ಟ್ವಿಟರ್ ನಿಮ್ಮನ್ನೂ Fired ಮಾಡಬಹುದು ಹುಷಾರು ಎಂದ ಟೆಸ್ಲಾ CEO Elon Musk..! ಯಾಕೆ ಗೊತ್ತೇ?

ಒಳ್ಳೆಯ ವಿಷಯ ಏನೆಂದರೆ ನಾನು ವಿವಾದಾತ್ಮಕವಾಗಿರುವುದನ್ನು ಏನನ್ನೂ ಟ್ವೀಟ್ ಮಾಡುವುದಿಲ್ಲ ಎಂಬುದಾಗಿ ತಮ್ಮದೇ ಆದ ಉಲ್ಲೇಖವನ್ನು ಇದಕ್ಕೆ ಉದಾಹರಣೆಯಾಗಿ ಎಲಾನ್ ಮಸ್ಕ್ ನೀಡಿದ್ದಾರೆ

ಎಲಾನ್ ಮಸ್ಕ್

ಎಲಾನ್ ಮಸ್ಕ್

  • Share this:
ಟೆಸ್ಲಾ ಸಿಇಒ (Tesla CEO) ಎಲಾನ್ ಮಸ್ಕ್ (Elon Musk) ಅತ್ಯಂತ ಬೆಲೆಬಾಳುವ ಎಲೆಕ್ಟ್ರಿಕ್ ವೆಹಿಕಲ್ (EV) (Electric Vehicle)ಕಂಪನಿಯ ಮುಖ್ಯಸ್ಥರಾಗಿ ಜನಪ್ರಿಯರಾಗಿರುವುದು ಮಾತ್ರವಲ್ಲದೆ ಟ್ವಿಟರ್ ನಲ್ಲಿ(Twitter) ಕೂಡ ಹಲವಾರು ಮೋಜಿನ ಅಂತೆಯೇ ಟೀಕಾಸ್ತ್ರಗಳಿಂದ ತುಂಬಿದ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುವುದರಲ್ಲಿ ನಿಷ್ಣಾತರು ಎಂದೆನಿಸಿದ್ದಾರೆ. ಸಮಾಜದಲ್ಲಿರುವ ಗಣ್ಯಾತಿಗಣ್ಯರನ್ನು ಕೂಡ ತಮ್ಮ ಟ್ವೀಟ್‌ಗಳಿಂದ ವಾಗ್ದಾಳಿ ನಡೆಸುವ ಮಸ್ಕ್ ಯಾರನ್ನೂ ತರಾಟೆಗೆ ತೆಗೆದುಕೊಳ್ಳುವಲ್ಲಿ ಹಿಂಜರಿಯುವುದಿಲ್ಲ. ವಿಲಕ್ಷಣ ವಿಚಾರಗಳನ್ನು ಹಂಚಿಕೊಳ್ಳುತ್ತಾ ಜನರಲ್ಲಿ ನಗು ತರಿಸುವಂತಹ ಸುದ್ದಿಗಳನ್ನು ಹಬ್ಬಿಸುತ್ತಾ ಸುದ್ದಿಯಲ್ಲಿರುವಲ್ಲಿ ಎತ್ತಿದ ಕೈ ಎಂದೆನಿಸಿದ್ದಾರೆ.

ತಮ್ಮ ವೈಯಕ್ತಿಕ ವಿಚಾರಗಳಿಂದ ಹಿಡಿದು ವೃತ್ತಿಯಲ್ಲಿ ನಡೆಸುವ ಯಾವುದೇ ದೊಡ್ಡ ಮಟ್ಟಿಗಿನ ತೀರ್ಮಾನಗಳನ್ನು ಕೂಡ ಎಲಾನ್ ಮಸ್ಕ್ ಟ್ವಿಟರ್ನಲ್ಲಿ ಹಂಚಿಕೊಳ್ಳುವಲ್ಲಿ ನಿಷ್ಣಾತರು ಎಂದೆನಿಸಿದ್ದಾರೆ. ಮಸ್ಕ್ ಅವರ ಕೆಲವೊಂದು ಟ್ವೀಟ್ ವಿನೋದಮಯ ಎಂದೆನಿಸಿದರೂ ತಮ್ಮ ವ್ಯವಹಾರವನ್ನು ಇನ್ನಷ್ಟು ಪ್ರಸಿದ್ಧಗೊಳಿಸುವ ನಿಟ್ಟಿನಲ್ಲಿ ಏನಾದರೂ ಕಾಮೆಂಟ್‌ಗಳನ್ನು ಎಲಾನ್ ಮಾಡುತ್ತಿರುತ್ತಾರೆ ಎಂಬು ಸುದ್ದಿ ಕೂಡ ಇಲ್ಲದಿಲ್ಲ.

ಕ್ರಿಪ್ಟೋ ಕರೆನ್ಸಿ ಹಾಗೂ AI ಕುರಿತು ಟ್ವೀಟ್:
ಹಲವಾರು ಬಾರಿ ಎಲಾನ್ ಮಸ್ಕ್ ಟ್ವೀಟ್ ಮಾಡುವುದೇ ಕ್ರಿಪ್ಟೋ ಕರೆನ್ಸಿ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸಿ (AI) ಕುರಿತಾಗಿದೆ. ಎಲಾನ್ ಮಸ್ಕ್‌ಗೆ 50 ವರ್ಷ ಪ್ರಾಯದವರಾಗಿದ್ದರೂ ಕಾಮೆಂಟ್‌ಗಳನ್ನು ಮಾಡುವುದರಲ್ಲಿ ಹಾಗೂ ಪ್ರತಿಭಾವಂತ ಗಣ್ಯ ವ್ಯಕ್ತಿಗಳನ್ನು ತಮ್ಮ ಕಾಮೆಂಟ್‌ಗಳಿಂದ ಕಾಲೆಳೆಯುವುದರಲ್ಲೂ ಹಿಂದೆ ಮುಂದೆ ನೋಡುವುದಿಲ್ಲ. ಅದೂ ಅಲ್ಲದೆ ವಿವಾದಾತ್ಮಕ ಪೋಸ್ಟ್‌ಗಳನ್ನು ಹಾಕುವುದರಲ್ಲೂ ಧೈರ್ಯಗೆಡುವುದಿಲ್ಲ. ಆದರೆ ಎಲಾನ್ ಈಗ ಹೇಳುವಂತೆ ಯಾವುದೇ ವಿವಾದಾತ್ಮಕ ಟ್ವೀಟ್ ಮಾಡುವ ಮುನ್ನ ವಿವಾದಗಳಿಲ್ಲದೆ ಮಾತನಾಡಿ ಇಲ್ಲದಿದ್ದರೆ ಟ್ವಿಟರ್ ನಿಮ್ಮನ್ನು ವಜಾಗೊಳಿಸಬಹುದು ಎಂಬುದಾಗಿ ಹಾಸ್ಯ ಮಾಡಿದ್ದಾರೆ.

ಇದನ್ನೂ ಓದಿ: Tesla: ಅದೊಂದು ಸಣ್ಣ ಬದಲಾವಣೆ ಆಯ್ತು, ಟೆಸ್ಲಾ ಲಾಭಕ್ಕೆ ಭಾರೀ ಹೊಡೆತ!

ಟ್ವಿಟ್ಟರ್‌ಗೆ ಧಮ್ಕಿ ಹಾಕಿದ ಎಲಾನ್ ಮಸ್ಕ್:
ಇತ್ತೀಚೆಗೆ ಎಲಾನ್ ಹಂಚಿಕೊಂಡಿರುವ ಮೀಮ್ ಟ್ವಿಟರ್ ಚಿತ್ರಣವನ್ನು ಹೊಂದಿದೆ. ನಿಮ್ಮ ಉದ್ಯೋಗದಿಂದ ಐದರಿಂದ ಹತ್ತು ವರ್ಷಗಳಲ್ಲಿ ವಜಾಗೊಳ್ಳಿ ಎಂಬ ಶೀರ್ಷಿಕೆಯನ್ನು ಇದು ಹೊಂದಿದೆ. ಅದೂ ಅಲ್ಲದೆ ನಿಮಗೆ ಬೇಕಾದ ಏನನ್ನಾದರೂ ಹೇಳಿ ಎಂಬ ಒಕ್ಕಣೆಯನ್ನು ಇದು ಹೊಂದಿದೆ. ಅಂದರೆ ಬಾಲ್ಯ ಕಾಲದ ಹೆಚ್ಚು ಅರ್ಥಗರ್ಭಿತ ಪಾಠವಾದ ಮಾತನಾಡುವ ಮುನ್ನ ಯೋಚಿಸಿ ಎಂಬ ವಾಕ್ಯದ ಗೂಡಾರ್ಥವನ್ನು ಇದು ಹೊಂದಿದೆ.

ಎಲಾನ್ ಅವರ ಕಾಮೆಂಟ್ ತಿಳಿಸಿರುವುದೂ ಇದೇ ವಿಷಯವಾಗಿದೆ. ಮಾತನಾಡುವ ಮೊದಲು ಯೋಚಿಸಿ ಮಾತನಾಡಿ ಎಂದು ಹೇಳಿರುವ ಎಲಾನ್, ಇನ್ನೊಂದು ಕಾಮೆಂಟ್ ಮಾಡುವ ಮೂಲಕ ಅಂದರೆ “ಒಳ್ಳೆಯ ವಿಷಯ ಏನೆಂದರೆ ನಾನು ವಿವಾದಾತ್ಮಕವಾಗಿರುವುದನ್ನು ಏನನ್ನೂ ಟ್ವೀಟ್ ಮಾಡುವುದಿಲ್ಲ ಎಂಬುದಾಗಿ ತಮ್ಮದೇ ಆದ ಉಲ್ಲೇಖವನ್ನು ಇದಕ್ಕೆ ಉದಾಹರಣೆಯಾಗಿ ನೀಡಿದ್ದಾರೆ.

ಮಸ್ಕ್ ವಿರುದ್ಧ ಮೊಕದ್ದಮೆ
ಟ್ವಿಟ್ಟರ್ ಸಮೀಕ್ಷೆಯನ್ನು ಆಧರಿಸಿ ತನ್ನ ಟೆಸ್ಲಾ ಷೇರುಗಳಲ್ಲಿ ಕೆಲವು ಪ್ರಮಾಣವನ್ನು ಎಲಾನ್ ಮಾಸ್ಕ್ ತೊಂದರೆಗೆ ಸಿಲುಕಿದ್ದಾರೆ. ಟೆಸ್ಲಾ ಹೂಡಿಕೆದಾರ ಡೇವಿಡ್ ವ್ಯಾಗ್ನರ್ ಅವರು ಅಮೆರಿಕಾದ ಸೆಕ್ಯುರಿಟೀಸ್ ರೆಗ್ಯುಲೇಟರ್‌ನೊಂದಿಗಿನ ಒಪ್ಪಂದಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮಸ್ಕ್ ವಿರುದ್ಧ ಮೊಕದ್ದಮೆ ಹೂಡಿದ್ದರು. ಟೆಸ್ಲಾವನ್ನು ಖಾಸಗಿಯಾಗಿ ತೆಗೆದುಕೊಳ್ಳುವ ಕುರಿತು 2018 ರಲ್ಲಿ ತಮಾಷೆ ಮಾಡಿದ್ದಕ್ಕಾಗಿ ಅಮೆರಿಕಾದ ನಿಯಂತ್ರಕವು ಅವರ ಮೇಲೆ ಮೊಕದ್ದಮೆ ಹೂಡಿತ್ತು. ಮಸ್ಕ್ ಅವರ ಟ್ವೀಟ್‌ಗಳು ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಟೆಸ್ಲಾ ಷೇರುಗಳ ಬೆಲೆಗಳನ್ನು ಕುಶಲತೆಯಿಂದ ನಿರ್ವಹಿಸುತ್ತವೆ ಎಂಬುದಾಗಿ ಆರೋಪಗಳು ಕೇಳಿಬರುತ್ತಿವೆ.

ಇಂಟರ್ನೆಟ್‌ನಲ್ಲಿ ನಿರ್ದಿಷ್ಟಪದವಾದ “Web3’ “BS” ಎಂಬುದಾಗಿ ಉಲ್ಲೇಖಿಸಿದ ನಂತರ ಕೆಲವೊಂದು ಕ್ರಿಪ್ಟೋ ಕರೆನ್ಸಿ ಉತ್ಸಾಹಿಗಳು ಎಲಾನ್ ಅವರ ಕಾಲೆಳೆದಿದ್ದಾರೆ. Web3 ಎಂಬುದು ಇದೀಗ ಬ್ಲಾಕ್‌ಚೈನ್‌ಗಳನ್ನು ಒಳಗೊಂಡಿರುವ ವರ್ಲ್ಡ್ ವೈಡ್ ವೆಬ್'ನ (world wide web) ವಿಕಾಸವಾಗಿದೆ.

ಇದನ್ನೂ ಓದಿ: Autopilot: ಟೆಸ್ಲಾದ ಸ್ವಯಂಚಾಲಿತ ಕಾರಿನ ಆಟೋಪೈಲಟ್ ತಂಡದ ಮುಖ್ಯಸ್ಥ ಅಶೋಕ್ ಎಳ್ಳುಸ್ವಾಮಿ ಯಾರು ಗೊತ್ತಾ..?

ಇದು ಬಳಕೆದಾರರಿಗೆ ಪ್ರೇಕ್ಷಕರು ಹಾಗೂ ಅಪ್‌ಲೋಡರ್‌ಗಳಿಗಿಂತ ಪಾಲುದಾರರಾಗಲು ಅವಕಾಶವನ್ನೀಯುತ್ತದೆ. ತಮ್ಮ ಹಳೆಯ ಟ್ವೀಟ್‌ನಲ್ಲಿ Web3 ಎಂಬುದು ಹೆಚ್ಚು ಮಾರುಕಟ್ಟೆಯ ಟ್ರೆಂಡಿ ಪದವಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಇದೇ ರೀತಿಯ ಭಾವನೆಗಳನ್ನು ಮಾಜಿ ಟ್ವಿಟರ್ ಸಿಇಒ ಜ್ಯಾಕ್ ಡಾರ್ಸೆ ಕೂಡ ಹಂಚಿಕೊಂಡಿದ್ದರು ಎಂಬುದು ಇಲ್ಲಿ ಪ್ರಶಸ್ತನೀಯವಾಗಿದೆ.
Published by:vanithasanjevani vanithasanjevani
First published: