ದೇಶದ ಚಿನ್ನಪ್ರಿಯರಿಗೆ ಬಜೆಟ್ (Budget) ನಲ್ಲಿ ಶಾಕ್ ನೀಡಲಾಗಿದ್ದು , ಚಿನ್ನ(Gold) , ಬೆಳ್ಳಿ (Silver), ವಜ್ರ (Diamond) ಬೆಲೆ ಏರಿಕೆಯಾಗಲಿದೆ. ಲಿಥೀಯಂ ಬ್ಯಾಟರಿ ಮೇಲಿನ ಸುಂಕ ಕಡಿತ ಮಾಡಲಾಗಿದೆ, ಬಂಗಾರ, ಬೆಳ್ಳಿ, ವಜ್ರ ದುಬಾರಿಯಾಗಲಿದ್ದು . ಸಿಗರೇಟ್, ಪ್ಯಾಟಿನಂ, ರೆಡಿಮೆಡ್ ಬಟ್ಟೆ (Readymade Cloths) ಗಳು ಮತ್ತಷ್ಟು ದುಬಾರಿಯಾಗಲಿದೆ. ಬ್ಲೆಂಡೆಡ್ ಸಿಎನ್ ಜಿಗೆ ಕಸ್ಟಮ್ಸ್ ಸುಂಕ ರದ್ದು.ರೆಡಿಮೇಟ್ ಬಟ್ಟೆ ಬೆಲೆ ಏರಿಕೆ, ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿಗಳ ಬೆಲೆ ಇಳಿಕೆ.ವಿದೇಶಿ ವಾಹನಗಳ ಆಮದು ದುಬಾರಿಯಾಗಲಿದೆ. ನಿರ್ಮಲಾ ಸೀತಾರಾಮನ್ ಅವರೇ ಈ ವಿಚಾರವನ್ನು ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ಬಜೆಟ್ ಮಂಡಿಸಿದರು. ಭಾರತದ ಆರ್ಥಿಕತೆ ಉತ್ತಮ ರೀತಿಯಲ್ಲಿ ಬೆಳೆಯುತ್ತಿದೆ ಎಂದು ಮಾಹಿತಿ ನೀಡಿದ ಅವರು ವಿವಿಧ ಪ್ರಮುಖ ವಿಷಯಗಳ ಬಗ್ಗೆಯೂ ವಿವರಿಸಿದರು.
ಒಂದು ಕಡೆ, ಬಜೆಟ್ 2023 ರಲ್ಲಿ, ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂನಿಂದ ಮಾಡಿದ ಆಮದು ಮಾಡಿದ ಆಭರಣಗಳು ದುಬಾರಿ ಎಂದು ಘೋಷಿಸಲಾಯಿತು. ಮತ್ತೊಂದೆಡೆ, ಭಾರತೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ. ಇಂದು (ಗುರುವಾರ), ಫೆಬ್ರವರಿ 1 ರ ಬೆಳಗ್ಗೆ ಚಿನ್ನದ ದರದಲ್ಲಿ ಏರಿಕೆಯಾಗಿದೆ. ಇದೇ ವೇಳೆ ಬೆಳ್ಳಿ ದರದಲ್ಲಿ ಏರಿಕೆ ಕಂಡುಬಂದಿದೆ. 24 ಕ್ಯಾರೆಟ್ ನ 10 ಗ್ರಾಂ ಶುದ್ಧ ಚಿನ್ನ 57 ಸಾವಿರ ಮೀರಿ ತಯಾರಾಗಿದ್ದರೆ, 999 ಶುದ್ಧ ಬೆಳ್ಳಿಯ ಬೆಲೆ ಕೆಜಿಗೆ 58 ಸಾವಿರ ರೂಪಾಯಿ ಮೀರಿದೆ.
ಇದನ್ನೂ ಓದಿ: ಮಧ್ಯಮ ವರ್ಗಕ್ಕೆ ಬಿಗ್ ರಿಲೀಫ್, 5ರಿಂದ 7 ಲಕ್ಷದವರೆಗೆ ಟ್ಯಾಕ್ಸ್ ಇಲ್ಲ!
7 ಲಕ್ಷದವರೆಗೂ ಟ್ಯಾಕ್ಸ್ ಇಲ್ಲ!
7 ಲಕ್ಷ ರೂ ಆದಾಯದರೆಗೂ ತೆರಿಗೆ ವಿನಾಯಿತಿಯನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ನಿರೀಕ್ಷೆಯಂತೆ ಮಧ್ಯಮ ವರ್ಗದರವಿಗೆ ಹೆಚ್ಚಿನ ತೆರಿಗೆ ಘೋಷಿಸಿದ ನಿರಾಳವಾಗುವಂತೆ ಮಾಡಿದೆ. ಹೊಸ ಆದಾಯ ತೆರಿಗೆ ಪದ್ಧತಿಯಡಿ 7 ಲಕ್ಷ ಆದಾಯದವರೆಗೂ ತೆರಿಗೆ ಕಟ್ಟುವ ಅಗತ್ಯವಿರೋಲ್ಲ.
ವರ್ಷಕ್ಕೆ ₹ 3 ಲಕ್ಷದವರೆಗೆ ಯಾವುದೇ ತೆರಿಗೆ ಇರುವುದಿಲ್ಲ. ₹ 6ರಿಂದ 9 ಲಕ್ಷದವರೆಗೆ ಶೇ 10. ₹ 12ರಿಂದ 15 ಲಕ್ಷಕ್ಕೆ ಶೇ 15. ₹ 15 ಲಕ್ಷಕ್ಕೂ ಹೆಚ್ಚು ಇದ್ದರೆ ಶೇ 30ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು. 15 ಲಕ್ಷ ರೂ. ಆದಾಯಕ್ಕಿಂತೆ ಹೆಚ್ಚಿಗೆ ಇರೋರಿಗೆ ಹೊಸ ತೆರಿಗೆ ಪದ್ಧತಿಯಂತೆ ಶೇ.15ರಷ್ಟು ತೆರಿಗೆ ಕಟ್ಟಬೇಕಾಗಿದ್ದು, 3 ಲಕ್ಷ ರೂಪಾಯಿ ಆದಾಯ ಇರೋರು ತೆರಿಗೆ ಕಟ್ಟುವ ಅಗತ್ಯವಿಲ್ಲ. 7 ಲಕ್ಷದವರೆಗೂ ತೆರಿಗೆ ಮಿತಿ ಇದೆ.
ಆದಾಯ ತೆರಿಗೆಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 5 ಮಹತ್ವದ ಕ್ರಮಗಳನ್ನು ಘೋಷಿಸಿದ್ದಾರೆ.
1) ₹ 7 ಲಕ್ಷದವರೆಗೆ ಆದಾಯ ತೆರಿಗೆ ವಿನಾಯ್ತಿ.
2) ಹೊಸ ತೆರಿಗೆ ಪದ್ಧತಿಯಲ್ಲಿ ಟ್ಯಾಕ್ಸ್ ಸ್ಲ್ಯಾಬ್ಗಳನ್ನು (ತೆರಿಗೆ ಹಂತಗಳು) 5ಕ್ಕೆ ಮಿತಗೊಳಿಸಲಾಗಿದೆ.
3) ₹ 15.5 ಲಕ್ಷ ಅಥವಾ ಅದಕ್ಕೂ ಹೆಚ್ಚಿನ ಆದಾಯವನ್ನು ವೇತನದಿಂದ ಪಡೆಯುವವರಿಗೆ ₹ 52,500 ಸ್ಟಾಂಡರ್ಡ್ ಡಿಡಕ್ಷನ್ ಸೌಲಭ್ಯ ಸಿಗಲಿದೆ.
4) ಈವರೆಗೆ ಗರಿಷ್ಠ ತೆರಿಗೆಯ ಮೇಲೆ ಶೇ 37ರಷ್ಟು ಸರ್ಚಾರ್ಜ್ ವಿಧಿಸಲಾಗುತ್ತಿತ್ತು. ಈ ಪ್ರಮಾಣವನ್ನು ಹೊಸ ತೆರಿಗೆ ನೀತಿಯಡಿ ಶೇ 25ಕ್ಕೆ ಇಳಿಸಲಾಗಿದೆ
5) ನಿವೃತ್ತರಾದಾಗ ಸಿಗುವ ರಜೆ ನಗದೀಕರಣ ಸೌಲಭ್ಯದ ಮೇಲೆ ಈವರೆಗೆ ₹ 3 ಲಕ್ಷಕ್ಕೆ ಮಾತ್ರ ತೆರಿಗೆ ವಿನಾಯ್ತಿ ಇತ್ತು. ಈ ಮೊತ್ತವನ್ನು ₹ 25 ಲಕ್ಷಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ