• Home
  • »
  • News
  • »
  • business
  • »
  • Economic Inequality: ಯುಎಸ್‌ನಲ್ಲಿ ಹೆಚ್ಚಿದ ಆದಾಯದ ಅಸಮಾನತೆ, ಜಗತ್ತಿನಾದ್ಯಂತ ಹೀಗೆ ಆಗ್ತಿರೋದಕ್ಕೆ ಇದೇ ಕಾರಣವಂತೆ!

Economic Inequality: ಯುಎಸ್‌ನಲ್ಲಿ ಹೆಚ್ಚಿದ ಆದಾಯದ ಅಸಮಾನತೆ, ಜಗತ್ತಿನಾದ್ಯಂತ ಹೀಗೆ ಆಗ್ತಿರೋದಕ್ಕೆ ಇದೇ ಕಾರಣವಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಮಾನ ಹಂಚಿಕೆ ಕಡಿಮೆಯಾದಷ್ಟೂ ಆದಾಯದ ಅಸಮಾನತೆ ಹೆಚ್ಚುತ್ತದೆ. ಆದಾಯದ ಅಸಮಾನತೆಯು ಸಂಪತ್ತಿನ ಅಸಮಾನತೆಗೆ ಸಂಬಂಧಿಸಿದೆ, ಇದು ಸಂಪತ್ತಿನ ಅಸಮ ಹಂಚಿಕೆಯಾಗಿದೆ.

  • Share this:

ವಿಶ್ವ (World) ದಾದ್ಯಂತ ಆರ್ಥಿಕ ಅಸಮಾನತೆ (Economic Inequality) ಎನ್ನುವುದು ಘಾತೀಯವಾಗಿ ಬೆಳಯುತ್ತಿದೆ. ಬಡವ ಬಡವನಾಗಿಯೇ ಉಳಿಯುವ ಹಾಗೂ ಶ್ರೀಮಂತ (Rich) ಮತ್ತಷ್ಟು ಶ್ರೀಮಂತನಾಗುತ್ತಿರುವ ವೈರುಧ್ಯದ ಜಗತ್ತಿನಲ್ಲಿ ನಾವಿದ್ದೇವೆ ಎನ್ನಬಹುದು. ಆರ್ಥಿಕ ಅಸಮಾನತೆ ಅನ್ನುವುದು ಬಹುದೊಡ್ಡ ದುರಂತ ಕೂಡ. ಮೊದಲಿಗೆ ಆದಾಯದ ಅಸಮಾನತೆ ಏನು ಎಂದು ನೋಡುವುದಾದರೆ, ಆದಾಯ ಸಮಾನತೆಯು ಜನಸಂಖ್ಯೆಯಾದ್ಯಂತ ಆದಾಯದ ಅಸಮಾನ ಅಥವಾ ಅಸಮ ಹಂಚಿಕೆಯನ್ನು ಸೂಚಿಸುತ್ತದೆ. ಸಮಾನ ಹಂಚಿಕೆ ಕಡಿಮೆಯಾದಷ್ಟೂ ಆದಾಯದ ಅಸಮಾನತೆ ಹೆಚ್ಚುತ್ತದೆ. ಆದಾಯದ ಅಸಮಾನತೆಯು ಸಂಪತ್ತಿನ ಅಸಮಾನತೆಗೆ ಸಂಬಂಧಿಸಿದೆ, ಇದು ಸಂಪತ್ತಿನ ಅಸಮ ಹಂಚಿಕೆಯಾಗಿದೆ.


ಯುಎಸ್‌ನಲ್ಲಿ ಹೆಚ್ಚಿದ ಆದಾಯದ ಅಸಮಾನತೆ


ಅಮೆರಿಕಾ ಆದಾಯ ಅಸಮಾನತೆಯಲ್ಲಿ ಕಡಿಮೆ ಮಟ್ಟದ ಅಸಮಾನತೆ ಹೊಂದಿತ್ತು. ಆದರೆ ಈ ದಿನಗಳಲ್ಲಿ ಯುಎಸ್‌ನಲ್ಲೂ ಸಹ ಆದಾಯ ಅಸಮಾನತೆ ಹೆಚ್ಚಾಗಿದ್ದು, ದೇಶದ ಒಟ್ಟು ಸಂಪತ್ತು ಲಕ್ಷಾಧಿಪತಿಗಳಿಂದ ನಿಯಂತ್ರಿಸಲ್ಪಟ್ಟಿದೆ. ಸೆಪ್ಟೆಂಬರ್ 2022 ರಲ್ಲಿ ಜನಗಣತಿ ಬ್ಯೂರೋ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಯುಎಸ್ ಆದಾಯದ ಅಸಮಾನತೆಯು ದಶಕದಲ್ಲಿ ಮೊದಲ ಬಾರಿಗೆ ಏರಿಕೆ ಕಂಡಿದೆ.


ಹೀಗೆ ಯುನೈಟೆಡ್ ಸ್ಟೇಟ್ಸ್‌ ಸೇರಿ ಪ್ರಪಂಚದಾದ್ಯಂತ ಆದಾಯದ ಅಸಮಾನತೆ ಪರಿಣಾಮಕಾರಿಯಾಗಿ ಕಂಡು ಬರುತ್ತಿದೆ. ಯುರೋಪಿನ ಹೊರಗಿನ ಪ್ರಪಂಚದ ಪ್ರತಿಯೊಂದು ಪ್ರಮುಖ ಪ್ರದೇಶದಲ್ಲಿ, ಬಡವರು ಹಾಗೆ ಇದ್ದು, ವಿಪರೀತ ಸಂಪತ್ತು ಕೇವಲ ಬೆರಳೆಣಿಕೆಯ ಜನರಲ್ಲಿ ಕೇಂದ್ರೀಕೃತವಾಗುತ್ತಿದೆ ಎಂದು ವರದಿಗಳು ಹೇಳಿವೆ.


ಗಿನಿ ಸೂಚ್ಯಂಕ


ಜನಸಂಖ್ಯೆಯಲ್ಲಿನ ಅಸಮಾನತೆಯನ್ನು ವಿಶ್ಲೇಷಿಸಲು ಬಳಸಲಾಗುವ ಇತರ ಹಲವು ಅಳತೆಗಳಲ್ಲಿ ಗಿನಿ ಗುಣಾಂಕವು ಒಂದು ಅಳತೆಯಾಗಿದೆ. ಅರ್ಥಶಾಸ್ತ್ರಜ್ಞರು ಮತ್ತು ಇತರ ತಜ್ಞರು ಶ್ರೀಮಂತರು ಮತ್ತು ಬಡವರ ನಡುವಿನ ಸಂಪತ್ತಿನ ಅಂತರವನ್ನು ಗಿನಿ ಸೂಚ್ಯಂಕ ಅಥವಾ ಗುಣಾಂಕ ಎಂಬುದರ ಮೂಲಕ ಅಳೆಯುತ್ತಾರೆ. ಆದಾಯದ ಅಸಮಾನತೆಯ ಈ ಸಾಮಾನ್ಯ ಅಳತೆಯನ್ನು ಜನಸಂಖ್ಯೆಯ ಅನುಪಾತದಿಂದ ಪಡೆದ ರಾಷ್ಟ್ರೀಯ ಆದಾಯದ ತುಲನಾತ್ಮಕ ಪಾಲನ್ನು ನಿರ್ಣಯಿಸುವ ಮೂಲಕ ಲೆಕ್ಕಹಾಕಲಾಗುತ್ತದೆ.


ಇದನ್ನೂ ಓದಿ: ಒಳಉಡುಪು ಮಾರಾಟ ಕುಸಿದ್ರೆ ಆರ್ಥಿಕ ಕುಸಿತದ ಮುನ್ಸೂಚನೆಯಂತೆ! ಇನ್ನೂ ಸಾಕಷ್ಟು ರೀಸನ್ಸ್​ ಇಲ್ಲಿದೆ​ ನೋಡಿ


ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಚ್ಚಿದ ಆದಾಯ ಅಸಮಾನತೆ


ಗಿನಿ ಸೂಚ್ಯಂಕವು 2021 ರಲ್ಲಿ ಯುಎಸ್‌ನಲ್ಲಿ 1.2% ರಷ್ಟು ಏರಿಕೆಯಾಗಿದ್ದು, ಒಂದು ವರ್ಷದ ಹಿಂದಿನ 0.488 ರಿಂದ 0.494 ಕ್ಕೆ ಜಿಗಿದಿದೆ ಎಂದು ಜನಗಣತಿಯ ವರದಿ ಹೇಳಿದೆ. ಶ್ರೀಮಂತ ರಾಷ್ಟ್ರಗಳಿಗಿಂತ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅಸಮಾನತೆ ಹೆಚ್ಚಾಗಿದೆ ಎಂದು ವರದಿಗಳು ಸೂಚಿಸುತ್ತಿವೆ. ವಿಶೇಷವಾಗಿ ಯುನೈಟೆಡ್ ಸ್ಟೇಟ್ಸ್ನಲ್ಲಿ ಈ ಗುಣಾಂಕ ಹೆಚ್ಚಾಗಿದೆ. 2019 ರಲ್ಲಿ 0.28 ರ ಗಿನಿ ಗುಣಾಂಕವನ್ನು ಹೊಂದಿದ್ದ ಡೆನ್ಮಾರ್ಕ್ ಮತ್ತು ವಿಶ್ವ ಬ್ಯಾಂಕ್ ಪ್ರಕಾರ 2018 ರಲ್ಲಿ 0.32 ರಷ್ಟಿದ್ದ ಫ್ರಾನ್ಸ್‌ನಂತಹ ಇದೇ ರೀತಿಯ ಆರ್ಥಿಕತೆಗಳಿಗಿಂತ ಯುಎಸ್‌ ಗಿನಿ ಗುಣಾಂಕವು ಗಣನೀಯವಾಗಿ ಏರಿಕೆ ಕಂಡಿದೆ.


ಸಂಪತ್ತಿನ ಅಸಮಾನತೆ


2021 ರಲ್ಲಿ, ಅಮೆರಿಕಾದ ಶ್ರೀಮಂತರು ದೇಶದ ಸಂಪತ್ತಿನ 34.9% ಅನ್ನು ಹೊಂದಿದ್ದಾರೆ, ಆದರೆ ಅರ್ಧದಷ್ಟು ಸರಾಸರಿ ಅಮೆರಿಕನ್ನರು ಕೇವಲ $ 12,065 ಆದಾಯವನ್ನು ಹೊಂದಿದ್ದಾರೆ. ಜಾಗತಿಕವಾಗಿ ನೋಡುವುದಾದರೆ 10% ಶ್ರೀಮಂತರು ವಿಶ್ವದ ಸಂಪತ್ತಿನ ಸುಮಾರು 76% ಪಾಲನ್ನು ಹೊಂದಿದ್ದಾರೆ.


ಇದನ್ನೂ ಓದಿ: ಟ್ವಿಟರ್​ನಲ್ಲಿ ಬರೀ ಎಲಾನ್​ ಮಸ್ಕ್​ ಹಣ ಮಾತ್ರ ಇಲ್ಲ, ಇವ್ರೆಲ್ಲಾ ಇಲ್ಲಿ ಹೂಡಿಕೆ ಮಾಡಿದ್ದಾರೆ!


ಹೆಚ್ಚಿನ ಸಂಪತ್ತು ಶೇಖರಣೆ


ಕಾರ್ಯನಿರ್ವಾಹಕ ವೇತನದಲ್ಲಿನ ದೊಡ್ಡ ಹೆಚ್ಚಳವು ಹೆಚ್ಚಿನ ಮಟ್ಟದ ಆದಾಯದ ಅಸಮಾನತೆಗೆ ಕೊಡುಗೆ ನೀಡುತ್ತಿದೆ. ಪ್ರಪಂಚದ ಸರಿಸುಮಾರು 2,700 ಬಿಲಿಯನೇರ್‌ಗಳು ತಮ್ಮ ಹೆಚ್ಚಿನ ಹಣವನ್ನು ವೇತನದ ಮೂಲಕ ಪಡೆಯದೇ ತಮ್ಮ ಷೇರುಗಳ ಮೌಲ್ಯ ಮತ್ತು ಇತರ ಹೂಡಿಕೆಗಳ ಮೂಲಕ ಆದಾಯ ಗಳಿಸುತ್ತಾರೆ.


ದೇಶದ ಸಂಪತ್ತಿನ ಬಹುಪಾಲು ಕೋಟ್ಯಾಧಿಪತಿಗಳ ಬಳಿ ಇದೆ


ಆಕ್ಸ್‌ಫ್ಯಾಮ್ ವರದಿ ಮಾಡಿರುವ ಪ್ರಕಾರ, ಪ್ರತಿ 26 ಗಂಟೆಗಳಿಗೊಮ್ಮೆ ಹೊಸ ಬಿಲಿಯನೇರ್ ಸೃಷ್ಟಿಯಾಗುತ್ತಾನಂತೆ. ಜಾಗತಿಕವಾಗಿ, ಅಸಮಾನತೆಯು ತುಂಬಾ ತೀವ್ರವಾಗಿದೆ, ವಿಶ್ವದ 10 ಶ್ರೀಮಂತ ಪುರುಷರು 3.1 ಬಿಲಿಯನ್ ಬಡವರಿಗಿಂತ ಹೆಚ್ಚು ಸಂಪತ್ತನ್ನು ಹೊಂದಿದ್ದಾರೆ ಎಂದು ಆಕ್ಸ್‌ಫ್ಯಾಮ್ ಲೆಕ್ಕಾಚಾರ ಮಾಡಿದೆ.

Published by:ವಾಸುದೇವ್ ಎಂ
First published: