ಕೇಶುಬ್ ಮಹೀಂದ್ರಾ (Keshub Mahindra) ಉದ್ಯಮ ಲೋಕದಲ್ಲಿ ತಮ್ಮದೇ ಹೆಸರಿನಿಂದ ಇತಿಹಾಸ ಸೃಷ್ಟಿಸಿದವರು. ಏಪ್ರಿಲ್ 12 ರಂದು ನಿಧನರಾದ ಖ್ಯಾತ ಕೈಗಾರಿಕೋದ್ಯಮಿ ತಮ್ಮ ಸರಳತೆ ಹಾಗೂ ಉದಾರ ವ್ಯಕ್ತಿತ್ವದಿಂದ ಹೆಸರುವಾಸಿಯಾಗಿದ್ದರು. ದೇಶ ಕಂಡ ಮಹಾನ್ ಕೈಗಾರಿಕೋದ್ಯಮಿ ಕೇಶುಬ್ ಮಹೀಂದ್ರಾ ಪ್ರಸ್ತುತ ಮಹೀಂದ್ರಾ & ಮಹೀಂದ್ರಾ ಅಧ್ಯಕ್ಷರಾಗಿರುವ ಆನಂದ್ ಮಹೀಂದ್ರಾ ಅವರ ಸೋದರ ಮಾವ. 1963-2012 ರಲ್ಲಿ ತಮ್ಮ ಫ್ಯಾಮಿಲಿ ಗ್ರೂಪ್ (Family Group) ಆದ ಮಹೀಂದ್ರಾ & ಮಹೀಂದ್ರಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಕೇಶುಬ್, ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ತಿರಸ್ಕರಿಸಲು ಕಾರಣ
ವಿಲಾಸ್‌ರಾವ್ ದೇಶಮುಖ್ ನೇತೃತ್ವದ ಮಹಾರಾಷ್ಟ್ರದ ಕಾಂಗ್ರೆಸ್-ಎನ್‌ಸಿಪಿ ಸರ್ಕಾರವು ಪದ್ಮಭೂಷಣಕ್ಕಾಗಿ ಅವರ ಹೆಸರನ್ನು ಸೂಚಿಸಿತ್ತು. ಅಟಲ್ ಬಿಹಾರಿ ವಾಜಪೇಯಿ ಅವರ ಎನ್‌ಡಿಎ ಸರ್ಕಾರವು ಸಲಹೆಯನ್ನು ಅಂಗೀಕರಿಸಿತು. ಆದರೆ ಕೈಗಾರಿಕೋದ್ಯಮಿಯಾಗಿ ಹೆಸರುವಾಸಿಯಾಗಿದ್ದರೂ ಕೇಶುಬ್ ನಯವಾಗಿಯೇ ಪುರಸ್ಕಾರವನ್ನು ತಿರಸ್ಕರಿಸಿದರು.
ಅವರು ಸ್ಥಾಪಿಸಿದ್ದ ಭೋಪಾಲ್ ಸ್ಥಾವರವು 1984 ರಲ್ಲಿ ಮಾರಣಾಂತಿಕ ಅನಿಲವನ್ನು ಸೋರಿಕೆ ಮಾಡಿ ಸಾವಿರಾರು ಸಾವುಗಳಿಗೆ ಕಾರಣವಾಯಿತು. CBI ಚಾರ್ಜ್ ಶೀಟ್ ಸಲ್ಲಿಸಲಾಯಿತು ಮತ್ತು UCIL ನ ಎಂಟು ಉನ್ನತ ಕಾರ್ಯನಿರ್ವಹಣಾಧಿಕಾರಿಗಳಲ್ಲಿ ಮಹೀಂದ್ರಾ ಅವರನ್ನು ಹೆಸರಿಸಲಾಯಿತು.
ಎರಡು ವರ್ಷಗಳ ಶಿಕ್ಷೆಯನ್ನೂ ಕೇಶುಬ್ ಮಹೀಂದ್ರಾ ಅವರಿಗೆ ವಿಧಿಸಲಾಯಿತು. ಶಿಕ್ಷೆಯಾದ ಕೆಲವೇ ಗಂಟೆಗಳಲ್ಲಿ ಉನ್ನತ ನ್ಯಾಯಾಲಯವು ಜಾಮೀನು ನೀಡಿತು. ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ತಾನು ಆರೋಪಿಯಾಗಿರುವುದರಿಂದ ಪ್ರಶಸ್ತಿ ಪಟ್ಟಿಯಲ್ಲಿ ತನ್ನ ಹೆಸರು ಇರುವುದು ಸರಿಯಲ್ಲ ಅಂತೆಯೇ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದರು. ಹೀಗೆ ಪದ್ಮ ಪ್ರಶಸ್ತಿ ಪುರಸ್ಕೃತರೊಬ್ಬರು ತಮ್ಮ ತಪ್ಪನ್ನು ಎತ್ತಿ ತೋರಿಸಿ ಗೌರವ ಪಟ್ಟಿಯಲ್ಲಿರಲು ನಿರಾಕರಿಸಿದ ಏಕೈಕ ಸಂದರ್ಭ ಇದಾಗಿತ್ತು.
ಬ್ಯುಸಿನೆಸ್ ಅನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದ ಕೇಶುಬ್ ಮಹೀಂದ್ರಾ
ಜೆಆರ್‌ಡಿ ಟಾಟಾ ಅವರಂತೆ ಕೆಶುಬ್ ಮಹೀಂದ್ರಾ ಅವರು ತಮ್ಮ ಗುಂಪು ಕಂಪನಿಗಳನ್ನು ನಡೆಸಲು ವೃತ್ತಿಪರ ವ್ಯವಸ್ಥಾಪಕರನ್ನು ನೇಮಿಸಿದ್ದರು. ಉಕ್ಕಿನ ವ್ಯಾಪಾರದಿಂದ ಪ್ರಾರಂಭಿಸಿ ಅವರು ಆಟೋಮೊಬೈಲ್ ಮತ್ತು ಟ್ರಾಕ್ಟರುಗಳ ತಯಾರಿಕೆಯಲ್ಲಿ ವೈವಿಧ್ಯಗೊಳಿಸಿದರು.
ಇದನ್ನೂ ಓದಿ: SBI Bank ಗ್ರಾಹಕರಿಗೆ ಭರ್ಜರಿ ಸುದ್ದಿ, ಕೊನೆಗೂ ಹಿರಿಯ ನಾಗರಿಕರಿಗೆ ಸಿಕ್ತು ನೆಮ್ಮದಿ!
ಇಂದು ಮಹೀಂದ್ರಾ & ಮಹೀಂದ್ರಾ ಪ್ರವಾಸೋದ್ಯಮ ರೆಸಾರ್ಟ್ ಮಹೀಂದ್ರಾ ಹಾಲಿಡೇಸ್ ಅನ್ನು ಹೊಂದಿದೆ ಅಂತೆಯೇ ಇನ್ನಿತರ ಸ್ಥಾಪನೆಗಳನ್ನು ತನ್ನ ಹೆಸರಿನಲ್ಲಿ ಹೊಂದಿದೆ.
2012 ರಲ್ಲಿ ಕೇಶುಬ್ ನಂತರ ಸಂಸ್ಥೆಯ ಅಧ್ಯಕ್ಷರಾಗಿ ಅವರ ಸೋದರಳಿಯ ಆನಂದ್ ಮಹೀಂದ್ರಾ ಅಧಿಕಾರ ವಹಿಸಿಕೊಂಡರು ಅಂತೆಯೇ ಇವರಿಬ್ಬರೂ ಜೊತೆಯಾಗಿ ಇನ್ನಷ್ಟು ಸ್ಥಾಪನೆಗಳನ್ನು ಆರಂಭಿಸಿದರು.
ಉದ್ಯೋಗಿಗಳನ್ನು ಸಹೋದ್ಯೋಗಿಗಳಂತೆ ಗೌರವಿಸುತ್ತಿದ್ದರು
ಉದ್ಯೋಗಿಗಳನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದ ಕೇಶುಬ್ ಮಹೀಂದ್ರಾ, ಅವರನ್ನು ಸಹೋದ್ಯೋಗಿಗಳಂತೆ ಪರಿಚಯಿಸುತ್ತಿದ್ದರು ಹಾಗೂ ಉದ್ಯೋಗಿಗಳೆಂಬ ಮಾತ್ರಕ್ಕೆ ಸಂಸ್ಥೆಗೆ ಅಧೀನರಾಗಿರಬೇಕಾಗಿಲ್ಲ ಎಂಬ ಅಂಶವನ್ನು ಮನದಟ್ಟು ಮಾಡಿದ್ದರು.
ಇದನ್ನೂ ಓದಿ: ಆಧಾರ್ ಕಾರ್ಡ್ ಸಂಬಂಧ ಮಹತ್ವದ ನಿರ್ಧಾರ ಕೈಗೊಂಡ ಕೇಂದ್ರ
ಇಂದಿಗೂ ಸಂಸ್ಥೆಯ ಉದ್ಯೋಗಿಗಳು ಹಾಗೂ ಅವರ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಹಲವಾರು ಸಂಸ್ಥೆಗಳು ಅವರನ್ನು ನೆನಪಿಸಿಕೊಳ್ಳುತ್ತವೆ. ಈ ವರ್ಷದ ಅಕ್ಟೋಬರ್‌ನಲ್ಲಿ ಅವರು ಶತಕೋಟ್ಯಾಧಿಪತಿಯಾಗಿದ್ದರು.
ಪಾದ ಮುಟ್ಟಿ ನಮಸ್ಕರಿಸಿ ಬೀಳ್ಕೊಡುಗೆ
ಕೇಶುಬ್ ಮಹೀಂದ್ರಾ ತಮ್ಮ ನಿವೃತ್ತಿಯನ್ನು ಘೋಷಿಸಿದ ಸಮಯದಲ್ಲಿ ಇದೀಗ ಸರ್ಕಾರದ ಬಾಹ್ಯಾಕಾಶ ಉಪಕ್ರಮದ ಮುಖ್ಯಸ್ಥರಾಗಿರುವ ಪವನ್ ಗೋಯೆಂಕಾ ಆ ಸಮಯದಲ್ಲಿ ಮಹೀಂದ್ರಾ ಏಂಡ್ ಮಹೀಂದ್ರಾದ ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.
ಕೇಶುಬ್‌ರವರು ತಮ್ಮ ನಿವೃತ್ತಿ ಘೋಷಣೆ ಮಾಡುತ್ತಿದ್ದಂತೆಯೇ ಪವನ್ ಗೋಯೆಂಕಾ ವೇದಿಕೆ ಏರಿ ಕೇಶುಬ್ ಮಹೀಂದ್ರಾ ಅವರ ಪಾದಗಳನ್ನು ಸ್ಪರ್ಶಿಸಿ ಭಾರತೀಯ ಕ್ರಮದಂತೆ ಹಿರಿಯರಿಗೆ ಗೌರವ ಸಲ್ಲಿಸುವ ರೀತಿಯಲ್ಲಿ ಗೌರವ ಸಲ್ಲಿಸಿದರು.
ಪವನ್‌ರನ್ನು ಅನುಸರಿಸಿದ ಸಂಸ್ಥೆಯ ಇನ್ನಿತರ ಉದ್ಯೋಗಿಗಳು ಕೂಡ ತಮ್ಮ ಯಜಮಾನನಿಗೆ ಪಾದಮುಟ್ಟಿ ನಮಸ್ಕರಿಸಿ ಗೌರವಿಸಿದರು ಹಾಗೂ ಬೀಳ್ಕೊಟ್ಟರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ