Business Idea: 2022ರಲ್ಲಿ ಹೊಸ ಉದ್ದಿಮೆ ಆರಂಭಿಸಲು ಇಲ್ಲಿವೆ 5 ಹೊಸ ಐಡಿಯಾ

Startup: ಪ್ರಸ್ತುತ ಆನ್ಲೈನ್ ದುನಿಯಾ..ಮನೆಯಲ್ಲಿಯೇ ಕುಳಿತು ಮನೆಗೆ ಬೇಕಾದ ಎಲ್ಲಾ ವಸ್ತುಗಳನ್ನು ನಾವು ಆನ್ಲೈನ್ ಮೂಲಕ ಪಡೆದುಕೊಳ್ಳಬಹುದಾಗಿದೆ.. ಆಹಾರ ಅಡುಗೆ ಕೂಡ ಆನ್ಲೈನ್ ಮೂಲಕ ಹೆಚ್ಚು ಮಾರಾಟವಾಗುತ್ತಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವೋದ್ಧಿಮೆ ಅಥವಾ ಸ್ಟಾರ್ಟ್ ಅಪ್(Startup) ಅನ್ನುವುದು ಇಂದಿಗೆ ಒಂದು ಫ್ಯಾಷನ್(Fashion) ಆಗಿದೆ. ನಮ್ಮ ಹಿಂದಿನ ತಲೆಮಾರು ಸಿಕ್ಕ ಕೆಲಸದಲ್ಲಿ ನಿವೃತ್ತಿ(Retirement) ಆಗುವವರೆಗೆ ದುಡಿಯುವುದರಲ್ಲಿ ಸುಖ ಕಾಣುತಿತ್ತು. ಅಂದಿನ ದಿನಗಳಲ್ಲಿ ಅವಕಾಶಗಳು(Chance) ಕೂಡ ಕಡಿಮೆ. ಆದರೆ ಇಂದಿನ ವಿಷಯ ಹಾಗಲ್ಲ. ಇಂದು ಅವಕಾಶಗಳು ಕೂಡ ಬಹಳ ಹೆಚ್ಚಾಗಿದೆ, ಜೊತೆ ಜೊತೆಗೆ ಯುವ ಜನತೆಯಲ್ಲಿ(Youths) ಹೊಸತನ್ನ ಪ್ರಾರಂಭಿಸಲು, ಪ್ರಯತ್ನಿಸಲು ಧೈರ್ಯ ಹೆಚ್ಚಾಗಿದೆ. ಒಂದು ಒಳ್ಳೆಯ ಐಡಿಯಾ(Idea) ಇದ್ದರೆ ಸಾಕು ನಿಮ್ಮ ಕನಸಿಗೆ ನಾವು ಹಣ ಹೂಡಲು ಸಿದ್ದ ಎನ್ನುವ ವ್ಯಕ್ತಿಗಳು, ಸಂಸ್ಥೆಗಳು ಇಂದು ಹುಟ್ಟಿಕೊಂಡಿವೆ.ಅತ್ಯಂತ ಆಶ್ಚರ್ಯಕರವೆಂದ್ರೆ ಕೇವಲ 2 ತಿಂಗಳುಗಳಲ್ಲಿ ಸ್ಟಾರ್ಟ್ ಅಪ್ ಗಳು 5 ಬಿಲಿಯನ್ ಡಾಲರ್ ಗಳಿಸಿವೆ. ಹೀಗಾಗಿ 2022ರಲ್ಲಿ ಅತಿ ಹೆಚ್ಚು ಲಾಭ ಗಳಿಸಬಲ್ಲ ಉದ್ಯೋಗದ ಪಟ್ಟಿ ನಮ್ಮಲ್ಲಿದೆ. ನಿಮ್ಮ ಹೂಡಿಕೆಗೆ ಅನುಗುಣವಾಗಿ ನೀವು ಇದ್ರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

  1) ಆನ್ಲೈನ್ ಟೀಚಿಂಗ್: ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಶಿಕ್ಷಣಕ್ಕೆ ಸಮರ್ಪಕವಾದ ಪ್ರೇರಣೆಯ ಕೊರತೆಯಿದೆ. ಹಿಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಾಮಾನ್ಯವಾಗಿ ತಮ್ಮ ಮನೆಗಳಿಂದ ಹಾಗೂ ತರಗತಿಗಳಿಂದ, ಸಹಪಾಠಿಗಳಿಂದ ದೂರವಿದ್ದು ಆನ್ಲೈನ್ ಶಿಕ್ಷಣದ ಅಧ್ಯಯನಕ್ಕೆ ತೊಡಗಿಸಿಕೊಳ್ಳುತ್ತಿದ್ದಾರೆ.

  ಶಾಲೆ-ಕಾಲೇಜು ಮಕ್ಕಳು ಮಾತ್ರವಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರು ಕೂಡ ಆನ್ಲೈನ್ ಕಲಿಕೆಗೆ ಸ್ಥಳಾಂತರಗೊಂಡಿದ್ದಾರೆ. ಹೀಗಾಗಿ ನೀವು ಯಾವುದೇ ವಿಷಯದಲ್ಲಿ ಎಕ್ಸ್ಪರ್ಟ್ ಆಗಿದ್ರೆ ಆನ್ಲೈನ್ ಟೀಚಿಂಗ್ ಶುರು ಮಾಡಬಹುದು.

  ಯುಟ್ಯೂಬ್, ಇನ್ಸ್ಟಾಗ್ರಾಮ್, ಸೇರಿದಂತೆ ಹಲವು ತಾಣಗಳ ಮೂಲಕ ಆನ್ಲೈನ್ ಕ್ಲಾಸ್ ಕೋಚಿಂಗ್ ಕೊಡಬಹುದು. ಪ್ರಸ್ತುತ ಬೈಜುಸ್, UNacadmey, ಸೇರಿದಂತೆ ಅನೇಕ ಆನ್‌ಲೈನ್ ಕಲಿಕೆ ವೇದಿಕೆಗಳ ಮೂಲಕ ನೀವು ವಿದ್ಯಾರ್ಥಿಗಳಿಗೆ ಕಲಿಸಬಹುದು.

  ಇದನ್ನೂ ಓದಿ: 2 ವರ್ಷದಲ್ಲೇ ತೀರಿತು 4 ಸಾವಿರ ಕೋಟಿ ಸಾಲ, ಎಲ್ಲಕ್ಕೂ ಕಾರಣ ಮಾಳವಿಕಾ ಹೆಗ್ಡೆ!

  2) ಸೈಬರ್ ಭದ್ರತಾ ಸೇವೆಗಳು: ಪ್ರಸ್ತುತ ದಿನಗಳಲ್ಲಿ ಪ್ರತಿಯೊಂದು ಸಾಫ್ಟ್ವೇರ್ ಕಂಪನಿಗಳು ತಮ್ಮ ಡೇಟಾ ಸುರಕ್ಷತೆಗಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸುತ್ತಿದೆ.. ಒಂದು ವೇಳೆ ನೀವು ಹ್ಯಾಕಿಂಗ್ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ನಲ್ಲಿ ಪರಿಣಿತಿ ಹೊಂದಿದ್ದರು ಸೈಬರ್ ಸೆಕ್ಯೂರಿಟಿ ಸೇವೆಗಳನ್ನು ನೀಡುವ ಉದ್ಯಮಿ ಆರಂಭಿಸಬಹುದು.

  ಅದೇ ವರ್ಷದ ಆರಂಭದಲ್ಲಿಯೇ ದೊಡ್ಡ ದೊಡ್ಡ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳು ಹ್ಯಾಕ್ ಆಗಿರುವ ಸುದ್ದಿಗಳು ಕೂಡ ಬಂದಿವೆ. ಹೀಗಾಗಿ ತಮ್ಮ ಸಿಸ್ಟಂಗಳ ಡೇಟಾವನ್ನು ರಕ್ಷಿಸಲು ಎಲ್ಲಾ ಕಂಪನಿಗಳು ದೊಡ್ಡ ಮಟ್ಟದಲ್ಲಿ ಹಣ ಆಗುತ್ತದೆ ಹೀಗಾಗಿ ನೀವು ಇದರ ಪ್ರಯೋಜನ ಪಡೆದುಕೊಳ್ಳಬಹುದು..

  3) ಕ್ಲೌಡ್ ಕಿಚನ್: ಪ್ರಸ್ತುತ ಆನ್ಲೈನ್ ದುನಿಯಾ..ಮನೆಯಲ್ಲಿಯೇ ಕುಳಿತು ಮನೆಗೆ ಬೇಕಾದ ಎಲ್ಲಾ ವಸ್ತುಗಳನ್ನು ನಾವು ಆನ್ಲೈನ್ ಮೂಲಕ ಪಡೆದುಕೊಳ್ಳಬಹುದಾಗಿದೆ.. ಆಹಾರ ಅಡುಗೆ ಕೂಡ ಆನ್ಲೈನ್ ಮೂಲಕ ಹೆಚ್ಚು ಮಾರಾಟವಾಗುತ್ತಿದೆ. ಹಾಗಾಗಿ 2022 ರಲ್ಲಿ ನೀವು ಹೊಸ ಉದ್ದಿಮೆ ಶುರು ಮಾಡಲು ಬಯಸಿದರೆ ಕ್ಲೌಡ್ ಕಿಚನ್ ಉದ್ದಿಮೆ ವ್ಯಾಪಾರ ವ್ಯವಹಾರ ಮಾಡಲು ಒಂದು ಉತ್ತಮವಾದ ತಾಣವಾಗಿದೆ.

  ನಿಮ್ಮ ಮನೆಯಲ್ಲಿಯೇ ತರಹೇವಾರಿ ಅಡುಗೆ ಮಾಡಿ ಯಾವುದಾದರೂ ಆನ್ಲೈನ್ ಫುಡ್ ಆರ್ಡರ್ ಮಾಡುವ ಮೂಲಕ ನಿಮ್ಮ ಆಹಾರವನ್ನು ನೀವು ಮಾರಾಟ ಮಾಡಿ ಹಣ ಸಂಪಾದನೆ ಮಾಡಬಹುದು.

  4) ಪೆಟ್ ಡೇಕೇರ್: ನೀವು ಸಾಕುಪ್ರಾಣಿಗಳ ಪ್ರೇಮಿಯಾಗಿದ್ದರೆ, ಸಾಕುಪ್ರಾಣಿಗಳ ಡೇಕೇರ್ ವ್ಯವಹಾರವನ್ನು ಪ್ರಾರಂಭಿಸಬಹುದು.ಕಚೇರಿಗೆ ಹೋಗುವ ವೃತ್ತಿಪರರಿಗೆ ಆ ಸಮಯದಲ್ಲಿ ತಮ್ಮ ಸಾಕು ಪ್ರಾಣಿಗಳನ್ನು ನೋಡಿಕೊಳ್ಳುವವರ ಅವಶ್ಯಕತೆಯಿರುತ್ತದೆ. ಅವರ ಸಾಕು ಪ್ರಾಣಿಗಳನ್ನು ನೀವು ನೋಡಿಕೊಳ್ಳುವ ಮೂಲಕ ಹಣ ಗಳಿಸಬಹುದು.

  ವಿದೇಶಿ ಪ್ರವಾಸಕ್ಕೆ ಹೋಗುವಾಗ ಹಾಗೂ ಬೇರೆ ಊರಿಗೆ ಹೋಗುವಾಗಲೂ ಜನರು ಸಾಕು ಪ್ರಾಣಿಗಳನ್ನು ಡೇಕೇರ್ ನಲ್ಲಿ ಬಿಡುತ್ತಾರೆ.

  ಇದನ್ನೂ ಓದಿ: ಮನೆಯಲ್ಲಿಯೇ ಕುಳಿತು ಪ್ರತಿ ತಿಂಗಳು 50 ಸಾವಿರ ರೂ. ಸಂಪಾದಿಸುವ ಬ್ಯುಸಿನೆಸ್ ಐಡಿಯಾ ಇಲ್ಲಿದೆ

  5) ಬ್ಲಾಗಿಂಗ್: ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್ ಇನ್ಸ್ಟಾಗ್ರಾಂ ಸೇರಿ ಹಲವಾರು ಸೋಶಿಯಲ್ ಮೀಡಿಯಾದಲ್ಲಿ ಬರವಣಿಗೆಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ. ಹೀಗಾಗಿ ನೀವು ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನೀವು ಭೇಟಿ ನೀಡುವ ಪ್ರವಾಸಿತಾಣಗಳು ರೆಸ್ಟೋರೆಂಟ್ ಗಳು ಪಾಕ ವಿಧಾನಗಳು ಸೇರಿ ಹಲವಾರು ವಿಷಯಗಳ ಬಗ್ಗೆ ಬರೆದುಕೊಂಡು ಅವುಗಳನ್ನು ವಿಮರ್ಶೆ ಮಾಡಿ ನಿಮ್ಮ ಸೋಶಿಯಲ್ ಮೀಡಿಯಾ ತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಅಪಾರ ಹಣ ಗಳಿಸಬಹುದಾಗಿದೆ.
  Published by:ranjumbkgowda1 ranjumbkgowda1
  First published: