• Home
  • »
  • News
  • »
  • business
  • »
  • Vehicle Scrapping: ಕಾರು ಮಾಲೀಕರು-ಚಾಲಕರಿಗೆ ಸಂತಸದ ಸುದ್ದಿ! ಇಷ್ಟು ದಿನ ಕಾದಿದ್ದಕ್ಕೂ ಸಾರ್ಥಕವಾಯ್ತು!

Vehicle Scrapping: ಕಾರು ಮಾಲೀಕರು-ಚಾಲಕರಿಗೆ ಸಂತಸದ ಸುದ್ದಿ! ಇಷ್ಟು ದಿನ ಕಾದಿದ್ದಕ್ಕೂ ಸಾರ್ಥಕವಾಯ್ತು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2021-22ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ನೀತಿಯು ವೈಯಕ್ತಿಕ ವಾಹನಗಳಿಗೆ 20 ವರ್ಷಗಳ ನಂತರ ಫಿಟ್‌ನೆಸ್ ಪರೀಕ್ಷೆಗಳನ್ನು ಒದಗಿಸುತ್ತದೆ, ಆದರೆ ವಾಣಿಜ್ಯ ವಾಹನಗಳಿಗೆ 15 ವರ್ಷಗಳು ಪೂರ್ಣಗೊಂಡ ನಂತರ ಇದು ಅಗತ್ಯವಿರುತ್ತದೆ.

  • Trending Desk
  • 3-MIN READ
  • Last Updated :
  • Share this:

ದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಮೂರು ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ (Vehicle Scrapping)  (ಗುಜರಿ) ಕೇಂದ್ರಗಳನ್ನು ತೆರೆಯಲು ಸರ್ಕಾರ ಯೋಜಿಸಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ. ರೋಪ್‌ವೇ (Ropeway)  , ಕೇಬಲ್ ಕಾರ್ (Cable Car) ಮತ್ತು ಫ್ಯೂನಿಕ್ಯುಲರ್ ರೈಲ್ವೇಗಾಗಿ ರಸ್ತೆ ಸಚಿವಾಲಯವು 206 ಪ್ರಸ್ತಾವನೆಗಳನ್ನು ಸ್ವೀಕರಿಸಿದೆ ಎಂದು ವಾಹನ ಬಿಡಿಭಾಗಗಳ ತಯಾರಕರ ಸಂಘಟನೆಯಾದ ಆಟೋಮೋಟಿವ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ACMA) ಯ ವಾರ್ಷಿಕ ಕಾರ್ಯಕ್ರಮದಲ್ಲಿ ಗಡ್ಕರಿ ತಿಳಿಸಿದ್ದಾರೆ.


ರಾಷ್ಟ್ರೀಯ ವಾಹನ ಜಂಕ್ ನೀತಿ ಹೇಗೆ ಸಹಾಯಕವಾಗಿದೆ?


ಪ್ರಧಾನಿ ನರೇಂದ್ರ ಮೋದಿಯವರು ವಾಹನ ಸ್ಕ್ರ್ಯಾಪಿಂಗ್ (ಗುಜರಿ) ನೀತಿಯನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಆರಂಭಿಸಿದ್ದರು. ಈ ನೀತಿಯು ಯೋಗ್ಯವಲ್ಲದ ಹಾಗೂ ಮಾಲಿನ್ಯಕಾರಕ ವಾಹನಗಳನ್ನು ಹಂತ ಹಂತವಾಗಿ ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಆರ್ಥಿಕತೆಯನ್ನು ನಿರ್ವಹಿಸಲು ಉತ್ತೇಜಿಸುತ್ತದೆ ಎಂದು ಗಡ್ಕರಿ ತಿಳಿಸಿದ್ದಾರೆ.


ಈ ಹಿನ್ನಲೆಯಲ್ಲಿ ಕೇಂದ್ರ ಸಚಿವರು ಸರಕಾರವು ಪ್ರತಿ ಜಿಲ್ಲೆಯಲ್ಲಿ ಮೂರು ನೋಂದಾಯಿತ ವಾಹನ ಸ್ಕ್ರ್ಯಾಪ್ ಸೌಲಭ್ಯಗಳು ಅಥವಾ ಕೇಂದ್ರಗಳನ್ನು ತೆರೆಯಬಹುದು ಎಂದು ತಿಳಿಸಿದ್ದಾರೆ. ಪ್ರಧಾನಿ ಮೋದಿ ಕಳೆದ ವರ್ಷ ಆಗಸ್ಟ್‌ನಲ್ಲಿ ರಾಷ್ಟ್ರೀಯ ವಾಹನ ಜಂಕ್ ನೀತಿಯನ್ನು ಪ್ರಾರಂಭಿಸಿದ್ದರು ಹಾಗೂ ಈ ನೀತಿಯನ್ನು ಅನುಷ್ಠಾನಕ್ಕೆ ತರುವುದಾಗಿ ತಿಳಿಸಿದ್ದರು. ಈ ನೀತಿಯು ಬಳಕೆಯಲ್ಲಿಲ್ಲದ ಹಾಗೂ ಮಾಲಿನ್ಯಕಾರಕ ವಾಹನಗಳನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಅನುವು ಮಾಡಿಕೊಡುತ್ತದೆ.


ವಾಹನಗಳಿಗೆ ರಸ್ತೆ ತೆರಿಗೆಯಲ್ಲಿ 25% ರಷ್ಟು ತೆರಿಗೆ ರಿಯಾಯಿತಿ


ಹೊಸ ನೀತಿಯ ಅಡಿಯಲ್ಲಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು (ಯುಟಿಗಳು) ಹಳೆಯ ವಾಹನಗಳನ್ನು ರದ್ದುಗೊಳಿಸಿದ ನಂತರ ಖರೀದಿಸಿದ ವಾಹನಗಳಿಗೆ ರಸ್ತೆ ತೆರಿಗೆಯಲ್ಲಿ 25% ದಷ್ಟು ತೆರಿಗೆ ರಿಯಾಯಿತಿಯನ್ನು ನೀಡುವುದಾಗಿ ಕೇಂದ್ರ ಹೇಳಿದೆ. ವಾಹನ ಸ್ಕ್ರ್ಯಾಪೇಜ್ ನೀತಿಯು ಏಪ್ರಿಲ್ 1, 2022 ರಂದು ಜಾರಿಗೆ ಬಂದಿತು.


ಇದನ್ನೂ ಓದಿ: ಮನೆಯನ್ನೇ ಫಾರ್ಮ್ ಮಾಡಿದ ವ್ಯಕ್ತಿ, ವರ್ಷಕ್ಕೆ 70 ಲಕ್ಷ ರೂಪಾಯಿ ಆದಾಯ ಫಿಕ್ಸ್​!


2021-22ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ನೀತಿಯು ವೈಯಕ್ತಿಕ ವಾಹನಗಳಿಗೆ 20 ವರ್ಷಗಳ ನಂತರ ಫಿಟ್‌ನೆಸ್ ಪರೀಕ್ಷೆಗಳನ್ನು ಒದಗಿಸುತ್ತದೆ, ಆದರೆ ವಾಣಿಜ್ಯ ವಾಹನಗಳಿಗೆ 15 ವರ್ಷಗಳು ಪೂರ್ಣಗೊಂಡ ನಂತರ ಇದು ಅಗತ್ಯವಿರುತ್ತದೆ.


ಭಾರತದಲ್ಲಿ ಜಾಗತಿಕ ಸುರಕ್ಷತಾ ಮಾನದಂಡವನ್ನು ಅಳವಡಿಸಿಕೊಳ್ಳುವುದು


ಭಾರತದ ಬಹುತೇಕ ವಾಹನ ತಯಾರಕರು ಆರು ಏರ್‌ಬ್ಯಾಗ್‌ಗಳನ್ನು ಹೊಂದಿರುವ ಕಾರುಗಳನ್ನು ರಫ್ತು ಮಾಡುತ್ತಿದ್ದಾರೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ. ಭಾರತದಲ್ಲಿಯೂ ಅವರು ಕಾರುಗಳಿಗೆ ಅಂತಹ ಸುರಕ್ಷತಾ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದ್ದು, ಕಡಿಮೆ ಬೆಲೆಯ ಸಣ್ಣ ಕಾರುಗಳನ್ನು ಬಳಸುವ ಜನರ ಸುರಕ್ಷತೆಯ ಬಗ್ಗೆ ವಾಹನ ತಯಾರಕರು ಯೋಚಿಸಬೇಕು ಎಂದು ನುಡಿದಿದ್ದಾರೆ.


ಎಸಿಎಂಎ ವಾರ್ಷಿಕ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ಸುಮಾರು ಐದು ಲಕ್ಷ ರಸ್ತೆ ಅಪಘಾತಗಳಲ್ಲಿ ಪ್ರತಿ ವರ್ಷ 1.5 ಲಕ್ಷ ಜನರು ಸಾವನ್ನಪ್ಪುತ್ತಾರೆ ಮತ್ತು ಮೂರು ಲಕ್ಷಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.


ಕಾರು ತಯಾರಕರು ಜನರ ಜೀವನದ ಬಗ್ಗೆ ಏಕೆ ಯೋಚಿಸುತ್ತಿಲ್ಲ?


ಭಾರತದ ಬಹುತೇಕ ವಾಹನ ತಯಾರಕರು ಆರು ಏರ್ ಬ್ಯಾಗ್ ಇರುವ ಕಾರುಗಳನ್ನು ರಫ್ತು ಮಾಡುತ್ತಿದ್ದಾರೆ. ಆದರೆ ಇದೇ ನೀತಿಯನ್ನು ಇಲ್ಲಿನ ಕಾರುಗಳಲ್ಲಿ ಅಳವಡಿಸಲು ಕಾರು ತಯಾರಕರು ಹಿಂದೇಟು ಹಾಕುತ್ತಿದ್ದು ಇದಕ್ಕೆ ಮುಖ್ಯ ಕಾರಣ ಭಾರತದಲ್ಲಿನ ಆರ್ಥಿಕ ವೆಚ್ಚ ಎಂಬುದಾಗಿ ತಿಳಿಸಿದ್ದಾರೆ.


ಇದನ್ನೂ ಓದಿ: ಇನ್ಮುಂದೆ ಈ 2 ಕಾರುಗಳು ರಸ್ತೆಗಿಳಿಯೋದಿಲ್ಲ, ಖರೀದಿ ಮಾಡ್ಬೇಕು ಅಂದುಕೊಂಡಿದ್ದರೇ ಹುಷಾರ್​!


ಭಾರತದಲ್ಲಿ ಅಗ್ಗದ ಕಾರುಗಳನ್ನು ಬಳಸುವ ಜನರ ಜೀವನದ ಬಗ್ಗೆ ವಾಹನ ತಯಾರಕರು ಏಕೆ ಯೋಚಿಸುತ್ತಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ ಗಡ್ಕರಿ, ದೇಶದಲ್ಲಿ ಅಪಘಾತಗಳನ್ನು ಕಡಿಮೆ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು