Aadhar Card: ಇನ್ಮುಂದೆ ನವಜಾತ ಶಿಶುಗಳಿಗೂ ಸಿಗಲಿದೆ ಆಧಾರ್ ಕಾರ್ಡ್

UIDAI: ಆಸ್ಪತ್ರೆಯಲ್ಲಿ ಆಗತಾನೇ ಜನಿಸಿದ ನವಜಾತ ಶಿಶುಗಳಿಗೆ ಆಧಾರ್ ಕಾರ್ಡ್ ಮಾಡಿಸುವ ಯೋಜನೆ ಜಾರಿಗೆ ತರಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಮುಂದಾಗಿದೆ. ಹೀಗಾಗಿ ಇನ್ನು ಮುಂದೆ ಆಸ್ಪತ್ರೆಗಳಲ್ಲಿಯೇ ನವಜಾತ ಶಿಶುಗಳಿಗೆ ಆಧಾರ್ ನೋಂದಣಿ ಸಂಖ್ಯೆ ಸಿಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಆಧಾರ್ ಕಾರ್ಡ್(Aadhar Card)ಇದು ಸರ್ಕಾರದಿಂದ(Government)ನೀಡಲಾಗುವ ಅತ್ಯಂತ ಮಹತ್ವದ ಗುರುತಿನ ಚೀಟಿಗಳಲ್ಲೊಂದಾಗಿದೆ. ಆಧಾರ್ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(UIDIA) ನೀಡಿದ 12-ಅಂಕಿಯ ಗುರುತಿಸುವಿಕೆಯ ಸಂಖ್ಯೆಯಾಗಿದೆ. ಅಲ್ಲದೆ ಬ್ಯಾಂಕ್,(Bank) ಏರ್‌ಪೋರ್ಟ್‌,(Airport)ಶಾಲೆ ಕಾಲೇಜು(Schools and college(, ಪಿಎಫ್‌(PF), ಹೀಗೆ ಹಲವು ಸಂದರ್ಭದಲ್ಲಿ ಆಧಾರ್‌ ಕಾರ್ಡ್‌ಗಳನ್ನು ಬಳಸುವುದು ಈಗ ಕಡ್ಡಾಯವೆಂಬಂತೆ ಪರಿಗಣಿಸಲ್ಪಟ್ಟಿದೆ. ಹೀಗಾಗಿ ದೇಶದ ಎಲ್ಲಾ ಜನರಿಗೂ ಆಧಾರ್ ಒದಗಿಸಲು ಸರ್ಕಾರ ಪ್ರತಿನಿತ್ಯ ನಿರಂತರವಾಗಿ ಕೆಲಸ ಮಾಡುತ್ತಿದೆ.. ಜೊತೆಗೆ ಮತ್ತೊಂದು ಹೆಜ್ಜೆ ಮುಂದೆ ಇಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಮುಂದಾಗಿದ್ದು ನವಜಾತ ಶಿಶುಗಳಿಗೆ ಆಧಾರ್ ಕಾರ್ಡ್ ಒದಗಿಸುವ ಯೋಜನೆ ಬಗ್ಗೆ ಚಿಂತನೆ ನಡೆಸಿದೆ..

    ನವಜಾತ ಶಿಶುಗಳಿಗೆ ಆಧಾರ್ ಕಾರ್ಡ್..

    ಆಸ್ಪತ್ರೆಯಲ್ಲಿ ಆಗತಾನೇ ಜನಿಸಿದ ನವಜಾತ ಶಿಶುಗಳಿಗೆ ಆಧಾರ್ ಕಾರ್ಡ್ ಮಾಡಿಸುವ ಯೋಜನೆ ಜಾರಿಗೆ ತರಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಮುಂದಾಗಿದೆ. ಹೀಗಾಗಿ ಇನ್ನು ಮುಂದೆ ಆಸ್ಪತ್ರೆಗಳಲ್ಲಿಯೇ ನವಜಾತ ಶಿಶುಗಳಿಗೆ ಆಧಾರ್ ನೋಂದಣಿ ಸಂಖ್ಯೆ ಸಿಗಲಿದೆ.

    ಇದನ್ನೂ ಓದಿ: Aadhar Cardನಲ್ಲಿ ಮೊಬೈಲ್ ನಂಬರ್, ವಿಳಾಸ, ಫೋಟೋ ಅಪ್ ಡೇಟ್ ಮಾಡೋದು ಹೇಗೆ?

    ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಸಿಇಒ ಸೌರಭ್ ಗಾರ್ಗ್ , ಪ್ರತಿ ವರ್ಷ 2-2.5 ಕೋಟಿ ಶಿಶುಗಳು ಜನಿಸುತ್ತವೆ. ನಾವು ಅವರನ್ನು ಆಧಾರ್‌ಗೆ ನೋಂದಾಯಿಸುವ ಪ್ರಕ್ರಿಯೆಯಲ್ಲಿದ್ದೇವೆ.ನವಜಾತ ಶಿಶುಗಳಿಗೆ ಆಧಾರ್ ಸಂಖ್ಯೆಗಳನ್ನು ಒದಗಿಸಲು ಯುಐಡಿಎಐ ಜನನ ನೋಂದಣಿ ಅಧಿಕಾರಿಯೊಂದಿಗೆ ಪಾಲುದಾರಿಕೆ ಹೊಂದಲು ಪ್ರಯತ್ನಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

    ಇನ್ನು ಈಗಾಗಲೇ ದೇಶದಲ್ಲಿ 99.7 ಪ್ರತಿಶತ ವಯಸ್ಕ ಜನಸಂಖ್ಯೆಯನ್ನು ಆಧಾರ್‌ನಲ್ಲಿ ದಾಖಲಾಗಿದೆ. 131 ಕೋಟಿ ಜನರು ಈಗ ಆಧಾರ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.. ಇದರ ಮುಂದುವರೆದ ಭಾಗವಾಗಿ ನವಜಾತ ಶಿಶುಗಳಿಗೆ ಆಧಾರ್ ನೋಂದಣಿ ಸಂಖ್ಯೆ ನೀಡಲು ಮುಂದಾಗುತ್ತಿರುವುದಾಗಿ ಗಾರ್ಗ್ ತಿಳಿಸಿದ್ದಾರೆ.

    ನವಜಾತ ಶಿಶುಗಳಿಗೆ ತಂದೆ-ತಾಯಿಯ ಬಯೋಮೆಟ್ರಿಕ್

    ಇನ್ನು ನವಜಾತ ಶಿಶುಗಳು ಜನಿಸಿದಾಗ ಅದರ ಚಿತ್ರವನ್ನು ಕ್ಲಿಕ್ ಮಾಡುವ ಮೂಲಕ ಆಧಾರ್ ಕಾರ್ಡ್ ಅನ್ನು ಒದಗಿಸಲಾಗುತ್ತದೆ. ಆದ್ರೆ ಐದು ವರ್ಷದೊಳಗಿನ ಮಕ್ಕಳ ಬಯೋಮೆಟ್ರಿಕ್‌ಗಳನ್ನು ತೆಗೆದುಕೊಳ್ಳುವುದಿಲ್ಲ ಆದರೆ ಅದನ್ನು ಅವರ ಪೋಷಕರಲ್ಲಿ ಒಬ್ಬರೊಂದಿಗೆ ತಾಯಿ ಅಥವಾ ತಂದೆಯೊಂದಿಗೆ ಲಿಂಕ್ ಮಾಡುತ್ತೇವೆ ಮತ್ತು ಮಗು ಐದು ವರ್ಷ ದಾಟಿದ ನಂತರ ಅವರ ಬಯೋಮೆಟ್ರಿಕ್‌ಗಳನ್ನು ತೆಗೆದುಕೊಳ್ಳಲು ಯುಐಡಿಎಐ ನಿರ್ಧಾರ ಮಾಡಿದೆ .

    ಕಳೆದ ವರ್ಷ 10000 ಆಧಾರ್ ನೋಂದಣಿ ಶಿಬಿರ

    ಇನ್ನು ದೇಶದ ಪ್ರತಿಯೊಂದು ಜನರಿಗೆ ಆಧಾರ್ ಸಂಖ್ಯೆಯನ್ನು ಒದಗಿಸಲು ಕಳೆದ ವರ್ಷ 10000 ಶಿಬಿರಗಳನ್ನು ಮಾಡಿದ್ದು, 30 ಲಕ್ಷ ಜನರಿಗೆ ಆಧಾರ್ ನೋಂದಣಿ ಮಾಡಿಸಲಾಗಿದೆ ಎಂದು ಗರ್ಗ್ ಮಾಹಿತಿ ನೀಡಿದ್ದಾರೆ..ಇನ್ನು ದೇಶದಲ್ಲಿ ಮೊದಲು 2010 ರಲ್ಲಿ ಮೊದಲ ಆಧಾರ್ ಸಂಖ್ಯೆಯನ್ನು ನೋಂದಣಿ ಮಾಡಲಾಗಿತ್ತು . ಈಗ ಪ್ರತಿ ವರ್ಷ ಸುಮಾರು 10 ಕೋಟಿ ಜನರು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಗಳನ್ನು ಅಪ್‌ಡೇಟ್ ಮಾಡುತ್ತಾರೆ, ”ಎಂದು ಗರ್ಗ್ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಆಧಾರ್ ಕಾರ್ಡ್ ಕಳೆದಿದೆಯಾ? ನಂಬರ್ ನೆನಪಿಲ್ಲವೇ? ಹಾಗಾದ್ರೆ ಹೀಗೆ ಮಾಡಿ

    ಸದ್ಯ ದೇಶದಲ್ಲಿ ಒಂದು 140 ಕೋಟಿ ಬ್ಯಾಂಕ್ ಖಾತೆಗಳು ಇದ್ದು ಅದರಲ್ಲಿ, ಒಂದು 120 ಕೋಟಿ ಖಾತೆಗಳನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲಾಗಿದೆ ಎಂದು ಗಾರ್ಗ್ ಇದೇವೇಳೆ ತಿಳಿಸಿದರು.
    Published by:ranjumbkgowda1 ranjumbkgowda1
    First published: