Aadhaar Card: ಆಧಾರ್ ಕಾರ್ಡ್ ಬಳಕೆದಾರರಿಗೆ ಹೊಸ ಆ್ಯಪ್​! ಬಳಸೋದು ಕೂಡ ವೆರಿ ಸಿಂಪಲ್​

ಆಧಾರ್ ಕಾರ್ಡ್ (Aadhaar Card) ... ಪ್ರತಿಯೊಬ್ಬರಿಗೂ ಅಗತ್ಯವಿರುವ ಪ್ರಮುಖ ದಾಖಲೆ (Main Document) ಯಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನಾಗರಿಕರಿಗೆ ಆಧಾರ್ ಕಾರ್ಡ್‌ಗಳನ್ನು ನೀಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆಧಾರ್ ಕಾರ್ಡ್ (Aadhaar Card) ... ಪ್ರತಿಯೊಬ್ಬರಿಗೂ ಅಗತ್ಯವಿರುವ ಪ್ರಮುಖ ದಾಖಲೆ (Main Document) ಯಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನಾಗರಿಕರಿಗೆ ಆಧಾರ್ ಕಾರ್ಡ್‌ಗಳನ್ನು ನೀಡುತ್ತದೆ. ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಗುರುತಿನ ವಿವರಗಳನ್ನು ಮುಖ ಗುರುತಿಸುವಿಕೆಯ ಮೂಲಕ ಕೇಂದ್ರೀಯ ಗುರುತಿನ ಡೇಟಾ (Data) ರೆಪೊಸಿಟರಿಯಲ್ಲಿ ಸಂಗ್ರಹಿಸಬಹುದು ಎಂದು UIDAI ಹೇಳುತ್ತದೆ. ಮೊಬೈಲ್ ಸಂಖ್ಯೆ (Mobile Number) ಮತ್ತು ವಿಳಾಸ (Address) ದಂತಹ ಜನಸಂಖ್ಯಾ ಮತ್ತು ಬಯೋಮೆಟ್ರಿಕ್ ಡೇಟಾವನ್ನು ಸಂಗ್ರಹಿಸಬಹುದು ಎಂದು ಯುಐಡಿಎಐ ಹೇಳಿದೆ. ಇದಕ್ಕಾಗಿ AadhaarFaceRd ಎಂಬ ಆ್ಯಪ್​ ಬಿಡುಗಡೆ ಮಾಡಲಾಗಿದೆ. ಹಾಗಾಗಿ ಆಧಾರ್ ಕಾರ್ಡ್ ಹೊಂದಿರುವವರು ಇನ್ನು ಮುಂದೆ ಭೌತಿಕ ಗುರುತಿನ ಚೀಟಿಯನ್ನು ಹೊಂದುವ ಅಗತ್ಯವಿಲ್ಲ. UIDAI ನಿಂದ ಹೊಸದನ್ನು ಪ್ರಾರಂಭಿಸಲಾಗಿದೆ. ಮೊಬೈಲ್​ ದೃಢೀಕರಣವನ್ನು ಅಪ್ಲಿಕೇಶನ್ ಮೂಲಕ ಎಲ್ಲಿಯಾದರೂ, ಯಾವುದೇ ಸಮಯದಲ್ಲಿ ಮಾಡಬಹುದು.

AadhaarFaceRd ಆ್ಯಪ್​ ಬಿಡುಗಡೆ!

ಫೇಸ್​ ದೃಢೀಕರಣದ ಮೂಲಕ ಆಧಾರ್ ಕಾರ್ಡ್ ಹೊಂದಿರುವವರ ನೈಜ ಗುರುತನ್ನು ಪರಿಶೀಲಿಸಲಾಗುತ್ತದೆ. ಆಧಾರ್ ನೋಂದಣಿಯ ಸಮಯದಲ್ಲಿ UIDAI ಸಂಗ್ರಹಿಸಿದ ಡೇಟಾವನ್ನು ಆಧರಿಸಿ ಈ ಪರಿಶೀಲನೆಯನ್ನು ಮಾಡಲಾಗುತ್ತದೆ. ಮುಖ ದೃಢೀಕರಣ ತಂತ್ರಜ್ಞಾನದ ಮೂಲಕ ಆಧಾರ್ ಕಾರ್ಡ್ ಹೊಂದಿರುವವರ ಆಧಾರ್ ದೃಢೀಕರಣವನ್ನು ಆಧಾರ್ ಫೇಸ್ ಆರ್‌ಡಿ ಅಪ್ಲಿಕೇಶನ್ ಲೈವ್ ಮಾಡುತ್ತದೆ ಎಂದು ಯುಐಡಿಎ ಟ್ವೀಟ್ ಮಾಡಿದೆ. ಈ ತಂತ್ರಜ್ಞಾನವನ್ನು UIDAI ಅಭಿವೃದ್ಧಿಪಡಿಸಿದೆ.

ಪ್ಲೇ ಸ್ಟೋರ್​ನಲ್ಲಿ ಈ ಆ್ಯಪ್​ ಲಭ್ಯ!

ಆಧಾರ್ ಫೇಸ್ ಆರ್‌ಡಿ ಆ್ಯಪ್ ಮೂಲಕ ಜೀವನ್ ಪ್ರಮಾಣ, ಪಡಿತರ ವಿತರಣೆ, ಕೋವಿನ್ ಲಸಿಕೆ ಆ್ಯಪ್, ಸ್ಕಾಲರ್‌ಶಿಪ್ ಯೋಜನೆಗಳು, ರೈತರ ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದ ಆ್ಯಪ್‌ಗಳಲ್ಲಿ ಮುಖದ ದೃಢೀಕರಣವನ್ನು ಮಾಡಬಹುದು. ಆಧಾರ್ ಕಾರ್ಡ್ ಬಳಕೆದಾರರು ಗೂಗಲ್​ AadhaarFaceRd ಆಪ್ ಅನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆ್ಯಪ್​ ಡೌನ್​ಲೌಡ್​ ಬಳಿಕ ಹೇಗೆ ಬಳಸಬೇಕು ಎಂದು ಇಲ್ಲಿ ನೋಡಿ.


ಇದನ್ನೂ ಓದಿ: ಎಸ್‌ಬಿಐನಲ್ಲಿ ಖಾತೆ ಹೊಂದಿದ್ದೀರಾ? ಹಾಗಾದ್ರೆ ಈ ದಾಖಲೆ ನೀಡಬೇಕು

ಫೇಸ್​ ಆರ್​ಡಿ ಅಪ್ಲಿಕೇಶನ್ ಅನ್ನು ಹೇಗೆ ಬಳಸುವುದು?

ಹಂತ 1- ಆಧಾರ್ ಕಾರ್ಡ್ ಹೊಂದಿರುವವರು ಮೊದಲು Google Play Store ನಲ್ಲಿ Aadhaar FaceRD ಅಪ್ಲಿಕೇಶನ್ ಅನ್ನು ಸರ್ಚ್ ಮಾಡಿ.

ಹಂತ 2- ನಂತರ ಅಪ್ಲಿಕೇಶನ್ ಅನ್ನು ಡೌನ್​ಲೌಡ್ ಮಾಡಿ, ಓಪನ್​ ಮಾಡಿ

ಹಂತ 3- ಆನ್-ಸ್ಕ್ರೀನ್ ಮುಖದ ದೃಢೀಕರಣ ಮಾರ್ಗದರ್ಶಿಯನ್ನು ಅನುಸರಿಸಿ ಮತ್ತು ಮುಖದ ದೃಢೀಕರಣವನ್ನು ಪೂರ್ಣಗೊಳಿಸಿ.

ಹಂತ 4- ಅದರ ನಂತರ ಮುಂದುವರೆಯಿರಿ ಆಯ್ಕೆ ಕ್ಲಿಕ್ ಮಾಡಿ.

ಹಂತ 5- ಕ್ಯಾಮರಾದಲ್ಲಿ ಮುಖವು ಸ್ಪಷ್ಟವಾಗಿ ಗೋಚರಿಸುತ್ತದೆ. ದೃಢೀಕರಣಕ್ಕಾಗಿ ಹಿನ್ನೆಲೆ ಸ್ಪಷ್ಟವಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಇದನ್ನೂ ಓದಿ: GST ಲೆಕ್ಕಾಚಾರ ಹೇಗಿರುತ್ತದೆ ಗೊತ್ತಾ? ನಾಳೆಯಿಂದ ಯಾವೆಲ್ಲ ವಸ್ತುಗಳು ದುಬಾರಿಯಾಗಲಿವೆ?

ಮುಖದ ದೃಢೀಕರಣವನ್ನು ಮಾಡುವ ಮೊದಲು ಕ್ಯಾಮರಾ ಲೆನ್ಸ್ ಅನ್ನು ಸ್ವಚ್ಛಗೊಳಿಸಿ. ಮುಖ ಗುರುತಿಸುವಿಕೆಯನ್ನು ಪೂರ್ಣಗೊಳಿಸಿದ ನಂತರ UIDAI ನಿಮ್ಮ ಗುರುತನ್ನು ಪರಿಶೀಲಿಸುತ್ತದೆ. ನೀವು ಇನ್ನು ಮುಂದೆ ಭೌತಿಕ ಆಧಾರ್ ಕಾರ್ಡ್ ಅನ್ನು ಒಯ್ಯುವ ಅಗತ್ಯವಿಲ್ಲ. ಆಧಾರ್ ದೃಢೀಕರಣ ಬಳಕೆದಾರರ ಏಜೆನ್ಸಿಗಳು ಆಧಾರ್ ಕಾರ್ಡ್ ಹೊಂದಿರುವವರ ದೃಢೀಕರಣಕ್ಕಾಗಿ ಈ ತಂತ್ರಜ್ಞಾನವನ್ನು ಬಳಸುತ್ತವೆ. ಮುಖ ಗುರುತಿಸುವಿಕೆಯ ಮೂಲಕ ನಿಮ್ಮ ಐಡಿಯನ್ನು ಗುರುತಿಸಿ. ಇದು ಸದಾ ನಿಮ್ಮೊಂದಿಗೆ ಆಧಾರ್​ ಕಾರ್ಡ್ ತೆಗೆದುಕೊಂಡು ಹೋಗುವ ಚಿಂತೆಯಿಲ್ಲ. ನಿಮ್ಮ ಮೊಬೈಲ್​ ಮೂಲಕವೇ ಆಧಾರ್​​ ಕಾರ್ಡ್ ಹೊಂದಬಹುದು.
Published by:Vasudeva M
First published: