Union Budget 2022: ಪೆಟ್ರೋಲ್, ಡೀಸೆಲ್ GST ವ್ಯಾಪ್ತಿಗೆ ಬರುತ್ತಾ? ಇಂದಿನ ಬಜೆಟ್ ನಲ್ಲಿ ಏನು ಘೋಷಣೆ ಆಗುತ್ತೆ?

ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುತ್ತದೆ ಎಂದು ಜನರು ನಿರೀಕ್ಷಿಸುತ್ತಿದ್ದಾರೆ. ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ, ಸಾಮಾನ್ಯ ಜನರಿಗೆ ಹಣದುಬ್ಬರದಿಂದ (Inflation) ಮುಕ್ತಿ ಸಿಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Union Budget 2022: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (FM Nirmala Sitharaman) ಅವರು ಇಂದು ಫೆಬ್ರವರಿ 1, 2022 ರಂದು 2022-23 (FY23) ಹಣಕಾಸು ವರ್ಷಕ್ಕೆ 2022-23 ರ ಕೇಂದ್ರ ಬಜೆಟ್ (Union Budget) ಅನ್ನು ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಹಣಕಾಸು ಸಚಿವರು ಏನು ಘೋಷಣೆ ಮಾಡುತ್ತಾರೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಪೆಟ್ರೋಲ್ ಡೀಸೆಲ್ (Petrol And Diesel) ಅನ್ನು ಜಿಎಸ್‌ಟಿ (GST) ವ್ಯಾಪ್ತಿಗೆ ತರಲಾಗುತ್ತದೆಯಾ ಅಥವಾ ಅಬಕಾರಿ ಸುಂಕ(Excise Duty)ವನ್ನು ಮರು ಸ್ಥಾಪಿಸಲಾಗುತ್ತದೆ. ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುತ್ತದೆ ಎಂದು ಜನರು ನಿರೀಕ್ಷಿಸುತ್ತಿದ್ದಾರೆ. ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ, ಸಾಮಾನ್ಯ ಜನರಿಗೆ ಹಣದುಬ್ಬರದಿಂದ (Inflation) ಮುಕ್ತಿ ಸಿಗುತ್ತದೆ.

ಅಬಕಾರಿ ಸುಂಕ ಮರುಸ್ಥಾಪಿಸಲು ಆಗ್ರಹ

ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದ ಟೀಕೆಗಳನ್ನು ಎದುರಿಸುತ್ತಿರುವ ಕೇಂದ್ರ ಸರ್ಕಾರವು ನವೆಂಬರ್ 2021 ರಲ್ಲಿ ಅಬಕಾರಿ ಸುಂಕವನ್ನು ಕಡಿಮೆ ಮಾಡಿತ್ತು. ಅಬಕಾರಿ ಸುಂಕದಲ್ಲಿನ ಈ ಕಡಿತವು ಸಾಂಕ್ರಾಮಿಕ ರೋಗದ ಹಿಂದಿನ ಪರಿಸ್ಥಿತಿಗಿಂತ ಕಡಿಮೆಯಾಗಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ಮತ್ತೊಮ್ಮೆ ಅಬಕಾರಿ ಸುಂಕವನ್ನು ಇಳಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.

ಆದಾಯ ಹೆಚ್ಚಿಸಲು ಅಬಕಾರಿ ಸುಂಕ ಸಹಕಾರಿ

2020 ರಲ್ಲಿ ಕೊರೊನಾ ಬಿಕ್ಕಟ್ಟಿನ ಮಧ್ಯೆ ಕೇಂದ್ರವು ತನ್ನ ಬೊಕ್ಕಸವನ್ನು ಹೆಚ್ಚಿಸಲು ಅಬಕಾರಿ ಸುಂಕದ ರೂಪದಲ್ಲಿ ಉತ್ತಮ ಮಾರ್ಗವನ್ನು ಕಂಡುಕೊಂಡಿದೆ. ಇದರಿಂದಾಗಿ ಆದಾಯ ಹೆಚ್ಚಾದರೂ ತೈಲ ದುಬಾರಿಯಾಯಿತು.

ಇದನ್ನೂ ಓದಿ:  Union Budget 2022: ಹಲವು ನಗರಗಳಿಗೆ ವಂದೇ ಭಾರತ್ ರೈಲು ಸಂಚಾರ ಸಾಧ್ಯತೆ: ಈ 5 ಪ್ರಮುಖ ಘೋಷಣೆಗಳು ಆಗುತ್ತಾ?

ನವೆಂಬರ್ 2021 ರ ಆರಂಭದಲ್ಲಿ ಅಬಕಾರಿ ಸುಂಕದಲ್ಲಿನ ಕಡಿತವು ಫೆಬ್ರವರಿ 2021 ರವರೆಗೆ ಮಾಡಿದ ಹೆಚ್ಚಳದ ಶೇಕಡಾ 15-30 ರಷ್ಟು ಮಾತ್ರ. ಪ್ರಸ್ತುತ, ಅಬಕಾರಿ ಸುಂಕವು ಒಟ್ಟು ಪಂಪ್ ವೆಚ್ಚದ ನಾಲ್ಕನೇ ಒಂದು ಭಾಗವಾಗಿದೆ.

ಭಾಸ್ಕರ್ ವರದಿಯ ಪ್ರಕಾರ, ಬ್ಯಾಂಕ್ ಆಫ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ಅವರು 2020-21ರಲ್ಲಿ ಬಹುತೇಕವಾಗಿ ಸರಿದೂಗಿಸಿದ ಇತರ ಆದಾಯದಲ್ಲಿನ ಕೊರತೆಯು ಮುಂಬರುವ ಬಜೆಟ್‌ಗೆ ಇನ್ನು ಮುಂದೆ ದೊಡ್ಡ ತಲೆನೋವಾಗುವುದಿಲ್ಲ. ಏಕೆಂದರೆ ಆರ್ಥಿಕತೆಯು ಬೆಳೆಯುತ್ತಿದೆ. ಆಗಿದೆ. ಹೀಗಾಗಿ ಅಬಕಾರಿ ದರದಲ್ಲಿ ಮತ್ತಷ್ಟು ಇಳಿಕೆಗೆ ಜಾಗ ಸೃಷ್ಠಿಯಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಜೆಟ್‌ನಲ್ಲಿ ಅಬಕಾರಿ ಸುಂಕವನ್ನು ಕಡಿತಗೊಳಿಸುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

ಕಚ್ಚಾ ತೈಲ ಬೆಲೆ ಏರಿಕೆ

ಅಂತರಾಷ್ಟ್ರೀಯ ಮಾರುಕಟ್ಟೆ(International Market)ಯಲ್ಲಿ ಕಚ್ಚಾ ತೈಲ(Crude Oil)ದ ಬೆಲೆ 2014 ರ ನಂತರ ಗರಿಷ್ಠ ಮಟ್ಟವನ್ನು ತಲುಪಿದೆ. ಕಚ್ಚಾ ತೈಲದ ಬೆಲೆ ಏಳು ವರ್ಷಗಳ ಗರಿಷ್ಠ 90 ಡಾಲರ್ ದಾಟಿದೆ. ಡಿಸೆಂಬರ್ 1ರಿಂದ ಕಚ್ಚಾ ತೈಲ ಶೇ.32ರಷ್ಟು ಏರಿಕೆ  ಕಂಡಿದೆ. ಈ ವೇಳೆ ಬೆಲೆ ಪ್ರತಿ ಬ್ಯಾರೆಲ್‌(Barrel) ಗೆ ಡಾಲರ್ 22 ಕ್ಕೆ ಏರಿದೆ.

ಇದನ್ನೂ ಓದಿ:  Union Budget 2022: ಬಜೆಟ್ ಮಂಡನೆ ವೇಳೆ ಕ್ಷಮೆ ಕೇಳಿದ್ರು ಇಂದಿರಾ ಗಾಂಧಿ; Black Budget ಮಂಡಿಸಿದ್ಯಾರು?

ಕಚ್ಚಾ ತೈಲ ಬೆಲೆ 90 ಡಾಲರ್ ಗಡಿ ದಾಟಿದೆ. ಈ ನಿಟ್ಟಿನಲ್ಲಿ ಬಿಡುಗಡೆಯಾದ ಹಿಂದಿನ ವರದಿಯ ಪ್ರಕಾರ, ಜನವರಿಯಲ್ಲಿ ಇದು ನಿರಂತರವಾಗಿ ಏರುತ್ತಿದೆ. 2023 ರ ವೇಳೆಗೆ ಕಚ್ಚಾ ತೈಲದ ಬೆಲೆ 100 ಡಾಲರ್ ಅಥವಾ ಅದಕ್ಕಿಂತ ಹೆಚ್ಚಿಗೆ ಹೆಚ್ಚಾಗುವ ಸಾಧ್ಯತೆಯಿದೆ. ಗಮನಾರ್ಹವಾಗಿ, ಕಳೆದ ಒಂದು ವರ್ಷದಲ್ಲಿ, ಬೇಡಿಕೆಯ ಜಿಗಿತದಿಂದಾಗಿ, ಬೆಲೆ (Price Hike) ಸುಮಾರು ಶೇ.64 ಪ್ರತಿಶತದಷ್ಟು ಹೆಚ್ಚಾಗಿದೆ.

ಮೂರು ತಿಂಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿರಲಿಲ್ಲ

ಒಂದೆಡೆ ಕಚ್ಚಾ ತೈಲದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದರೆ, ಇನ್ನೊಂದೆಡೆ ಕಳೆದ ಮೂರು ತಿಂಗಳಿನಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದೆ, ಅಂದರೆ ಅವುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
Published by:Mahmadrafik K
First published: