Vegetable Price: ಜೂನ್​ ಮೊದಲ ದಿನವೇ ಮತ್ತೊಂದು ಗುಡ್​ನ್ಯೂಸ್​! ಗಗನಕ್ಕೇರಿದ್ದ ತರಕಾರಿ ಬೆಲೆ ಇಳಿಕೆ

ಹುಷಾರಿಲ್ಲ (Fever) ಅಂತ ಆಸ್ಪತ್ರೆ  (Hospital) ಗೆ ಹೋದರೆ, ಡಾಕ್ಟರ್ (Doctor)​ ಚೆನ್ನಾಗಿ ಸೊಪ್ಪು,  ತರಕಾರಿ (Vegetables) , ಹಣ್ಣು (Fruits) ತಿನ್ನಬೇಕು ಎಂದು ಸಲಹೆ ನೀಡುತ್ತಾರೆ. ಸರಿ ಆಯ್ತು ನೋಡೇ ಬೀಡೋಣ ಅಂತ ತರಕಾರಿ ಖರೀದಿಸಲು ಮಾರುಕಟ್ಟೆಗೆ ಬಂದರೆ, ಹುಷಾರಲ್ಲ ರೇಟ್​ ಕೇಳಿದರೆ ಹಾರ್ಟ್​ ಅಟ್ಯಾಕ್​ ಆಗಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹುಷಾರಿಲ್ಲ (Fever) ಅಂತ ಆಸ್ಪತ್ರೆ  (Hospital) ಗೆ ಹೋದರೆ, ಡಾಕ್ಟರ್ (Doctor)​ ಚೆನ್ನಾಗಿ ಸೊಪ್ಪು,  ತರಕಾರಿ (Vegetables) , ಹಣ್ಣು (Fruits) ತಿನ್ನಬೇಕು ಎಂದು ಸಲಹೆ ನೀಡುತ್ತಾರೆ. ಸರಿ ಆಯ್ತು ನೋಡೇ ಬೀಡೋಣ ಅಂತ ತರಕಾರಿ ಖರೀದಿಸಲು ಮಾರುಕಟ್ಟೆಗೆ ಬಂದರೆ, ಹುಷಾರಲ್ಲ ರೇಟ್​ ಕೇಳಿದರೆ ಹಾರ್ಟ್​ ಅಟ್ಯಾಕ್​ ಆಗಬೇಕು. ಹೌದು, ಕೆಲ ದಿನಗಳಿಂದ ತರಾಕಾರಿ ಬೆಲೆ ಗಗನಕ್ಕೇರಿತ್ತು. ಕ್ಯಾರೆಟ್​, ಬೀನ್ಸ್​, ಟೋಮ್ಯಾಟೋ, ಈರುಳ್ಳಿ, ಬದನೆಕಾಯಿ, ಸೇರಿ ಹಲವು ತರಕಾರಿಗಳ ಬೆಲೆ ಕೇಳಿದರೆ ಮೂರ್ಛೆ ಹೋಗುವಂತಿತ್ತು. ಆದರೆ, ಜೂನ್​ ತಿಂಗಳ ಮೊದಲ ದಿನ ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಭಾರೀ ಇಳಿಕೆ ಕಂಡಿದೆ. ಇಂದು ಕಳೆದ ಕೆಲ ದಿನಗಳಿಂದಲೂ ದರದಲ್ಲಿ ಹೆಚ್ಚು ಕಡಿಮೆಯಾಗುತ್ತಿತ್ತು. ಆದರೆ ಇದೀಗ ದರ ವ್ಯತ್ಯಯ ಕಂಡುಬಂದಿದೆ. ಟೊಮ್ಯಾಟೋ, ನಿಂಬೆಹಣ್ಣು ಸೇರಿದಂತೆ ಅನೇಕ ತರಕಾರಿಗಳ ಬೆಲೆಯಲ್ಲಿ ಇಳಿಕೆ ಕಂಡಿದೆ. ಈ ವಿಚಾರ ಎಲ್ಲರ ಮೊಗದಲ್ಲೂ ಸಂತಸ ಮೂಡಿಸಿದೆ.

ಹಾಗಿದ್ರೆ ಮಾರುಕಟ್ಟೆಯಲ್ಲಿ ಯಾವ್ಯಾವ ತರಕಾರಿ ಎಷ್ಟು ದರ ಇದೆ ಅಂತ ಇಲ್ಲಿದೆ ನೋಡಿ..ತರಕಾರಿ-ಹಣ್ಣು-ಸೊಪ್ಪು (ಕೆಜಿ)ಬೆಲೆ ₹
ಬಟಾಣಿ114
ಹರಿವೆ ಸೊಪ್ಪು70
ನೆಲ್ಲಿಕಾಯಿ70
ಮೂಲಂಗಿ30
ಹೀರೆಕಾಯಿ36
ಕುಂಬಳಕಾಯಿ28
ಆಲೂಗಡ್ಡೆ30
ಈರುಳ್ಳಿ ಸಣ್ಣ30
ದೊಡ್ಡ ಈರುಳ್ಳಿ30
ಬೆಂಡೆಕಾಯಿ44
ತೊಂಡೆಕಾಯಿ32
ಹಸಿರು ಮೆಣಸಿನಕಾಯಿ53
ಶುಂಠಿ58
ಬೆಳ್ಳುಳ್ಳಿ123
ಬೀನ್ಸ್83
ಸುವರ್ಣಗೆಡ್ಡೆ33
ಮೆಂತ್ಯ ಸೊಪ್ಪು19
ಬದನೆ (ದೊಡ್ಡ)25
ಬಿಳಿಬದನೆ34
ನುಗ್ಗೆಕಾಯಿ70
ಸೌತೆಕಾಯಿ17
ತೆಂಗಿನಕಾಯಿ25
ಕ್ಯಾರೆಟ್51
ಎಲೆಕೋಸು26
ಅವರೆಕಾಳು58
ಕ್ಯಾಪ್ಸಿಕಂ39
ಬೀಟ್‌ರೂಟ್‌42
ಟೊಮೆಟೊ66

ಈ ತರಕಾರಿ ಸೇರಿ ಇನ್ನೂ ಹಲವು ತರಕಾರಿಗಳ ಬೆಲೆ ಇಂದು ಇಳಿಕೆಯಾಗಿದೆ. ಈ ಬೆಲೆ ಎಷ್ಟು ದಿನ ಕಡಿಮೆ ಇರುತ್ತೋ ಗೊತ್ತಿಲ್ಲ. ಹಾಗಾಗಿ ನೀವು ಈ ಕೂಡಲೇ ನಿಮ್ಮ ಹತ್ತಿರದ ಮಾರುಕಟ್ಟೆಗಳಿಗೆ ತೆರಳಿ ತರಕಾರಿಗಳನ್ನು ಕೊಂಡುಕೊಳ್ಳಿ.

ಇದನ್ನೂ ಓದಿ: ಜೂನ್​ 22ಕ್ಕೆ ಐಕಿಯ ಸ್ಟೋರ್​ ಗ್ರ್ಯಾಂಡ್ ಓಪನ್​- ಅಬ್ಬಬ್ಬಾ, ಒಂದೇ ಸೂರಿನಡಿ 7 ಸಾವಿರಕ್ಕೂ ಹೆಚ್ಚು ಪ್ರಾಡಕ್ಟ್ಸ್​!

ರೈತ ವರ್ಗದಲ್ಲಿ ಬೇಸರ!

ಕೆಲವು ತಿಂಗಳುಗಳ ಹಿಂದೆ ರಾಜ್ಯದಲ್ಲಿ ತರಕಾರಿ(Vegetables) ಖರೀದಿಸುವ ಗ್ರಾಹಕರು(Consumers) ಭಯಪಡುವ ಸ್ಥಿತಿ ನಿರ್ಮಾಣವಾಗಿತ್ತು..ಮಳೆ ಕಡಿಮೆಯಾಗಿ ಬಿಸಿಲು ಬಂದಿರುವುದರಿಂದ ತರಕಾರಿಗಳು ಗಿಡಗಳು ಚೆನ್ನಾಗಿ ಬೆಳೆದು ಫಸಲು ಬರುತ್ತಿದ್ದಂತೆ ಬೆಲೆ ಏಕಾಏಕಿ ಇಳಿಕೆ ಕಾಣುತ್ತಿದೆ. ಈ ವರ್ಷ ಶೂನ್ಯ ಮಾಸದ ಎರಡು ವಾರಗಳಲ್ಲೂ ತರಕಾರಿಗೆ ಉತ್ತಮ ಬೆಲೆ ಇತ್ತು. ಆದರೀಗ ಕ್ರಮೇಣ ತರಕಾರಿ ಧಾರಣೆ ಒಂದೊದಾಗಿ ಇಳಿಕೆಯಾಗುತ್ತಿರುವುದು ಸಹಜವಾಗಿಯೇ ರೈತ ವರ್ಗದಲ್ಲಿ ಬೇಸರ ತರಿಸಿದೆ.

ಇದನ್ನೂ ಓದಿ: ಈ ಕಂಪೆನಿ ಒಂದೇ ವರ್ಷದಲ್ಲಿ 10 ಪಟ್ಟು ಹೆಚ್ಚು ಲಾಭ ಪಡೆದಿದೆ, ನೀವು ಹಣ ಹೂಡಿದ್ದೀರಾ?

ಉತ್ತಮ ಬೆಲೆ ಇದ್ದ ಕಾರಣ ತಾಲೂಕಿನಲ್ಲಿ ತರಕಾರಿ ಬೆಳೆಯುವರ ರೈತರ ಸಂಖ್ಯೆ ಹೆಚ್ಚಾಗಿದೆ.  ಅಕಾಲಿಕ ಮಳೆ, ಮೋಡ ಕವಿದ ವಾತವರಣದ ಕಾರಣ ನಿರೀಕ್ಷಿತ ಇಳುವರಿ ಬರುತ್ತಿಲ್ಲ. ಈ ನಡುವೆಯೂ ರೈತರು ಬೀನ್ಸ್‌, ಮೆಣಸಿನಕಾಯಿ, ಸೌತೆಕಾಯಿ, ಮಂಗಳೂರು ಸೌತೆ, ಗುಂಡು ಮತ್ತು ಹಸಿರು ಬದನೆ, ಕುಂಬಳಕಾಯಿ, ಹೀರೇಕಾಯಿ, ಪಡವಲ, ತೊಂಡೆಕಾಯಿ, ಹಾಗಲ ವೈಟ್‌ ಮತ್ತು ಗ್ರೀನ್‌, ಕಾಲಿಪ್ಲವರ್‌, ಪೈರು, ದಪ್ಪ ಮೆಣಸಿನಕಾಯಿ, ಸೋರೆಕಾಯಿ,ಎಲೆಕೋಸು, ಸೀಮೆ ಬದನೆ, ಬೆಂಡೆಕಾಯಿ ಒಳಗೊಂಡು ಹಲವು ಬಗೆಯ ತರಕಾರಿಗಳನ್ನು ಬೆಳೆದಿದ್ದಾರೆ. ಆದರೆ ಇಂದು ಅವುಗಳ ಬೆಲೆ ಇಳಿಕೆಯಾಗಿರುವುದು ಸಜಹವಾಗಿ ಅವರಿಗೆ ಬೇಸರ ಮೂಡಿಸಿದೆ.

ಕೆಲವೊಂದು ತರಕಾರಿಗಳ ಬೆಲೆ ಕೆಲವು ಸಮಯದಲ್ಲಿ ಮಾತ್ರ ಏರಿಕೆಯಾಗುತ್ತದೆ. ಉದಾಹರಣೆಗೆ ಸೌತೇಕಾಯಿ, ನಿಂಬೆಹಣ್ಣು, ಸೊಪ್ಪು ಸೇರಿದಂತೆ ಕೆಲವು ತರಕಾರಿಗಳ ಬೆಲೆ ಬೇಸಿಗೆಯಲ್ಲಿ ಏರಿಕೆಯಾಗುತ್ತದೆ.  ಇದಕ್ಕೆ ಕಾರಣ ಹೆಚ್ಚಿನ ಬೇಡಿಕೆ ಹಾಗೂ ಕಡಿಮೆ ಪೂರೈಕೆ.
Published by:Vasudeva M
First published: