Success Story: ಅಂದು ಇದ್ದದ್ದು ಒಂದು ಟಿಫನ್ ಬಾಕ್ಸ್: ಇಂದು ಯಶಸ್ವಿ ಸಂಸ್ಥೆಯ ಚೇರ್ಮನ್!

ಇತ್ತೀಚಿಗಷ್ಟೆ ಅಗರ್ವಾಲ್ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅವರ ಮೊದಲ ಮುಂಬೈ ಭೇಟಿಯ ಸಂದರ್ಭಗಳನ್ನು ಸ್ಮರಿಸಿಕೊಳ್ಳುತ್ತ ಒಂದು ಪ್ರೇರಣಾದಾಯಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಅಂದು ತಾವು ಮುಂಬೈಗೆ ಬಂದಿಳಿದಿದ್ದ ಸಂದರ್ಭದಲ್ಲಿ ನಗರದ ವಿಕ್ಟೋರಿಯಾ ಟರ್ಮಿನಸ್ ಹಾಗೂ ಅಂದಿನ ಜನರ ಓಡಾಟದ ಬಗ್ಗೆ ತಿಳಿದುಕೊಳ್ಳುವ ಒಂದು ಹಳೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಅನಿಲ್ ಅಗರ್ವಾಲ್

ಅನಿಲ್ ಅಗರ್ವಾಲ್

  • Share this:
ಇತ್ತೀಚಿಗಷ್ಟೆ ನಮಗೆ ತಿಳಿದಿರುವಂತೆ, ಭಾರತದಲ್ಲಿ ಯುನಿಕಾರ್ನ್ ಸಂಸ್ಥೆಗಳ ಸಂಖ್ಯೆ ವೃದ್ಧಿಸುತ್ತಿದೆ ಎಂದು. ಅಂದರೆ ಜಾಗತಿಕ ಮಟ್ಟದಲ್ಲಿ ಎಲ್ಲರಿಗೂ ಆಕರ್ಷಕ ಹೂಡಿಕೆಯ (Investment) ಹಾಗೂ ಮಾರುಕಟ್ಟೆ(Market)ಯ ತಾಣವಾಗಿ ಭಾರತವು ಹಿಂದೆಂದಿಗಿಂತಲೂ ವೇಗವಾಗಿ ಆಕರ್ಷಿಸುತ್ತಿದೆ. ಅಂತೆಯೇ ಇಂದು ಭಾರತದಲ್ಲಿ ದಿನಕ್ಕೊಂದು ಕಂಪನಿ(Company)ಗಳು ಹುಟ್ಟಿಕೊಳ್ಳುತ್ತಿವೆ. ಹಾಗೆ, ನೋಡಿದರೆ ಬಹು ಜನರಿಗೆ ಇಂದು ವ್ಯಾಪಾರ-ಉದ್ದಿಮೆ (Business) ಕ್ಷೇತ್ರಗಳಲ್ಲಿ ಆಗುತ್ತಿರುವ ಬದಲಾವಣೆಗಳು, ತ್ವರಿತವಾಗಿ ಕಂಪನಿ ತೆರೆದು ಯಶಸ್ಸುಗಳಿಸಬಹುದೆಂಬ ಅನಿಸಿಕೆ ನೀಡುತ್ತದೆ. ಆದರೆ, ಇದು ನಿಜವಲ್ಲ. ಯಾವುದೇ ಒಂದು ವ್ಯಾಪಾರ ಅಥವಾ ಉದ್ದಿಮೆಯಾಗಲಿ (ಕೆಲ ವಿರಳ ಸಂದರ್ಭದಲ್ಲಿ ಒಲಿಯುವ ಅದೃಷ್ಟ ಹೊರತುಪಡಿಸಿ) ತೆರೆದ ಅಲ್ಪಾವಧಿಯಲ್ಲೇ ಯಶಸ್ಸನ್ನು (Success) ಸಾಧಿಸಲಾಗದು.

ಒಬ್ಬ ವ್ಯಕ್ತಿ ಒಂದು ಸಂಸ್ಥೆಯನ್ನು ಯಶಸ್ವಿಯಾಗಿ ಮಾಡಿದನೆಂದರೆ ಅದರ ಹಿಂದೆ ಆ ವ್ಯಕ್ತಿಯ ಪ್ರಾಮಾಣಿಕವಾದ ನಿರಂತರ ಪ್ರಯತ್ನ, ಅವನ ಬದ್ಧತೆ, ಧೈರ್ಯ, ಸೋಲನ್ನೊಪ್ಪದ ಮನಸ್ಸು ಹೀಗೆ ಹಲವಾರು ಅಂಶಗಳೆ ಹುದುಗಿರುತ್ತವೆ. ಆದರೆ, ಇವು ನಮ್ಮ ಬರಿಗಣ್ಣಿಗೆ ಕಾಣುವುದಿಲ್ಲವಷ್ಟೆ.

ಅದೆಷ್ಟೋ ಜನರು ಈಗಲೂ ಸಂಸ್ಥೆ ಸ್ಥಾಪಿಸುತ್ತಾರಾದರೂ ಅತ್ಯಲ್ಪ ಅವಧಿಯಲ್ಲೇ ಅದರಿಂದ ಲಾಭ ನಿರೀಕ್ಷೆ ಮಾಡುತ್ತಾರೆ. ಅದು ಸಾಧ್ಯವಾಗದಿದ್ದಾಗ ಅದರಲ್ಲಿ ಬದಲಾವಣೆಗಳನ್ನು ತರುವ, ಮತ್ತೆ ಮುಂದೆ ಇನ್ನಷ್ಟು ಶ್ರಮವಹಿಸುವ ಬಗ್ಗೆ ಯೋಚಿಸದೆ ಕೆಲವೆ ದಿನಗಳಲ್ಲಿ ತಮ್ಮ ಪ್ರಯತ್ನಕ್ಕೆ ತಿಲಾಂಜಲಿ ಇಟ್ಟುಬಿಡುತ್ತಾರೆ.

ಸಾವಿರರರಲ್ಲಿ ಒಬ್ಬ ವ್ಯಕ್ತಿ ತಮ್ಮ ದೃಢ ಸಂಕಲ್ಪ ಹಾಗೂ ಸತತ ಪ್ರಯತ್ನದಿಂದ ಸಾಧನೆ ಮಾಡಿ ತೋರಿಸುತ್ತಾರೆ. ಅಂತಹ ವ್ಯಕ್ತಿಗಳ ಪೈಕಿ ಒಬ್ಬರಾಗಿದ್ದಾರೆ ವೇದಾಂತಾ ಸಂಸ್ಥೆಯ ಚೇರ್ಮನ್ ಆಗಿರುವ ಅನಿಲ್ ಅಗರ್ವಾಲ್(Vedanta Chairman Anil Agarwal).

ಇದನ್ನೂ ಓದಿ: Success Story: ಟೀ ಮಾರುತ್ತಿದ್ದ ವ್ಯಕ್ತಿ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿದ್ದೇಗೆ? ಇಲ್ಲಿದೆ ರೋಚಕ ಕಥೆ

ಮುಂಬೈಗೆ ಬಂದಿಳಿದ ದಿನದ ಮೆಲುಕು

ನಿಮಗೆಲ್ಲ ತಿಳಿದಿರುವಂತೆ ಇಂದು ಅನಿಲ್ ಅಗರ್ವಾಲ್ ಅವರ ಹೆಸರು ಕಾರ್ಪೊರೇಟ್ ಜಗತ್ತಿನ ದೊಡ್ಡ ದೊಡ್ಡ ಹೆಸರುಗಳಲ್ಲಿ ಒಂದು. ಆದರೆ, ನಿಮಗೆ ಗೊತ್ತೆ, ಬಹು ವರ್ಷಗಳ ಹಿಂದೆ ಇವರೂ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರು. ಬಿಹಾರದ ಪಾಟ್ನಾ ನಗರದಲ್ಲಿದ್ದ ಇವರ ಕಣ್ಣುಗಳಲ್ಲಿ ಅಪಾರ ಕನಸುಗಳಿದ್ದವು. ತಮ್ಮ ಕನಸುಗಳನ್ನು ಬೆನ್ನು ಹತ್ತಿ ಇವರು ತಮ್ಮ ಬಳಿ ಇದ್ದ ಕೇವಲ ಒಂದು ಟಿಫನ್ ಬಾಕ್ಸ್ ಹಾಗೂ ಮಲಗಲು ಒಂದು ಹಾಸಿಗೆಗಳನ್ನಷ್ಟೆ ಹಿಡಿದುಕೊಂಡು ಕನಸಿನ ನಗರಿ ಮುಂಬೈಗೆ ಬಂದಿಳಿದಿದ್ದರು.

ಇತ್ತೀಚಿಗಷ್ಟೆ ಅಗರ್ವಾಲ್ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅವರ ಮೊದಲ ಮುಂಬೈ ಭೇಟಿಯ ಸಂದರ್ಭಗಳನ್ನು ಸ್ಮರಿಸಿಕೊಳ್ಳುತ್ತ ಒಂದು ಪ್ರೇರಣಾದಾಯಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಅಂದು ತಾವು ಮುಂಬೈಗೆ ಬಂದಿಳಿದಿದ್ದ ಸಂದರ್ಭದಲ್ಲಿ ನಗರದ ವಿಕ್ಟೋರಿಯಾ ಟರ್ಮಿನಸ್ ಹಾಗೂ ಅಂದಿನ ಜನರ ಓಡಾಟದ ಬಗ್ಗೆ ತಿಳಿದುಕೊಳ್ಳುವ ಒಂದು ಹಳೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಮನದಾಳದ ಭಾವನೆ ಹಂಚಿಕೊಂಡ ಅನಿಲ್ ಅಗರ್ವಾಲ್

ಚಿತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವೇದಾಂತಾ ಸಂಸ್ಥೆಯ ಚೇರ್ಮನ್ ಆ ಬಗ್ಗೆ ತಮ್ಮ ಮನದಾಳದ ಭಾವನೆಗಳನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ.

ತಮ್ಮ ಪೋಸ್ಟ್ ನಲ್ಲಿ ಅವರು "ಲಕ್ಷಾಂತರ ಜನರು ತಮ್ಮ ಅದೃಷ್ಟ ಪ್ರಯತ್ನಿಸಲು ಮುಂಬೈಗೆ ಕಾಲಿಡುತ್ತಾರೆ. ಅಂಥವರಲ್ಲಿ ನಾನು ಒಬ್ಬನಾಗಿದ್ದೆ. ನಾನು ಬಿಹಾರವನ್ನು ಬಿಟ್ಟಾಗ ನನ್ನ ಬಳಿ ಕೇವಲ ಒಂದು ಟಿಫನ್ ಬಾಕ್ಸ್, ಹಾಸಿಗೆ ಹಾಗೂ ಕಣ್ಣಲ್ಲಿ ಕನಸುಗಳಿದ್ದವು. ನಾನು ವಿಕ್ಟೋರಿಯಾ ಟರ್ಮಿನಸ್ ಗೆ ಪ್ರಥಮ ಬಾರಿ ಬಂದಿಳಿದಿದ್ದೆ" ಎಂದು ಬರೆದಿದ್ದು ವಿಕ್ಟೋರಿಯಾ ಟರ್ಮಿನಸ್ ಕಟ್ಟಡದ ಹಳೆಯ ಕಪ್ಪು-ಬಿಳುಪು ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

ಹೇಗೆ ಅವರು ತಮ್ಮ ಜೀವನದಲ್ಲಿ ಪ್ರಪ್ರಥಮ ಬಾರಿಗೆ ಡಬಲ್ ಡೆಕ್ಕರ್ ಬಸ್ಸು, ಕಪ್ಪು-ಹಳದಿ ಬಣ್ಣಗಳ ಟ್ಯಾಕ್ಸಿಗಳನ್ನು ನೋಡಿ ವಿಸ್ಮಯಗೊಂಡಿದ್ದರು ಎಂಬುದರ ಬಗ್ಗೆ ಮಾತನಾಡಿದ್ದಾರೆ. ಏಕೆಂದರೆ ಆ ಸಂದರ್ಭದಲ್ಲಿ ಅವರು ಕೇವಲ ಚಲನಚಿತ್ರಗಳಲ್ಲೇ ಇವುಗಳನ್ನು ನೋಡಿದ್ದು ಮುಂಬೈಗೆ ಬಂದಾಗ ಪ್ರಥಮ ಬಾರಿಗೆ ಬರಿಗಣ್ಣುಗಳಿಂದಲೇ ನೋಡಿದ್ದರ ಅನುಭವ ಬಗ್ಗೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:  Success Story: 6 ವರ್ಷಗಳಲ್ಲಿ 12 ಸರ್ಕಾರಿ ಹುದ್ದೆ; ಅನೇಕರಿಗೆ ಸ್ಪೂರ್ತಿ ಈ ಐಪಿಎಸ್ ಅಧಿಕಾರಿಯ ಯಶೋಗಾಥೆ

ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್

ಅಷ್ಟೆ ಅಲ್ಲದೆ, ಈ ಪೋಸ್ಟ್ ಮೂಲಕ ಅವರು ಇಂದಿನ ಯುವ ಜನಾಂಗಕ್ಕೂ ಕಿವಿ ಮಾತೊಂದನ್ನು ಹೇಳುತ್ತಾರೆ. ಅವರು ಹೇಳುತ್ತಾರೆ, "ಶ್ರಮಪಟ್ಟು ಕೆಲಸ ಮಾಡಿ ಹಾಗೂ ನಿಮ್ಮ ಗುರಿಯನ್ನು ತಲುಪಿ" ಎಂದು. ಅವರ ಈ ಪೋಸ್ಟ್ ಈಗಾಗಲೇ ಸಾಕಷ್ಟು ಮೆಚ್ಚುಗೆಗಳನ್ನು ಗಳಿಸಿದೆ ಹಾಗೂ ಗಳಿಸುತ್ತಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಈ ಸಾಧನೆಯನ್ನು ಬಹಳಷ್ಟು ಕೊಂಡಾಡುತ್ತಿದ್ದಾರೆ. ಹಲವರು ಅನಿಲ್ ಅಗರ್ವಾಲ್ ಅವರು ಇಂದಿನ ಭಾರತದ ಯುವಜನಾಂಗಕ್ಕೆ ಸ್ಫೂರ್ತಿ ಎಂದು ಪ್ರಶಂಸಿಸಿದ್ದಾರೆ.

ಸ್ವತಃ ಅನಿಲ್ ಅಗರ್ವಾಲ್ ಅವರೊಂದಿಗೆ ಕೆಲಸ ನಿರ್ವಹಿಸಿದವರೂ ಸಹ ಅವರ ವ್ಯಕ್ತಿತ್ವ ಹಾಗೂ ಅವರಲ್ಲಿರುವ ಪ್ರಾಮಾಣಿಕತೆಯನ್ನು ವರ್ಣಿಸುತ್ತಲೇ ಇದ್ದಾರೆ. ಈ ಬಗ್ಗೆ ಬಹುಶಃ ಅವರೊಂದಿಗೆ ಈ ಹಿಂದೆ ಕೆಲಸ ಮಾಡಿರಬಹುದಾದ ಬಳಕೆದಾರರೊಬ್ಬರು ನುಡಿಯುತ್ತಾರೆ, "ಅವರೊಬ್ಬ ದೂರದೃಷ್ಟಿಯುಳ್ಳ ವ್ಯಕ್ತಿ, ಚಾಣಾಕ್ಷ ಜನರನ್ನು ಭೇಟಿಯಾಗಿ ಹೊಸ ಹೊಸ ಐಡಿಯಾ ಪಡೆಯುವುದಲ್ಲದೆ ಪ್ರತಿಭೆಗಳನ್ನು ಗುರುತಿಸುವಲ್ಲಿ ನಿಪುಣರು".

ವೇದಾಂತಾ ರಿಸೌರ್ಸಸ್ ಎಂಬುದು ಇಂದು ಜಾಗತಿಕ ಮಟ್ಟದ ಬಹು ದೊಡ್ಡ ಮೈನಿಂಗ್ ಕಂಪನಿಯಾಗಿದೆ. ಮೂಲವಾಗಿ ಲಂಡನ್ ನಲ್ಲಿ ನೆಲೆಸಿರುವ ಈ ಸಂಸ್ಥೆಯನ್ನು ಅಗರ್ವಾಲ್ ಅವರು 1970ರಲ್ಲಿ ಸ್ಥಾಪಿಸಿದ್ದರು.
Published by:Mahmadrafik K
First published: