UGC NET 2022: ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ; ಯುಜಿಸಿ ನೆಟ್ ರಿಜಿಸ್ಟ್ರೇಷನ್ ಗಡುವು ವಿಸ್ತರಣೆ

UGC NET ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಹಂತ ಹಂತದ ಮಾಹಿತಿಯನ್ನು ನಿಮಗೆ ಎಂದೇ ಇಲ್ಲಿ ಸರಳವಾಗಿ ವಿವರಿಸಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
    UGC-NET ಡಿಸೆಂಬರ್ 2021 ಮತ್ತು ಜೂನ್ 2022 ಗಾಗಿ ಆನ್‌ಲೈನ್ ಅರ್ಜಿ ನಮೂನೆಯನ್ನು ಸಲ್ಲಿಸುವ ಗಡುವನ್ನು (UGC-NET December 2021) ವಿಸ್ತರಿಸಲಾಗಿದೆ ಎಂದು UGC ಘೋಷಿಸಿದೆ ಆನ್‌ಲೈನ್ ಅಪ್ಲಿಕೇಶನ್ ಮತ್ತು ಶುಲ್ಕ ಪಾವತಿಯ ಹೊಸ ಗಡುವು ಈಗ ಮೇ 30, 2022 ಆಗಿದೆ. ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಯನ್ನು ಸಲ್ಲಿಸಲು ಅಧಿಕೃತ ವೆಬ್‌ಸೈಟ್​ಗೆ (UGC Official Website) ಭೇಟಿ ನೀಡಿ ಸಲ್ಲಿಸಬಹುದಾಗಿದೆ. ಯುಜಿಸಿ ಅಧ್ಯಕ್ಷರು ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಈ ಘೋಷಣೆ ಮಾಡಿದ್ದಾರೆ. "UGC-NET ಡಿಸೆಂಬರ್ 2021 ಮತ್ತು ಜೂನ್ 2022 (ವಿಲೀನಗೊಂಡ ಅವಧಿಗಳು) ಆನ್‌ಲೈನ್ ಅರ್ಜಿ ನಮೂನೆಯನ್ನು ಸಲ್ಲಿಸುವ ಬಗ್ಗೆ ಅಭ್ಯರ್ಥಿಗಳ ಅಗತ್ಯತೆಯನ್ನು ಗಮನಿಸಿ ಈ ವಿಸ್ತರಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

    UGC NET ಡಿಸೆಂಬರ್ 2021, ಜೂನ್ 2022: ಅರ್ಜಿ ಸಲ್ಲಿಸುವುದು ಹೇಗೆ ಎಂಬ ಹಂತ ಹಂತದ ಮಾಹಿತಿಯನ್ನು ನಿಮಗೆ ಎಂದೇ ಇಲ್ಲಿ ಸರಳವಾಗಿ ವಿವರಿಸಲಾಗಿದೆ.

    ಹಂತ 1: ಅಧಿಕೃತ ವೆಬ್‌ಸೈಟ್​ಗೆ ಭೇಟಿ ನೀಡಿ. ಅಥವಾ ಇಲ್ಲಿ ಕ್ಲಿಕ್ ಮಾಡಿ

    ಹಂತ 2: 'UGC NET ಡಿಸೆಂಬರ್ 2021/ಜೂನ್ 2022 ನೋಂದಣಿ' ಲಿಂಕ್ ಮೇಲೆ ಕ್ಲಿಕ್ ಮಾಡಿ

    ಹಂತ 3: ನಿಮ್ಮನ್ನು ಹೊಸ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ

    ಹಂತ 4: ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಮತ್ತು ನೋಂದಾಯಿಸಿ

    ಹಂತ 5: ಹೊಸದಾಗಿ ರಚಿಸಲಾದ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಮಾಡಿ

    ಹಂತ 6: ಫಾರ್ಮ್ ಅನ್ನು ಭರ್ತಿ ಮಾಡಿ, ಚಿತ್ರಗಳನ್ನು ಅಪ್‌ಲೋಡ್ ಮಾಡಿ ಮತ್ತು ಡೌನ್‌ಲೋಡ್ ಮಾಡಿ

    ಹಂತ 7: ಪಾವತಿ ಮಾಡಿ.

    ಈಮುನ್ನ ಮೇ 23 ರವರೆಗೆ ಮಾತ್ರ ಗಡುವು ಇತ್ತು
    UGC-NET ನ ವಿಲೀನಗೊಂಡ ಡಿಸೆಂಬರ್ 2021 ಮತ್ತು ಜೂನ್ 2022 ಅವಧಿಗಳಿಗೆ NTA ಅರ್ಜಿ ನಮೂನೆ ತಿದ್ದುಪಡಿ ವಿಂಡೋವನ್ನು ತೆರೆದಿರುವ ಸಮಯದಲ್ಲಿ ಈ ವಿಸ್ತರಣೆ ಮಾಡಲಾಗಿದೆ. ಈ ಬದಲಾವಣೆಗಳನ್ನು ಮಾಡಲು ಗಡುವು ಮೇ 23, 2022 ರ ರಾತ್ರಿ 9 ಗಂಟೆಯಾಗಿತ್ತು.



    ಇದನ್ನೂ ಓದಿ: PM Narendra Modi: ಪ್ರಧಾನಿ ಮೋದಿ 8 ವರ್ಷಗಳಲ್ಲಿ ಅಭಿವೃದ್ಧಿಗೆ ಖರ್ಚು ಮಾಡಿದ ಹಣ ಎಷ್ಟು? ಅಂಕಿ ಅಂಶ ನೋಡಿ

    ಯುಜಿಸಿ ನೆಟ್ ವರ್ಷಕ್ಕೆ ಎರಡು ಬಾರಿ ನಡೆಯುತ್ತದೆ. ಆದರೂ ಈ ಬಾರಿ ಕೋವಿಡ್-19 ಕಾರಣದಿಂದಾಗಿ ಡಿಸೆಂಬರ್ 2021 ರ ಅವಧಿಗೆ ಮುಂದೂಡಿದ ಕಾರಣ UGC NET ಜೂನ್ 2022 ರ ಅವಧಿಗೆ ಮುಂದೂಡಲಾಗಿದೆ. ಪರೀಕ್ಷೆಯನ್ನು ಹೆಚ್ಚು ಸ್ಥಿರವಾಗಿಸಲು, NTA ಡಿಸೆಂಬರ್ 2021 ಮತ್ತು ಜೂನ್ 2022 ರ ಪರೀಕ್ಷಾ ಅವಧಿಗಳನ್ನು ಒಟ್ಟಿಗೆ ಸಂಯೋಜನೆ ಮಾಡಿದೆ.

    ಏನಿದು ಯುಜಿಸಿ?
    ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಗೆ (NTA) ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (UGC) UGC-NET ನಡೆಸುವ ಕಾರ್ಯವನ್ನು ವಹಿಸಲಾಗಿದೆ. ಇದು ಭಾರತದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಪ್ರಾಧ್ಯಾಪಕರುಗಳನ್ನು ಆಯ್ಕೆ ಮಾಡುತ್ತದೆ. 'ಸಹಾಯಕ ಪ್ರೊಫೆಸರ್' ಮತ್ತು 'ಜೂನಿಯರ್ ರಿಸರ್ಚ್ ಫೆಲೋಶಿಪ್ ಹುದ್ದೆಗಳಿಗೆ ಭಾರತೀಯ ಪ್ರಜೆಗಳ ಅರ್ಹತೆಯನ್ನು ನಿರ್ಧರಿಸುವ ಪರೀಕ್ಷೆಯಾಗಿದೆ.

    ಇದನ್ನೂ ಓದಿ: FDI in Karnataka: ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಭಾರತದ ದಾಖಲೆ, ಕರ್ನಾಟಕದ್ದೇ ಸಿಂಹಪಾಲು! ಅಂಕಿ ಅಂಶ ಇಲ್ಲಿದೆ

    ಜೂನ್ 2018 ರವರೆಗೆ, NET ಅನ್ನು CBSE ದೇಶದಾದ್ಯಂತ 91 ನಗರಗಳಲ್ಲಿ 84 ವಿಷಯಗಳಲ್ಲಿ ನಡೆಸುತ್ತಿತ್ತು. ಅದರ ನಂತರ ಡಿಸೆಂಬರ್ 2018 ರಿಂದ, ಯುಜಿಸಿ-ನೆಟ್ ಅನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನಡೆಸುತ್ತಿದೆ.
    Published by:guruganesh bhat
    First published: