ನವದೆಹಲಿ: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ (Union Budget 2023) ದೇಶದ ರಕ್ಷಣಾ ವಲಯಕ್ಕೆ (defense sector) ಭರಪೂರ ಕೊಡುಗೆಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಘೋಷಿಸಿದ್ದಾರೆ. ಈ ಬಾರಿ ರಕ್ಷಣಾ ಬಜೆಟ್ ಅನ್ನು 5.94 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಇದು ಕಳೆದ ವರ್ಷ ಬಜೆಟ್‌ನಲ್ಲಿ ನೀಡಿದ ಶೇಕಡಾ 16ರಷ್ಟು ಹೆಚ್ಚಿನ ಅನುದಾನವಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ರಕ್ಷಣಾ ಕ್ಷೇತ್ರದಲ್ಲಿ ಆತ್ಮ ನಿರ್ಭರ ಭಾರತ್‌ಗೆ (Atma Nirbhar Bharat) ಹೆಚ್ಚಿನ ಒತ್ತು ನೀಡಲಾಗಿದೆ.
ರಕ್ಷಣಾ ವಲಯಕ್ಕೆ 5.94 ಲಕ್ಷ ಕೋಟಿ ರೂಪಾಯಿ ಅನುದಾನ
ಈ ಬಾರಿ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. 2022 ರ ಬಜೆಟ್‌ನಲ್ಲಿ, ರಕ್ಷಣಾ ವಲಯಕ್ಕೆ ಒಟ್ಟು 5.25 ಲಕ್ಷ ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು. ಇದು ಸಂಪೂರ್ಣ ಬಜೆಟ್‌ನ ಒಟ್ಟು ಶೇಕಡಾ 13.31 ರಷ್ಟಾಗಿತ್ತು. ಇದೀಗ ಈ ಬಾರಿ ರಕ್ಷಣಾ ಬಜೆಟ್ ಗಾತ್ರವನ್ನು ಹೆಚ್ಚಿಸಲಾಗಿದೆ. ಈ ಬಾರಿ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಒಟ್ಟು 5.94 ಲಕ್ಷ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಇದು ಇದು ಕಳೆದ ವರ್ಷ ಬಜೆಟ್‌ನಲ್ಲಿ ನೀಡಿದ ಶೇಕಡಾ 16ರಷ್ಟು ಹೆಚ್ಚಿನ ಅನುದಾನವಾಗಿದೆ.
ರಕ್ಷಣಾ ಬಜೆಟ್ ಅನುದಾನ ಹಂಚಿಕೆ ಹೇಗೆ?
ಈ ಬಾರಿ ರಕ್ಷಣಾ ಬಜೆಟ್‌ನ ಒಟ್ಟೂ ಗಾತ್ರ 5.94 ಲಕ್ಷ ಕೋಟಿ ರೂಪಾಯಿ ಆಗಿದೆ. ಈ ಪೈಕಿ ರಕ್ಷಣಾ ಖರೀದಿಗೆ 1.52 ಲಕ್ಷ ಕೋಟಿ ರೂಪಾಯಿ, ರಕ್ಷಣಾ ಉಪಕರಣಗಳ ಖರೀದಿಗೆ 1.52 ಲಕ್ಷ ಕೋಟಿ ರೂಪಾಯಿ ಮೀಸಲು ಇಡಲಾಗುತ್ತದೆ. ಇದು ಹೊಸ ಶಸ್ತ್ರಾಸ್ತ್ರಗಳು, ವಿಮಾನಗಳು, ಯುದ್ಧನೌಕೆಗಳು ಮತ್ತು ಇತರ ಮಿಲಿಟರಿ ಉಪಕರಣಗಳ ಖರೀದಿಯನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ: Budget 2023: ಬಡವರಿಗೆ ಸರ್ಕಾರದ ಗಿಫ್ಟ್, ಉಚಿತ ಆಹಾರ ಧಾನ್ಯಕ್ಕೆ 2 ಲಕ್ಷ ಕೋಟಿ ಮೀಸಲು, ಸಂಪೂರ್ಣ ವೆಚ್ಚ ಇನ್ನು ಕೇಂದ್ರದ್ದೇ!
ಸೇನೆಗಳಿಗೆ ಎಷ್ಟು ಅನುದಾನ ಹಂಚಲಾಗುತ್ತದೆ?
ಇದರಲ್ಲಿ ಭಾರತೀಯ ಸೇನೆಗೆ 7,32,015 ಕೋಟಿ ನೀಡಲಾಗಿದೆ. ಭಾರತೀಯ ನೌಕಾಪಡೆಗೆ 47.590 ಕೋಟಿ ಮತ್ತು ಭಾರತೀಯ ವಾಯುಪಡೆಗೆ 55,586 ಕೋಟಿ ರೂಪಾಯಿ ಮೀಸಲಿಡಲಾಗುತ್ತದೆ.
ಆತ್ಮ ‘ನಿರ್ಭರ ಭಾರತ’ ಉತ್ತೇಜಿಸಲು ಕ್ರಮ
ಮುಖ್ಯವಾಗಿ ಯುದ್ಧ ಸಾಮಗ್ರಿಗಳಿಗಾಗಿ ವಿದೇಶಗಳನ್ನು ಅಲವಂಬಿಸದೇ, ದೇಶೀಯವಾಗಿಯೇ ಯುದ್ಧ ಸಾಮಗ್ರಿ ತಯಾರಾಗಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಆತ್ಮ ನಿರ್ಭರ ಭಾರತ ಯೋಜನೆ ಹುಟ್ಟುಹಾಕಿದ್ದರು. ಇದೀಗ ರಕ್ಷಣಾ ವಲಯದಲ್ಲಿ ಆತ್ಮ ನಿರ್ಭರ ಭಾರತವನ್ನು ಉತ್ತೇಜಿಸಲು ಕ್ರಮ ಕೈಗೊಳ್ಳಲಾಗಿದೆ. 'ಸ್ವಾವಲಂಬಿ ಭಾರತ'ವನ್ನು ಉತ್ತೇಜಿಸಲು ದೇಶೀಯ ಕಂಪನಿಗಳಿಂದ 68% ರಕ್ಷಣಾ ಸಾಧನಗಳನ್ನು ಖರೀದಿಸಲಾಗುವುದು ಎಂದು ಸರ್ಕಾರ ತಿಳಿಸಿತ್ತು. ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿಗೆ (ಆರ್ & ಡಿ) 18,440 ಕೋಟಿ ರೂ. ಅದೇ ಸಮಯದಲ್ಲಿ, ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಇತರ ವೆಚ್ಚಗಳಿಗಾಗಿ ಸುಮಾರು 38.714 ಕೋಟಿ ರೂಪಾಯಿ ಮೀಸಲು ಇಡಲಾಗುತ್ತದೆ.
ಈ ಹಿಂದಿನ ಬಜೆಟ್‌ನಲ್ಲಿ ಏನಾಗಿತ್ತು?
ಕೇಂದ್ರ ಸರ್ಕಾರವು ಈ ಹಿಂದೆ 2022 ರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಒಟ್ಟು 5.25 ಲಕ್ಷ ಕೋಟಿ ರೂ. ಇದು ಸರ್ಕಾರದ ಒಟ್ಟು ಬಜೆಟ್‌ನ ಸುಮಾರು 13.31% ಮತ್ತು ದೇಶದ ಒಟ್ಟು GDP ಯ 2.9% ಆಗಿತ್ತು. ರಕ್ಷಣಾ ಬಜೆಟ್‌ನ ಅರ್ಧದಷ್ಟು ಮಿಲಿಟರಿ ಸಿಬ್ಬಂದಿಯ ಸಂಬಳ ಮತ್ತು ಪಿಂಚಣಿಗೆ ಹೋಗುತ್ತದೆ. 2021-22ರಲ್ಲಿ 58 ಪ್ರತಿಶತದಿಂದ 2022-23ರಲ್ಲಿ ಬಂಡವಾಳ ಸಂಗ್ರಹಣೆ ಬಜೆಟ್‌ನ 68 ಪ್ರತಿಶತವನ್ನು ದೇಶೀಯ ರಕ್ಷಣಾ ಉದ್ಯಮಕ್ಕೆ ಮೀಸಲಿಡಲಾಗಿದೆ. ರಕ್ಷಣಾ ಬಜೆಟ್‌ನ 25 ಪ್ರತಿಶತವನ್ನು ಕೈಗಾರಿಕೆ, ಸ್ಟಾರ್ಟ್‌ಅಪ್‌ಗಳು ಮತ್ತು ಅಕಾಡೆಮಿಗಳಿಗೆ ತೆರೆಯಲು ಆರ್ & ಡಿಗೆ ಮೀಸಲಿಡಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ