ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ (Finance Minister Nirmala Sitharaman) ಫೆಬ್ರವರಿ 1 ರಂದು ಈ ವರ್ಷದ ಕೇಂದ್ರ ಬಜೆಟ್ (Union Budget) ಮಂಡನೆ ಮಾಡಲಿದ್ದಾರೆ. ಇದು 2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ನರೇಂದ್ರ ಮೋದಿ (Narendra Modi) ಸರ್ಕಾರದಿಂದ ಮಂಡನೆಯಾಗಲಿರುವ ಕೊನೆಯ ಬಜೆಟ್ ಆಗಲಿದೆ. ಹಾಗಾಗಿ ದೇಶದ ಜನತೆಗೆ ಈ ಬಾರಿಯ ಬಜೆಟ್ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆ. ಬಜೆಟ್ ಮಂಡನೆ ಮಾಡುವುದಕ್ಕೂ ಮುನ್ನ ಹಲವು ವರ್ಷಗಳಿಂದ ಸಾಂಪ್ರದಾಯಿಕ ಹಲ್ವಾ ಸಮಾರಂಭ (Halwa Ceremony) ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷದ ಹಲ್ವಾ ಸಮಾರಂಭ ನಾಳೆ ನಡೆಯಲಿದೆ. ಕಳೆದ ವರ್ಷ ಕೊರೊನಾ ಕಾರಣದಿಂದ ಸಮಾರಣಭ ನಡೆದಿರಲಿಲ್ಲ. ಆದರೆ ಈ ಬಾರಿ ಆಚರಣೆ ಮಾಡಲಾಗುತ್ತಿದೆ.
ಹಲ್ವಾ ಸಮಾರಂಭದ ಬಗ್ಗೆ ಮಾಹಿತಿ
ಕೇಂದ್ರ ಸರ್ಕಾರದ ಬಜೆಟ್ ಮಂಡನೆಗೂ ಮುನ್ನ ಕೆಲವು ವರ್ಷಗಳಿಂದ ಹಣಕಾಸು ಇಲಾಖೆ ಈ ಅಲ್ವಾ ಸಮಾರಂಭವನ್ನು ಆಯೋಜಿಸಿಕೊಂಡು ಬರುತ್ತಿದೆ. ಈ ಸಮಾರಂಭದ ಮೂಲಕವೇ ಕೇಂದ್ರ ಬಜೆಟ್ ಪ್ರತಿ ಮುದ್ರಣಾ ಕಾರ್ಯಕ್ಕೆ ಇಲಾಖೆ ಅಧಿಕೃತ ಚಾಲನೆ ನೀಡುತ್ತದೆ. ಅದರಂತೆ ಈ ಬಾರಿಯೂ ಜನವರಿ 26ರಂದ ನಿರ್ಮಲಾ ಸೀತಾರಾಮನ್ ಅವರು ಹಲ್ವಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದಾರೆ.
ಬಜೆಟ್ ಪ್ರತಿ ಮುದ್ರಣದಲ್ಲಿ ತೊಡಗಿಸಿಕೊಳ್ಳುವುದು
ಪ್ರತಿವರ್ಷ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಹಲ್ವಾ ಸಮಾರಂಭದ ಇತಿಹಾಸದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯಿಲ್ಲ ಅಥವಾ ಹಿನ್ನಲೆಯಿಲ್ಲ. ಆದರೆ ಶುಭಕಾರ್ಯಕ್ಕೂ ಮುನ್ನ ಸಿಹಿ ಹಂಚುವ ಸಂಪ್ರದಾಯದಂತೆ ಈ ಸಂಪ್ರದಾಯವೂ ನಡೆದುಕೊಂಡು ಬಂದಿದೆ. ಹಣಕಾಸು ಇಲಾಖೆ ಪ್ರಕಾರ ಸಿಬ್ಬಂದಿ ಬಜೆಟ್ ಪ್ರತಿ ಮುದ್ರಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಕಾರ್ಯಕ್ರಮವನ್ನು ಹಲ್ವಾ ಸಮಾರಂಭ ಎಂಬುದಾಗಿದೆ.
ಇದನ್ನೂ ಓದಿ: Union Budget: ಹೊಸ ತೆರಿಗೆ ಪದ್ಧತಿ ಹೇಗಿರಲಿದೆ? ಆದಾಯ ತೆರಿಗೆ ಕುರಿತು ನೀವು ತಿಳಿಯಬೇಕಾದ ಪ್ರಮುಖ ಮಾಹಿತಿಗಳಿವು
ಬಂಧಿಗಳಾಗುವ ಸಿಬ್ಬಂದಿ
ಹಲ್ವಾ ಸಮಾರಂಭ ಮುಗಿದ ಕೂಡಲೇ ದೆಹಲಿಯ ನಾರ್ಥ್ ಬ್ಲಾಕ್ನಲ್ಲಿರುವ ತಳ ಅಂತಸ್ತಿನ ಹಣಕಾಸು ಸಚಿವಾಲಯದ ಮುಖ್ಯ ಕಚೇರಿಯಲ್ಲಿ ಹಣಕಾಸು ಇಲಾಖೆ ಸಿಬ್ಬಂದಿಗಳೆಲ್ಲಾ ಬಜೆಟ್ ಮಂಡನೆಯಾಗುವವರೆಗೂ ಇರಬೇಕಾಗತ್ತದೆ. ಬಜೆಟ್ ಮಂಡನೆಯಾಗುವವರೆಗೂ ಬಾಹ್ಯ ಜಗತ್ತಿನ ಸಂಪರ್ಕ ಕಡಿತವಾಗುತ್ತದೆ. ಬಜೆಟ್ ಮಾಹಿತಿಯ ಗೌಪ್ಯತೆ ಕಾಪಾಡಿಕೊಳ್ಳುವುದಕ್ಕಾಗಿ ಈ ನಿಯಮ ಅನುಸರಿಸಲಾಗುತ್ತಿದೆ. ಬಜೆಟ್ ಮುಗಿಯುವವರೆಗೆ ಕುಟುಂಬಸ್ಥರೊಂದಿಗೂ ಸಿಬ್ಬಂದಿಗಳು ಮಾತನಾಡಲು ಸಾಧ್ಯವಿಲ್ಲ. ಸಚಿವರು ಹಾಗೂ ಕೆಲವು ಮೇಲಧಿಕಾರಿಗಳು ಮಾತ್ರ ಹೊರಬರಲು ಹಾಗೂ ಕುಟುಂಬಸ್ಥರೊಂದಿಗೆ ಮಾತನಾಡುವ ಅವಕಾಶ ಹೊಂದಿದ್ದಾರೆ.
ಸಿಬ್ಬಂದಿಗಳನ್ನು ಉತ್ತೇಜಿಸುವ ಉದ್ದೇಶ
ಬಜೆಟ್ ಸಿದ್ಧಪಡಿಸಿದ ನಂತರ ಹಾಗೂ ಮಂಡನೆಗೂ ಮೊದಲು ಹಲ್ವಾ ಸಮಾರಂಭ ನಡೆಸಲಾಗುತ್ತದೆ. ಬಜೆಟ್ ಪ್ರತಿಗಳ ಅಂತಿಮ ಹಂತದ ಸಿದ್ಧತೆಯಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನ ಉತ್ತೇಜಿಸುವುದಕ್ಕಾಗಿ ಈ ಕಾರ್ಯಕ್ರಮವನ್ನು ಸಿಬ್ಬಂದಿಗಳಿದ್ದ ಸ್ಥಳದಲ್ಲೇ ನಡೆಸಲಾಗುತ್ತದೆ. ಒಂದು ದೊಡ್ಡ ಕಡಾಯಿಯಲ್ಲಿ ಹಲ್ವಾ ತಯಾರಿಸಲಾಗುತ್ತದೆ. ಹಣಕಾಸು ಸಚಿವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಇಲಾಖೆಯ 100ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಹಲ್ವಾ ಹಂಚುತ್ತಾರೆ. ನಂತರ ಸಿಬ್ಬಂದಿಗಳು ಕಚೇರಿಯಲ್ಲಿ 10 ದಿನಗಳ ಕಾಲ ಲಾಕ್ ಆಗುತ್ತಾರೆ. ಬಜೆಟ್ ಮಂಡನೆಯ ನಂತರವಷ್ಟೆ ಹೊರ ಬರಲಿದ್ದಾರೆ.
ಕಳೆದ ವರ್ಷ ಹಲ್ವಾ ಬದಲಿಗೆ ಸಿಹಿ ತಿನಿಸು
021ರಲ್ಲಿ ಕೋವಿಡ್ ಸಾಂಕ್ರಾಮಿಕದ ಕಾರಣ ಕಾಗದ ರಹಿತ ಬಜೆಟ್ ಮಂಡಿಸಲಾಗಿತ್ತು. ಈ ಹಲ್ವಾ ಸಮಾರಂಭ ನಡೆಸಿರಲಿಲ್ಲ. ಬಜೆಟ್ ಡಿಜಿಟಲ್ ಮೂಲಕ ಮಂಡಿಸಲಾಗಿತ್ತು. ಬಜೆಟ್ ತಯಾರಿಕೆ ಪ್ರಕ್ರಿಯೆಯ ಅಂತಿಮ ಹಂತವನ್ನು ಗುರುತಿಸುವ ಸಲುವಾಗಿ ಪ್ರತಿಬಾರಿಯ ಹಲ್ವಾ ಸಮಾರಂಭದ ಬದಲಿಗೆ ಬಂಧಿಯಾಗಿದ್ದ ಸಿಬ್ಬಂದಿಗಳಿಗೆ ಸಿಹಿತಿಂಡಿಗಳನ್ನು ಹಂಚಿಕೆ ಮಾಡಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ