Union Budget 2023: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್​​ನಲ್ಲಿ ಯಾವ ಅಂಶಗಳಿಗೆ ಮಹತ್ವ ನೀಡಿದ್ದಾರೆ?

ನಿರ್ಮಲಾ ಸೀತಾರಾಮನ್​

ನಿರ್ಮಲಾ ಸೀತಾರಾಮನ್​

ಹಣಕಾಸು ಸಚಿವರು ಈ ಬಜೆಟ್‌ನಲ್ಲಿ ಹಿಂದಿನ ಬಜೆಟ್‌ಗಳ ಅದೇ ಹಾದಿಯನ್ನು ಅನುಸರಿಸಿದ್ದು, ದೀರ್ಘಾವಧಿಯ ಬೆಳವಣಿಗೆಯ ಎಲ್ಲಾ ಆಧಾರ ಸ್ತಂಭಗಳನ್ನು ಬಲಪಡಿಸುವತ್ತ ಗಮನ ಹರಿಸಿದ್ದಾರೆ.

  • Trending Desk
  • 4-MIN READ
  • Last Updated :
  • Share this:

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Finance Minister Nirmala Sitharaman) 2023 ರ ಯೂನಿಯನ್ ಬಜೆಟ್(Union Budget 2023) ಅನ್ನು ಮಂಡಿಸಿದ್ದು ಒಂದೇ ಬಾರಿಗೆ ಮೂರು ಟಾರ್ಗೆಟ್‌ಗಳ ಗುರಿ ಸಾಧಿಸಿದ್ದಾರೆ. ಸಚಿವರು ಬಂಡವಾಳ ವೆಚ್ಚಕ್ಕಾಗಿ ರೂ 10 ಲಕ್ಷ ಕೋಟಿಗಳನ್ನು ಒದಗಿಸಿದ್ದು, ಈ ಮೊತ್ತವು ಕಳೆದ ವರ್ಷಕ್ಕಿಂತ 33% ಹೆಚ್ಚಾಗಿದೆ ಹಾಗೂ ಆರ್ಥಿಕ ವರ್ಷ 16 ರಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಹಂಚಿಕೆ ಎಂದೆನಿಸಿದೆ.


ದುರ್ಬಲ ವರ್ಗದ ಬೆಂಬಲಕ್ಕೆ ನಿಂತ ಬಜೆಟ್


ಎಲ್ಲಾ ಅಂತ್ಯೋದಯ ಮತ್ತು ಆದ್ಯತಾ ಕುಟುಂಬಗಳಿಗೆ ಉಚಿತ ಧಾನ್ಯಗಳ ಯೋಜನೆಯನ್ನು ಮುಂದಿನ ಒಂದು ವರ್ಷಕ್ಕೆ ವಿಸ್ತರಿಸುವ ಮೂಲಕ ಅತ್ಯಂತ ದುರ್ಬಲ ವರ್ಗದ ಬೆಂಬಲಕ್ಕೂ ಈ ಬಾರಿಯ ಬಜೆಟ್ ಆಧಾರವಾಗಿ ನಿಂತಿದೆ.


ಗಮನಾರ್ಹವಾಗಿ, PMAY (ಪ್ರಧಾನ ಮಂತ್ರಿ ಆವಾಸ್ ಯೋಜನೆ) ಯೋಜನೆ ಮತ್ತು ಜಲ ಜೀವನ್ ಮಿಷನ್ ಅಡಿಯಲ್ಲಿ ವಸತಿಗಾಗಿ ಆರ್ಥಿಕ ಹಂಚಿಕೆ ಹೆಚ್ಚಳವು ದುರ್ಬಲ ವರ್ಗಗಳ ಜೀವನದ ಗುಣಮಟ್ಟವನ್ನು ಸುಧಾರಿಸಬೇಕೆಂಬ ಪಣ ತೊಟ್ಟಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.


ಜನಾಕರ್ಷಣೆಯಿಂದ ದೂರ


ಕಳೆದ ಬಾರಿಯ ಪೂರ್ಣ ಪ್ರಮಾಣದ ಚುನಾವಣಾ ಪೂರ್ವ ಬಜೆಟ್‌ನಲ್ಲಿ ಸರ್ಕಾರವು ಅತಿಯಾದ ಜನಾಕರ್ಷಣೆಯಿಂದ ದೂರ ಉಳಿದಿದೆ. ಹಣವನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಹಂಚುವುದರ ಬದಲಿಗೆ ಪ್ರಯೋಜನವನ್ನು ಬೆಳವಣಿಗೆಯನ್ನು ಉದ್ದೇಶವಾಗಿರಿಸಿಕೊಂಡು ಖರ್ಚು ಮಾಡುವುದರ ಮೇಲೆ ಗಮನ ಕೇಂದ್ರೀಕರಿಸಿದೆ.


ಆದಾಯದ ಅಂದಾಜುಗಳು ಸ್ಥಿರವಾಗಿವೆ ಮತ್ತು ಸಾಧಿಸುವಂತಿರಬೇಕು. ಈ ನಿಟ್ಟಿನಲ್ಲಿ ಆಹಾರ, ರಸಗೊಬ್ಬರ ಮತ್ತು ತೈಲದ ಸಬ್ಸಿಡಿಯನ್ನು 28 % ದಷ್ಟು ಕಡಿಮೆ ಮಾಡುವ ಮೂಲಕ ಆದಾಯ ವೆಚ್ಚವನ್ನು 35 ಲಕ್ಷ ಕೋಟಿ ರೂಗೆ ಇರಿಸಿದೆ.


ಇದನ್ನೂ ಓದಿ: Good News: ಕೇಂದ್ರ ಬಜೆಟ್​ನಲ್ಲಿ ಬೆಂಗಳೂರಿಗೆ ಸಿಕ್ತು 450 ಕೋಟಿ!


ಹಣಕಾಸಿನ ಕೊರತೆಯು ಆರ್ಥಿಕ ವರ್ಷ 23 ಕ್ಕೆ 6.4% ವಿರುದ್ಧ ಆರ್ಥಿಕ ವರ್ಷ 24 ಗೆ 5.9% ಎಂದು ಅಂದಾಜಿಸಲಾಗಿದೆ. ಆರ್ಥಿಕ ವರ್ಷ 26 ರಲ್ಲಿ ಆರ್ಥಿಕ ಕೊರತೆಯ ಗುರಿಯನ್ನು 4.5% ಸಾಧಿಸುವ ತನ್ನ ಬದ್ಧತೆಯನ್ನು ಸರ್ಕಾರ ಪುನರುಚ್ಚರಿಸಿದೆ. ಇದು ಹೆಚ್ಚಿನ ಹಣದುಬ್ಬರದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬುದು ಲೆಕ್ಕಾಚಾರವಾಗಿದೆ.


ಬೆಳವಣಿಗೆಯತ್ತ ಮುಖ ಮಾಡಿರುವ ಬಜೆಟ್


ಹಣಕಾಸು ಸಚಿವರು ಈ ಬಜೆಟ್‌ನಲ್ಲಿ ಹಿಂದಿನ ಬಜೆಟ್‌ಗಳ ಅದೇ ಹಾದಿಯನ್ನು ಅನುಸರಿಸಿದ್ದು, ದೀರ್ಘಾವಧಿಯ ಬೆಳವಣಿಗೆಯ ಎಲ್ಲಾ ಆಧಾರ ಸ್ತಂಭಗಳನ್ನು ಬಲಪಡಿಸುವತ್ತ ಗಮನ ಹರಿಸಿದ್ದಾರೆ.


ಮೂಲಸೌಕರ್ಯದಲ್ಲಿನ ಹೂಡಿಕೆಯು ವೆಚ್ಚವನ್ನು ಕಡಿಮೆ ಮಾಡಬೇಕು ಮತ್ತು ಭಾರತೀಯ ವ್ಯವಹಾರಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಬೇಕು. ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಗಳ ಅಡಿಯಲ್ಲಿ ಉತ್ತೇಜಕಗಳ ವೆಚ್ಚದಲ್ಲಿ ತೀಕ್ಷ್ಣವಾದ ಹೆಚ್ಚಳವು ಉತ್ಪಾದನೆಗೆ ಬಲವಾದ ಬೆಳವಣಿಗೆಯನ್ನು ಮುಂದುವರಿಸಬೇಕು ಎಂಬುದು ಬಜೆಟ್ ಘೋಷಣೆಗಳಲ್ಲಿ ಪುನರುಚ್ಛರಿಸಲಾಗಿದೆ.


ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಶ್ರೇಷ್ಠತೆಯ ಕೇಂದ್ರಗಳು


ಮಧ್ಯಮಾವಧಿಯಲ್ಲಿ ವಲಯಗಳಾದ್ಯಂತ ಉತ್ಪಾದನೆಯಲ್ಲಿನ ಬೆಳವಣಿಗೆಯು ಪ್ರಬಲವಾಗಿ ಉಳಿಯುತ್ತದೆ ಎಂದು ನಾವು ನಿರೀಕ್ಷಿಸಬಹುದು. ಕ್ಯಾಮೆರಾ ಲೆನ್ಸ್‌ನಂತಹ ಕೆಲವು ಭಾಗಗಳು ಮತ್ತು ಇನ್‌ಪುಟ್‌ಗಳ ಆಮದು ಮೇಲಿನ ಕಸ್ಟಮ್ಸ್ ಸುಂಕದ ಪರಿಹಾರವನ್ನು ವಿಸ್ತರಿಸುವ ಮೂಲಕ ಸರ್ಕಾರವು ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಬೆಂಬಲಿಸುವುದನ್ನು ಮುಂದುವರೆಸಿದೆ.


ಎಲೆಕ್ಟ್ರಿಕ್ ವಾಹನಗಳ (ಇವಿ) ಉತ್ಪಾದನೆಯನ್ನು ಉತ್ತೇಜಿಸಲು ಬ್ಯಾಟರಿಗಳಿಗಾಗಿ ಲಿಥಿಯಂ-ಐಯಾನ್ ಕೋಶಗಳ ಮೇಲಿನ ರಿಯಾಯಿತಿ ಸುಂಕವನ್ನು ಇನ್ನೂ ಒಂದು ವರ್ಷದವರೆಗೆ ಮುಂದುವರಿಸಲಾಗುತ್ತದೆ.


ನಿರ್ಗಮನ ತೆರಿಗೆ ಇಲ್ಲ


ನಿರ್ಗಮನ ತೆರಿಗೆ ಇಲ್ಲದಿರುವುದು ಈ ಬಜೆಟ್‌ನಲ್ಲಿ ಕಂಡುಬಂದ ದೋಷ ಎಂದೆನಿಸಿದೆ. $2 ಮಿಲಿಯನ್‌ಗಿಂತಲೂ ಹೆಚ್ಚಿನ ಆಸ್ತಿಯನ್ನು ಹೊಂದಿರುವ ಯುಎಸ್ ಪ್ರಜೆಗಳು ತಮ್ಮ ಪೌರತ್ವವನ್ನು ಒಪ್ಪಿಸುವ ಮೊದಲು ತಮ್ಮ ಸ್ವತ್ತುಗಳ ಮೇಲಿನ ಸಾಧಿಸದೇ ಇರುವ ಲಾಭಗಳ ಮೇಲಿನ ತೆರಿಗೆಯನ್ನು ವಿಧಿಸಬೇಕಾಗುತ್ತದೆ.



ಕಳೆದ ಎಂಟು ವರ್ಷಗಳಲ್ಲಿ ಹದಿನೇಳು ಲಕ್ಷ ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. ಪೌರತ್ವವನ್ನು ತೊರೆಯದಂತೆ ತಡೆಯಲು ಮತ್ತು ತೆರಿಗೆ ತಪ್ಪಿಸುವಿಕೆಯನ್ನು ಕಡಿಮೆ ಮಾಡಲು ಭಾರತೀಯರಿಗೆ ನಿರ್ಗಮನ ತೆರಿಗೆಯನ್ನು ವಿಧಿಸಬಹುದಾಗಿತ್ತು ಎಂಬುದು ಆರ್ಥಿಕ ಚಿಂತಕರ ಅಭಿಪ್ರಾಯವಾಗಿದೆ.

Published by:Latha CG
First published: