ಹವಾಮಾನ ವೈಪರೀತ್ಯ (Weather Extremes) ಹಾಗೂ ಮಾನವನ ಚಟುವಟಿಕೆಗಳಿಂದ ಕೃಷಿಭೂಮಿಗಳು (Agriculture) ಹಾಳಾಗುತ್ತಿವೆ ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದ್ದು ಇದೀಗ ಮಣ್ಣು (Soil) ಹಾಗೂ ಕೃಷಿಯನ್ನು ಉಳಿಸಲು ಬೆಳೆಸಲು ಪರ್ಯಾಯ ವಿಧಾನವನ್ನು ಜಾರಿಗೆ ತರುತ್ತಿದ್ದಾರೆ. ಕ್ಯಾಲಿಫೋರ್ನಿಯಾ (California) ಮರುಭೂಮಿಯು ತೇವಾಂಶವನ್ನು ಹಿಡಿದಿಟ್ಟುಕೊಂಡು ಹಣ್ಣು ಬೆಳೆಯಲು ಸಹಕಾರಿಯಾಗುವಂತೆ ದ್ರವ ಜೇಡಿಮಣ್ಣಿನ ವಿಧಾನವನ್ನು ಅನುಸರಿಸುತ್ತಿದ್ದರೆ, ಮಲೇಷ್ಯಾದಲ್ಲಿನ ಕಂಪನಿಯು ಹಾರುವ ಕೀಟಗಳಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವತ್ತ ಗಮನ ಹರಿಸುತ್ತಿದೆ.
ಹೊಸ ಹೊಸ ವಿಧಾನಗಳ ಬಳಕೆ
ಸಸ್ಯಗಳು ಮತ್ತು ಮರದ ತ್ಯಾಜ್ಯಗಳ ಸುಟ್ಟ ಅವಶೇಷಗಳನ್ನು ಬಳಸಿಕೊಂಡು ಕೆನಡಾದ ವಿಜ್ಞಾನಿ ವಿಕ್ಕಿ ಲೆವೆಸ್ಕ್ಯೂ ಸೇಬಿನ ಬೆಳೆಯಲ್ಲಿ ಕ್ರಾಂತಿಯನ್ನುಂಟು ಮಾಡುವ ಸಾಹಸದಲ್ಲಿದ್ದಾರೆ.
ಜಾಗತಿಕ ಬೆಳೆ ಉತ್ಪಾದನೆಯಲ್ಲಿ 10% ನಷ್ಟಕ್ಕೆ ಕಾರಣ
ಕಡಿಮೆ ಉಳುಮೆ, ಅಕಾಲದಲ್ಲಿ ಬೆಳೆಗಳ ಬಿತ್ತನೆ, ಆಗಾಗ್ಗೆ ಕಾಣಿಸಿಕೊಳ್ಳುವ ಬರಗಾಲ, ಪ್ರವಾಹ ಹಾಗೂ ತಾಪಮಾನ ವೈಪರೀತ್ಯಗಳಿಗೆ ಹೊಂದಿಕೆಯಾಗುತ್ತಿಲ್ಲ ಹಾಗೂ ಮಣ್ಣಿನ ಸಂರಕ್ಷಣಾ ತಂತ್ರಗಳು ಇದೀಗ ಅಷ್ಟೊಂದು ಪರಿಣಾಕಾರಿ ಎಂದೆನಿಸುತ್ತಿಲ್ಲ. ಮಣ್ಣಿನ ಸವಕಳಿಯು ಆಹಾರವನ್ನು ಉತ್ಪಾದಿಸುವ ಕೊಳೆಯ ಸಾಮರ್ಥ್ಯವನ್ನು ಕ್ಷೀಣಿಸುತ್ತಿದೆ ಮತ್ತು 2050 ರ ವೇಳೆಗೆ ಜಾಗತಿಕ ಬೆಳೆ ಉತ್ಪಾದನೆಯಲ್ಲಿ 10% ನಷ್ಟಕ್ಕೆ ಕಾರಣವಾಗಬಹುದು ಎಂದು UN ಆಹಾರ ಮತ್ತು ಕೃಷಿ ಸಂಸ್ಥೆ ತಿಳಿಸಿದೆ.
ಮಣ್ಣಿನ ಸಂರಕ್ಷಣೆಗೆ ಹಾಗೂ ಮಣ್ಣಿನ ಸವಕಳಿಯನ್ನು ತಡೆಯುವ ಕೆಲವೊಂದು ಪರಿಹಾರಗಳು ಲಾಭದಾಯಕ ಎಂದು ಪರಿಣಾಮಕಾರಿ ಎಂದು ದೃಢೀಕರಣಗೊಂಡರೆ ಈ ಪ್ರಕ್ರಿಯೆ ಸಾಂಪ್ರದಾಯಿಕ ವಿಧಾನಗಳಿಗೆ ಅನ್ವಯವಾಗಬಹುದು ಎಂಬುದು ವಿಜ್ಞಾನಿಗಳ ಅನಿಸಿಕೆಯಾಗಿದೆ.
ಮಣ್ಣಿನ ಆರೋಗ್ಯ ಕಾಪಾಡುವ ಯೋಜನೆಗಳು
ಬಯೋಚಾರ್, ದ್ರವ ಜೇಡಿಮಣ್ಣು ಹಾಗೂ ಹಾರುವ ಕೀಟಗಳ ಹಿಕ್ಕೆಗಳು ಸೀಮಿತ ವಾಣಿಜ್ಯ ಉತ್ಪಾದನೆಗೆ ಕೊಡುಗೆ ನೀಡಿವೆ. ಮಣ್ಣಿನ ಸ್ಥಿತಿ ವರ್ಷದಿಂದ ವರ್ಷಕ್ಕೆ ಹದಗೆಡುತ್ತಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಮಣ್ಣಿನ ಆರೋಗ್ಯ ಕಾಪಾಡುವ ಇಂತಹ ಯೋಜನೆಗಳು ವೇಗಗೊಳ್ಳುತ್ತಿವೆ ಎಂಬುದು ದ್ರವ ಜೇಡಿ ಮಣ್ಣಿನ ಕಂಪನಿ ಡೆಸರ್ಟ್ ಕಂಟ್ರೋಲ್ (DSRT.OL) ನ ಮುಖ್ಯ ಕಾರ್ಯನಿರ್ವಾಹಕ ಓಲೆ ಕ್ರಿಸ್ಟಿಯನ್ ಸಿವರ್ಟ್‌ಸೆನ್ ಅಭಿಮತವಾಗಿದೆ.
ವಿಶ್ವದ ಅತಿದೊಡ್ಡ ಬೀಜಕಂಪನಿಯಾಗಿರುವ ಬೇಯರ್ ಎಜಿ (BAYGn.DE) ಮಣ್ಣಿನ ಪುನರ್ ಉತ್ಪಾದನೆಯ ಹೊಸ ವಿಧಾನಕ್ಕಾಗಿ ಬೇರೆಬೇರೆ ವಿಧಾನಗಳನ್ನು ಅನುಸರಿಸುತ್ತಿರುವ ಕಂಪನಿಗಳಲ್ಲಿ ಒಂದಾಗಿದೆ ಎಂದು ಬೇಯರ್‌ನ ಮುಖ್ಯಸ್ಥರಾದ ಮ್ಯಾಥಿಯಾಸ್ ಬರ್ನಿಂಗರ್ ಹೇಳಿಕೆಯಾಗಿದೆ.
ಡಾರ್ಕ್ ಅರ್ಥ್ಸ್ ಎಂದರೇನು?
ಮಣ್ಣಿನ ಪೋಷಣೆಯನ್ನು ಹೆಚ್ಚಿಸಲು ಕಾರ್ಬನ್ ಸಮೃದ್ಧ ಉತ್ಪನ್ನವನ್ನು ರಚಿಸುವ ಕೃತಕ ವಿಧಾನವಾದ ಬಯೋಚಾರ್, ಇದರೊಂದಿಗೆ ಅಡುಗೆ ತ್ಯಾಜ್ಯ, ಪ್ರಾಣಿಗಳ ಕೊಳೆತ ಮತ್ತು ಗೊಬ್ಬರದ ಉಪಉತ್ಪನ್ನವಾಗಿ ಬಳಕೆಯಾದ ಅಮೆಜಾನ್ ಮಳೆಕಾಡಿನ ಅಸಾಧಾರಣವಾದ ಫಲವತ್ತಾದ ಮಣ್ಣಿನ ಅಂಶಗಳಾದ ಡಾರ್ಕ್ ಅರ್ಥ್ಸ್ ಪ್ರಯೋಗ ನಡೆಯುತ್ತಿದೆ.
ಸಸ್ಯಪೋಷಕ ಇಂಗಾಲವನ್ನು ಪಡೆದುಕೊಳ್ಳಲು ಬಯೋಚಾರ್ ವಿಧಾನ ಉತ್ತಮವಾಗಿದೆ ಹಾಗೂ ಈ ವಿಧಾನ ನೀರಿನ ಸ್ಪಂಜಿನಂತೆ ಕಾರ್ಯನಿರ್ವಹಿಸುತ್ತದೆ ಎಂದು ಲೆವೆಸ್ಕ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಲೇರಿಯಾ ಔಷಧಿ ಸಸ್ಯಕ್ಕಿದೆ ಸಿಕ್ಕಾಪಟ್ಟೆ ಡಿಮ್ಯಾಂಡ್, ಈ ಬೆಳೆಯಿಂದ ರೈತರ ಬದುಕೇ ಬದಲಾಗುತ್ತೆ!
2012 ರಲ್ಲಿ ಪ್ರಾರಂಭವಾದ ಅವರ ಸಂಶೋಧನೆಯು, ಬಯೋಚಾರ್‌ನೊಂದಿಗೆ ಸಂಸ್ಕರಿಸಿದ ಮಣ್ಣಿನ ಮಣ್ಣು ತೀವ್ರವಾಗಿ ಕಡಿಮೆ ನೈಟ್ರಸ್ ಆಕ್ಸೈಡ್ ಅನ್ನು ಹೊರಸೂಸುತ್ತದೆ ಎಂಬುದನ್ನು ತಿಳಿಸಿದೆ. ಇದು ವಾತಾವರಣಕ್ಕೆ ಪ್ರಯೋಜನಕಾರಿಯಾಗಿದ್ದು ಸಸ್ಯಗಳ ಬೆಳವಣಿಗೆಗೆ ಇಂಗಾಲಕ್ಕೆ ಅವಕಾಶವನ್ನೀಯುತ್ತದೆ. ನಾರ್ವೆ ಮೂಲದ ಡೆಸರ್ಟ್ ಕಂಟ್ರೋಲ್ ಮಣ್ಣನ್ನು ಹೆಚ್ಚಿಸಲು 18 ವರ್ಷಗಳು ಮತ್ತು $25 ಮಿಲಿಯನ್ ನಷ್ಟು ದ್ರವ ಜೇಡಿಮಣ್ಣನ್ನು ಅಭಿವೃದ್ಧಿಪಡಿಸಿದೆ.
ಮರಿಹುಳುಗಳ ಹಿಕ್ಕೆ ಮಾರಾಟ
2015 ರಲ್ಲಿ ಪ್ರಾರಂಭವಾದ ನ್ಯೂಟ್ರಿಷನ್ ಟೆಕ್ನಾಲಜೀಸ್, ಮಲೇಷ್ಯಾದಲ್ಲಿ ಮಾಸಿಕ ಸರಾಸರಿ 200 ಟನ್ ಮರಿಹುಳುಗಳ ಹಿಕ್ಕೆಯನ್ನು ಮಾರಾಟ ಮಾಡುತ್ತದೆ, ಎಲೆಗಳ ಸೊಪ್ಪುಗಳು, ಸೌತೆಕಾಯಿಗಳು ಮತ್ತು ಹಣ್ಣುಗಳಿಗಳಿಗೆ ಈ ಹಿಕ್ಕೆಯನ್ನು ರೈತರು ಬಳಸುತ್ತಿದ್ದಾರೆ ಎಂದು ಕಂಪನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಮಾರ್ಟಿನ್ ಜೊರಿಲ್ಲಾ ತಿಳಿಸಿದ್ದಾರೆ. ಕಂಪನಿಯು ಸೆಪ್ಟೆಂಬರ್‌ನಲ್ಲಿ $20 ಮಿಲಿಯನ್ ಅನ್ನು ಸಂಗ್ರಹಿಸಿದೆ.
ಹೆಚ್ಚಿನ ಮಲೇಷಿಯಾದ ರಸಗೊಬ್ಬರ ಉತ್ಪಾದಕರು ಇದೀಗ ಮರಿಹುಳಗಳ ಹಿಕ್ಕೆಯನ್ನು ಮಾರಾಟ ಮಾಡುತ್ತಿದ್ದಾರೆ ಎಂಬುದು ಜೊರಿಲ್ಲಾ ಹೇಳಿಕೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ