Vedantu Lay Off: 424 ಉದ್ಯೋಗಿಗಳು ವಜಾ! 2ನೇ ಸಲ ಶಾಕ್ ನೀಡಿದ ಯಶಸ್ವಿ ಸ್ಟಾರ್ಟ್ಅಪ್

ಕೋವಿಡ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಶಾಲೆಗಳು ಮತ್ತೆ ತೆರೆಯುತ್ತಿವೆ. ಆಫ್‌ಲೈನ್ ಮಾದರಿಯ ತರಗತಿಗಳು ಶುರುವಾಗುತ್ತಿವೆ. ಹೀಗಾಗಿ ವೇದಾಂತುವಿನಂತಹ ಎಡ್​ಟೆಕ್ ಸ್ಟಾರ್ಟ್​ಅಪ್​ಗಳಿಗೆ ಹಿನ್ನೆಡೆಯಾಗುತ್ತಿವೆ ಎನ್ನಲಾಗಿದೆ.

ವೇದಾಂತು ಸಹ ಸಂಸ್ಥಾಪಕ ವಂಶಿಕೃಷ್ಣ

ವೇದಾಂತು ಸಹ ಸಂಸ್ಥಾಪಕ ವಂಶಿಕೃಷ್ಣ

  • Share this:
    ಮುಂಬೈ:  ವಿವಿಧ ಕಂಪನಿಗಳಿಂದ ಉದ್ಯೋಗಿಗಳನ್ನು ತೆಗೆದುಹಾಕುವುದು ಇತ್ತೀಚಿಗೆ ಹೆಚ್ಚುತ್ತಿದೆ.  ಒಮ್ಮೆಗೆ ಉದ್ಯೋಗಿಗಳನ್ನು ತೆಗೆದುಹಾಕಿ ಕಂಪನಿಗಳು ತಮ್ಮ ಕೆಲಸಗಾರರಿಗೆ ಶಾಕ್ ನೀಡುತ್ತಿದೆ. ಈ ಸಾಲಿಗೆ ಮತ್ತೊಂದು ಕಂಪನಿ ಸೇರ್ಪಡೆಗೊಂಡಿದೆ. ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿನ ನಿಧಾನಗತಿಯು ಎಲ್ಲ ಕಂಪನಿಗಳಿಗೂ ಚಿಂತೆ ಉಂಟು ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಉಂಟಾಗಬಹುದಾದ ಹಣದ ಕೊರತೆಯನ್ನು (Scarce Capital) ಗಮನದಲ್ಲಿಟ್ಟುಕೊಂಡು, Edtech ಕಂಪನಿಯಾದ ವೇದಾಂತು (Vedantu) ಒಟ್ಟು 424 ಉದ್ಯೋಗಿಗಳನ್ನು ವಜಾಗೊಳಿಸಲು (Vedantu Lay Off) ನಿರ್ಧರಿಸಿದೆ. ಟೈಗರ್ ಗ್ಲೋಬಲ್ ಎಂಬ ಸಂಸ್ಥೆಯು ಹಣಕಾಸಿನ ನೆರವು ನೀಡಿರುವ ಶೈಕ್ಷಣಿಕ ವಲಯದ ಯುನಿಕಾರ್ನ್ ಕಂಪನಿಯಾದ (Unicorn Startup) ವೇದಾಂತು ತನ್ನಲ್ಲಿರುವ ಉದ್ಯೋಗಿಗಳ ಶೇಕಡಾ 7ರಷ್ಟು ಉದ್ಯೋಗಿಗಳಿಗೆ ಶಾಕ್ ನೀಡಿದೆ.

    ವಿವಿಧ ದೇಶಗಳ, ವಿವಿಧ ಕಂಪನಿಗಳ ಆರ್ಥಿಕ ಪರಿಸ್ಥಿತಿಯು ದಿನೇ ದಿನೆ ಕಠಿಣವಾಗುತ್ತಿದೆ. ಇದು ಸಹಜವಾಗಿ ಜನಸಾಮಾನ್ಯರ ಮೇಲೂ ಪರಿಣಾಮ ಬೀರುತ್ತಿದೆ.

    ವೇದಾಂತುಗೆ ಏಕೆ ಹಿನ್ನೆಡೆ ಆಗುತ್ತಿದೆ?
    ಕೋವಿಡ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಶಾಲೆಗಳು ಮತ್ತೆ ತೆರೆಯುತ್ತಿವೆ. ಆಫ್‌ಲೈನ್ ಮಾದರಿಯ ತರಗತಿಗಳು ಶುರುವಾಗುತ್ತಿವೆ. ಹೀಗಾಗಿ ವೇದಾಂತುವಿನಂತಹ ಎಡ್​ಟೆಕ್ ಸ್ಟಾರ್ಟ್​ಅಪ್​ಗಳಿಗೆ ಹಿನ್ನೆಡೆಯಾಗುತ್ತಿವೆ ಎನ್ನಲಾಗಿದೆ.

    ವೇದಾಂತು ತನ್ನ ಎಲ್ಲಾ ಯೋಜನೆಗಳ ಸಮಗ್ರ ಪರಿಶೀಲನೆಯನ್ನು ಮಾಡುತ್ತಿದೆ. ಈಮೂಲಕ ತನ್ನ ವೆಚ್ಚಗಳನ್ನು ಕಡಿತಗೊಳಿಸಿ ತರ್ಕಬದ್ಧವಿಲ್ಲದ ಯೋಜನೆಗಳನ್ನು ನಿಲ್ಲಿಸಲು ಚಿಂತಿಸುತ್ತಿದೆ ಎಂದು ವರದಿಯಾಗಿದೆ.

    ಆಗಸ್ಟ್ 5 ರವರೆಗೆ ಸಿಗಲಿದೆ ಆರೋಗ್ಯ ಪ್ರಯೋಜನ ಯೋಜನೆ
    ಮರುಪರಿಶೀಲನೆಗೆ ಒಳಪಡುತ್ತಿರುವ ನೌಕರರು, ಮಾನವ ಸಂಪನ್ಮೂಲ ಮತ್ತು ಅವರ ನಾಯಕರೊಂದಿಗೆ ಒಂದು ಚರ್ಚೆಗಾಗಿ ಇಮೇಲ್ ಅನ್ನು ಸ್ವೀಕರಿಸುತ್ತಾರೆ, ಕಂಪನಿಯು ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ ಆರೋಗ್ಯ ಪ್ರಯೋಜನಗಳಂತಹ ಪ್ರಯೋಜನಗಳನ್ನು ಆಗಸ್ಟ್ 5 ರವರೆಗೆ ವಿಸ್ತರಿಸಲಿದೆ ಎಂದು ಕೃಷ್ಣ ಹೇಳಿದರು. ಕಂಪನಿಯು ಮುಂದಿನ ವರ್ಷ ಏಪ್ರಿಲ್ 29 ರವರೆಗೆ ಪ್ರಾಕ್ಟೋ ಮೂಲಕ 15 ವೈದ್ಯರ ಸಮಾಲೋಚನೆಗಳು ಮತ್ತು ರಿಯಾಯಿತಿ ರೋಗಶಾಸ್ತ್ರ ಮತ್ತು ಫಾರ್ಮಸಿ ಸೇವೆಗಳಿಗೆ ಪ್ರವೇಶವನ್ನು ವಿಸ್ತರಿಸಲಿದೆ ಎಂದು ಹೇಳಿದರು.

    ಇದನ್ನೂ ಓದಿ: Double Salary: ಇನ್ಮೇಲೆ ಡಬಲ್ ಸಂಬಳ ನೀಡುತ್ತಂತೆ ಮೈಕ್ರೋಸಾಫ್ಟ್! ಏಕೆ ಹೀಗೆ?

    ಕಳೆದ ಮೇ ತಿಂಗಳಲ್ಲಿ ಇದೇ ಯುನಿಕಾರ್ನ್ ವೇದಾಂತು ತನ್ನ 200 ಉದ್ಯೋಗಿಗಳನ್ನು ಅಥವಾ ಅದರ ಸುಮಾರು 3.5% ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಈಗ 424 ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದು ಎಡ್​ಟೆಕ್ ವಲಯದ ಯುನಿಕಾರ್ನ್​ ವೆದಾಂತುವಿನ ಎರಡನೇ ಸುತ್ತಿನ ವಜಾಗೊಳಿಸುವಿಕೆ ಆಗಿದೆ. ಈಕುರಿತು ಸುಳಿವು ನೀಡಿ  ಮನಿಕಂಟ್ರೋಲ್ ವಾಣಿಜ್ಯ ಸುದ್ದಿಜಾಲತಾಣ ಕಳೆದ ವಾರ ವರದಿ ಮಾಡಿತ್ತು.

    ಟೈಗರ್ ಗ್ಲೋಬಲ್ ಬೆಂಬಲಿತ ಕಂಪನಿಯು ಮುಂಬರುವ ತ್ರೈಮಾಸಿಕಗಳಲ್ಲಿ ಹಣಕಾಸಿನ ಕೊರತೆಯನ್ನು ನಿರೀಕ್ಷಿಸುತ್ತಿರುವುದರಿಂದ 424 ಉದ್ಯೋಗಿಗಳನ್ನು ಅಥವಾ ಸುಮಾರು 7 ಪ್ರತಿಶತದಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ಎಂದು ಯುನಿಕಾರ್ನ್ ವೇದಾಂತುವಿನ ಸಹ-ಸಂಸ್ಥಾಪಕ ಮತ್ತು ಮುಖ್ಯಸ್ಥ ಕಾರ್ಯನಿರ್ವಹಣಾಧಿಕಾರಿ ವಂಶಿಕೃಷ್ಣ ಅವರು ತಿಳಿಸಿದ್ದಾರೆ.

    ಭಾರತದ ಯುನಿಕಾರ್ನ್​ಗಳ ವಿವರ
    ಇನ್ನು ಅಂಕಿ-ಅಂಶಗಳ ವಿಚಾರಕ್ಕೆ ಬಂದರೆ, ಭಾರತದ 100 ಯುನಿಕಾರ್ನ್‌ಗಳು ಇಲ್ಲಿಯವರೆಗೆ ಸರಾಸರಿ 3,489 ಪೂರ್ಣ ಸಮಯದ ಉದ್ಯೋಗಗಳನ್ನು ಸೃಷ್ಟಿಸಿವೆ ಎನ್ನಲಾಗಿದೆ. 1,000 ಉದ್ಯೋಗಗಳ ಸೃಷ್ಟಿಯ ಶ್ರೇಣಿಯಲ್ಲಿ ನೂರು ಯುನಿಕಾರ್ನುಗಳ ಪೈಕಿ 34 ಯುನಿಕಾರ್ನ್‌ಗಳು 100 ರಿಂದ 854 ರವರೆಗೆ ಉದ್ಯೋಗಗಳನ್ನು ಸೃಷ್ಟಿಸಿವೆ. ಇನ್ನುಳಿದಂತೆ 66 ಯುನಿಕಾರ್ನುಗಳು ಒಟ್ಟು 2.84 ಮಿಲಿಯನ್ ಉದ್ಯೋಗಗಳಲ್ಲಿ 2.83 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಿವೆ ಎಂದು ಕಂಡುಬಂದಿದೆ. ಈ

    ಇದನ್ನೂ ಓದಿ: Unicorns of India: ಭಾರತದಲ್ಲಿ ಅತ್ಯಧಿಕ ಉದ್ಯೋಗ ಸೃಷ್ಟಿಸಿದ ಕಂಪನಿಗಳಿವು!

    66 ಯುನಿಕಾರ್ನ್‌ಗಳಲ್ಲಿ, ಮೊದಲ ಅಗ್ರ 10 ಯುನಿಕಾರ್ನ್‍ಗಳು ಚಾಲ್ತಿಯಲ್ಲಿರುವ 2.58 ಮಿಲಿಯನ್ ಉದ್ಯೋಗಗಳ ಪೈಕಿ ಸಿಂಹಪಾಲನ್ನು ಹೊಂದಿವೆ ಎನ್ನಲಾಗಿದೆ ಅಂದರೆ ಒಟ್ಟಾರೆ ಉದ್ಯೋಗಗಳ ಪ್ರಮಾಣದ ಒಟ್ಟು 90.5 ಪ್ರತಿಶತವನ್ನು ಹೊಂದಿವೆ ಎಂದು ತಿಳಿದುಬಂದಿದೆ.
    Published by:guruganesh bhat
    First published: