವಲ 17ನೇ ವಯಸ್ಸಿನಲ್ಲಿ ರಾಜ್ಯ ಟಾಪರ್ ಆಗಿ ಪದವಿಯನ್ನು ಪೂರ್ಣಗೊಳಿಸಿದರು ಮತ್ತು ನಂತರ 19ನೇ ವಯಸ್ಸಿನಲ್ಲಿ ಚಿನ್ನದ ಪದಕ ವಿಜೇತರಾಗಿ ಪ್ರತಿಷ್ಠಿತ ಬಿಟ್ಸ್ ಪಿಲಾನಿಯಲ್ಲಿ ಎಂಬಿಎ ಮುಗಿಸಿದರು.


ದೊಡ್ಡ ಹುದ್ದೆಗೆ ಏರುವ ಮುನ್ನ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡಿದ್ರು ವಿನೋದ್


ವಿನೋದ್ ಅವರ ಆರಂಭಿಕ ಹಿಂದಿ ಮಾಧ್ಯಮ ಶಿಕ್ಷಣವು ಅವರನ್ನು ದೊಡ್ಡ ಬಹುರಾಷ್ಟ್ರೀಯ ಕಂಪೆನಿಗಳಿಗೆ ಸೆಳೆಯಲಿಲ್ಲವಾದರೂ, ಅವರ ಲೆಕ್ಕಾಚಾರದ ಮೆದುಳನ್ನು ಜವಳಿ ಉದ್ಯಮಿಯೊಬ್ಬರು ಗುರುತಿಸಿದರು.


ಜವಳಿ ಉದ್ಯಮದಲ್ಲಿ ವಿವಿಧ ಕಂಪೆನಿಗಳಲ್ಲಿ 10 ವರ್ಷಗಳ ಕಾಲ ಕೆಲಸ ಮಾಡಿದ ನಂತರ, ವಿನೋದ್ ಸರಾಫ್ ಪ್ರಸಿದ್ಧ ವ್ಯಾಪಾರ ಕುಟುಂಬ ಬಿರ್ಲಾ ಅವರ ಕಂಪೆನಿಗಳಲ್ಲಿ ಉದ್ಯೋಗವನ್ನು ಪಡೆದರು.


ದಿವಂಗತ ಕೈಗಾರಿಕೋದ್ಯಮಿ ಆದಿತ್ಯ ಬಿರ್ಲಾ ಅವರೊಂದಿಗೆ ಕೆಲಸ ಮಾಡಿದ ಸರಾಫ್ ಅವರು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನ ವ್ಯವಸ್ಥಾಪಕ ನಿರ್ದೇಶಕರಾದರು. ಅವರು ಗ್ರಾಸಿಮ್ ಇಂಡಸ್ಟ್ರೀಸ್, ಮಾಡರ್ನ್ ಸಿಂಟೆಕ್ಸ್ ಮತ್ತು ಭಿಲ್ವಾರಾ ಗ್ರೂಪ್ ನಂತಹ ಕಂಪೆನಿಗಳಲ್ಲಿ ಕೆಲಸ ಮಾಡಿದ್ದಾರೆ.


40 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿಯೇ ಕಂಪೆನಿಯೊಂದರ ನಾಯಕನಾಗಿರುವ ಸರಾಫ್, ಎಲ್ಲವನ್ನೂ ತ್ಯಜಿಸಿ ತನ್ನ ಸ್ವಂತ ಉದ್ಯಮವನ್ನು ಸ್ಥಾಪಿಸುವ ಕನಸನ್ನು ಬೆನ್ನಟ್ಟಿದರು. ವಿನೋದ್ ಅವರು 1990 ರಲ್ಲಿ ವಿನತಿ ಆರ್ಗಾನಿಕ್ಸ್ ಅನ್ನು ಸ್ಥಾಪಿಸಿದಾಗ, ಅವರ ವ್ಯವಹಾರವು ಇಷ್ಟು ದೊಡ್ಡದಾಗಿ ಬೆಳೆಯುತ್ತದೆ ಎಂದು ಅವರು ಎಂದಿಗೂ ಭಾವಿಸಿರಲಿಲ್ಲ.


ಈಕ್ವಿಟಿ ಹೂಡಿಕೆ, ಬ್ಯಾಂಕ್ ಸಾಲಗಳು ಮತ್ತು ಹಣವನ್ನು ಸಂಗ್ರಹಿಸಲು ಪಟ್ಟಿ ಮತ್ತು ತನ್ನ ಸ್ವಂತ ಉಳಿತಾಯದೊಂದಿಗೆ, ಸರಾಫ್ ಐಬಿಬಿ ಅಥವಾ ಐಸೊಬ್ಯುಟೈಲ್ ಬೆಂಜೀನ್ ಅನ್ನು ತಯಾರಿಸಲು ಕಂಪೆನಿಯನ್ನು ಸ್ಥಾಪಿಸಿದರು. ಇದು ಪ್ರಮುಖ ನೋವು ನಿವಾರಕ ಇಬುಪ್ರೊಫೇನ್​ಗೆ ಕಚ್ಚಾ ವಸ್ತುವಾಗಿದೆ.


ಮಗಳು ವಿನತಿ ತಂದೆಯ ಕಂಪೆನಿಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಿದರು


ಗುಣಮಟ್ಟದ ಸಮಸ್ಯೆಗಳಿಂದ ಬಳಲುತ್ತಿದ್ದ ಅವರ ಕಂಪೆನಿಗೆ ನಂತರ ಅವರ ಮಗಳು ವಿನತಿ ಸೇರಿಕೊಂಡರು. ನಂತರ ಅವರ ವ್ಯವಹಾರವು ದೊಡ್ಡ ಮಟ್ಟದ ಯಶಸ್ಸನ್ನು ಕಂಡಿತು. ಅಮೆರಿಕದ ವಾರ್ಟನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ವಿನತಿ ಸರಾಫ್ ಮುಟ್ರೆಜಾ ಅವರು ಕರೆತಂದ ಸಲಹೆಗಾರರ ಸಹಾಯದಿಂದ, ಕಂಪನಿಯನ್ನು ಜಾಗತಿಕವಾಗಿ ಅತಿದೊಡ್ಡ ಇಬುಪ್ರೊಫೇನ್ ತಯಾರಕರ ಪಟ್ಟಿಯಲ್ಲಿ ಸೇರಿಸಲು ತಮ್ಮ ತಂದೆಗೆ ಸಹಾಯ ಮಾಡಿದರು.




ವಿನತಿ ಇಂದು ವಿನೋದ್ ಅವರ ಕಂಪೆನಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಫೋರ್ಬ್ಸ್ ಪ್ರಕಾರ, 2023 ರಲ್ಲಿ, ಸರಾಫ್ ಅವರ ನಿವ್ವಳ ಮೌಲ್ಯವು 15,500 ಕೋಟಿ ರೂಪಾಯಿಗಿಂತ ಹೆಚ್ಚಾಗಿದೆ.

First published: