ಛಭಐಸಿಐಸಿಐ ಬ್ಯಾಂಕ್ನ (ICICI Bank) ಮಾಜಿ ಸಿಇಒ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ಅವರನ್ನು ಶುಕ್ರವಾರ ಸಿಬಿಐ (CBI) ಬಂಧಿಸಿದೆ. ವಿಡಿಯೋಕಾನ್ ಗ್ರೂಪ್ಗೆ (Videocon Group) 3,000 ಕೋಟಿಗೂ ಹೆಚ್ಚು ರೂಪಾಯಿ ಸಾಲ ಮಂಜೂರಾತಿ ಮಾಡುವಲ್ಲಿಅವ್ಯವಹಾರ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಚಂದಾ ಕೊಚ್ಚರ್ (Chanda Kochhar) ಮತ್ತು ದೀಪಕ್ ಕೊಚ್ಚರ್ (Deepak Kochhar) ಅವರನ್ನು ಸಿಬಿಐ ಬಂಧಿಸಿದೆ. ಇದಾದ ಬಳಿಕ ಈಗ ದೊಡ್ಡ ಸುದ್ದಿಯೊಂದು ಹೊರಬೀಳುತ್ತಿದೆ. ಕೊಚ್ಚರ್ ದಂಪತಿ ಬಳಿಕ ಇದೀಗ ವೇಣುಗೋಪಾಲ್ ಧೂತ್ ಬಂಧನವಾಗಿದೆ.
ವೇಣುಗೋಪಾಲ್ ಧೂತ್ ಬಂಧನ!
ಚಂದಾ ಕೊಚ್ಚರ್ ಮತ್ತು ಅವರ ಪತಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಬಳಿಕ ವಿಡಿಯೋಕಾನ್ ಅಧ್ಯಕ್ಷ ವೇಣುಗೋಪಾಲ್ ಧೂತ್ ಅವರನ್ನು ಬಂಧಿಸಲಾಗಿದೆ. 2009 ಮತ್ತು 2011ರಲ್ಲಿ ನಿಯಮಗಳನ್ನು ಉಲ್ಲಂಘಿಸಿ ವಿಡಿಯೋಕಾನ್ಗೆ ಸಾಲ ನೀಡಲಾಗಿತ್ತು. ಕೊಚ್ಚರ್ ದಂಪತಿಯ ಬೆನ್ನಲ್ಲೇ ಇದೀಗ ಈ ಪ್ರಕರಣದಲ್ಲಿ ವೇಣುಗೋಪಾಲ್ ಧೂತ್ ವಿರುದ್ಧ ಸಿಬಿಐ ಕ್ರಮ ಕೈಗೊಂಡಿದೆ. ವೇಣುಗೋಪಾಲ್ ಧೂತ್ ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಏನಿದು ಪ್ರಕರಣ
ಸಿಬಿಐ ಪ್ರಕಾರ, 2009 ಮತ್ತು 2011 ರ ನಡುವೆ, ಐಸಿಐಸಿಐ ಬ್ಯಾಂಕ್ ನಿಯಮಗಳನ್ನು ಉಲ್ಲಂಘಿಸಿ ವಿಡಿಯೋಕಾನ್ ಕಂಪನಿಗೆ 6 ಅಧಿಕ ಮೌಲ್ಯದ ಸಾಲಗಳನ್ನು ನೀಡಿದೆ. ಈ ಸಾಲ ನೀಡಿದ ಸಮಿತಿಯಲ್ಲಿ ಚಂದಾ ಕೊಚ್ಚರ್ ಅವರನ್ನೂ ಸೇರಿಸಲಾಗಿತ್ತು. ಈ ಹಿಂದೆ 3000 ಕೋಟಿ ಸಾಲ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅವರ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿತ್ತು.
2018ರಲ್ಲಿ ರಾಜೀನಾಮೆ ನೀಡಿದ ಕೊಚ್ಚರ್!
ಸಾಲ ಹಂಚಿಕೆಯಲ್ಲಿ ಚಂದಾ ಕೊಚ್ಚರ್ ಅಕ್ರಮ ಎಸಗಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಸಾಲಕ್ಕೆ ಪ್ರತಿಯಾಗಿ ವಿಡಿಯೋಕಾನ್ ನ ಪ್ರವರ್ತಕರಿಂದ ಭಾರೀ ಮೊತ್ತವನ್ನು ಪಡೆದಿದ್ದರು. ಈ ಸಾಲಕ್ಕೆ ಪ್ರತಿಯಾಗಿ ವಿಡಿಯೋಕಾನ್ ಪ್ರವರ್ತಕರು ಚಂದಾ ಕೊಚ್ಚರ್ ಅವರ ಪತಿಗೆ ಕೋಟ್ಯಂತರ ರೂಪಾಯಿ ಪಾವತಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಈ ಎಲ್ಲಾ ಆರೋಪಗಳ ನಂತರ, ಚಂದಾ ಕೊಚ್ಚರ್ 2018 ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
ಇದನ್ನೂ ಓದಿ: ರೈತರಿಗಾಗಿ ಅಂತಾನೇ ಇರೋದು ಈ ಯೋಜನೆಗಳು, ಪ್ರತಿ ವರ್ಷ ನಿಮ್ಮ ಖಾತೆ ಸೇರುತ್ತೆ 42 ಸಾವಿರ!
ಪ್ರಕರಣದಲ್ಲಿ ಚಂದಾ ಕೊಚ್ಚರ್ ಪತಿ ದೀಪಕ್ ಕೊಚ್ಚರ್ ಭಾಗಿ
ಈ ಪ್ರಕರಣದಲ್ಲಿ ಚಂದಾ ಕೊಚ್ಚರ್ ಅವರ ಪತಿ ದೀಪಕ್ ಕೊಚ್ಚರ್ ಮತ್ತು ಇತರ ಕುಟುಂಬಸ್ಥರು ಭಾಗಿಯಾಗಿದ್ದು, ಲಾಭ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಐಸಿಐಸಿಐ ಬ್ಯಾಂಕ್ನಿಂದ ಸಾಲ ಪಡೆದ ನಂತರ ವೇಣುಗೋಪಾಲ್ ಧೂತ್ ನುಪವರ್ ರಿನ್ಯೂವಬಲ್ಸ್ನಲ್ಲಿ ಕೋಟಿಗಟ್ಟಲೆ ಹೂಡಿಕೆ ಮಾಡಿದ್ದಾರೆ. ಆದರೆ ಈ ವಿಚಾರ ಒಂದು ತಿಂಗಳ ನಂತರ ಬೆಳಕಿಗೆ ಬಂದಿತು.
ಚಂದಾ ಕೊಚ್ಚರ್ ಸದಸ್ಯರಾಗಿದ್ದ ಸಮಿತಿಯು ಸಾಲವನ್ನು ತೆರವುಗೊಳಿಸಿದೆ ಎಂದು ಸಿಬಿಐ ಆರೋಪಿಸಿದೆ. ಮತ್ತೊಂದೆಡೆ ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ವಿಡಿಯೋಕಾನ್ಗೆ ₹ 3000 ಕೋಟಿ ಮಂಜೂರು ಮಾಡಿದ್ದಾರೆ. ಅಲ್ಲದೇ ವೇಣುಗೋಪಾಲ್ ಧೂತ್ ನುಪವರ್ನಿಂದ ಚಂದಾ ಕೊಚ್ಚರ್ನಿಂದ ಚಂದಾ ಕೊಚ್ಚರ್ ತಮ್ಮ ಪತಿ ಮೂಲಕ ಅಕ್ರಮ ವ್ಯವಹಾರ ನಡೆಸಿ ಲಾಭ ಪಡೆದುಕೊಂಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ವಿಡಿಯೋಕಾನ್ಗೆ ನೀಡಿದ್ದ ಸಾಲದಲ್ಲಿ ಅಕ್ರಮ! ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ಬಂಧನ
ಈ ಪ್ರಕರಣ ಕುರಿತು 2019ರಲ್ಲಿ ಸಿಬಿಐ ಎಫ್ಐಆರ್ ದಾಖಲು ಮಾಡಿತ್ತು. ಚಂದಾ ಕೊಚ್ಚರ್ ಐಸಿಐಸಿಐ ಬ್ಯಾಂಕ್ಗೆ ವಂಚನೆ ಮಾಡುವ ದೃಷ್ಟಿಯಿಂದ ಇತರರ ಜೊತೆ ಸೇರಿಕೊಂಡು ಖಾಸಗಿ ಕಂಪನಿಗಳಿಗೆ ಸಾಲ ಮಂಜೂರಾತಿ ಮಾಡಿದ್ದಾರೆ ಎನ್ನಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ