Viacom 18 ತೆಕ್ಕೆಗೆ IPL ಪಂದ್ಯಗಳ ಡಿಜಿಟಲ್ ಪ್ರಸರಣಾ ಹಕ್ಕು, ಇನ್ನು ಮನೆಮನೆಯಲ್ಲೂ ಕ್ರಿಕೆಟ್

Viacom 18: ಅಲ್ಲದೇ ಇದು 18 ಆಟಗಳ ವಿಶೇಷ ಪ್ಯಾಕೇಜ್​ನ ಡಿಜಿಟಲ್ ಹಕ್ಕುಗಳನ್ನು ಸಹ ಗೆದ್ದಿದ್ದು,  ಪ್ರತಿ ಸೀಸನ್​ನಲ್ಲಿ ಜಾಗತಿಕವಾಗಿ, Viacom18 ಪ್ರಮುಖ ಕ್ರಿಕೆಟ್ ರಾಷ್ಟ್ರಗಳು ಸೇರಿದಂತೆ ಐದು ಅಂತರರಾಷ್ಟ್ರೀಯ ಪ್ರದೇಶಗಳಲ್ಲಿ ಮೂರರಲ್ಲಿ ದೂರದರ್ಶನ ಮತ್ತು ಡಿಜಿಟಲ್ ಹಕ್ಕುಗಳನ್ನು ಗೆದ್ದು ಬೀಗಿದೆ.

ನೀತಾ ಅಂಬಾನಿ

ನೀತಾ ಅಂಬಾನಿ

  • Share this:
Viacom18 2023 ರಿಂದ 2027 ರವರೆಗಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಸೀಸನ್​  ಪಂದ್ಯಗಳ ಡಿಜಿಟಲ್ ಸ್ಟ್ರೀಮಿಂಗ್ (Digital Streaming)  ಹಕ್ಕುಗಳನ್ನು ಪಡೆದುಕೊಂಡಿದೆ. ಈ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (Reliance Industries Limited) ನಿರ್ದೇಶಕಿ ನೀತಾ ಅಂಬಾನಿ (Nita Ambani) ಕ್ರೀಡೆಗಳು ನಮಗೆ ಮನರಂಜನೆಯನ್ನು ನೀಡುತ್ತವೆ, ನಮಗೆ ಸ್ಫೂರ್ತಿ ನೀಡುತ್ತವೆ ಮತ್ತು ನಮ್ಮನ್ನು ಒಟ್ಟಿಗೆ ಸೇರಿಸುತ್ತವೆ. ಕ್ರಿಕೆಟ್ ಮತ್ತು ಐಪಿಎಲ್ (IPL) ಲೀಗ್  ಅತ್ಯುತ್ತಮವಾದ ಕ್ರೀಡೆ ಮಾತ್ರವಲ್ಲದೇ ಭಾರತದ ಕೀರ್ತಿಯನ್ನು ಎತ್ತಿ ಹಿಡಿಯುತ್ತದೆ. ಅದಕ್ಕಾಗಿಯೇ ಈ ಶ್ರೇಷ್ಠ ಆಟ ಮತ್ತು ಈ ಅದ್ಭುತ ಐಪಿಎಲ್​ ಲೀಗ್‌ನೊಂದಿಗೆ ನಮ್ಮ ಸಂಬಂಧವನ್ನು ಗಟ್ಟಿಗೊಳಿಸಿಸಲು ನಾವು ನಿಜಕ್ಕೂ ಹೆಮ್ಮೆಪಡುತ್ತೇವೆ. ಹಾಗೆಯೇ ನಾವು ಮಾಡುವ ಪ್ರತಿಯೊಂದು ಕೆಲಸದಂತೆಯೇ, ಐಪಿಎಲ್‌ನ ಆನಂದದಾಯಕ ಅನುಭವವನ್ನು ಕ್ರಿಕೆಟ್ ಅಭಿಮಾನಿಗಳು ಎಲ್ಲೇ ಇದ್ದರೂ ಅವರಿಗೆ ತಲುಪಿಸುವುದು ನಮ್ಮ ಧ್ಯೇಯ ಎಂದು ಹೇಳಿದ್ದಾರೆ. 

18 ಆಟಗಳ ವಿಶೇಷ ಪ್ಯಾಕೇಜ್​ನ ಡಿಜಿಟಲ್ ಹಕ್ಕು 

ಅಲ್ಲದೇ ಇದು 18 ಆಟಗಳ ವಿಶೇಷ ಪ್ಯಾಕೇಜ್​ನ ಡಿಜಿಟಲ್ ಹಕ್ಕುಗಳನ್ನು ಸಹ ಗೆದ್ದಿದ್ದು,  ಪ್ರತಿ ಸೀಸನ್​ನಲ್ಲಿ ಜಾಗತಿಕವಾಗಿ, Viacom18 ಪ್ರಮುಖ ಕ್ರಿಕೆಟ್ ರಾಷ್ಟ್ರಗಳು ಸೇರಿದಂತೆ ಐದು ಅಂತರರಾಷ್ಟ್ರೀಯ ಪ್ರದೇಶಗಳಲ್ಲಿ ಮೂರರಲ್ಲಿ ದೂರದರ್ಶನ ಮತ್ತು ಡಿಜಿಟಲ್ ಹಕ್ಕುಗಳನ್ನು ಗೆದ್ದು ಬೀಗಿದೆ.

ಇದನ್ನೂ ಓದಿ: ದೇಶದ ಮೊದಲ ಖಾಸಗಿ ರೈಲು! ಎಲ್ಲೆಲ್ಲಿ ಸಂಚರಿಸುತ್ತೆ? ಇಲ್ಲಿದೆ ನೋಡಿ

Viacom18 ಪ್ರತಿಷ್ಠಿತ ಪ್ರಸಾರಕರು ಮತ್ತು ಡಿಜಿಟಲ್ ಕಂಪನಿಗಳನ್ನು ಮೀರಿಸಿ ಪ್ರಮುಖ ಡಿಜಿಟಲ್ ಮಾಧ್ಯಮ, ಮನರಂಜನೆ ಮತ್ತು ಕ್ರೀಡಾ ತಾಣವಾಗಿ ಹೊರಹೊಮ್ಮುತ್ತಿದೆ. ಅದರಲ್ಲೂ ಹೆಚ್ಚುತ್ತಿರುವ ಕಾರ್ಯವ್ಯಾಪ್ತಿ ಹಾಗೂ ಇದರಲ್ಲಿ ಲಭ್ಯವಿರುವ ವಿಚಾರಗಳು Viacom18 ನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಭಾರತದಲ್ಲಿ ನಾಯಕತ್ವ ಸ್ಥಾಪಿಸಲು ಸಜ್ಜಾಗುತ್ತಿದೆ.

ಅಲ್ಲದೇ ಈ ಹೊಸ ಐಪಿಎಲ್​ ಡಿಜಿಟಲ್​ ಹಕ್ಕು ಲಭಿಸಿರುವುದು ಈಗ ದೇಶದ ಪ್ರತಿಯೊಂದು ಮೂಲೆ ಮೂಲೆಗೆ ಭಾರತದ ಅತಿದೊಡ್ಡ ಸ್ಫೋರ್ಟ್ಸ್​ ಲೀಗ್​ ಅನ್ನು ಕೊಂಡೊಯ್ಯಲು ಸಾಧ್ಯವಾಗುತ್ತದೆ. ಅಲ್ಲದೇ ಇದು 60 ಮಿಲಿಯನ್ ಫ್ರೀ ಡಿಶ್ ಹೊಂದಿರುವ ಮನೆಗಳನ್ನು ಒಳಗೊಂಡಂತೆ ಭಾರತದ ಪ್ರತಿಯೊಂದು ಭಾಗದಲ್ಲಿರುವ ಪ್ರತಿಯೊಬ್ಬ ಭಾರತೀಯರಿಗೂ IPL ಲಭ್ಯವಾಗುವಂತೆ ಮಾಡುತ್ತದೆ ಎಂಬುದು ವಿಶೇಷ.

ನೂರಾರು ಮಿಲಿಯನ್ ಭಾರತೀಯರಿಗೆ ಐಪಿಎಲ್​ ನೋಡುವ ಅವಕಾಶ

Viacom18 ಸಾಂಪ್ರದಾಯಿಕ ದೂರದರ್ಶನ ಪ್ರಸಾರವನ್ನು ಬಲಪಡಿಸುವುದರ ಜೊತೆಗೆ ಭವಿಷ್ಯದ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನುಸಹ ಗಟ್ಟಿಗೊಳಿಸುತ್ತಿದೆ.  ನೂರಾರು ಮಿಲಿಯನ್ ಭಾರತೀಯ ಮತ್ತು ಜಾಗತಿಕ ಗ್ರಾಹಕರಿಗೆ ಉತ್ತಮ ಅನುಭವವನ್ನು ಒದಗಿಸಲು ಇದು ಅತ್ಯಾಧುನಿಕ ಡಿಜಿಟಲ್ ಸೌಲಭ್ಯವನ್ನು ಹೊಂದಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಬೇಕಾದ ಡಾಟಾ ಹಾಗೂ ಅಲ್ಗಾರಿದಮ್‌ಗಳ ಬಳಸಿಕೊಳಂಡು ಪ್ರತಿ ಗ್ರಾಹಕರಿಗೆ ಸಮಯಕ್ಕೆ ಸರಿಯಾದ ಮತ್ತು ಸಂಬಂಧಿತ ವಿಷಯವನ್ನು ನೀಡುತ್ತದೆ.

ಇದನ್ನೂ ಓದಿ: ಯಾವ ಕಾಸ್ಟ್ಲಿ ಫ್ಲೈಟ್​ಗೂ ಕಡಿಮೆಯಿಲ್ಲ ವಂದೇ ಭಾರತ್​ ರೈಲುಗಳು! ಐಷಾರಾಮಿ ಸೌಲಭ್ಯಗಳ ಪಟ್ಟಿ ಇಲ್ಲಿದೆ

ಸಾಕರ್ (FIFA ವರ್ಲ್ಡ್ ಕಪ್, ಲಾ ಲಿಗಾ, ಸೀರಿ A ಮತ್ತು Ligue1), ಬ್ಯಾಡ್ಮಿಂಟನ್, ಟೆನ್ನಿಸ್ ಮತ್ತು ಬಾಸ್ಕೆಟ್‌ಬಾಲ್ (NBA) ನಲ್ಲಿ ಹಕ್ಕುಗಳನ್ನು ಪಡೆದ ನಂತರ, Viacom18 ಮೊದಲ ಬಾರಿ ಕ್ರಿಕೆಟ್​ ಹಕ್ಕುಗಳನ್ನು ಸಹ ಪಡೆದುಕೊಂಡಿದೆ. IPL ಡಿಜಿಟಲ್​ ಹಕ್ಕು Viacom18 ಮತ್ತು ಅದರ ಪ್ಲಾಟ್‌ಫಾರ್ಮ್‌ಗಳನ್ನು ದೇಶದ ಅತಿದೊಡ್ಡ ಕ್ರೀಡಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದನ್ನಾಗಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.  ಅಲ್ಲದೇ, ದೊಡ್ಡ, ಸಣ್ಣ ಹಾಗೂ ಹೆಚ್ಚು ತೊಡಗಿಸಿಕೊಂಡಿರುವ ಪ್ರೇಕ್ಷಕರನ್ನು ತಲುಪಲು ಜಾಹೀರಾತುದಾರರಿಗೆ ಇದು ಅಸಾಧಾರಣ ಅವಕಾಶವಾಗಿದೆ.
Published by:Sandhya M
First published: