ಬಿಟ್ ಕಾಯಿನ್ ಹಗರಣ ( Bitcoin scandal) ಇಡೀ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದ್ದು ಎಲ್ಲರಿಗೂ ತಿಳಿದಿದೆ. ಈ ಹಗರಣದಲ್ಲಿ ಘಟಾನುಘಟಿ ರಾಜಕೀಯ ನಾಯಕರು ಭಾಗಿಯಾಗಿದ್ದಾರೆ ಎಂಬ ಮಾತೂ ಇದೆ. ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಹಗರಣದ ಪ್ರಮುಖ ಆರೋಪಿ ಶ್ರೀಕಾಂತ್ ಭಟ್ ಅಲಿಯಾಸ್ ಶ್ರೀಕಿ (Srikanth Bhatt alias Sriki) ತಲೆಮರೆಸಿಕೊಂಡಿದ್ದಾನೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಇತ್ತ ಬಿಟ್ ಕಾಯಿನ್ ಹಗರಣದ ಸ್ವರೂಪ ಪಡೆದಿದ್ದರೆ ಅತ್ತ ಬ್ರಿಟನ್ (British )ಪ್ರಜೆಯೊಬ್ಬ ( Citizen) ಆಕಸ್ಮಿಕವಾಗಿ 3000 ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್ ಎಸೆದು ಅದನ್ನೀಗ ಹುಡುಕುತ್ತಿದ್ದಾರೆ(Looking for it) ಎಂಬ ಸುದ್ದಿ ಹೊರಬಂದಿದೆ. 36 ವರ್ಷ ಪ್ರಾಯದ ಜೇಮ್ಸ್ ಹೋವೆಲ್ (James Howell ) ಆಕಸ್ಮಿಕವಾಗಿ ಬಿಟ್ ಕಾಯಿನ್ ಎಸೆದು ಹುಡುಕುತ್ತಿರುವ ಬ್ರಿಟನ್ ಪ್ರಜೆಯಾಗಿದ್ದಾನೆ.
8 ವರ್ಷಗಳಿಂದಲೂ ಹುಡುಕಾಟ
2013ರಲ್ಲಿ ದುರದೃಷ್ಟವಶಾತ್ ಸ್ವಯಂಕೃತಾಪರಾಧದಿಂದ ಬಿಟ್ ಕಾಯಿನ್ ಹಾರ್ಡ್ ಡ್ರೈವ್ ಎಸೆದುಬಿಟ್ಟಿರುವ ಜೇಮ್ಸ್ ಹೋವೆಲ್, ಕಳೆದ 8 ವರ್ಷಗಳಿಂದಲೂ ಅದಕ್ಕಾಗಿ ಹುಡುಕಾಟ ನಡೆಸುತ್ತಲೇ ಇದ್ದಾರೆ. ಅಂದು ಆತ ಹಾರ್ಡ್ ಡ್ರೈವ್ ಎಸೆದಾಗ ಅದರಲ್ಲಿ 300 ಮಿಲಿಯನ್ ಪೌಂಡ್ ಬಿಟ್ ಕಾಯಿನ್ ಇತ್ತೆನ್ನಲಾಗಿದೆ. ಆದರೆ, ಅದರ ಮೌಲ್ಯವೀಗ ಬರೋಬ್ಬರಿ 340 ಮಿಲಿಯನ್ ಪೌಂಡ್ ಆಗಿದೆ.
ಇದನ್ನೂ ಓದಿ: ಬಿಟ್ಕಾಯಿನ್ ಹುಟ್ಟುಹಾಕಿದ ವ್ಯಕ್ತಿ ಸತೋಶಿ ನಕಾಮೊಟೊ, ಇಷ್ಟು ಶಕ್ತಿಯುತ ಹಣಕಾಸು ವ್ಯವಸ್ಥೆ ಹುಟ್ಟಿದ್ದು ಹೇಗೆ?
ಅತ್ಯಾಧುನಿಕ ತಂತ್ರಜ್ಞಾನದ ಮೊರೆ
ಬ್ರಿಟನ್ನ ಜನಪ್ರಿಯ ಪತ್ರಿಕೆ ‘ದ ಸನ್’ ಈ ಕುರಿತು ವರದಿ ಮಾಡಿದ್ದು, ಬ್ರಿಟನ್ನ ನ್ಯೂಪೋರ್ಟ್ ಬಳಿ ಮಣ್ಣಿನ ರಾಶಿಯಲ್ಲಿ ಹೂತು ಹೋಗಿರುವ ಕಸದಲ್ಲಿದೆಯೆನ್ನಲಾದ ಹಾರ್ಡ್ ಡಿಸ್ಕ್ ಕಂಡುಹಿಡಿಯಲು ಜೇಮ್ಸ್ ಹೋವೆಲ್ ಎಲ್ಲ ಬಗೆಯ ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದಾರೆ.
ಈ ಕುರಿತು ‘ದ ಸನ್’ ಪತ್ರಿಕೆಯೊಂದಿಗೆ ಮಾತನಾಡಿರುವ ಜೇಮ್ಸ್ ಹೋವೆಲ್, ‘ಒಂದೊಮ್ಮೆ ಮಣ್ಣಿನ ರಾಶಿಯಲ್ಲಿ ಹೂತು ಹೋಗಿರುವ ಕಸದಲ್ಲಿರುವ ಹಾರ್ಡ್ ಡಿಸ್ಕ್ ದೊರೆತರೆ ತಾನು ಅದರ ಮೌಲ್ಯದ ಶೇ. 25ರಷ್ಟನ್ನು ನಿಮಗೆ ನೀಡುವುದಾಗಿ ನ್ಯೂಪೋರ್ಟ್ ಸಿಟಿ ಕೌನ್ಸಿಲ್ಗೆ ಮನವಿ ಮಾಡಿದ್ದರೂ, ಕಸದ ರಾಶಿಯನ್ನು ಪರಿಶೀಲನೆಗೆ ಅನುಮತಿ ನೀಡಲು ಅವರು ನಿರಾಕರಿಸುತ್ತಿದ್ದಾರೆ. ಸದ್ಯ ಈ ಐಟಿ ತಂತ್ರಜ್ಞ ಒಮ್ಮೆ ನಾಸಾ ನಿಯೋಜಿಸಿಕೊಂಡಿದ್ದ ಆನ್ ಟ್ರ್ಯಾಕ್ ಡಾಟಾ ರಿಕವರಿ ಸಂಸ್ಥೆಯನ್ನು ತನ್ನ ಹಾರ್ಡ್ ಡಿಸ್ಕ್ ಹುಡುಕಲು ನಿಯೋಜಿಸಿಕೊಂಡಿದ್ದಾನೆ.
ಹಾರ್ಡ್ ಡಿಸ್ಕ್ ಭೇದಿಸಲೇಬೇಕು
ಆ ಸಂಸ್ಥೆಯ ಪ್ರಕಾರ ಹಾರ್ಡ್ ಡಿಸ್ಕ್ ಭೇದಿಸಿರದಿದ್ದರೆ ಜೇಮ್ಸ್ ಹೋವೆಲ್ನ ಸಂಪತ್ತನ್ನು ವಶಪಡಿಸಿಕೊಳ್ಳಬಹುದಾದ ದೊಡ್ಡ ಅವಕಾಶವಿದೆ ಎನ್ನಲಾಗಿದೆ.
ಈ ಕುರಿತು ಬಿಟ್ ಕಾಯಿನ್ ಅಂತರ್ಜಾಲ ತಾಣ ವರದಿ ಮಾಡಿರುವಂತೆ ಹೋವೆಲ್ 12 ತಿಂಗಳ ಅವಧಿಯ ಹುಡುಕಾಟದ ಯೋಜನೆ ಹೊಂದಿದ್ದಾರೆ. ಈ ಯೋಜನೆಯಲ್ಲಿ ಎಕ್ಸ್-ರೇ, ಸ್ಕ್ಯಾನಿಂಗ್ ಸಾಧನಗಳು ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಹುಡುಕಾಟ ನಡೆಸಲು ಉದ್ದೇಶಿಸಲಾಗಿದೆ.
ತಜ್ಞರ ತಂಡ ನೇಮಕ
ಕಸದ ರಾಶಿಯಲ್ಲಿರುವ ಬಿಟ್ ಕಾಯಿನ್ ಸದ್ಯ 340 ಮಿಲಿಯನ್ ಪೌಂಡ್ ಮೌಲ್ಯ ಹೊಂದಿದೆ. ಸಿಟಿ ಕೌನ್ಸಿಲ್ ಅಧಿಕಾರಿಗಳು ಬಿಟ್ ಕಾಯಿನ್ ಹುಡುಕಾಟಕ್ಕೆ ಮುಂದಾಗುವ ಹೊತ್ತಿಗೆ ಅದರ ಮೌಲ್ಯ ಒಂದು ಬಿಲಿಯನ್ ಪೌಂಡ್ ಆಗುವ ಸಾಧ್ಯತೆ ಇದೆ. ಆದರೆ, ಸಿಟಿ ಕೌನ್ಸಿಲ್ ತಾನು ಈ ಕುರಿತು ಕಳವಳಕ್ಕೀಡಾಗಿದ್ದೇನೆ ಎಂದು ಹೇಳಿರುವ ಎಲ್ಲ ಸಂಗತಿಗಳೂ ಆಧಾರ ರಹಿತ ಎಂದು ನಿರೂಪಿಸಲು ತಜ್ಞರ ತಂಡವೊಂದನ್ನು ನೇಮಿಸಿಕೊಂಡಿದ್ದೇನೆ ಎಂದು ಜೇಮ್ಸ್ ಹೋವೆಲ್ ‘ದ ಸನ್’ಗೆ ತಿಳಿಸಿದ್ದಾರೆ.
ಡಿಜಿಟಲ್ ತಂತ್ರಜ್ಞರು ಎಚ್ಚರ
ಬಿಟ್ ಕಾಯಿನ್ ಅತ್ಯಂತ ಸಂಕೀರ್ಣ ಡಿಜಿಟಲ್ ತಂತ್ರಜ್ಞಾನ ಹೊಂದಿರುವ ಕರೆನ್ಸಿ. ಅತ್ಯಂತ ಕಠಿಣ ಪಾಸ್ವರ್ಡ್ ಹೊಂದಿರುವ ಬಿಟ್ ಕಾಯಿನ್ ಖರೀದಿಗೆ ಹಣ ಹೂಡುವುದು ಅಷ್ಟು ಸುರಕ್ಷಿತವಲ್ಲ ಎಂದು ಹಲವು ಡಿಜಿಟಲ್ ತಂತ್ರಜ್ಞರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: Cryptocurrency ವಹಿವಾಟಿನಲ್ಲಿ ಮಹಿಳೆಯರಿಗೇ ಹೆಚ್ಚು ಆಸಕ್ತಿ ಅಂತೆ, ಪರುಷರ ಇಂಟ್ರೆಸ್ಟ್ ಬೇರೆಯೇ ಇದೆ
ಕಾರಣ: ಡಿಜಿಟಲ್ ಕರೆನ್ಸಿಯಾದ ಬಿಟ್ ಕಾಯಿನ್ ಹ್ಯಾಕ್ ಮಾಡಬಹುದಾದ ಸಾಧ್ಯತೆಗಳು ಅಧಿಕವಿದೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ವಹಿವಾಟುಗಳಿಗಿಂತ ನಗದು ವ್ಯವಹಾರವೇ ಅತ್ಯಂತ ಸುರಕ್ಷಿತ ಮತ್ತು ಲಾಭದಾಯಕ ಎಂದು ಪದೇ ಪದೇ ಸಾಬೀತಾಗುತ್ತಿದೆ. ಇದಕ್ಕೆ ಜ್ವಲಂತ ನಿದರ್ಶನ ಬ್ರಿಟನ್ ಪ್ರಜೆ ಜೇಮ್ಸ್ ಹೋವೆಲ್!!!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ