• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Share Market: ಯುಎಸ್ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ; ಈ ಬಿಲಿಯನೇರ್‌ಗಳು ಕಳೆದುಕೊಂಡ ಆದಾಯವೆಷ್ಟು ಗೊತ್ತಾ?

Share Market: ಯುಎಸ್ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ; ಈ ಬಿಲಿಯನೇರ್‌ಗಳು ಕಳೆದುಕೊಂಡ ಆದಾಯವೆಷ್ಟು ಗೊತ್ತಾ?

ಜೆಫ್ ಬೆಜೋಸ್, ಎಲೋನ್ ಮಸ್ಕ್ ಮತ್ತು ಮಾರ್ಕ್ ಜುಕರ್‌ಬರ್ಗ್

ಜೆಫ್ ಬೆಜೋಸ್, ಎಲೋನ್ ಮಸ್ಕ್ ಮತ್ತು ಮಾರ್ಕ್ ಜುಕರ್‌ಬರ್ಗ್

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ನಡೆಸಿದ ಸಮೀಕ್ಷೆಗಳಲ್ಲಿ ಇದು ಅತ್ಯಧಿಕ ಎಂದೆನಿಸಿದೆ. ಎಲೋನ್ ಮಸ್ಕ್ (Elon Musk) ಅವರ ನಿವ್ವಳ ಮೌಲ್ಯವು $ 8.4 ಬಿಲಿಯನ್ ಇಳಿಕೆಯಾಗಿದೆ. ಮಾರ್ಕ್ ಜುಕರ್‌ಬರ್ಗ್ (Mark Zuckerberg), ಲ್ಯಾರಿ ಪೇಜ್, ಸೆರ್ಗೆ ಬ್ರಿನ್ ಮತ್ತು ಸ್ಟೀವ್ ಬಾಲ್ಮರ್ ಅವರ ಸಂಪತ್ತು ಕೂಡ $4 ಶತಕೋಟಿಗಿಂತ ಹೆಚ್ಚು ಕಡಿಮೆಯಾಗಿದೆ, ಆದರೆ ವಾರೆನ್ ಬಫೆಟ್ ಮತ್ತು ಬಿಲ್ ಗೇಟ್ಸ್ (Bill Gates) ಕ್ರಮವಾಗಿ $3.4 ಶತಕೋಟಿ ಮತ್ತು $2.8 ಶತಕೋಟಿ ನಷ್ಟಕ್ಕೊಳಗಾದರು.

ಮುಂದೆ ಓದಿ ...
  • Share this:

ಅಮೆರಿಕಾದ ಶ್ರೀಮಂತ ಬಿಲಿಯನೇರ್‌ಗಳ (Rich billionaires) ಆದಾಯವು ಶತಕೋಟಿಗಳಷ್ಟು ಕುಸಿತ ಕಂಡಿದ್ದು, ಇದುವರೆಗಿನ ಒಂಭತ್ತನೇ ಅತ್ಯಂತ ಕೆಟ್ಟ ದೈನಂದಿನ ನಷ್ಟ ಎಂದು ಪರಿಗಣಿತವಾಗಿದೆ ಅಂತೆಯೇ, ಹಣದುಬ್ಬರದ ಅಂಕಿ ಅಂಶವು ನಿರೀಕ್ಷೆಗಿಂತ ಹೆಚ್ಚಾಗಿದೆ. ಜೆಫ್ ಬೆಜೋಸ್ ಅವರ ಸಂಪತ್ತು $9.8 ಶತಕೋಟಿಗಳಷ್ಟು ಕುಸಿದಿದೆ, ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ನಡೆಸಿದ ಸಮೀಕ್ಷೆಗಳಲ್ಲಿ ಇದು ಅತ್ಯಧಿಕ ಎಂದೆನಿಸಿದೆ. ಎಲೋನ್ ಮಸ್ಕ್ (Elon Musk) ಅವರ ನಿವ್ವಳ ಮೌಲ್ಯವು $ 8.4 ಬಿಲಿಯನ್ ಇಳಿಕೆಯಾಗಿದೆ. ಮಾರ್ಕ್ ಜುಕರ್‌ಬರ್ಗ್ (Mark Zuckerberg), ಲ್ಯಾರಿ ಪೇಜ್, ಸೆರ್ಗೆ ಬ್ರಿನ್ ಮತ್ತು ಸ್ಟೀವ್ ಬಾಲ್ಮರ್ ಅವರ ಸಂಪತ್ತು ಕೂಡ $4 ಶತಕೋಟಿಗಿಂತ ಹೆಚ್ಚು ಕಡಿಮೆಯಾಗಿದೆ, ಆದರೆ ವಾರೆನ್ ಬಫೆಟ್ ಮತ್ತು ಬಿಲ್ ಗೇಟ್ಸ್ (Bill Gates) ಕ್ರಮವಾಗಿ $3.4 ಶತಕೋಟಿ ಮತ್ತು $2.8 ಶತಕೋಟಿ ನಷ್ಟಕ್ಕೊಳಗಾದರು.


ಸ್ಟಾಕ್ ಮಾರುಕಟ್ಟೆಯಲ್ಲಿ ಏರಿಳಿತ
ಗ್ರಾಹಕ ಬೆಲೆ ಹಣದುಬ್ಬರದ ಬಿಡುಗಡೆಯ ನಂತರ ಸ್ಟಾಕ್ ಮಾರುಕಟ್ಟೆಯು ಏರಿಳಿತಗಳನ್ನು ಕಂಡಿದ್ದು, ಜುಲೈನಲ್ಲಿ 8.5% ರಿಂದ 8.3% ಕ್ಕೆ ಆಗಸ್ಟ್‌ನಲ್ಲಿ ಸ್ವಲ್ಪ ಕಡಿಮೆಯಾಗಿದೆ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ. ಹಣದುಬ್ಬರ ವರದಿಯ ನಂತರ ವಾಲ್ ಸ್ಟ್ರೀಟ್‌ನಲ್ಲಿನ ಷೇರುಗಳು ಕುಸಿದವು.


ಶತಕೋಟ್ಯಾಧಿಪತಿಗಳ ದೊಡ್ಡ ದೈನಂದಿನ ನಷ್ಟಗಳು ಯುಎಸ್ ಸ್ಟಾಕ್ ಮಾರುಕಟ್ಟೆಯಲ್ಲಿನ ವ್ಯಾಪಕವಾದ ಮಾರಾಟವನ್ನು ಪ್ರತಿಬಿಂಬಿಸುತ್ತವೆ, ನಿರೀಕ್ಷೆಗಿಂತ ಹೆಚ್ಚಿಗೆ ಬಂದಿರುವ ಗ್ರಾಹಕ ಬೆಲೆ ಸೂಚ್ಯಂಕ ಡೇಟಾವು ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚು ಆಕ್ರಮಣಕಾರಿಯಾಗಿ ಹೆಚ್ಚಿಸಲು ಕಾರಣವಾಗುತ್ತದೆ ಎಂದು ಹೂಡಿಕೆದಾರರು ಹೇಳಿದ್ದಾರೆ. S&P, 500 ಸೂಚ್ಯಂಕ, ಅಂದರೆ 4.4% ಕುಸಿಯಿತು, ಇದು ಜೂನ್ 2020 ರಿಂದ ಅತ್ಯಧಿಕವಾಗಿದೆ, ಆದರೆ ಟೆಕ್-ಹೆವಿ ನಾಸ್ಡಾಕ್ 100 ಸೂಚ್ಯಂಕವು 5.5% ನಷ್ಟು ಕುಸಿದಿದೆ, ಮಾರ್ಚ್ 2020 ರಲ್ಲಿ 12% ಕ್ಕಿಂತ ಕುಸಿತದ ನಂತರ ಇದು ಹೆಚ್ಚಾಗಿದೆ.


ಇದನ್ನೂ ಓದಿ: Organic Farming: ಕಾರ್ಪೊರೇಟ್ ಕಂಪನಿ ಕೆಲಸ ಬಿಟ್ಟು ಕೃಷಿಯತ್ತ ಮುಖ ಮಾಡಿದ ಟೆಕ್ಕಿ, ಸಂಪಾದನೆ ಕೋಟಿ ಕೋಟಿ!


ಕುಸಿದ ಬಿಟ್‌ಕಾಯಿನ್, ಕ್ರಿಪ್ಟೋ
ಡೌ ಜೋನ್ಸ್ ಕೈಗಾರಿಕೆಯು ಸುಮಾರು 1,300 ಅಂಕಗಳಷ್ಟು ಕುಸಿಯಿತು. ಟೆಕ್ ಸ್ಟಾಕ್‌ಗಳು 500 ಅಂಕಗಳಿಗಿಂತ ಹೆಚ್ಚು ಅಥವಾ 4.4% ರಷ್ಟು ಕುಸಿದವು. ಬಿಟ್‌ಕಾಯಿನ್‌ನ ಬೆಲೆಯು ಸಹ ಜರ್ಜರಿತವಾಯಿತು, 7.34% ನಷ್ಟು ಕುಸಿದು $20,161 ಕ್ಕೆ ಇಳಿದಿದೆ. ಕಳೆದ ಆರು ತಿಂಗಳಿನಿಂದ ಕ್ರಿಪ್ಟೋ 41% ದಷ್ಟು ಕಡಿಮೆಯಾಗಿದೆ. ಮಾರುಕಟ್ಟೆಗಳಿಗೆ ಮತ್ತು ಬಿಲಿಯನೇರ್‌ಗಳ ಅದೃಷ್ಟಕ್ಕಾಗಿ ಈ ವರ್ಷದ ಕೆಟ್ಟ ದಿನಗಳಲ್ಲಿ ಈ ಸುದ್ದಿ ಹೆಚ್ಚು ಆಘಾತಕಾರಿಯಾದುದು.


ಹಣದುಬ್ಬರ ವರದಿಗೆ ಪ್ರತಿಕ್ರಿಯೆ ನೀಡಿದ ಬಿಡೆನ್
ಅಧ್ಯಕ್ಷ ಬಿಡೆನ್ ಧನಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದು, ಹಣದುಬ್ಬರದ ವಿರುದ್ಧ ಹೋರಾಡುವಲ್ಲಿ ಅಂಕಿಅಂಶವು ಪ್ರಗತಿಯನ್ನು ತೋರಿಸಿದೆ ಎಂದು ತಿಳಿಸಿದ್ದಾರೆ. ಬೆಲೆಗಳು ಸಮಾನವಾಗಿದ್ದು, ಅನಿಲ ಬೆಲೆಗಳು ಕಡಿಮೆಯಾಗಿವೆ ಅಂತೆಯೇ ವೇತನಗಳು ಅಧಿಕವಾಗಿವೆ ಒಟ್ಟಾರೆ ಅಮೇರಿಕನ್ ಕುಟುಂಬಗಳಿಗೆ ಇದು ಶುಭ ಸುದ್ದಿ ಎಂದು ಅಧ್ಯಕ್ಷರು ಹೇಳಿದ್ದಾರೆ. ಹಣದುಬ್ಬರವು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಕ್ಕಿಂತ ನಿಧಾನಗತಿಯಲ್ಲಿ ಕುಸಿಯುತ್ತಿದೆ ಎಂಬ ಸುದ್ದಿಗೆ ಮಾರುಕಟ್ಟೆಗಳು ನಕಾರಾತ್ಮಕವಾಗಿ ಪ್ರತಿಕ್ರಿಯಿ ನೀಡಿವೆ.


ಆಶ್ಚರ್ಯಕರ ಫಲಿತಾಂಶವೆಂದರೆ, ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಆಕ್ರಮಣಕಾರಿಯಾಗಿ ಹೆಚ್ಚಿಸುವ ಸಾಧ್ಯತೆಯಿದೆ. ಇಂಡಿಪೆಂಡೆಂಟ್ ಅಡ್ವೈಸರ್ ಅಲೈಯನ್ಸ್‌ನ ಮುಖ್ಯ ಹೂಡಿಕೆ ಅಧಿಕಾರಿ ಕ್ರಿಸ್ ಜಕ್ಕರೆಲ್ಲಿ ಹೇಳುವಂತೆ, ಹಣದುಬ್ಬರ ಪ್ರಮುಖ ಸಮಸ್ಯೆಯಾಗಿದ್ದು, ಕಾರ್ಮಿಕ ಮಾರುಕಟ್ಟೆಯು ಈ ಸಮಸ್ಯೆಯ ಕೀಲಿಕೈಯಾಗಿದೆ ಎಂದಿದ್ದಾರೆ. ನಿರುದ್ಯೋಗ ಸಮಸ್ಯೆ ಕಡಿಮೆ ಇದ್ದಷ್ಟು ಗ್ರಾಹಕರು ತಮ್ಮ ಖರ್ಚಿನ ಮೇಲೆ ನಿಗಾವಹಿಸಿದಷ್ಟು ಹಣದುಬ್ಬರ ಸಮಸ್ಯೆ ಅದರಷ್ಟಕ್ಕೆ ಪರಿಹಾರವಾಗುತ್ತದೆ ಎಂಬುದನ್ನು ಊಹಿಸುವುದು ಕಷ್ಟ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ:  Indian IT CEO's: ಭಾರತದ ಐಟಿ ಸಿಇಒಗಳ ವೇತನ ಸರಾಸರಿ ಉದ್ಯೋಗಿ ವೇತನಕ್ಕಿಂತ 200-1,000 ಪಟ್ಟು ಇದ್ಯಂತೆ!


ಬೆಲೆಗಳನ್ನು ನಿಯಂತ್ರಣದಲ್ಲಿಡಲು ಫೆಡರಲ್ ಸಮಂಜಸವಲ್ಲದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಸೂಚಿಸಿದ್ದು, ಫೆಡರಲ್ ವಿಶ್ವದ ಅತ್ಯಂತ ಕೆಟ್ಟ ಸಮಸ್ಯೆಯನ್ನು ಹೊಂದಿದೆ ಅಂತೆಯೇ ಇದು ರಾಜಕೀಯ ಸಮಸ್ಯೆ, ಆರ್ಥಿಕ ಸಮಸ್ಯೆ ಅಲ್ಲ ಮತ್ತು ಪ್ರಸ್ತುತ ಬಿಕ್ಕಟ್ಟಿಗೆ ಏಕೈಕ ಪರಿಹಾರವೆಂದರೆ ರಾಜಕೀಯವಾಗಿ ಅಸಮರ್ಥವಾಗಿರುವುದು ಎಂದು ಜಕ್ಕರೆಲ್ಲಿ ತಿಳಿಸಿದ್ದಾರೆ.

top videos
    First published: