ಕೇಂದ್ರ ಬಜೆಟ್ ಮಂಡನೆಗೆ (Budget 2023) ಕ್ಷಣಗಣನೆ ಆರಂಭವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸಲಿದ್ದಾರೆ. ಕೇಂದ್ರ ಬಜೆಟ್ 2023-24 ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಏಕೆಂದರೆ ಇದು 2024 ರ ಲೋಕಸಭೆ ಚುನಾವಣೆಯ ಮೊದಲು ನರೇಂದ್ರ ಮೋದಿ ಸರ್ಕಾರದ ಕೊನೆಯ ಪೂರ್ಣ ಬಜೆಟ್ ಆಗಿದೆ. ಈ ಬಾರಿಯ ಬಜೆಟ್‌ನಲ್ಲಿ ರೈತರ ಪರ ಪ್ರಮುಖ ಘೋಷಣೆಗಳನ್ನು ನಿರೀಕ್ಷಿಸಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ನೀಡುವ ಮೊತ್ತ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಮೋದಿ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯ 12 ಕಂತುಗಳು ರೈತರ ಖಾತೆಗೆ ಬಂದಿದೆ. ದೇಶದ 8 ಕೋಟಿಗೂ ಹೆಚ್ಚು ರೈತರು 12ನೇ ಕಂತಿನ ಹಣವನ್ನು ಪಡೆದಿದ್ದರು. ಪಿಎಂ ಕಿಸಾನ್ ಯೋಜನೆ (Prime Minister Kisan Samman Nidhi Scheme) ಅಡಿಯಲ್ಲಿ ಪ್ರತಿ ವರ್ಷ ರೈತರಿಗೆ 6 ಸಾವಿರ ರೂ. ವಿತರಿಸಲಾಗುತ್ತದೆ. ಈ ಹಣವನ್ನು ತಲಾ ಎರಡು ಸಾವಿರದಂತೆ ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಕಳೆದ ಬಜೆಟ್ ನಲ್ಲಿ ರೈತ ಚಳವಳಿಯಿಂದ ರೈತರಲ್ಲಿ ಉಂಟಾಗಿರುವ ಅಸಮಾಧಾನ ಹಾಗೂ ಇದೀಗ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೊತ್ತ ಹೆಚ್ಚಾಗುವ ನಿರೀಕ್ಷೆ ಇತ್ತು. ಆದರೆ, ಬಜೆಟ್‌ನಲ್ಲಿ ಅಂತಹ ಯಾವುದೇ ಘೋಷಣೆ ಮಾಡಿರಲಿಲ್ಲ.
ಬಜೆಟ್ ಸಂಬಂಧಿತ ಕ್ಷಣ ಕ್ಷಣದ ಮಾಹಿತಿಯ ಲೈವ್ ಬ್ಲಾಗ್: ನಿರ್ಮಲಾ ಆಯವ್ಯಯದ ಮೇಲೆ ಎಲ್ಲರ ಕಣ್ಣು
ಕಳೆದ ಬಜೆಟ್‌ನಲ್ಲಿ ಯಾವುದೇ ಮಹತ್ವದ ಘೋಷಣೆ ಮಾಡಿರಲಿಲ್ಲ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ವರ್ಷದ ಬಜೆಟ್‌ನಲ್ಲಿ ರೈತರಿಗೆ ನೇರವಾಗಿ ಲಾಭ ಕೊಡುವಂತಹ ಯಾವುದೇ ಪ್ರಮುಖ ಯಾವುದೇ ಘೋಷಣೆ ಮಾಡಿರಲಿಲ್ಲ. ಬಜೆಟ್‌ನಲ್ಲಿ ಎಂಎಸ್‌ಪಿ ಖಾತರಿ ನೀಡಬೇಕೆಂಬ ರೈತ ಸಂಘಟನೆಗಳ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡಿಲ್ಲ. ಕಳೆದ ಬಜೆಟ್‌ನಲ್ಲಿ (ಬಜೆಟ್ 2022), ರೈತರನ್ನು ಡಿಜಿಟಲ್ ಮತ್ತು ಹೈಟೆಕ್ ಮಾಡಲು, ಶೂನ್ಯ ಬಜೆಟ್ ಕೃಷಿ ಮತ್ತು ಸಾವಯವ ಕೃಷಿಯನ್ನು ಉತ್ತೇಜಿಸಲು, ಮೌಲ್ಯವರ್ಧನೆ ಮತ್ತು ನಿರ್ವಹಣೆಗೆ ಒತ್ತು ನೀಡಲು ಪಿಪಿಪಿ ಮೋಡ್‌ನಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಹೇಳಲಾಗಿದೆ. ಆದರೆ, ರೈತರ ಪ್ರಮುಖ ಬೇಡಿಕೆಗಳ ಬಗ್ಗೆ ಬಜೆಟ್ ನಲ್ಲಿ ಏನನ್ನೂ ಹೇಳಿರಲಿಲ್ಲ.
ಇದನ್ನೂ ಓದಿ: Budget 2023: ಜನ ಸಾಮಾನ್ಯರಿಗೆ ಬಿಗ್ ಶಾಕ್! ಬಜೆಟ್ ನಂತರ ಇವುಗಳ ಬೆಲೆ ಹೆಚ್ಚಾಗುತ್ತಾ?
ರಸಗೊಬ್ಬರಗಳ ಮೇಲೆ ಅಥವಾ ಯಂತ್ರಗಳ ಮೇಲಿನ ಸಬ್ಸಿಡಿಯನ್ನೂ ಹೆಚ್ಚಿಸಿರಲಿಲ್ಲ
ಕಳೆದ ಬಜೆಟ್‌ಗೂ ಮುನ್ನ ವಿತ್ತ ಸಚಿವರು ರಸಗೊಬ್ಬರ ಮತ್ತು ಕೃಷಿ ಯಂತ್ರೋಪಕರಣಗಳ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸುವ ನಿರೀಕ್ಷೆ ಇತ್ತು. ಕೃಷಿಯಲ್ಲಿ ತಂತ್ರಜ್ಞಾನವನ್ನು ಉತ್ತೇಜಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಬಜೆಟ್‌ನಲ್ಲಿ ಮಾತನಾಡಲಾಗಿದೆ ಆದರೆ ರೈತರು ಪ್ರತಿನಿತ್ಯ ಬಳಸುವ ಕೃಷಿ ಯಂತ್ರೋಪಕರಣಗಳಿಗೆ ಯಾವುದೇ ಸಹಾಯಧನ ಅಥವಾ ಅನುದಾನವನ್ನು ಘೋಷಿಸಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ