• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Income Tax Slabs: ನಿರ್ಮಲಾ ಸೀತಾರಾಮನ್ ಇಳಿಸಿದ್ರು ಟ್ಯಾಕ್ಸ್ ಭಾರ, ಜನಸಾಮಾನ್ಯರು ಮಾಡೋದು ಹೇಗೆ ತೆರಿಗೆ ಲೆಕ್ಕಾಚಾರ?

Income Tax Slabs: ನಿರ್ಮಲಾ ಸೀತಾರಾಮನ್ ಇಳಿಸಿದ್ರು ಟ್ಯಾಕ್ಸ್ ಭಾರ, ಜನಸಾಮಾನ್ಯರು ಮಾಡೋದು ಹೇಗೆ ತೆರಿಗೆ ಲೆಕ್ಕಾಚಾರ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಧ್ಯಮ ವರ್ಗಕ್ಕೆ ಖುಷಿ ಕೊಟ್ಟಿದ್ದರೂ, ಕೆಲವರಿಗೆ ಈ ಹೊಸ ಟ್ಯಾಕ್ಸ್​ ಸ್ಲ್ಯಾಬ್​ (New Tax Slab) ಬಗ್ಗೆ ಗೊಂದಲ ಉಂಟಾಗಿದೆ. ನ್ಯೂಸ್​ 18 ಕನ್ನಡಕ್ಕೆ ತೆರಿಗೆ ಸಲಹೆಗಾರರಾದ ಗೌರೀಶ್​ ಕುಮಾರ್​ ಕಟೀಲ್​ ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ವಿವರಿಸಿದ್ದಾರೆ.

  • Share this:

ಭಾರಿ ಕುತೂಹಲ ಮೂಡಿಸಿದ್ದ ಈ ಬಾರಿಯ ಬಜೆಟ್ (Budget 2023) ಮಧ್ಯಮ ವರ್ಗಕ್ಕೆ (Middle Class) ಬಂಪರ್ ಕೊಡುಗೆ ಘೋಷಿಸುವ ಮೂಲಕ ಜನಸಾಮಾನ್ಯರ ಹೊರೆಯನ್ನು ತಗ್ಗಿಸಿದೆ. ಆದಾಯ ತೆರಿಗೆ (Income Tax) ಮಿತಿಯನ್ನು 5 ಲಕ್ಷ ರೂಪಾಯಿಯಿಂದ 7 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ.  ಸೆಕ್ಷನ್ 87ಎ ಅಡಿಯಲ್ಲಿ 5 ರಿಂದ 7 ಲಕ್ಷ ರೂಪಾಯಿ ತೆರಿಗೆ ಮಿತಿ ಏರಿಕೆ ಮಾಡಲಾಗಿದೆ. ಸಂಬಳ (Salary) ಪಡೆಯುವ ವರ್ಗ ಇದೀಗ 7 ಲಕ್ಷ ರೂಪಾಯಿವರೆಗೆ ಯಾವುದೇ ಆದಾಯ ತೆರಿಗೆ ಪಾವತಿಸುವಂತಿಲ್ಲ. ಈ ವಿಚಾರ ಮಧ್ಯಮ ವರ್ಗಕ್ಕೆ ಖುಷಿ ಕೊಟ್ಟಿದ್ದರೂ, ಕೆಲವರಿಗೆ ಈ ಹೊಸ ಟ್ಯಾಕ್ಸ್​ ಸ್ಲ್ಯಾಬ್​ (New Tax Slab) ಬಗ್ಗೆ ಗೊಂದಲ ಉಂಟಾಗಿದೆ. ನ್ಯೂಸ್​ 18 ಕನ್ನಡಕ್ಕೆ ತೆರಿಗೆ ಸಲಹೆಗಾರರಾದ ಗೌರೀಶ್​ ಕುಮಾರ್​ ಕಟೀಲ್​ ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ವಿವರಿಸಿದ್ದಾರೆ.


ನ್ಯೂ ಟ್ಯಾಕ್ಸ್​ ರಿಜಿಮ್​ ಎಂದರೇನು?


ಇದೀಗ 3 ಲಕ್ಷ ರೂಪಾಯಿ ವರೆಗೆ ವೈಯುಕ್ತಿಕ ತೆರಿಗೆದಾರರು ಯಾವುದೇ ತೆರಿಗೆ ಪಾವತಿ ಮಾಡುವಂತಿಲ್ಲ. 3 ರಿಂದ 6 ಲಕ್ಷ ರೂಪಾಯಿ ಆದಾಯ ಹೊಂದಿದ ವೈಯುಕ್ತಿಕ ತೆರಿಗೆದಾರರು ಶೇಕಡ 5 ರಷ್ಟು ತೆರಿಗೆ ಪಾವತಿ ಮಾಡಬೇಕು. '2019-20ರಲ್ಲಿ ಹೊಸ ಟ್ಯಾಕ್ಸ್​ ರಿಜಿಮ್​ ಅನ್ನು ವಿತ್ತ ಸಚಿವೆ ಘೋಷಿಸಿದ್ದರು. 0 ಯಿಂದ 2.5 ಲಕ್ಷದವರೆಗೆ ಯಾವುದೇ ತೆರಿಗೆ ಕಟ್ಟಿವಂತಿಲ್ಲ. 2.5 ಲಕ್ಷದಿಂದ 5 ಲಕ್ಷದವರೆಗೆ 5%, ಇದಾದ ಬಳಿಕ ಎರಡುವರೆ ಲಕ್ಷ ಹೆಚ್ಚಾದಂತೆ 5 % ಟ್ಯಾಕ್ಸ್​ ಸೇರುತ್ತಾ ಹೋಗಿತ್ತು. 5 ಲಕ್ಷದವರೆಗೆ ಈ ಹಿಂದೆ ರಿಬೆಟ್​ ಇತ್ತು. ಈಗ 7 ಲಕ್ಷದವರೆಗೆ ಹೆಚ್ಚಿಸಲಾಗಿದೆ' ಎಂದು ಗೌರೀಶ್​ ಕುಮಾರ್​ ತಿಳಿಸಿದರು.


ಹೊಸ ಟ್ಯಾಕ್ಸ್​​ ಸ್ಲ್ಯಾಬ್​ ಏನಿದೆ?

₹ 0-3 ಲಕ್ಷಯಾವುದೇ ತೆರಿಗೆ ಇಲ್ಲ
₹ 3-6 ಲಕ್ಷ5 %
₹ 6-9 ಲಕ್ಷ10 %
₹ 9-12 ಲಕ್ಷ15 %
₹ 12-15 ಲಕ್ಷ20 %
₹ 15 ಲಕ್ಷಕ್ಕಿಂತ ಹೆಚ್ಚು30 %

ಟ್ಯಾಕ್ಸ್​ ಲೆಕ್ಕ ಹಾಕೋದು ಹೇಗೆ?


'ಒಬ್ಬ ವ್ಯಕ್ತಿ 7 ಲಕ್ಷದವರೆಗೆ ಸಂಬಳ ಬರುತ್ತೋ ಅವರು ಟ್ಯಾಕ್ಸ್​ ಲೆಕ್ಕಹಾಕಿ ರಿಬೇಟ್​ಗೆ ಅಪ್ಲೈ ಮಾಡಬೇಕು. ಐಟಿ ಫೈಲಿಂಗ್​ ಮಾಡುವ ​ ಮೊದಲ 3 ಲಕ್ಷಕ್ಕೆ ಯಾವುದೇ ಟ್ಯಾಕ್ಸ್​ ಕಟ್ಟುವ ಅವಶ್ಯಕತೆ ಇರೋದಿಲ್ಲ. 3 ರಿಂದ 6 ಲಕ್ಷದವರೆಗೆ 5% ಟ್ಯಾಕ್ಸ್ ಅಂದ್ರೆ 15 ಸಾವಿರ ಬರುತ್ತೆ. 6ರಿಂದ 9 ಲಕ್ಷಕ್ಕೆ 10% ಟ್ಯಾಕ್ಸ್​ ಕಟ್ಟಬೇಕು, ನಿಮ್ಮ ಆದಾಯ 7 ಲಕ್ಷ ಇದ್ದರೆ ಆಗ 10 ಸಾವಿರ ಅಷ್ಟೇ ನೀವು ಟ್ಯಾಕ್ಸ್​​ ಕಟ್ಟಬೇಕು. ಎರಡನ್ನೂ ಸೇರಿಸಿದರೆ 25 ಸಾವಿರ ಟ್ಯಾಕ್ಸ್ ಬರುತ್ತೆ. ರಿಬೆಟ್ 7 ಲಕ್ಷದವರೆಗೆ ಇರುವುದರಿಂದ ನೀವು 25 ಸಾವಿರವನ್ನು ಐಟಿ ಫೈಲಿಂಗ್​ನಲ್ಲಿ ತೋರಿಸಿ ರಿಬೆಟ್​ ಮಾಡಬೇಕು'


ಗೌರೀಶ್​ ಕುಮಾರ್​ ಕಟೀಲ್, ತೆರಿಗೆ ಸಲಹೆಗಾರ


ಇದನ್ನೂ ಓದಿ: ಬಡವರಿಗೆ ಸರ್ಕಾರದ ಗಿಫ್ಟ್​, ಉಚಿತ ಆಹಾರ ಧಾನ್ಯಕ್ಕೆ 2 ಲಕ್ಷ ಕೋಟಿ ಮೀಸಲು, ಸಂಪೂರ್ಣ ವೆಚ್ಚ ಇನ್ನು ಕೇಂದ್ರದ್ದೇ!


ಲೆಕ್ಕ ಕೊಡಬೇಕು, ಟ್ಯಾಕ್ಸ್​ ಕಟ್ಟಂಗಿಲ್ಲ!


'7 ಲಕ್ಷದವರೆಗೆ ಟ್ಯಾಕ್ಸ್​ ಇದ್ದರೂ ಕಟ್ಟುವಂತಿಲ್ಲ. ಲೆಕ್ಕ ಕೊಡಬೇಕು ಆದರೆ ರಿಬೆಟ್​ ಮಾಡಬಹುದು. ಸ್ಯಾಲರಿಯಲ್ಲೇ ಟ್ಯಾಕ್ಸ್​ ಕಟ್​ ಆಗಿ ಬರುವವರಿಗೆ ಯಾವುದೇ ಟ್ಯಾಕ್ಸ್​ ಕಟ್ಟುವಂತಿಲ್ಲ. ಒಂದು ವೇಳೆ ನಿಮ್ಮ ಆದಾಯ 7 ಲಕ್ಷಕ್ಕಿಂತ ಹೆಚ್ಚಿದ್ದರೆ ನೀವು ಈ ಹಿಂದಿನಂತೆ ಎಲ್ಲದ್ದಕ್ಕೂ ಟ್ಯಾಕ್ಸ್​ ಕಟ್ಟಬೇಕು. ನಿಮ್ಮ ಆದಾಯ 15 ಲಕ್ಷಕ್ಕಿಂತ ಹೆಚ್ಚಿದ್ದರೂ ನಿಮಗೆ ಒಂಥರಾ ಬೆನಿಫಿಟ್​ ಸಿಗಲಿದೆ. ನೀವು ಸರ್ಕಾರಿ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದರೆ ಆ ದಾಖಲೆಗಳನ್ನು ನೀವು ಐಟಿಆರ್​ ಫೈಲಿಂಗ್​ನಲ್ಲಿ ಉಲ್ಲೇಖಿಸಿ ರಿಟರ್ನ್ಸ್​ ಪಡೆಯಬಹುದು' ಎಂದಿದ್ದಾರೆ ಗೌರೀಶ್​ ಕುಮಾರ್​.


ಆದಾಯ ತೆರಿಗೆಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 5 ಮಹತ್ವದ ಕ್ರಮಗಳನ್ನು ಘೋಷಿಸಿದ್ದಾರೆ.


1) ₹ 7 ಲಕ್ಷದವರೆಗೆ ಆದಾಯ ತೆರಿಗೆ ವಿನಾಯ್ತಿ.
2) ಹೊಸ ತೆರಿಗೆ ಪದ್ಧತಿಯಲ್ಲಿ ಟ್ಯಾಕ್ಸ್​ ಸ್ಲ್ಯಾಬ್​ಗಳನ್ನು (ತೆರಿಗೆ ಹಂತಗಳು) 5ಕ್ಕೆ ಮಿತಗೊಳಿಸಲಾಗಿದೆ.
3) ₹ 15.5 ಲಕ್ಷ ಅಥವಾ ಅದಕ್ಕೂ ಹೆಚ್ಚಿನ ಆದಾಯವನ್ನು ವೇತನದಿಂದ ಪಡೆಯುವವರಿಗೆ ₹ 52,500 ಸ್ಟಾಂಡರ್ಡ್​ ಡಿಡಕ್ಷನ್ ಸೌಲಭ್ಯ ಸಿಗಲಿದೆ.
4) ಈವರೆಗೆ ಗರಿಷ್ಠ ತೆರಿಗೆಯ ಮೇಲೆ ಶೇ 37ರಷ್ಟು ಸರ್​ಚಾರ್ಜ್ ವಿಧಿಸಲಾಗುತ್ತಿತ್ತು. ಈ ಪ್ರಮಾಣವನ್ನು ಹೊಸ ತೆರಿಗೆ ನೀತಿಯಡಿ ಶೇ 25ಕ್ಕೆ ಇಳಿಸಲಾಗಿದೆ
5) ನಿವೃತ್ತರಾದಾಗ ಸಿಗುವ ರಜೆ ನಗದೀಕರಣ ಸೌಲಭ್ಯದ ಮೇಲೆ ಈವರೆಗೆ ₹ 3 ಲಕ್ಷಕ್ಕೆ ಮಾತ್ರ ತೆರಿಗೆ ವಿನಾಯ್ತಿ ಇತ್ತು. ಈ ಮೊತ್ತವನ್ನು ₹ 25 ಲಕ್ಷಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು