UGC New Guidelines: ವಿದ್ಯಾರ್ಥಿಗಳೇ ಗಮನಿಸಿ, ಪದವಿಪೂರ್ವ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಕಡ್ಡಾಯ! ಇಲ್ಲಿದೆ ಮಾಹಿತಿ

ಎಲ್ಲಾ ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ಮಾಡಬೇಕಾಗಿದ್ದರೂ, ಇಂಟರ್ನ್​ಶಿಪ್​ನ ಕಾಲಾವಧಿಯು ವಿದ್ಯಾರ್ಥಿಯು ಮುಂದುವರಿಸಲು ಬಯಸುವ ಕೋರ್ಸ್‌ನ ಅವಧಿಯನ್ನು ಅವಲಂಬಿಸಿರುತ್ತದೆ. ಹಾಗಾದರೆ ಯಾರು ಎಷ್ಟು ಅವಧಿಯ ಇಂಟರ್ನ್​ಶಿಪ್ ಮಾಡಲೇಬೇಕು? ಇಲ್ಲಿದೆ ನೋಡಿ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ 2022ರ (National Education Policy 2020) ಅನುಷ್ಠಾನದ ನಂತರ ಶಿಕ್ಷಣ ಕ್ಷೇತ್ರದಲ್ಲಿ ಒಂದೊಂದೇ ಬದಲಾವಣೆಗಳು ಹಂತ ಹಂತವಾಗಿ ನಡೆಯಲಾರಂಭಿಸಿವೆ. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (UGC) ಮಂಗಳವಾರ ವಿದ್ಯಾರ್ಥಿಗಳು ಪದವಿಪೂರ್ವ ಹಂತದಲ್ಲಿ ಇಂಟರ್ನ್​ಶಿಪ್ ಕಡ್ಡಾಯಗೊಳಿಸಿದೆ. ಜೊತೆಗೆ ಸಂಶೋಧನಾ ಇಂಟರ್ನ್‌ಶಿಪ್‌ಗಳ ಮಾರ್ಗಸೂಚಿಗಳಿಗೆ (UGC Approved Guidelines)  ಅನುಮೋದನೆ ನೀಡಿದೆ. ಮಾನ್ಯತೆ ಪಡೆದ ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿನ ಎಲ್ಲಾ ಪದವಿಪೂರ್ವ ವಿದ್ಯಾರ್ಥಿಗಳು ಎಂಟರಿಂದ ಹತ್ತು ವಾರಗಳವರೆಗೆ ಸಂಶೋಧನಾ ಇಂಟರ್ನ್‌ಶಿಪ್ ಅನ್ನು ಕಡ್ಡಾಯವಾಗಿ ಮಾಡಬೇಕು ಎಂದು ಯುಜಿಸಿ ಪ್ರಕಟಿಸಿದೆ. ವಿದ್ಯಾರ್ಥಿಗಳು ಯುಜಿಸಿ ಬಿಡುಗಡೆಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿ ಅಡಿ ಹೇಗೆ ಇಂಟರ್ನ್​ಶಿಪ್ ನಡೆಸಬೇಕು (Internships) ಎಂಬ ಮಾಹಿತಿಯನ್ನು ನೀವೂ ತಿಳಿದುಕೊಳ್ಳಿ. 

    ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಅಂತಹ ಇಂಟರ್ನ್‌ಶಿಪ್‌ಗಳನ್ನು ಕಡ್ಡಾಯಗೊಳಿಸುತ್ತದೆ. ಪದವಿಯಲ್ಲಿ ಯಾವುದೇ ವಿಷಯಗಳನ್ನು ಆಯ್ಕೆ ಮಾಡಿಕೊಂಡರೂ ನಿರ್ದಿಷ್ಟವಾಗಿ ನಾಲ್ಕು ವರ್ಷಗಳ ಪದವಿಪೂರ್ವ ಕಾರ್ಯಕ್ರಮಗಳಿಗೆ ಸಂಶೋಧನೆ ಕೈಗೊಳ್ಳುವುದನ್ನು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸೂಚಿಸಲಾಗಿದೆ.

    ಏನಂದಿದೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ?
    ಸಂಶೋಧನೆ, ನಾವೀನ್ಯತೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಏಕೀಕರಣವು ಆತ್ಮನಿರ್ಭರ್ ಭಾರತ್ (ಸ್ವಾವಲಂಬಿ ಭಾರತ) ಅಡಿಪಾಯವಾಗಿದೆ. NEP 2020 ರ ಪ್ರಕಾರ ಪದವಿಪೂರ್ವ ಹಂತಗಳಲ್ಲಿ ಸಂಶೋಧನಾ ಇಂಟರ್ನ್‌ಶಿಪ್‌ ಅಳವಡಿಕೆ ಮಾಡಿರುವುದು ಅಂತರ್ ಶಿಸ್ತಿನ/ಬಹು-ಶಿಸ್ತಿನ/ಟ್ರಾನ್ಸ್‌ಡಿಸಿಪ್ಲಿನರಿ ಮತ್ತು ಭಾಷಾಂತರ ಸಂಶೋಧನಾ ಸಂಸ್ಕೃತಿಯನ್ನು ವೇಗವರ್ಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು UGC ಯ ಮಾರ್ಗಸೂಚಿ ತಿಳಿಸಿದೆ.

    ಮಂಗಳವಾರ ಯುಜಿಸಿ ಅನುಮೋದಿಸಿದ ಮಾರ್ಗಸೂಚಿಗಳು ಇಂಟರ್ನ್‌ಶಿಪ್ ಅವಧಿಯನ್ನು ನಿರ್ದಿಷ್ಟಪಡಿಸಿದೆ. ವಿದ್ಯಾರ್ಥಿಗಳು ಈ ಇಂಟರ್ನ್‌ಶಿಪ್‌ಗಳನ್ನು ಹೇಗೆ ಪಡೆಯಬಹುದು ಮತ್ತು ಕೋರ್ಸ್ ಕ್ರೆಡಿಟ್‌ಗಳನ್ನು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಸೂಚನೆ ನೀಡಿದೆ.

    ಎಷ್ಟು ಅವಧಿಯ ಇಂಟರ್ನ್​ಶಿಪ್?
    ಎಲ್ಲಾ ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ಮಾಡಬೇಕಾಗಿದ್ದರೂ, ಇಂಟರ್ನ್​ಶಿಪ್​ನ ಕಾಲಾವಧಿಯು ವಿದ್ಯಾರ್ಥಿಯು ಮುಂದುವರಿಸಲು ಬಯಸುವ ಕೋರ್ಸ್‌ನ ಅವಧಿಯನ್ನು ಅವಲಂಬಿಸಿರುತ್ತದೆ.

    ಇದನ್ನೂ ಓದಿ: National Family Health Survey: ಭಾರತೀಯರ ಫಲವತ್ತತೆ ದರ ಇಳಿಕೆ! 20 ವರ್ಷಗಳ ನಂತರ ಭಾರತದಲ್ಲಿ ಕೆಲಸಕ್ಕೆ ಜನರೇ ಸಿಗಲ್ವಾ?

    NEP 2020 ರ ಅಡಿಯಲ್ಲಿ ನೀಡಲಾಗುವ ಬಹು ಪ್ರವೇಶ ನಿರ್ಗಮನ ಸೌಲಭ್ಯದ ಅಡಿಯಲ್ಲಿ, ವಿದ್ಯಾರ್ಥಿಗಳು ಎರಡು ಸೆಮಿಸ್ಟರ್‌ಗಳು (ಮೊದಲ ವರ್ಷ) ಅಥವಾ ನಾಲ್ಕು ಸೆಮಿಸ್ಟರ್‌ಗಳು (ಎರಡನೇ ವರ್ಷ) ನಂತರ ಕೋರ್ಸ್‌ನಿಂದ ನಿರ್ಗಮಿಸಬಹುದು. ಒಂದು ವರ್ಷದ ನಂತರ ನಿರ್ಗಮಿಸಿದರೆ ಅವರಿಗೆ ಪ್ರಮಾಣಪತ್ರ ಮಾತ್ರ ಸಿಗುತ್ತದೆ. ಆದರೆ ಎರಡು ವರ್ಷಗಳ ನಂತರ ನಿರ್ಗಮಿಸಿದರೆ ಅವರಿಗೆ ಡಿಪ್ಲೊಮಾ ಪದವಿಯನ್ನು ನೀಡಲಾಗುತ್ತದೆ.

    ಅರ್ಧದಲ್ಲಿ ಕೋರ್ಸ್ ಬಿಟ್ಟರೆ?2ನೇ ಅಥವಾ 4ನೇ ಸೆಮಿಸ್ಟರ್‌ನ ನಂತರ ಕೋರ್ಸ್​ ಬಿಡುವ ವಿದ್ಯಾರ್ಥಿಗಳಿಗೆ 8-10 ವಾರಗಳ 10 ಕ್ರೆಡಿಟ್‌ಗಳ ಇಂಟರ್ನ್‌ಶಿಪ್‌ಗಳು ಪ್ರಮಾಣಪತ್ರ ಅಥವಾ ಡಿಪ್ಲೊಮಾದೊಂದಿಗೆ ಕಡ್ಡಾಯವಾಗಿರುತ್ತದೆ ಎಂದು ಯುಜಿಸಿ ಹೊರಡಿಸಿರುವ ಮಾರ್ಗಸೂಚಿಗಳು ತಿಳಿಸಿವೆ.

    ಇದನ್ನೂ ಓದಿ: LIC IPO Status: ಎಲ್​ಐಸಿ ಐಪಿಒ ನಿಮಗೆ ಸಿಕ್ತಾ? ಇನ್ನೂ ಯಾರಿಗೆ ಸಿಕ್ತು? ಯಾರಿಗೆ ಸಿಕ್ಕಿಲ್ಲ? ಚೆಕ್ ಮಾಡೋದು ಹೀಗೆ

    ಆದರೆ ಸಂಶೋಧನೆಯೊಂದಿಗೆ ನಾಲ್ಕು ವರ್ಷಗಳ ಪದವಿಯನ್ನು ಮುಂದುವರಿಸಲು ಬಯಸುವ ವಿದ್ಯಾರ್ಥಿಗಳು 10 ವಾರಗಳ ಇಂಟರ್ನ್‌ಶಿಪ್ ಜೊತೆಗೆ ಒಂದು ವರ್ಷದ ನಿಜವಾದ ಸಂಶೋಧನಾ ಕಾರ್ಯವನ್ನು ಮಾಡಬೇಕಾಗುತ್ತದೆ. ಸರಳ ನಾಲ್ಕು ವರ್ಷಗಳ ಪದವಿಪೂರ್ವ ಶಿಕ್ಷಣವನ್ನು ಪಡೆಯ ಬಯಸುವ ವಿದ್ಯಾರ್ಥಿಗಳು ಕನಿಷ್ಠ 8-10 ವಾರಗಳ ಇಂಟರ್ನ್‌ಶಿಪ್ ಅನ್ನು ಮುಂದುವರಿಸಬೇಕಾಗುತ್ತದೆ.
    Published by:guruganesh bhat
    First published: