ಇಂಧನ ಬೆಲೆ ಏರಿಕೆ (Oil Price Hike) ಮತ್ತು ದೇಶದ ಹಣದುಬ್ಬರ ದರ ಏರಿಕೆಯ ನಡುವೆ ತನ್ನ ಚಾಲಕರನ್ನು ಸಂತೋಷಪಡಿಸುವ ಉದ್ದೇಶದಿಂದ ಉಬರ್ ಇಂಡಿಯಾ (Uber India) ವಿವಿಧ ಕ್ರಮಗಳನ್ನು ಘೋಷಿಸಿದೆ. ಚಾಲಕರ ಒಳಿತನ್ನು ಗುರಿಯಾಗಿಸಿಕೊಂಡು ಈ ಹೊಸ ಕ್ರಮಗಳು ದೇಶಾದ್ಯಂತ ಜಾರಿಗೊಳಿಸಲಾಗುತ್ತದೆ ಎಂದು ಉಬರ್ ತಿಳಿಸಿದೆ. ಹೆಚ್ಚಿನ ದರಗಳು (Uber Hikes Fare) ಉತ್ತಮ ಪಾವತಿ (Payment Mode) ಚಾಲಕರು ರೈಡ್ ಸ್ವೀಕರಿಸುವ ಮೊದಲೇ ಪ್ರಯಾಣಿಕರು ತೆರಳಬೇಕಾದ ಗಮ್ಯಸ್ಥಾನವನ್ನು ತೋರಿಸುವುದು (Showing Destination) ಮೊದಲಾದ ಯೋಜನೆಗಳನ್ನು ಉಬರ್ ಆರಂಭಿಸಿದೆ. Uber ಈಗಾಗಲೇ ದೇಶದ ಕೆಲವು ಭಾಗಗಳಲ್ಲಿ ದರವನ್ನು ಹೆಚ್ಚಿಸಲು ಪ್ರಾರಂಭಿಸಿದ್ದು, ಇದೀಗ ಎಲ್ಲಾ ಪ್ರದೇಶಗಳಲ್ಲಿ ದರವನ್ನು ಹೆಚ್ಚಿಸಲಾಗಿದೆ ಎಂದು ಘೋಷಿಸಿದೆ.
ಸದ್ಯ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಉಬರ್ ಚಾಲಕರು ಹೆಚ್ಚುತ್ತಿರುವ ಇಂಧನ ಬೆಲೆಗಳ ಬಗ್ಗೆಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರೈಡ್ ಮೂಲಕ ತಮಗೆ ಸಿಗುವ ಹಣವನ್ನು ದರವನ್ನು ಹೆಚ್ಚಿಸುವಂತೆ ಕಂಪನಿಯಲ್ಲಿ ಬೇಡಿಕೆ ಇಡುತ್ತಿದ್ದಾರೆ.
ಚಾಲಕರಿಗೆ ಸಿಗುವ ಹಣ ಎಷ್ಟು ಹೆಚ್ಚಳ?
ಚಾಲಕರಿಗೆ ಸಿಗುವ ಹಣವನ್ನು ಸುಮಾರು ಶೇಕಡಾ 15ರಷ್ಟು ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ. ಇದು ಚಾಲಕರಲ್ಲಿ ಸಂತಸ ಮೂಡಿಸಿದರೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಗ್ರಾಹಕರ ಜೇಬಿಗೆ ಇನ್ನಷ್ಟು ಭಾರವಾಗುವ ಆತಂಕ ಮೂಡಿಸಿದೆ.
ಹಲವು ಸಮಸ್ಯೆಗಳಿಗೆ ದೊರೆಯಲಿದೆ ಪರಿಹಾರ!
ನೀವು ಕ್ಯಾಬ್ ಅಥವಾ ಆಟೋವನ್ನು ಬುಕ್ ಮಾಡುವಾಗ ಚಾಲಕರು ನಿಮ್ಮನ್ನು ಕೇಳುವ ಸಾಮಾನ್ಯ ಪ್ರಶ್ನೆಗಳಲ್ಲಿ ಒಂದು ನೀವು ಎಲ್ಲಿಗೆ ಹೋಗಬೇಕು? ಎಂಬುದು. ಜೊತೆಗೆ ಚಾಲಕರು ತಾವು ಒಪ್ಪಿಕೊಂಡ ರೈಡ್ಅನ್ನು ಸಹ ರದ್ದುಗೊಳಿಸುವ, ಅಥವಾ ಹೋಗಬೇಕಾದ ಸ್ಥಳವನ್ನು ಇಷ್ಟಪಡದಿದ್ದರೆ ರೈಡ್ ಅನ್ನು ರದ್ದುಗೊಳಿಸಲು ಗ್ರಾಹಕರಿಗೆ ಕೇಳುವ ಸಂದರ್ಭಗಳು ಹೆಚ್ಚಾಗುತ್ತಿವೆ. ಇಂತಹ ಸಮಸ್ಯೆಗಳನ್ನು ಪರಿಹರಿಸಲು ಚಾಲಕರು ಸವಾರಿಯನ್ನು ಸ್ವೀಕರಿಸುವ ಮೊದಲು ಪ್ರಯಾಣದ ಗಮ್ಯಸ್ಥಾನವನ್ನು ತೋರಿಸಲಾಗುವುದು ಎಂದು ಉಬರ್ ಘೋಷಿಸಿದೆ. ಇದು ಚಾಲಕರು ಮತ್ತು ಗ್ರಾಹಕರಿಬ್ಬರಿಗೂ ಒಳ್ಳೆಯ ಸುದ್ದಿಯಾಗಲಿದೆ.
ಇದನ್ನೂ ಓದಿ: Traffic Rule: ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದರೆ 2 ಸಾವಿರ ದಂಡ ಪಾವತಿಸಲು ರೆಡಿಯಾಗಿ!
ಇದು ಪೂರ್ವನಿರ್ಧರಿತ ಟ್ರಿಪ್ ಸ್ವೀಕಾರ ಮಿತಿಯನ್ನು ಪೂರೈಸುವ ಡ್ರೈವರ್‌ಗಳಿಗೆ ಮಾತ್ರ ಗೋಚರಿಸುತ್ತದೆ ಎಂದು ಗಮನಿಸಬೇಕು. ಅಂದರೆ ಟ್ರಿಪ್‌ಗಳನ್ನು ಹೆಚ್ಚಾಗಿ ತಿರಸ್ಕರಿಸುವ ಡ್ರೈವರ್‌ಗಳಿಗೆ ಗಮ್ಯಸ್ಥಾನದ ವಿಳಾಸವನ್ನು ತೋರಿಸಲಾಗುವುದಿಲ್ಲ.
ಪಾವತಿ ಮೋಡ್
"ಕ್ಯಾಶ್ ಅಥವಾ ಆನ್‌ಲೈನ್", ನಾವು ಕ್ಯಾಬ್ ಅನ್ನು ಬುಕ್ ಮಾಡುವಾಗ ನಾವು ಕೇಳುವ ಮತ್ತೊಂದು ಪ್ರಶ್ನೆಯಾಗಿದೆ. ಇದನ್ನು ಪರಿಹರಿಸಲು Uber ಪ್ರಯಾಣವನ್ನು ಸ್ವೀಕರಿಸುವ ಮೊದಲು ಚಾಲಕನಿಗೆ ಪಾವತಿ ವಿಧಾನವನ್ನು ತೋರಿಸಲಿದೆ.
ಇದನ್ನೂ ಓದಿ: Black Thursday: ಕರಗಿಹೋದ 7 ಲಕ್ಷ ಕೋಟಿ ರೂಪಾಯಿ ಹೂಡಿಕೆ! ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ
ಪಾವತಿ ವೇಳಾಪಟ್ಟಿ
ಪಾವತಿ ಪ್ರಕ್ರಿಯೆಯನ್ನು ಸರಾಗಗೊಳಿಸುವ ಮತ್ತೊಂದು ಹಂತದಲ್ಲಿ, ಉಬರ್ ದೈನಂದಿನ ಪಾವತಿ ಪ್ರಕ್ರಿಯೆಯನ್ನು ಘೋಷಿಸಿದೆ. ಇದರ ಭಾಗವಾಗಿ, ಸೋಮವಾರದಿಂದ ಗುರುವಾರದವರೆಗಿನ ಗಳಿಕೆಯನ್ನು ಮರುದಿನ ಪಾವತಿಸಲಾಗುವುದು. ಶುಕ್ರವಾರದಿಂದ ಭಾನುವಾರದವರೆಗಿನ ಗಳಿಕೆಯನ್ನು ಸೋಮವಾರ ಪಾವತಿಸಲಾಗುತ್ತದೆ.
ಬಳಕೆ ಮಾಡುವುದನ್ನೇ ರದ್ದುಗೊಳಿಸಬಹುದು ಹುಷಾರ್!
ಈ ಎಲ್ಲದರ ಜೊತೆಗೆ ರದ್ದುಗೊಳಿಸುವಿಕೆ ಅಥವಾ ಏರ್ ಕಂಡಿಷನರ್ ಅನ್ನು ಆನ್ ಮಾಡದಿರುವಿಕೆಗಾಗಿ ಚಾಲಕನ ವಿರುದ್ಧ ಪದೇ ಪದೇ ದೂರುಗಳು ದಂಡ ಮತ್ತು ಅಪ್ಲಿಕೇಶನ್ ಅನ್ನು ಬಳಸುವ ನಿರ್ಬಂಧಗಳಿಗೆ ಕಾರಣವಾಗುತ್ತವೆ ಎಂದು Uber ಘೋಷಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ