• Home
  • »
  • News
  • »
  • business
  • »
  • Twitter: ತನ್ನ ತೆಕ್ಕೆಗೆ ಟ್ವಿಟರ್ ಬರ್ತಿದ್ದಂತೆ ಎಲಾನ್​ ಮಸ್ಕ್​ ಹಾರಾಟ! ಭಾರತದಲ್ಲಿ ಟ್ವಿಟರ್ ಉದ್ಯೋಗಿಗಳ ವಜಾ

Twitter: ತನ್ನ ತೆಕ್ಕೆಗೆ ಟ್ವಿಟರ್ ಬರ್ತಿದ್ದಂತೆ ಎಲಾನ್​ ಮಸ್ಕ್​ ಹಾರಾಟ! ಭಾರತದಲ್ಲಿ ಟ್ವಿಟರ್ ಉದ್ಯೋಗಿಗಳ ವಜಾ

ಎಲೋನ್‌ ಮಸ್ಕ್‌

ಎಲೋನ್‌ ಮಸ್ಕ್‌

Elon Musk: ವಿಶ್ವದ ಶ್ರೀಮಂತ ಉದ್ಯಮಿ ಮಸ್ಕ್ ಕಳೆದ ವಾರ ಟ್ವಿಟರ್‌ನ ಸಿಇಒ ಪರಾಗ್ ಅಗರವಾಲ್ ಮತ್ತು ಸಿಎಫ್‌ಒ, ಇತರ ಕೆಲವು ಉನ್ನತ ಅಧಿಕಾರಿಗಳನ್ನು ವಜಾ ಮಾಡುವ ಮೂಲಕ ಭಾರೀ ಸುದ್ದಿಯಾಗಿದ್ದರು.

  • Share this:

ಪ್ರಪಂಚದ ಅತೀ ಶ್ರೀಮಂತರಲ್ಲಿ ಎಲಾನ್​ ಮಸ್ಕ್ (Elon Musk)​ ಕೂಡ ಒಬ್ಬರು. ಇತ್ತೀಚೆಗೆ ಎಲಾನ್ ಮಸ್ಕ್​ ಟ್ವಿಟರ್ (Twitter) ಅನ್ನು ಖರೀದಿ ಮಾಡಿರುವುದು ಗೊತ್ತೇ ಇದೆ. ತನ್ನ ತೆಕ್ಕೆಗೆ ಟ್ವಿಟರ್​ ಹಾಕಿಕೊಳ್ಳುವಲ್ಲಿ ಎಲಾನ್ ಮಸ್ಕ್​ ಯಶಸ್ವಿಯಾಗಿದ್ದಾರೆ. ಹೊಸ ವಿಚಾರ ಏನಪ್ಪಾ? ಅಂದ್ರೆ ಟ್ವಿಟರ್ ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತ ಆರಂಭಿಸಿರುವ ಎಲಾನ್ ಮಸ್ಕ್ (Elon Musk) ಒಡೆತನದ ಟ್ವಿಟರ್ (Twitter) ಇದೀಗ ಭಾರತದಲ್ಲಿ ಸಿಬ್ಬಂದಿ (Employees) ವಜಾ (Firing) ಪ್ರಕ್ರಿಯೆ ಆರಂಭಿಸಿದೆ. ಭಾರತೀಯ ಮೂಲದ ಎಂಜಿನಿಯರ್ಸ್ (Engineers) ಮಾರಾಟ ಮತ್ತು ಮಾರ್ಕೆಟಿಂಗ್ (Marketing) ಮತ್ತು ಸಂವಹನ ತಂಡಗಳ ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ವಿಚಾರ ಇದೀಗ ಸೋಷಿಯಲ್​ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಟ್ವಿಟರ್​ ನೂತನ ಮಾಲೀಕ ಎಲಾನ್ ಮಸ್ಕ್​ ಅವರ ಈ ನಿರ್ಧಾರ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.


ಭಾರತೀಯ ಉದ್ಯೋಗಿಗಳು ಕೆಲಸದಿಂದ ವಜಾ!


ವಿಶ್ವದ ಶ್ರೀಮಂತ ಉದ್ಯಮಿ ಮಸ್ಕ್ ಕಳೆದ ವಾರ ಟ್ವಿಟರ್‌ನ ಸಿಇಒ ಪರಾಗ್ ಅಗರವಾಲ್ ಮತ್ತು ಸಿಎಫ್‌ಒ, ಇತರ ಕೆಲವು ಉನ್ನತ ಅಧಿಕಾರಿಗಳನ್ನು ವಜಾ ಮಾಡುವ ಮೂಲಕ ಭಾರೀ ಸುದ್ದಿಯಾಗಿದ್ದರು. ಉನ್ನತ ಸ್ಥಾನದಲ್ಲಿದ್ದ ವ್ಯಕ್ತಿಗಳ ವಜಾಗೊಳಿಸಿದ ನಂತರ ಟ್ವಿಟರ್ ಜಾಗತಿಕ ಮಟ್ಟದಲ್ಲಿ ಅನೇಕ ಉದ್ಯೋಗಿಗಳನ್ನು ವಜಾ ಮಾಡಿದ್ದಾರೆ. ವಜಾ ಮಾಡಿರುವ ಬಗ್ಗೆ ತನ್ನ ಸಹೋದ್ಯೋಗಿಗಳಿಗೆ ಎಲಾನ್ ಮಸ್ಕ್ ಇಮೇಲ್ ಮೂಲಕ ಸಂದೇಶ ಕಳುಹಿಸಿದ್ದಾರೆ.


ಎಲಾನ್​ ಮಸ್ಕ್​ ಕಠಿಣ ನಿರ್ಧಾರ!


ಇದೀಗ ಭಾರತದಲ್ಲಿರುವ ಉದ್ಯೋಗಿಯೊಬ್ಬರು ಅನಾಮಧೇಯ ಷರತ್ತಿನ ಮೇಲೆ ತಮ್ಮನ್ನು ವಜಾ ಮಾಡಿರುವ ಬಗ್ಗೆ ಪಿಟಿಐಗೆ ತಿಳಿಸಿದ್ದಾರೆ. ಟ್ವಿಟರ್ ಇಂಡಿಯಾದ ಸಂವಹನ ತಂಡವನ್ನು ವಜಾಗೊಳಿಸಲಾಗಿದೆ. ಸಿಎನ್​ಬಿಸಿ-ಟಿವಿ 18 ಪ್ರಕಾರ, ಹೆಚ್ಚಿನ ಸಂಖ್ಯೆಯ ಟ್ವಿಟರ್ ಇಂಡಿಯಾದ ಮಾರ್ಕೆಟಿಂಗ್ ತಂಡವನ್ನು ಸಹ ವಜಾಗೊಳಿಸಲಾಗಿದೆ. "ಲೇ-ಆಫ್ ಪ್ರಾರಂಭವಾಗಿದೆ. ನನ್ನ ಕೆಲವು ಸಹೋದ್ಯೋಗಿಗಳು ಈ ಬಗ್ಗೆ ಇಮೇಲ್ ಅಧಿಸೂಚನೆಯನ್ನು ಸ್ವೀಕರಿಸಿದ್ದಾರೆ" ಎಂದು ಅನಾಮಧೇಯತೆಯ ಷರತ್ತಿನ ಮೇಲೆ ಟ್ವಿಟರ್ ಇಂಡಿಯಾ ಉದ್ಯೋಗಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.


ಇದನ್ನೂ ಓದಿ: ಟ್ವಿಟರ್ ಸ್ವಾಧೀನಪಡಿಸಲು ಶಕ್ತಿ ತುಂಬಿದಾತನನ್ನೇ ಹೊರಗಟ್ಟಿದ್ದೇಕೆ ಮಸ್ಕ್? ಪರಾಗ್​ ವಜಾಗೊಳ್ಳಲು ಇದೇ ಕಾರಣ!


ಭಾರತದಲ್ಲಿ ಎಷ್ಟು ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂಬ ಸಂಪೂರ್ಣ ಮಾಹಿತಿ ಸಿಕ್ಕಿಲ್ಲ. ಆದರೆ, ಭಾರತೀಯ ಮೂಲದ ಉದ್ಯೋಗಿಗಳಿಗೆ ನೀವು ವರ್ಕ್ ಫ್ರಮ್​ ಹೋಮ್ ಅಥವಾ ಕಚೇರಿಗೆ ಹೋಗುತ್ತಿದ್ದರೇ ದಯವಿಟ್ಟು ಇನ್ಮುಂದೆ ಹೋಗಬೇಡಿ, ಕೆಲಸ ಮಾಡಬೇಡಿ ಅಂತ ಮೇಲ್​ ಕಳುಹಿಸಿದ್ದಾರೆ ಅಂತ ಹೇಳಲಾಗುತ್ತಿದೆ.


ಪರಾಗ್ ಅಗರ್‌ವಾಲ್‌ಗೆ ಗೇಟ್‌ ಪಾಸ್‌


ಎಲಾನ್ ಮಸ್ಕ್‌ ಟ್ವಿಟರ್ ಒಡೆಯನಾಗಲು ಮುಖ್ಯ ಪಾತ್ರವಹಿಸಿದವರೇ ಪರಾಗ್ ಅಗರವಾಲ್ ಎನ್ನಲಾಗುತ್ತಿದೆ. ಟ್ವಿಟರ್ ಖರೀದಿಸಲು ಎಲಾನ್ ಮಸ್ಕ್ ಅವರನ್ನು ಇವರೇ ಬಲವಂತಪಡಿಸಿದ್ದರಂತೆ. ಅಗರವಾಲ್ ಮತ್ತು ಅವರ ತಂಡ ಇಲ್ಲದಿದ್ದರೆ, ಎಲಾನ್ ಮಸ್ಕ್ ಟ್ವಿಟರ್‌ನ ಸ್ಟಾಕ್ ಮೌಲ್ಯಮಾಪನವನ್ನು ತಗ್ಗಿಸಿ ಒಪ್ಪಂದದಿಂದ ಹಿಂದೆ ಸರಿಯುವ ಸಾಧ್ಯತೆ ಕೂಡ ಇತ್ತಂತೆ ಎಂದು ಕೆಲವು ವರದಿಗಳು ಹೇಳಿವೆ. ಟ್ವಿಟರ್ ಸ್ವಾಧೀನದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಪರಾಗ್‌ ಅವರಿಗೆ ಗೇಟ್‌ ಪಾಸ್‌ ನೀಡಿದ್ದೇ ಸದ್ಯದ ಯಕ್ಷಪ್ರಶ್ನೆ. ಕಂಪನಿಯಿಂದ ವಜಾಗೊಂಡ ಪರಾಗ್ ನಂತರ $42 ಮಿಲಿಯನ್‌ನೊಂದಿಗೆ ಹೊರಬಂದಿದ್ದಾರೆ.


ಇದನ್ನೂ ಓದಿ: ಟ್ವಿಟರ್‌ಗೆ ಮತ್ತೆ ಮರಳಲಿದ್ದಾರೆ ಶ್ರೀರಾಮ್‌ ಕೃಷ್ಣನ್‌, ಎಲಾನ್​ ಮಸ್ಕ್​ ಪ್ಲ್ಯಾನ್​ ಗೆಸ್ಸ್​​​ ಮಾಡೋದೇ ಕಷ್ಟ!


ಟ್ವಿಟರ್ ಸ್ವಾಧೀನದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಪರಾಗ್‌


ಹಲವು ಬಾರಿ ಎಲೋನ್ ಮಸ್ಕ್‌ ವಿರುದ್ಧ ಪರಾಗ್‌ ನಿಲುವು ‌ತೆಗೆದುಕೊಂಡಿದ್ದರು, ಹೆಚ್ಚಿನ ಸಂದರ್ಭಗಳಲ್ಲಿ, ಅವರು ಇದರಲ್ಲಿ ವಿಜಯಶಾಲಿ ಕೂಡ ಆಗಿದ್ದರು. ಮಸ್ಕ್‌ ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಮತ್ತು ಹುರಿದುಂಬಿಸಿದವರಲ್ಲಿ ಪರಾಗ್‌ ಅಗರವಾಲ್ ಮೊದಲಿಗರಾಗಿದ್ದರು.

Published by:ವಾಸುದೇವ್ ಎಂ
First published: