Digital Marketing: ಸ್ಥಳೀಯ ಉತ್ಪನ್ನಗಳಿಗೆ ಆನ್​ಲೈನ್ ಅಂಗಡಿ..! ಹಳ್ಳಿ ಯುವಕನ ಹೊಸ ಐಡಿಯಾ

ಅಮೆಜಾನ್, ಫ್ಲಿಪ್ ಕಾರ್ಟ್, ಸ್ನ್ಯಾಪ್ ಡೀಲ್ ಹೀಗೆ ವಿವಿಧ ಆನ್ ಲೈನ್ ಮಾರ್ಕೆಟಿಂಗ್ ಸೈಟ್ ಗಳಂತೆ ಬ್ರಾಂಡೆಡ್ ವಸ್ತುಗಳ ಮಾರಾಟ ಮಾಡುವುದರ ಬದಲು ಸ್ಥಳೀಯವಾಗಿ‌ ತಯಾರಾಗುವ ವಸ್ತುಗಳನ್ನು ಸ್ಥಳೀಯ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಕರಾವಳಿಯ ಯುವಕರಿಬ್ಬರು ಆನ್ ಲೈನ್ ಮಾರ್ಕೆಟಿಂಗ್ ಸೈಟ್‌ ಒಂದನ್ನು ಆರಂಭಿಸಿದ್ದ?

ಆನ್​ಲೈನ್ ಮಾರ್ಕೆಟಿಂಗ್

ಆನ್​ಲೈನ್ ಮಾರ್ಕೆಟಿಂಗ್

  • Share this:
ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ನಿರುದ್ಯೋಗದ (Unemployment) ಸಮಸ್ಯೆಯ ನಡುವೆ ಯುವಜನತೆ ಬದುಕಿಗಾಗಿ ಸ್ವ ಉದ್ಯೋಗದಲ್ಲಿ (Self employment) ತೊಡಗಿಕೊಳ್ಳಲು ಆರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆಯಂತೆ ಆತ್ಮನಿರ್ಭರ ಭಾರತದ‌ ಪರಿಕಲ್ಪನೆಗೆ ಒಗ್ಗಿಕೊಂಡಿರುವ ಯುವಜನತೆ ತಮ್ಮದೇ ಸ್ವ ಉದ್ಯಮದ ಕಡೆ ಹೆಜ್ಜೆ ಹಾಕಿದ್ದಾರೆ. ಕರಾವಳಿಯ ಇಬ್ಬರು ಯುವಕರು (Youth) ಇಂಥಹುದೇ ಆನ್ ಲೈನ್  ಶಾಪಿಂಗ್ ಸೈಟನ್ನು ಆರಂಭಿಸಿದ್ದು, ತುಳುನಾಡಿನ ಸಾಂಪ್ರದಾಯಿಕ ತಿಂಡಿಗಳ ಜೊತೆಗೆ ಸ್ಥಳೀಯವಾಗಿ ಬೆಳೆಸಲ್ಪಟುವ ತರಕಾರಿಗಳನ್ನು ತಮ್ಮ ಡಿಜಿಟಲ್ ಫ್ಲಾಟ್ ಫೋರ್ಮ್ ನಲ್ಲಿ ಪರಿಚಯಿಸಲು ನಿರ್ಧರಿಸಿದ್ದಾರೆ. ಅಮೆಜಾನ್, ಫ್ಲಿಪ್ ಕಾರ್ಟ್, ಸ್ನ್ಯಾಪ್ ಡೀಲ್ ಹೀಗೆ ವಿವಿಧ ಆನ್ ಲೈನ್ ಮಾರ್ಕೆಟಿಂಗ್ ಸೈಟ್ ಗಳಂತೆ ಬ್ರಾಂಡೆಡ್ ವಸ್ತುಗಳ (Branded Products) ಮಾರಾಟ ಮಾಡುವುದರ ಬದಲು ಸ್ಥಳೀಯವಾಗಿ‌ ತಯಾರಾಗುವ ವಸ್ತುಗಳನ್ನು ಸ್ಥಳೀಯ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಕರಾವಳಿಯ ಯುವಕರಿಬ್ಬರು (Coastal Boys) ಆನ್ ಲೈನ್ ಮಾರ್ಕೆಟಿಂಗ್ ಸೈಟ್‌ ಒಂದನ್ನು ಆರಂಭಿಸಿದ್ದಾರೆ.

ದೇಶದ ಯುವಜನತೆ ಸ್ವ ಉದ್ಯೋಗದಲ್ಲಿ ತೊಡಗುಕೊಳ್ಳುವ ಮೂಲಕ ಆತ್ಮನಿರ್ಭರತೆ ಹೊಂದಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ಸ್ವ‌ ಉದ್ಯೋಗದ ಜೊತೆಗೆ ಇತರ ಯುವಕರಿಗೂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಈ ಯುವಕರು ಈ ಆನ್ ಲೈನ್ ಮಾರ್ಕೆಟಿಂಗ್ ವೆಬ್ ಸೈಟ್ (Marketing Website) ಆರಂಭಿಸಿದ್ದಾರೆ. ಪುತ್ತೂರಿನ ರಕ್ಷಿತ್ ಮತ್ತು ಸುಮಿತ್ ಎನ್ನುವ ಯುವಕರು ಈ ಪ್ರಯತ್ನಕ್ಕೆ ಕೈ ಹಾಕಿದ್ದು, 'ಇರೆನ್ ಇಲ್ಲಗ್ ' ( ಕನ್ನಡದಲ್ಲಿ ಇದರ ಅರ್ಥ‌  'ನಿಮ್ಮ ಮನೆಗೆ ' ಎಂದಾಗಿರುತ್ತದೆ ಎನ್ನುವ ಹೆಸರಿನಲ್ಲಿ ಈ ಸೈಟ್ ಕಾರ್ಯಾಚರಿಸುತ್ತಿದೆ.

ಇದು ಸ್ಪೆಷಲ್ ಆಗಿ ಸ್ಥಳೀಯ ಉತ್ಪನ್ನಗಳಿಗಾಗಿ

ಬ್ರಾಂಡೆಡ್ ವಸ್ತುಗಳನ್ನು ಮಾರ್ಕೆಟಿಂಗ್ ಮಾಡುವ ಹಲವು ವೆಬ್ ಸೈಟ್ ಗಳಿದ್ದು, ಆದರೆ ಸ್ಥಳೀಯವಾಗಿ ಉತ್ಪಾದಿಸಲಾಗುವ ವಸ್ತುಗಳನ್ನು  ಡಿಜಿಟಲ್ ಫ್ಲಾಟ್ ಫಾರ್ಮ್ ಗೆ ಪರಿಚಯಿಸಲಾಗದ‌ ಸಾಕಷ್ಟು ಉತ್ಪಾದಕರು ತುಳುನಾಡಿನಲ್ಲಿದ್ದು, ಇಂಥವರಿಂದ ಉತ್ಪಾದಿಸಲ್ಪಟುವ ಬಗೆಬಗೆಯ ವಸ್ತುಗಳನ್ನು ಡಿಜಿಟಲ್ ಫ್ಲಾಟ್ ಫಾರ್ಮ್ ಗೆ ಪರಿಚಯಿಸಬೇಕು ಎನ್ನುವ ಉದ್ಧೇಶದಿಂದ ಈ ಮಾರ್ಕೆಟಿಂಗ್ ಸೈಟನ್ನು ಆರಂಭಿಸಲಾಗಿದೆ.

ಇದನ್ನೂ ಓದಿ: Multibagger Stocks: 1 ಲಕ್ಷಕ್ಕೆ 29 ಲಕ್ಷ ರೂಪಾಯಿ: ಒಂದೇ ವರ್ಷದಲ್ಲಿ ಶೇ.2800ರಷ್ಟು ರಿಟರ್ನ್

ಕರಾವಳಿ ಭಾಗದ ತಿನಿಸುಗಳಿಗೆ ಮಾರ್ಕೆಟ್

ಮುಖ್ಯವಾಗಿ ಕರಾವಳಿ ಭಾಗದಲ್ಲಿನ ಸಾಂಪ್ರದಾಯಿಕ ತಿಂಡಿ‌-ತಿನಿಸುಗಳು, ಈ‌ ಭಾಗದ ಕೃಷಿಕರು ಬೆಳೆಯುವ ತಾಜಾ ತರಕಾರಿಗಳು (Vegetables), ಧರ್ಮಸ್ಥಳ ಸಿರಿ ಗ್ರಾಮೋಧ್ಯಗದ ಮೂಲಕ ತಯಾರಿಸಲಾಗುವ ವಿವಿಧ ಉತ್ಪನ್ನಗಳನ್ನು ಈ ಸೈಟ್ ಮೂಲಕ ಮಾರಾಟ ಮಾಡಲಾಗುತ್ತದೆ. ಈ ಭಾಗದ ಇಂಥಹ ಉತ್ಪಾದಕರ ಮೂಲಕ ವಸ್ತುಗಳನ್ನು ಖರೀದಿಸಿ ಇವುಗಳನ್ನು ಸೈಟ್ ಮುಖಾಂತರ ಮಾರಾಟ ಮಾಡಲಾಗುತ್ತದೆ.

ಎಲ್ಲರಿಗೂ ಮಾರಾಟ ಮಾಡೋಕೆ ಅನುಮತಿ ಇಲ್ಲ

ಅಂತರರಾಷ್ಟ್ರೀಯ ಮಟ್ಟದ ಮಾರ್ಕೆಟಿಂಗ್ ಸೈಟ್ ನಲ್ಲಿರುವಂತೆ ಈ ಸೈಟ್ ನಲ್ಲಿ ಯಾರು ಬೇಕಾದರೂ  ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ. ಸ್ಥಳೀಯ ಉತ್ಪಾದಕರ ಜೊತೆ ಒಪ್ಪಂದ ಮಾಡಿಕೊಂಡು ಅವರು ಪೂರೈಸುವ ಉತ್ಪನ್ನಗಳ ಗುಣಮಟ್ಟ ಪರಿಶೀಲಿಸಿದ ಬಳಿಕವೇ ಮಾರಾಟ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ದಕ್ಷಿಣಕನ್ನಡ, ಉಡುಪಿ, ಕಾಸರಗೋಡು (Kasaragod) ಭಾಗಕ್ಕೆ ಸದ್ಯಕ್ಕೆ ವಸ್ತುಗಳನ್ನು ಪೂರೈಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ವಿಸ್ತರಿಸುವ ಯೋಜನೆಯನ್ನು ಈ ಯುವಕರು ಹಾಕಿಕೊಂಡಿದ್ದಾರೆ.

ಇದನ್ನೂ ಓದಿ: Success Story: ಇಂಗಿನ ಉದ್ಯಮದಲ್ಲಿ ಹೊಸ ಅಧಿಪತ್ಯ ಸ್ಥಾಪಿಸಲು ಹೊರಟ ಕೇರಳ ಸಹೋದರಿಯರ ಕಥೆ ಇಲ್ಲಿದೆ

ಡೆಲಿವರಿ ಬಾಯ್ಸ್ ತನಕ ಎಲ್ಲವೂ ರೆಡಿ

ಸ್ಥಳೀಯ  ಆರ್ಡರ್ ಗಳನ್ನು ತಕ್ಷಣಕ್ಕೆ ಮುಟ್ಟಿಸುದಕ್ಕೋಸ್ಕರ ಡಿಲಿವರಿ ಬಾಯ್ ಗಳನ್ನೂ  ಒಳಗೊಂಡಂತೆ ಎಲ್ಲಾ ವ್ಯವಸ್ಥೆಗಳನ್ನೂ ಈ ಸೈಟ್ ಒಳಗೊಂಡಿದೆ. ಸೈಟ್ ಮೂಲಕ ಮಾರಾಟ ಮಾಡುವ ಎಲ್ಲಾ ವಸ್ತುಗಳ ಗುಣಮಟ್ಡದ (Quality)‌ ಜವಾಬ್ದಾರಿಯನ್ನೂ ಈ ಸೈಟ್ ಹೊತ್ತುಕೊಳ್ಳಲಿದ್ದು, ಯಾವುದೇ ರೀತಿಯ ದೂರುಗಳಿಗೂ ತಕ್ಷಣವೇ ಸ್ಪಂದಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಮಾಹಿತಿ ನೀಡುತ್ತಾರೆ ' ಇರೆನ ಇಲ್ಲಗ್ ' ವೆಬ್ ಸೈಟ್ ನ  ಸಿ‌ಇಒ ಸುಮಿತ್ ಮತ್ತು ಪಾಲುದಾರ ರಕ್ಷಿತ್.
Published by:Divya D
First published: