Union Budget 2023: ಪಾರ್ಲಿಮೆಂಟ್ನಲ್ಲಿ 2023-24 ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Finance Minister Nirmala Sitharaman) ಅವರು ಕೇಂದ್ರ ಬಜೆಟ್(Union Budget) ಮಂಡಿಸುತ್ತಿದ್ದಾರೆ. ಇದು ಅವರ ಐದನೇ ಮತ್ತು ಈ ಸರ್ಕಾರದ ಅವಧಿಯ ಕೊನೆಯ ಪೂರ್ಣ ಬಜೆಟ್ ಆಗಿದೆ. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನವೇ, ಈ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಮೂಲಕ ಸರ್ಕಾರವು ಜನರ ನಿರೀಕ್ಷೆ ತಲುಪಲು ಹೊಸ ಯೋಜನೆಗಳನ್ನು ಆರಂಭಿಸುತ್ತಿದೆ.ಇದು ಹಿಂದಿನ ಬಜೆಟ್ಗಳ ದೃಢವಾದ ಅಡಿಪಾಯಗಳ ಮೇಲೆ ಸಿದ್ಧಗೊಂಡಿದೆ. ನಮ್ಮ ಯುವಕರು (Youths) , ಮಹಿಳೆಯರು (Womens) ಮತ್ತು ದಲಿತರ ಅಭಿವೃದ್ಧಿಗೆ ಬದ್ಧತೆ ತೋರುವ ಬಜೆಟ್ ಇದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಹಿರಿಯ ನಾಗರಿಕರಿಗೆ ಬಂಪರ್ ನ್ಯೂಸ್!
ಈ ಬಾರಿಯ ಬಜೆಟ್‌ನಲ್ಲಿ ಹಿರಿಯ ನಾಗರಿಕರಿಗೆ ಬಂಪರ್ ನ್ಯೂಸ್ ನೀಡಿದೆ ಎಂದರೆ ತಪ್ಪಾಗಲ್ಲ. ಹಿರಿಯ ನಾಗರಿಕರ ಠೇವಣಿ ಮೊತ್ತ ಮಿತಿ 15 ಲಕ್ಷದಿಂದ 30 ಲಕ್ಷಕ್ಕೆ ಏರಿಕೆಯಾಗಿದೆ. ಹಿರಿಯರ ಉಳಿತಾಯದ ಮೇಲೆ ಕೇಂದ್ರ ಸರ್ಕಾರ ಹೆಚ್ಚಿನ ಗಮನ ಹರಿಸಿದೆ ಎಂದು ತಿಳಿಯುತ್ತಿದೆ. ಹಿರಿಯ ನಾಗರಿಕರು ಠೇವಣಿ ಮೊತ್ತ ಮಿತಿ 15 ಲಕ್ಷದಿಂದ 30 ಲಕ್ಷಕ್ಕೆ ಏರಿಕೆಯಾಗಿದೆ. ಆ ಮೂಲಕ ಹಿರಿಯ ನಾಗರಿಕರ ಸೇವಿಂಗ್ಸ್ ಕಡೆ ನಿರ್ಮಲಾ ಗಮನ ಹರಿಸಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಏಳು ಆದ್ಯತೆಗಳನ್ನು ಘೋಷಿಸಿದ್ದಾರೆ. ಅಮೃತ ಕಾಲದ ಮೂಲಕ ಮಾರ್ಗದರ್ಶನ ನೀಡುವ 7 ಆದ್ಯತೆಗಳನ್ನು ಬಜೆಟ್‌ನಲ್ಲಿ ಅಳವಡಿಸಿಕೊಳ್ಳಲಾಗಿದೆ.
1. ಅಂತರ್ಗತ ಅಭಿವೃದ್ಧಿ
2. ಕೊನೆಯ ಮೈಲಿಯನ್ನು ತಲುಪುವುದು
3. ಮೂಲಸೌಕರ್ಯ ಮತ್ತು ಹೂಡಿಕೆ
4. ಅನ್ಲಾಕಿಂಗ್ ಸಂಭಾವ್ಯ
5. ಹಸಿರು ಬೆಳವಣಿಗೆ
6. ಯುವ ಶಕ್ತಿ
7. ಹಣಕಾಸು ವಲಯ
ಇದನ್ನೂ ಓದಿ: ಬಡವರಿಗೆ ಸರ್ಕಾರದ ಗಿಫ್ಟ್, ಉಚಿತ ಆಹಾರ ಧಾನ್ಯಕ್ಕೆ 2 ಲಕ್ಷ ಕೋಟಿ ಮೀಸಲು, ಸಂಪೂರ್ಣ ವೆಚ್ಚ ಇನ್ನು ಕೇಂದ್ರದ್ದೇ!
ಒಂದು ವರ್ಷ ಉಚಿತ ಆಹಾರ!
ಕೇಂದ್ರ ಸರ್ಕಾರದ ಸಮಗ್ರ ಆಹಾರ ಭದ್ರತಾ ಯೋಜನೆಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಎಂದು ಹೆಸರಿಸಲಾಗಿದೆ, ಇದರ ಅಡಿಯಲ್ಲಿ ಜನವರಿ 1 ರಿಂದ 80 ಕೋಟಿಗೂ ಹೆಚ್ಚು ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ. ಪಿಎಂಜಿಕೆಎವೈ ಎಂದು ಕರೆಯಲ್ಪಡುವ ಮತ್ತೊಂದು ಯೋಜನೆಯಡಿ ಬಡ ಜನರಿಗೆ ಉಚಿತ ಮಾಸಿಕ ಐದು ಕಿಲೋಗ್ರಾಂಗಳಷ್ಟು ಆಹಾರ ಧಾನ್ಯಗಳ ವಿತರಣೆಯನ್ನು ಸರ್ಕಾರ ಸ್ಥಗಿತಗೊಳಿಸಿದ್ದಕ್ಕಾಗಿ ಪ್ರತಿಪಕ್ಷಗಳ ಟೀಕೆಗಳ ನಡುವೆ ಈ ಕ್ರಮವು ತೆಗೆದುಕೊಳ್ಳಲಾಗಿದೆ.
ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಏಪ್ರಿಲ್ 2020 ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯು ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೊನೆಗೊಂಡಿತು. ಕಳೆದ ತಿಂಗಳು, ಪಿಎಂಜಿಕೆಎವೈ ಅನ್ನು ಅಸ್ತಿತ್ವದಲ್ಲಿರುವ ಎರಡು ಆಹಾರ ಸಬ್ಸಿಡಿ ಯೋಜನೆಗಳಿಗೆ ಒಳಪಡಿಸಲು ಸರ್ಕಾರ ನಿರ್ಧರಿಸಿತು ಮತ್ತು ಇದರ ಪರಿಣಾಮವಾಗಿ, ಹೊಸ ಸಮಗ್ರ ಆಹಾರ ಭದ್ರತಾ ಯೋಜನೆ ಜಾರಿಗೆ ಬಂತು.
ವಿವಿದ ಯೋಜನೆಗಳಿಗೆ 75 ಸಾವಿರ ಕೋಟಿ!
ಈ ಬಾರಿಯ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆಯಿತ್ತು. ಅದರಂತಯೇ ಭರ್ಜರಿ ಅನುದಾನ ಸಿಕ್ಕಿದೆ. ರೈಲ್ವೆಯ ಈ ಅನುದಾನದಲ್ಲಿ 100 ಹೊಸ ಯೋಜನೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈ ಯೋಜನೆಗಳಿಗೆ 75 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. ಪ್ರಯಾಣಿಕರ ಪ್ರಯಾಣ ಸುಲಭಗೊಳಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ