• Home
  • »
  • News
  • »
  • business
  • »
  • Fish Farming: ದಂಪತಿಗಳ ಕೈ ಹಿಡಿದ ಫಿಶ್ ಫಾರ್ಮಿಂಗ್, ಲಕ್ಷ ಲಕ್ಷ ಸಂಪಾದನೆ!

Fish Farming: ದಂಪತಿಗಳ ಕೈ ಹಿಡಿದ ಫಿಶ್ ಫಾರ್ಮಿಂಗ್, ಲಕ್ಷ ಲಕ್ಷ ಸಂಪಾದನೆ!

ಮೀನು ಸಾಕಣೆ

ಮೀನು ಸಾಕಣೆ

ನೆರೆಹೊರೆಯ ವಾಟ್ಸಾಪ್ ಗುಂಪಿನಲ್ಲಿರುವ (WhatsApp Groups) ಜನರು ಇವರ ಮೊದಲ ಗ್ರಾಹಕರು. 50 ರೂ ಹೆಚ್ಚುವರಿ ಶುಲ್ಕದಲ್ಲಿ ಅವರು ಶುದ್ಧ ಮೀನುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ

  • Share this:

ಮೀನು ಸಾಕಣೆ (Fish Farming) ಒಂದೊಳ್ಳೆ ಲಾಭದಾಯಕ ವ್ಯವಹಾರ. ಆದರೆ ಸರಿಯಾದ ನಿರ್ವಹಣೆ ಮತ್ತು ಯೋಜನೆ ಇರಬೇಕು. ಮೀನು ಒಂದು ಪೌಷ್ಠಿಕ ಆಹಾರವಾಗಿದ್ದು (Protein Rich), ನಮ್ಮ ದೇಹದ ದೃಢತೆಗೆ ಮತ್ತು ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಇತರೆ ಮಾಂಸಗಳಿಗಿಂತ ಉತ್ತಮ ಮತ್ತು ಕಡಿಮೆ ಖರ್ಚಿನಲ್ಲಿ ದೊರೆಯುತ್ತದೆ. ಹೀಗಾಗಿ ಮೀನಿಗೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಅದರಲ್ಲೂ ಫ್ರೆಶ್ ಮೀನಿಗೆ ಇನ್ನಿಲ್ಲದ ಡಿಮ್ಯಾಂಡ್. ಮೀನು ಸಾಕಾಣಿಕೆ ವ್ಯವಹಾರ (Fish Farming Business) ಲಾಭದಾಯಕವಾಗಿದ್ದು, ಕೇರಳದ ದಂಪತಿಗಳು (Kerala Couple) ಇದರಲ್ಲಿ ಯಶಸ್ಸು ಕಾಣುತ್ತಿದ್ದಾರೆ.


ಹೌದು, ಮೀನು ಸಾಕಣಿಕೆಯಲ್ಲಿ ಬಯೋಫ್ಲೋಕ್ ತಂತ್ರವನ್ನು ಬಳಸಿ, ದಂಪತಿಗಳು ಒಂದೇ ಕೊಯ್ಲಿಗೆ ರೂ 1 ಲಕ್ಷ ಗಳಿಸಿದ್ದಾರೆ. ಟಿಲಾಪಿಯಾ ಮೀನು ಸಾಕಣೆಯಲ್ಲಿ ಬಯೋಫ್ಲೋಕ್ ತಂತ್ರಜ್ಞಾನವನ್ನು (Biofloc technology) ಬಳಸಿ ಆರು ತಿಂಗಳೊಳಗೆ 600 ಕೆಜಿಗಿಂತ ಹೆಚ್ಚು ಮೀನು ಮಾರಾಟ ಮಾಡಿದ್ದಾರೆ. ಬಯೋಫ್ಲೋಕ್ ತಂತ್ರಜ್ಞಾನ ಎಂದರೆ ಕಡಿಮೆ ನೀರಿನ ಜಾಗದಲ್ಲಿ ಹೆಚ್ಚು ಮೀನುಗಳನ್ನು ಬೆಳೆಸುವುದು.


ಎರ್ನಾಕುಳಂ ಮೂಲದ ದಂಪತಿಯ ಮೀನಿನ ಬ್ಯುಸಿನೆಸ್


ಕೇರಳದ ಎರ್ನಾಕುಲಂ ಮೂಲದ ದಂಪತಿಗಳಾದ ರಮಿತಾ ದಿನು ಮತ್ತು ದಿನು ತಂಕನ್ ಅವರು ಹೆಚ್ಚುವರಿ ಆದಾಯದ ಮೂಲವಾಗಿ ಮತ್ತು ಸಾಂಕ್ರಾಮಿಕ ರೋಗದಿಂದಾಗಿ ಸಂಭವಿಸಿದ ಆರ್ಥಿಕ ಅಸಮತೋಲನವನ್ನು ಸರಿದೂಗಿಸಲು ಮೀನು ಕೃಷಿಯನ್ನು ಪ್ರಾರಂಭಿಸಿದರು. ದಿನು ಸಣ್ಣ ವ್ಯಾಪಾರ ನಡೆಸುತ್ತಿದ್ದರು ಮತ್ತು ರಮಿತಾ ಅರೆಕಾಲಿಕ ಫ್ರೆಂಚ್ ಬೋಧಕರಾಗಿ (French Teacher) ಕೆಲಸ ಮಾಡುತ್ತಿದ್ದರು.


ಬಯೋಫ್ಲೋಕ್ ತಂತ್ರಜ್ಞಾನ


2020 ರಲ್ಲಿ ಲಾಕ್‌ಡೌನ್ ಸಮಯದಲ್ಲಿ ಕುಟುಂಬದ ಸ್ನೇಹಿತ, ಕೇಂದ್ರ ಮೀನುಗಾರಿಕೆ ಸಂಶೋಧನಾ ಕೇಂದ್ರದ ಮಾಜಿ ಉಪ ನಿರ್ದೇಶಕ ಶಾಜಿ ಅವರ ಮೂಲಕ ಮೀನು ಸಾಕಣೆ ಬಗ್ಗೆ ತಿಳಿದುಕೊಂಡರು. ಶಾಜಿ ಇವರಿಗೆ ಬಯೋಫ್ಲೋಕ್ ತಂತ್ರಜ್ಞಾನವನ್ನು ಸಹ ಪರಿಚಯಿಸಿದ್ದರು. ನಂತರ ತಜ್ಞರ ಮಾರ್ಗದರ್ಶನದಲ್ಲಿ, ದಂಪತಿಗಳು ತಮ್ಮ ಹಿತ್ತಲಿನಲ್ಲಿ ಟ್ಯಾಂಕ್ ನಿರ್ಮಿಸಿ 1,500 ಟಿಲಾಪಿಯಾ ಮೀನು ಮರಿಗಳನ್ನು ಹಾಕಿದ್ದರು, ಪ್ರಸ್ತುತ ದಂಪತಿಗಳು ಇದರಲ್ಲಿ ಯಶಸ್ವಿಯಾಗಿದ್ದು, ಮೊದಲ ಬೇಟೆಯಲ್ಲಿ 1 ಲಕ್ಷ ರೂ ಸಂಪಾದಿಸಿದ್ದಾರೆ.


ಬಯೋಫ್ಲೋಕ್ ತಂತ್ರಜ್ಞಾನದಿಂದಾಗಿ “ಆರು ತಿಂಗಳೊಳಗೆ, ಪ್ರತಿ ಮೀನು ಸರಾಸರಿ 350-400 ಗ್ರಾಂ ಗಾತ್ರಕ್ಕೆ ಬೆಳೆಯಿತು. ಮೊದಲ ಇಳುವರಿಯನ್ನು ಬೇಗ ಮಾರಾಟ ಮಾಡಿದ್ದರಿಂದ ಕೆ.ಜಿ.ಗೆ 300 ರೂ.ಗೆ ಮಾರಾಟ ಮಾಡಲು ಸಾಧ್ಯವಾಯಿತು’ ಎನ್ನುತ್ತಾರೆ ರಮಿತಾ.


ಮನೆಬಾಗಿಲಿಗೆ ಬಂದ ಗ್ರಾಹಕರು


ನೆರೆಹೊರೆಯ ವಾಟ್ಸಾಪ್ ಗುಂಪಿನಲ್ಲಿರುವ (WhatsApp Groups) ಜನರು ಇವರ ಮೊದಲ ಗ್ರಾಹಕರು. 50 ರೂ ಹೆಚ್ಚುವರಿ ಶುಲ್ಕದಲ್ಲಿ ಅವರು ಶುದ್ಧ ಮೀನುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಪ್ರಸ್ತುತ ಎರಡನೇ ಕೊಯ್ಲಿಗೆ ಸಮಯವಾಗಿದ್ದು ಮತ್ತು ಇಬ್ಬರೂ ಅದರ ತಯಾರಿಯಲ್ಲಿ ನಿರತರಾಗಿದ್ದೇವೆ ಎಂದು ದಂಪತಿ ಹೇಳುತ್ತಾರೆ.


ಇದನ್ನೂ ಓದಿ: ಒಂದು ಮೀನು, 17 ಕೆಜಿ: ಕೃಷ್ಣಾ ನದಿಯಲ್ಲಿ ಮೀನುಗಾರರಿಗೆ ಬಂಪರ್, ಭಾರೀ ಗಾತ್ರದ ಮೀನು ಎಳೆದು ತರುವಷ್ಟರಲ್ಲಿ ಬೇಸ್ತು ಬಿದ್ದ ಬೆಸ್ತರು!


ದಂಪತಿಗಳು ಟ್ಯಾಂಕ್ ಸ್ಥಾಪಿಸಲು, ಮೀನಿನ ಮರಿ ಕೊಳ್ಳಲು ಮತ್ತು ಇತರ ಅವಶ್ಯಕತೆಗಳನ್ನು ಪೂರೈಸಲು ಸುಮಾರು 1.6 ಲಕ್ಷ ರೂಪಾಯಿ ಹೂಡಿಕೆ ಮಾಡಿ ಸಬ್ಸಿಡಿ ಮತ್ತು ಕೃಷಿಗಾಗಿ ಪರವಾನಗಿ ಪಡೆದರು. ಮೀನುಗಾರಿಕೆ ಇಲಾಖೆಯಿಂದ ಮೀನು ಮರಿಗಳನ್ನು ಸರಬರಾಜು ಮಾಡಲಾಗಿದ್ದು, ಸೂಚನೆಯಂತೆ ನಿರ್ಮಿಸಲಾದ ಟ್ಯಾಂಕ್‌ಗೆ ಮೀನುಗಳನ್ನ ಸ್ಥಳಾಂತರಿಸಲಾಯಿತು.


ಮೀನು ಸಾಕಾಣಿಕೆ ಹೇಗೆ?


1.5 ಅಡಿ ಎತ್ತರವಿರುವ 8 ಮೀಟರ್ ವ್ಯಾಸದ ತೊಟ್ಟಿಗೆ 2,000 ಮೀನು ಮರಿಗಳನ್ನು ಸೇರಿಸಬಹುದು. ಈ ಕೃಷಿಗೆ ಸಂಬಂಧಿಸಿದ ಸಂಪೂರ್ಣ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ಮಾಡಬೇಕು. ಏಕೆಂದರೆ ಇದು ಕೃತಕ ಸೆಟಪ್ ಆಗಿರುವುದರಿಂದ ಮೀನುಗಳ ಆರೋಗ್ಯಕರ ಇಳುವರಿಗಾಗಿ pH ಮತ್ತು ಅಮೋನಿಯ ಮಟ್ಟವನ್ನು ನಿರಂತರವಾಗಿ ಪರಿಶೀಲಿಸುವುದು ಅತ್ಯಗತ್ಯ.


ಇದನ್ನೂ  ಓದಿ: ಮೀನು ಸಾಕಾಣಿಕೆ ಮಾಡಿದ್ರೆ ಸರ್ಕಾರದಿಂದ ಭರ್ಜರಿ ಸಬ್ಸಿಡಿ


“ಬಯೋಫ್ಲೋಕ್ ತಂತ್ರಜ್ಞಾನವು ಸಂಕೀರ್ಣವೆಂದು ತೋರುತ್ತದೆ ಆದರೆ ಇದು ಸರಳವಾಗಿದೆ. ಆಸಕ್ತಿ ಮತ್ತು ಕಾಳಜಿಯಿಂದ ನಿರ್ವಹಿಸಿದರೆ ಲಾಭ ಖಚಿತ' ಎಂದು ದಿನು ಹೇಳುತ್ತಾರೆ.


ಕರೆಂಟ್ ನಿರಂತರ ಲಭ್ಯವಿರಬೇಕು


“ಮೀನಿನ ಮರಿಗಳನ್ನು ಸೇರಿಸುವ ಮೊದಲು ಕ್ರಿಸ್ಟಲ್ ಕಚ್ಚಾ ಉಪ್ಪನ್ನು ಪರೀಕ್ಷಿಸಿದ ನೀರಿನಲ್ಲಿ ಬೆರೆಸಲಾಗುತ್ತದೆ. ಕೃತಕ ಆಮ್ಲಜನಕವನ್ನು ಒದಗಿಸಲು ನಾವು 24/7 ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಬೇಕು. ಹೀಗಾಗಿ, ಹೆಚ್ಚುವರಿ ಬ್ಯಾಟರಿಯೊಂದಿಗೆ ಇನ್ವರ್ಟರ್ ಅತ್ಯಗತ್ಯವಾಗಿರುತ್ತದೆ. ನೀರಿನ ಪಿಹೆಚ್ ಮೌಲ್ಯ(Ph Value) ಮತ್ತು ಅಮೋನಿಯಾವನ್ನು ಪ್ರತಿದಿನ ಪರಿಶೀಲಿಸಬೇಕು ಮತ್ತು ಯಾವುದೇ ವ್ಯತ್ಯಾಸವಿದ್ದರೆ, ಬೆಲ್ಲವನ್ನು ಬೆರೆಸುವಂತಹ ಸರಳವಾದ ಮಾರ್ಗಗಳಿವೆ ಎಂದು ದಂಪತಿ ಸಲಹೆ ನೀಡಿದ್ದಾರೆ.


ರೋಗ ನಿರೋಧಕ ಶಕ್ತಿ ಹೆಚ್ಚಿಸೋ ಮೀನು ಖಾದ್ಯ


ಟಿಲಾಪಿಯಾ ಮೀನುಗಳು ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದು, ಕೊಳಕು ನೀರಿನಲ್ಲಿಯೂ ಬದುಕುತ್ತವೆ ಆದರೆ ಅದರ ರುಚಿ ವಿಭಿನ್ನವಾಗಿರುತ್ತದೆ ಎಂದು ದಂಪತಿ ವಿವರಿಸುತ್ತಾರೆ. ಹಾಗಾಗಿ ಇವುಗಳನ್ನು ಉತ್ತಮ ನೀರಿನಲ್ಲಿ ಬೆಳೆಸಿ ಹೆಚ್ಚು ಫ್ರೆಶ್ ಮೀನುಗಳನ್ನು ಗ್ರಾಹಕರಿಗೆ ಒದಗಿಸುವುದು ನಮ್ಮ ಉದ್ದೇಶ ಅಂತಾರೆ ದಂಪತಿಗಳು

Published by:Divya D
First published: