ಮೊದಲೆಲ್ಲಾ ಕಂಪನಿಗಳಲ್ಲಿ (Company) ಕೆಲಸ ಮಾಡುವ ಉದ್ಯೋಗಿಗಳು (Employees) ಬೆಳಿಗ್ಗೆ ಹೊತ್ತಿನಲ್ಲಿ ತಮ್ಮ ಕಂಪನಿಗೆ ಸಮಯಕ್ಕೆ ಸರಿಯಾಗಿ ಹೋಗಿ ಕೆಲಸ ಶುರು ಮಾಡಿಕೊಂಡು ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದರು. ಒಂದು ಸಾರಿ ಮನೆಗೆ ಬಂದ ಮೇಲೆ ಕಂಪನಿಯಿಂದ ಕೆಲಸಕ್ಕೆ ಮತ್ತೆ ಕರೆ ಮಾಡುವುದಾಗಲಿ ಆ ರೀತಿಯ ಯಾವುದೇ ಕಿರಿಕಿರಿಗಳು ಇರುತ್ತಿರಲಿಲ್ಲ. ಆದರೆ ಈಗ ಎರಡೂವರೆ ವರ್ಷಗಳಿಂದ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಬಹುತೇಕ ಕಂಪನಿಗಳು ಮನೆಯಿಂದ ಕೆಲಸ ಮಾಡುವ (Work From Home) ಮಾದರಿಯನ್ನು ಅನುಸರಿಸಿವೆ. ಹೀಗಾಗಿ ಬಹುತೇಕ ಉದ್ಯೋಗಿಗಳು ‘ವರ್ಕ್ ಫ್ರಮ್ ಹೋಮ್’ ಮಾದರಿಗೆ ಹೊಂದಿಕೊಂಡಿದ್ದಾರೆ.
ಹಾಗಂತ ಮನೆಯಿಂದ ಕೆಲಸ ಮಾಡುವುದು ಅಷ್ಟೊಂದು ಸುಲಭ ಅಂತ ಅಂದುಕೊಳ್ಳಬೇಡಿ. ನಾವು ಕೆಲಸ ಮಾಡುವ ಲ್ಯಾಪ್‌ಟಾಪ್ ಗಳನ್ನು ಅಪ್ಡೇಟ್ ಮಾಡಿಕೊಳ್ಳಬೇಕು ಮತ್ತು ಕಂಪನಿಯಲ್ಲಿ ನಡೆಯುವ ಮೀಟಿಂಗ್ ಗಳಿಗೆ ವೆಬ್‌ಕ್ಯಾಮೆರಾ ಆನ್ ಮಾಡಿಕೊಂಡು ತಮ್ಮ ಉಪಸ್ಥಿತಿಯನ್ನು ತೋರಿಸಬೇಕು.
ಅದರಲ್ಲೂ ಕೆಲವು ಕಂಪನಿಗಳಿಗಂತೂ ತಮ್ಮ ಉದ್ಯೋಗಿಗಳು ಮನೆಯಲ್ಲಿ ಕೆಲಸ ಮಾಡುತ್ತಿದ್ದಾರೆಯೋ ಇಲ್ಲವೋ ಅಂತ ಸಣ್ಣದಾಗಿ ಸಂದೇಹ ಬೇರೆ ಹೊಂದಿರುತ್ತವೆ. ಹೀಗೆ ದಿನದ 8 ಗಂಟೆಗಳ ಕಾಲ ಕೆಲಸ ಮಾಡುವ ಸಮಯದಲ್ಲಿ ವೆಬ್‌ಕ್ಯಾಮ್ ಅನ್ನು ಆನ್ ಮಾಡಿಯೇ ಇಡಬೇಕು ಅಂತ ಇಲ್ಲೊಂದು ಕಂಪನಿ ತನ್ನ ಉದ್ಯೋಗಿಗೆ ತಾಕೀತು ಮಾಡಿದೆ. ಇದಕ್ಕೆ ಉದ್ಯೋಗಿ ಒಪ್ಪದೆ ಇದ್ದಾಗ ಅವರನ್ನು ಕೆಲಸದಿಂದ ತೆಗೆದು ಹಾಕಿರುವಂತಹ ಘಟನೆ ನಡೆದಿದೆ ನೋಡಿ.
ವೆಬ್‌ಕ್ಯಾಮ್ ಆನ್ ಮಾಡಲು ಹೇಳಿರುವುದು ಡಚ್ ಕಾರ್ಮಿಕರ ಮಾನವ ಹಕ್ಕುಗಳ ಉಲ್ಲಂಘನೆ: ನ್ಯಾಯಾಲಯ
ಯುನೈಟೆಡ್ ಸ್ಟೇಟ್ಸ್ ನಲ್ಲಿರುವ ಸಾಫ್ಟ್‌ವೇರ್ ಕಂಪನಿಯೊಂದು ಹೀಗೆ ಉದ್ಯೋಗಿಗೆ ‘ವರ್ಕ್ ಫ್ರಮ್ ಹೋಮ್’ ಮಾಡುವಾಗ ಕೆಲಸದ ವೇಳೆಯಲ್ಲಿ ವೆಬ್‌ಕ್ಯಾಮ್ ಆನ್ ಮಾಡಲು ಒತ್ತಾಯಿಸುವುದರೊಂದಿಗೆ ಡಚ್ ಕಾರ್ಮಿಕರ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ನೆದರ್‌ಲ್ಯಾಂಡ್ ನ ನ್ಯಾಯಾಲಯವೊಂದು ತೀರ್ಪು ನೀಡಿದೆ. ಫ್ಲೋರಿಡಾ ಮೂಲದ ಟೆಲಿಮಾರ್ಕೆಟಿಂಗ್ ಕಂಪನಿ ಚೇತು ದಿನಕ್ಕೆ ಒಂಬತ್ತು ಗಂಟೆಗಳ ಕಾಲ ಕೆಲಸ ಮಾಡುವ ನೀತಿಯ ಅನುಸಾರವಾಗಿ ಉದ್ಯೋಗಿಯ ಕೆಲಸದ ಮೇಲ್ವಿಚಾರಣೆ ಕ್ರಿಯೆಗೆ ನಿರಾಕರಿಸಿದ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕಿತು, ಇಲ್ಲಿ ಕಂಪನಿಯು ತನ್ನ ಉದ್ಯೋಗಿಯ ವೆಬ್‌ಕ್ಯಾಮ್ ಅನ್ನು ಆನ್ ಮಾಡಲು ಮತ್ತು ಕಂಪ್ಯೂಟರ್ ನ ಸ್ಕ್ರೀನ್ ಅನ್ನು ಸದಾ ಹಂಚಿಕೊಳ್ಳಲು ಉದ್ಯೋಗಿಗೆ ಹೇಳುತ್ತಿತ್ತು ಎಂದು ಟೆಕ್‌ಕ್ರಂಚ್ ವರದಿ ಮಾಡಿದೆ.
ಇದನ್ನೂ ಓದಿ: Work From Home Rules: ವರ್ಕ್ ಫ್ರಮ್ ಹೋಮ್ ಅವರಿಗೆ ಮಾತ್ರ, ಐಟಿ ದಿಗ್ಗಜರ ಮಹತ್ವದ ನಿರ್ಧಾರ!
"ಕೆಲಸ ಮಾಡಲು ನಿರಾಕರಿಸದ್ದಕ್ಕೆ" ಮತ್ತು "ಅವಿಧೇಯತೆ" ಯಿಂದಾಗಿ ಉದ್ಯೋಗಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಚೇತು ಕಂಪನಿಯವರು ಹೇಳಿದೆ, ಆದರೆ ಆ ಉದ್ಯೋಗಿ ದಿನವಿಡೀ ತನ್ನನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂಬ ಅಂಶವು ತನಗೆ ತುಂಬಾನೇ ಅನಾನುಕೂಲವನ್ನುಂಟು ಮಾಡಿತು ಮತ್ತು ಇದು ತೀರಾ ಖಾಸಗಿ ಜೀವನದಲ್ಲಿ ಅಡೆತಡೆ ಎಂದು ಅವರು ಭಾವಿಸಿದರು ಎಂದು ವರದಿಯಾಗಿದೆ.
ನ್ಯಾಯಾಲಯದ ದಾಖಲೆಗಳು ಉಲ್ಲೇಖಿಸಿದಂತೆ, ಅವರು "ಇದು ನನ್ನ ಖಾಸಗಿತನದ ಮೇಲಿನ ಆಕ್ರಮಣವಾಗಿದೆ ಮತ್ತು ನನಗೆ ನಿಜವಾಗಿಯೂ ಈ ಘಟನೆ ತುಂಬಾನೇ ಅಹಿತಕರ ಅಂತ ಅನ್ನಿಸುತ್ತಿದೆ. ಈ ಕಾರಣಕ್ಕಾಗಿಯೇ ನನ್ನ ವೆಬ್ ಕ್ಯಾಮೆರಾ ಆನ್ ಮಾಡಿಲ್ಲ" ಎಂದು ಹೇಳಿದ್ದಾರೆ. ಚೇತು ಕಂಪನಿಯವರು ನ್ಯಾಯಾಲಯದ ವಿಚಾರಣೆಗೆ ಹಾಜರಾಗಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಏನಿತ್ತು?
"ದಿನಕ್ಕೆ ಎಂಟು ಗಂಟೆಗಳ ಕಾಲ ವೆಬ್ ಕ್ಯಾಮೆರಾ ಮೂಲಕ ಟ್ರ್ಯಾಕಿಂಗ್ ಮಾಡುವುದು ಅಸಮಂಜಸವಾಗಿದೆ ಮತ್ತು ನೆದರ್ಲ್ಯಾಂಡ್ ನಲ್ಲಿ ಇದಕ್ಕೆ ಅನುಮತಿಯಿಲ್ಲ" ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಇದು ಮಾನವ ಹಕ್ಕುಗಳ 8ನೇ ವಿಧಿಯನ್ನು ಉಲ್ಲಂಘಿಸಿದೆ ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: TCS: 20,000 ಫ್ರೆಶರ್ಸ್‌ಗಳನ್ನು ನೇಮಕ ಮಾಡಿಕೊಂಡ ಟಿಸಿಎಸ್
ಉದ್ಯೋಗಿಯನ್ನು ಕೆಲಸದಿಂದ ತೆಗೆದು ಹಾಕುವುದು ಅನ್ಯಾಯವಾಗಿದೆ ಎಂದು ಕಂಡುಕೊಂಡ ನಂತರ, ನ್ಯಾಯಾಲಯವು ಆ ಉದ್ಯೋಗಿಯ ಹಿಂದಿನ ವೇತನ, ನ್ಯಾಯಾಲಯದ ವೆಚ್ಚಗಳು ಮತ್ತು ಬಳಸದ ರಜಾ ದಿನಗಳ ಜೊತೆಗೆ 50,000 ಡಾಲರ್ ದಂಡವನ್ನು ಪಾವತಿಸುವಂತೆ ಕಂಪನಿಗೆ ಸೂಚಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ