ಯುಪಿಐ ಮೂಲಕ IPO ಮತ್ತು ಗವರ್ನ್ಮೆಂಟ್ ಬಾಂಡ್​ಗಳಲ್ಲಿ 5 ಲಕ್ಷದವರೆಗೆ ಹೂಡಿಕೆ ಸಾಧ್ಯ

Invest in IPOs through UPI payments- ಈಗ ಐಪಿಒಗಳ ಟ್ರೆಂಡ್ ಶುರುವಾಗಿದೆ. ಅನೇಕ ಕಂಪನಿಗಳು ಐಪಿಒಗಳಿಗೆ ತೆರೆದುಕೊಂಡು ಬಂಡವಾಳ ಬಾಚಿಕೊಳ್ಳುತ್ತಿವೆ. ಜನರೂ ಹೊಸಹೊಸ ಕಂಪನಿಗಳ ಮೇಲೆ ಹೂಡಿಕೆ ಮಾಡಲು ಮನಸು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಣಪಾವತಿ ಸುಲಭವಾಗುವ ದೃಷ್ಟಿಯಿಂದ ಯುಪಿಐ ಪ್ಲಾಟ್​ಫಾರ್ಮ್​​ಗೆ ಉತ್ತೇಜನ ನೀಡಲಾಗುತ್ತಿದೆ.

ಯುಪಿಐ ಮೂಲಕ ಹಣ ಪಾವತಿ

ಯುಪಿಐ ಮೂಲಕ ಹಣ ಪಾವತಿ

 • News18
 • Last Updated :
 • Share this:
  ಬೆಂಗಳೂರು: ಭಾರತದಲ್ಲಿ ಡಿಜಿಟಲ್ ರೂಪದಲ್ಲಿ ವಹಿವಾಟು ತೀರಾ ಸಾಮಾನ್ಯವಾಗಿ ಹೋಗಿದೆ. ವ್ಯವಹಾರದ ಎಲ್ಲಾ ಸ್ತರಗಳಲ್ಲೂ ಯುಪಿಐ ಮೂಲಕ ಹಣದ ವಹಿವಾಟ ನಡೆಯುತ್ತದೆ. ಸ್ಮಾರ್ಟ್​ಫೋನ್ ಹೊಂದಿರುವ ಬಹುತೇಕ ಜನರು ಹಣದ ವಹಿವಾಟಿಗೆ ಪೇಟಿಎಂ, ಫೋನ್ ಪೆ, ಗೂಗಲ್ ಪೇ ಇತ್ಯಾದಿ ಯಾವುದಾದರೊಂದು ಯುಪಿಐ ಬಳಸುತ್ತಾರೆ. ಬಹುತೇಕ ಸೇವೆಗಳಿಗೆ ಈಗ ಯುಪಿಐ ಎಂಬ ಒಂದು ಆಪ್ಷನ್ ಅನ್ನು ವರ್ತಕರು ನೀಡುತ್ತಾರೆ. ಇದೀಗ ಜನರು ಐಪಿಒ (IPO- Initial Public Offering) ಗಳ ಮೇಲೆ ಯುಪಿಐ ಮೂಲಕವೇ ಹಣ ಹೂಡಿಕೆ ಮಾಡಲು ಸಾಧ್ಯ. ಸರ್ಕಾರ ಇದೀಗ ಯುಪಿಐ ಮೂಲಕ ಐಪಿಒಗೆ ಹೂಡಿಕೆ ಮಾಡಲು ಇದ್ದ ಮಿತಿಯನ್ನ 2 ಲಕ್ಷದಿಂದ 5 ಲಕ್ಷಕ್ಕೆ ಏರಿಸಲಾಗುತ್ತಿದೆ.

  ಹಣಕಾಸು ಮಾರುಕಟ್ಟೆಯ ವಹಿವಾಟಿನಲ್ಲಿ ರೀಟೇಲ್ ಗ್ರಾಹಕರು (ವೈಯಕ್ತಿಕವಾಗಿ ಸಣ್ಣ ಹೂಡಿಕೆ ಮಾಡುವವರು) ಹೆಚ್ಚೆಚ್ಚು ಪಾಲ್ಗೊಳ್ಳುವುದನ್ನು ಉತ್ತೇಜಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಕೆಲವಿಷ್ಟು ಪ್ರಮುಖ ಕ್ರಮಗಳನ್ನ ಕೈಗೊಂಡಿದೆ. ಅದರಲ್ಲಿ ಐಪಿಒಗಳಿಗೂ ಯುಪಿಐ ಮೂಲಕ ಪಾವತಿ ಮಾಡುವ ಅವಕಾಶ ಮಾಡಿಕೊಟ್ಟಿರುವುದೂ ಒಂದು. 2019ರಲ್ಲಿ ಮೊದಲ ಬಾರಿಗೆ ಇಂಥದ್ದೊಂದು ಅವಕಾಶದ ಬಾಗಿಲು ತೆರೆಯಲಾಯಿತು. 2020ರಲ್ಲಿ ಯುಪಿಐ ಮೂಲಕ ಹೂಡಿಕೆಗೆ ಇದ್ದ ಮಿತಿಯನ್ನ 1 ಲಕ್ಷ ದಿಂದ 2 ಲಕ್ಷ ರೂಪಾಯಿಗೆ ಹೆಚ್ಚಿಸಲಾಯಿತು. ಇದೀಗ ಆ ಮಿತಿಯನ್ನ 5 ಲಕ್ಷ ರೂಗೆ ಏರಿಸಲು ಆರ್​ಬಿಐ ನಿರ್ಧರಿಸಿದೆ.

  ಜನರು ಇದೀಗ ಇನ್ನೂ ಮುಕ್ತವಾಗಿ ಮತ್ತು ಸುಲಭವಾಗಿ ಐಪಿಒಗಳಲ್ಲಿ ಹೂಡಿಕೆ ಮಾಡಬಹುದು. ಆರ್​ಬಿಐನ ರೀಟೇಲ್ ಡೈರೆಕ್ಟ್ ಸ್ಕೀಮ್ ಯೋಜನೆ ಅಡಿಯಲ್ಲಿ ಗವರ್ನ್ಮೆಂಟ್ ಬಾಂಡ್​ಗಳಲ್ಲೂ ಜನರು ಹೂಡಿಕೆ ಮಾಡಬಹುದು. ಅಂದರೆ, ಐಪಿಒ ಮತ್ತು ಸರ್ಕಾರಿ ಬಾಂಡ್​ಗಳ ಮೇಲೆ ಜನರು ಎಷ್ಟು ಹಣ ಬೇಕಾದರೂ ಹೂಡಿಕೆ ಮಾಡಬಹುದು. ಆದರೆ, ಯುಪಿಐ ಮೂಲಕ ಹಣ ಪಾವತಿಸುವುದಾದರೆ 5 ಲಕ್ಷದವರೆಗೆ ಅವಕಾಶ ಕೊಡಲಾಗಿದೆ. ಡಿಜಿಟಲ್ ಆಗಿಯೇ ಇನ್ನೂ ಹೆಚ್ಚಿನ ಹಣದ ಹೂಡಿಕೆ ಮಾಡಬೇಕೆಂದರೆ ನೆಟ್​ಬ್ಯಾಂಕಿಂಗ್ ಬಳಸಬಹುದು. ಸಾಂಪ್ರದಾಯಿಕವಾಗಿ ಹಣದ ಪಾವತಿ ಎಂದರೆ ನಗದು ರೂಪದಲ್ಲಿ, ಚೆಕ್ ಅಥವಾ ಡಿಡಿ ಇದೆ. ಆದರೆ ಯುಪಿಐ ಆವಿಷ್ಕಾರ ಆದ ಬಳಿಕ ಡಿಜಿಟಲ್ ಕ್ರಾಂತಿಯೇ ಆಗಿಹೋಗಿದೆ. ಫೋನ್ ಪೆ, ಪೇಟಿಎಂ ಇತ್ಯಾದಿ ಯುಪಿಐ ಪ್ಲಾಟ್​ಫಾರ್ಮ್​ಗಳಲ್ಲಿ ನೀವು ಷೇರುಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಅವಕಾಶ ಕೊಡಲಾಗಿದೆ.

  ಇದನ್ನೂ ಓದಿ: Quick Heal- ಕ್ಯಾಲ್ಕುಲೇಟರ್ ರಿಪೇರಿ ಹುಡುಗ ಆ್ಯಂಟಿ-ವೈರಸ್ ಸಾಫ್ಟ್​ವೇರ್ ಕಂಪನಿಯ ಒಡೆಯನಾದ ಕಥೆ

  ಡಿಜಿಟಲ್ ವಹಿವಾಟು ಕ್ರಾಂತಿಕಾರಿ ಎನಿಸಿದರೂ, ನಮ್ಮ ಜೀವನ ವ್ಯವಹಾರವನ್ನ ಸುಲಭಗೊಳಿಸಿದರೂ ಅದರ ವ್ಯವಸ್ಥೆ ತುಸು ಸಂಕೀರ್ಣವಾದುದು. ನಮ್ಮ ಪ್ರತಿಯೊಂದು ಡಿಜಿಟಲ್ ಪಾವತಿಯಲ್ಲಿ ನಮಗೂ ನಮ್ಮ ಗ್ರಾಹಕರಿಗೂ ಮಧ್ಯೆ ಬೇರೆ ಮಧ್ಯವರ್ತಿಗಳು ಇರುತ್ತಾರೆ. ಪ್ರತಿಯೊಂದು ವಹಿವಾಟಿಗೂ ಇಂತಿಷ್ಟು ಶುಲ್ಕವನ್ನ ಯಾರಾದರೊಬ್ಬರು ಭರಿಸಲೇಬೇಕಾಗುತ್ತದೆ. ನೀವು ಅಂಗಡಿಯಲ್ಲಿ ಸಾಮಾನು ಕೊಂಡು ಪೇಟಿಎಂನಲ್ಲಿ ಹಣ ಪಾವತಿ ಮಾಡಿದರೆ, ಅದರ ಶುಲ್ಕವನ್ನು ಅಂಗಡಿಯವರು ಭರಿಸುತ್ತಾರೆ. ಮುಂದಿನ ದಿನಗಳಲ್ಲಿ ಇದರ ಹೊರೆ ಹಣ ಪಾವತಿಸುವ ಗ್ರಾಹಕರ ಮೇಲೆ ಹೋಗಬಹುದು.

  ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿ ಮಾಡಿದರೆ ಅದಕ್ಕೆ ತಗಲುವ ವೆಚ್ಚವನ್ನು ಅಂಗಡಿಯವರು ಭರಿಸುತ್ತಿದ್ದರು. ಈಗ ಅದನ್ನ ಗ್ರಾಹಕರಿಗೇ ಹಾಕುತ್ತಾರೆ. ಕ್ರೆಡಿಟ್ ಕಾರ್ಡ್​ನಲ್ಲಿ ಈ ರೀತಿಯ ಕಮಿಷನ್ ಹಣ ಶೇ. 2ರಷ್ಟು ಇದೆ.

  ಇದನ್ನೂ ಓದಿ: ಈ Post Office ಯೋಜನೆಯಲ್ಲಿ ಸಿಗಲಿದೆ ಲಕ್ಷಕ್ಕೂ ಅಧಿಕ ಹಣ

  ರಿಸರ್ವ್ ಬ್ಯಾಂಕ್ ಇದೀಗ ಈ ಡಿಜಿಟಲ್ ರೂಪದ ವಹಿವಾಟಿನ ಶುಲ್ಕ ವಿಚಾರದಲ್ಲಿ ಒಂದಷ್ಟು ನಿಯಮಗಳನ್ನ ರೂಪಿಸುವ ಚಿಂತನೆಯಲ್ಲಿದೆ. ಡಿಜಿಟಲ್ ಪಾವತಿಗೆ ಹಿನ್ನಡೆಯಾಗದ ರೀತಿಯಲ್ಲಿ, ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಶುಲ್ಕಗಳನ್ನ ನಿಗದಿ ಮಾಡುವ ಸಾಧ್ಯತೆ ಇದೆ.
  Published by:Vijayasarthy SN
  First published: