• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Twitter Blue Tick: ಭಾರತೀಯರಿಗೆ ಟ್ವಿಟರ್​​ನಿಂದ ಬಿಗ್​ ಆಫರ್​, ಬ್ಲೂ ಟಿಕ್​ ಬೇಕು ಅಂದ್ರೆ ಇಷ್ಟು ಹಣ ಕೊಡ್ಬೇಕು!

Twitter Blue Tick: ಭಾರತೀಯರಿಗೆ ಟ್ವಿಟರ್​​ನಿಂದ ಬಿಗ್​ ಆಫರ್​, ಬ್ಲೂ ಟಿಕ್​ ಬೇಕು ಅಂದ್ರೆ ಇಷ್ಟು ಹಣ ಕೊಡ್ಬೇಕು!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಟ್ವಿಟರ್ ಈಗ ಹಲವಾರು ದೇಶಗಳಲ್ಲಿ ತನ್ನ ಪ್ರೀಮಿಯಂ ಸೇವೆಯನ್ನು ಪ್ರಾರಂಭಿಸಿದೆ. ಇವುಗಳಲ್ಲಿ ಯುಎಸ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸೌದಿ ಅರೇಬಿಯಾ, ಯುಕೆ, ಜಪಾನ್, ಜರ್ಮನಿ ಮತ್ತು ಫ್ರಾನ್ಸ್ ಸೇರಿವೆ.

  • Share this:

ಮೈಕ್ರೋಬ್ಲಾಗಿಂಗ್ ಪ್ಲ್ಯಾಟ್‌ಫಾರ್ಮ್ ಟ್ವಿಟರ್ (Twitter) ತನ್ನ ಪ್ರೀಮಿಯಮ್ ಸಬ್‌ಸ್ಕ್ರಿಪ್ಶನ್ ಸೇವೆಯಾದ ಟ್ವಿಟರ್ ಬ್ಲ್ಯೂಟಿಕ್ ಅನ್ನು ಭಾರತದ ಟ್ವಿಟರ್ ಬಳಕೆದಾರರಿಗೆ ಬಿಡುಗಡೆ ಮಾಡಿದೆ. ಪಾವತಿ ಸಬ್‌ಸ್ಕ್ರಿಪ್ಶನ್ (Subscription) ಸೇವೆಯಾದ ಟ್ವಿಟರ್ ಬ್ಲ್ಯೂ ಬಳಕೆದಾರರ ಪ್ರೊಫೈಲ್ ಹೆಸರಿನ ಬಳಿ ನೀಲಿ ಚೆಕ್‌ಮಾರ್ಕ್ (Blue Check Mark) ಅನ್ನು ಬಿಂಬಿಸುತ್ತದೆ ಹಾಗೂ ಸಾಮಾಜಿಕ ತಾಣದಿಂದ (Social Media) ಪರಿಚಯಿಸಲಾದ ಫೀಚರ್‌ಗಳಿಗೆ ಆರಂಭ ಪ್ರವೇಶವನ್ನು ನೀಡುತ್ತದೆ.


ಆ್ಯಂಡ್ರಾಯ್ಡ್ ಹಾಗೂ ಐಓಎಸ್ ಡಿವೈಸ್‌ ಎರಡರಲ್ಲೂ ಬಳಸಬಹುದು


ಟ್ವಿಟರ್ ಬ್ಲ್ಯೂವನ್ನು ಆ್ಯಂಡ್ರಾಯ್ಡ್ ಹಾಗೂ ಐಓಎಸ್ ಡಿವೈಸ್‌ ಎರಡರಲ್ಲೂ ಬಳಸಬಹುದಾಗಿದೆ ಜೊತೆಗೆ ಟ್ವಿಟರ್ ವೆಬ್‌ಸೈಟ್ ಬಳಸುವವರು ಕೂಡ ಬ್ಲ್ಯೂ ಚೆಕ್‌ಮಾರ್ಕ್ ಅನ್ನು ಖರೀದಿಸಬಹುದು. ಐಓಎಸ್ ಹಾಗೂ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಬ್ಲ್ಯೂ ಟಿಕ್‌ಮಾರ್ಕ್ ಮಾಸಿಕ ಸಬ್‌ಸ್ಕ್ರಿಪ್ಶನ್ ಶುಲ್ಕ ರೂ 900 ಆಗಿದ್ದರೆ ವೆಬ್ ಬಳಕೆದಾರರಿಗೆ ಈ ಶುಲ್ಕ ರೂ 650 ಆಗಿದೆ.


ವೆಬ್‌ ಬಳಕೆದಾರರಿಗೆ ವಾರ್ಷಿಕ ಚಂದಾದಾರಿಕೆ


ವಾರ್ಷಿಕ ಸಬ್‌ಸ್ಕ್ರಿಪ್ಶನ್ ಸೇವೆಯನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದ್ದು ರೂ 6,800 ಕ್ಕೆ ವಾರ್ಷಿಕ ಚಂದಾದಾರಿಕೆಯನ್ನು ಬಳಕೆದಾರರು ತಮ್ಮದಾಗಿಸಿಕೊಳ್ಳಬಹುದು. ತಿಂಗಳಿಗೆ ಇದೇ ವೆಚ್ಚ ರೂ 566 ಆಗಿದೆ. ವೆಬ್‌ಗಾಗಿ ಮಾತ್ರ ಪ್ರಸ್ತುತ ಈ ಯೋಜನೆ ಲಭ್ಯವಿದೆ.


ಅಮೆರಿಕಾದಲ್ಲಿ ಟ್ವಿಟರ್ ಬ್ಲ್ಯೂ ಚೆಕ್‌ಮಾರ್ಕ್‌ಗಾಗಿ ಆ್ಯಂಡ್ರಾಯ್ಡ್ ಹಾಗೂ ಐಓಎಸ್ ಸಾಧನಗಳಲ್ಲಿ ತಿಂಗಳಿಗೆ $11 ಶುಲ್ಕ ವಿಧಿಸಲಾಗಿದ್ದು ವೆಬ್‌ಗಾಗಿ ಮಾಸಿಕ ಶುಲ್ಕ $8 ಆಗಿದೆ. ಅಮೆರಿಕಾದಲ್ಲಿ ವಾರ್ಷಿಕ ಯೋಜನಾ ಶುಲ್ಕ $84 ಆಗಿದೆ.


ಇದನ್ನೂ ಓದಿ: Oneplus Earbuds: ಒನ್​ಪ್ಲಸ್​ ಕಂಪೆನಿಯ ಹೊಸ ಇಯರ್​ಬಡ್ಸ್​ ಲಾಂಚ್​! ಫೀಚರ್ಸ್​ಗೆ ಫಿದಾ ಆಗೋದು ಗ್ಯಾರಂಟಿ


ಪಾವತಿಸಿ ಬ್ಲ್ಯೂ ಚೆಕ್ ಮಾರ್ಕ್ ಖರೀದಿಸಿ


ಟ್ವಿಟರ್ ತನ್ನ ಪಾವತಿಸುವ ಬ್ಲ್ಯೂಟಿಕ್ ಮಾರ್ಕ್ ಅನ್ನು ಪರಿಚಯಿಸುವ ಮುನ್ನ ಪ್ರಸಿದ್ಧ ವ್ಯಕ್ತಿಗಳು, ರಾಜಕಾರಣಿಗಳು, ಪತ್ರಕರ್ತರು ಮತ್ತು ಸಾರ್ವಜನಿಕ ವ್ಯಕ್ತಿಗಳ ಅಧಿಕೃತ ಖಾತೆಗಳಿಗೆ ಬ್ಲ್ಯೂ ಟಿಕ್ ಮಾರ್ಕ್ ಅನ್ನು ಒದಗಿಸಿತು. ಇದೀಗ ಚೆಕ್‌ಮಾರ್ಕ್ ಅನ್ನು ಪಾವತಿಸುವ ಮೂಲಕ ಯಾರು ಬೇಕಾದರೂ ಖರೀದಿಸಬಹುದಾಗಿದೆ.
ಬ್ಲ್ಯೂಟಿಕ್ ಜೊತೆಗೆ ಟ್ವಿಟರ್ ಚಂದಾದಾರರು ಎಡಿಟ್ ಟ್ವೀಟ್, ಬುಕ್‌ಮಾರ್ಕ್ ಫೋಲ್ಡರ್‌ಗಳು, ಕಸ್ಟಮ್ ಆ್ಯಪ್ ಐಕಾನ್‌ಗಳು ಮತ್ತು ಎನ್‌ಎಫ್‌ಟಿ ಪ್ರೊಫೈಲ್ ಚಿತ್ರಗಳಂತಹ ಫೀಚರ್‌ಗಳಿಗೆ ಆರಂಭಿಕ ಪ್ರವೇಶವನ್ನು ಪಡೆಯುತ್ತಾರೆ. ಅಂತಹ ಬಳಕೆದಾರರು ತಮ್ಮ ಆ್ಯಪ್‌ಗಾಗಿ ವಿಭಿನ್ನ ಬಣ್ಣದ ಥೀಮ್‌ಗಳನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ, ಟ್ವೀಟ್‌ಗಳಲ್ಲಿ ಅವರ ಪ್ರತ್ಯುತ್ತರಕ್ಕೆ ಆದ್ಯತೆ ನೀಡಲು ಮತ್ತು ಇತರ ಬಳಕೆದಾರರಿಗೆ ಗೋಚರಿಸುವ ಮೊದಲು ಟ್ವೀಟ್ ಅನ್ನು ರದ್ದುಗೊಳಿಸುವ ಅವಕಾಶವನ್ನು ಪಡೆದುಕೊಳ್ಳಬಹುದಾಗಿದೆ.


ಇನ್ನಷ್ಟು ಫೀಚರ್‌ಗಳಿಗೆ ಪ್ರವೇಶ


ಟ್ವಿಟರ್ ಬ್ಲ್ಯೂ ಸಬ್‌ಸ್ಕ್ರೈಬರ್‌ಗಳು 4,000 ದ ದೀರ್ಘ ಅಕ್ಷರ ಮಿತಿಯನ್ನು ಪಡೆಯುತ್ತಾರೆ ಆದರೆ ಇತರ ಬಳಕೆದಾರರಿಗೆ ಅಕ್ಷರದ ಮಿತಿ 280 ಆಗಿದೆ. ಪಾವತಿಸಿದ ಸಬ್‌ಸ್ಕ್ರಿಪ್ಶನ್ ಬಳಕೆದಾರರಿಗೆ 60 ನಿಮಿಷಗಳವರೆಗೆ ಅಥವಾ 2 GB ವರೆಗಿನ ದೊಡ್ಡ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಅವಕಾಶವನ್ನೊದಗಿಸುತ್ತದೆ.


ಟ್ವಿಟರ್ ಪ್ರೀಮಿಯಂ ಸೇವೆ ಆರಂಭಿಸಿರುವ ದೇಶಗಳು


ಟ್ವಿಟರ್ ಈಗ ಹಲವಾರು ದೇಶಗಳಲ್ಲಿ ತನ್ನ ಪ್ರೀಮಿಯಂ ಸೇವೆಯನ್ನು ಪ್ರಾರಂಭಿಸಿದೆ. ಇವುಗಳಲ್ಲಿ ಯುಎಸ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸೌದಿ ಅರೇಬಿಯಾ, ಯುಕೆ, ಜಪಾನ್, ಜರ್ಮನಿ ಮತ್ತು ಫ್ರಾನ್ಸ್ ಸೇರಿವೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಪ್ರಕಾರ, ಹೊಸ ಬಳಕೆದಾರರು ಟ್ವಿಟರ್ ಬ್ಲ್ಯೂ ಗೆ 90 ದಿನಗಳವರೆಗೆ ಚಂದಾದಾರರಾಗಲು ಸಾಧ್ಯವಾಗುವುದಿಲ್ಲ ಮತ್ತು ಯಾವುದೇ ಸೂಚನೆಯಿಲ್ಲದೆ ಕಾಯುವ ಅವಧಿಯನ್ನು ಅನ್ವಯಿಸಬಹುದಾಗಿದೆ ಎಂದು ಸೂಚಿಸಿದೆ.


ಸೇವೆಯ ಇನ್ನಷ್ಟು ವಿಸ್ತರಣೆ


ಪ್ರಸ್ತುತ 15 ದೇಶಗಳಲ್ಲಿ ಲಭ್ಯವಿರುವ ಚಂದಾದಾರಿಕೆ ಸೇವೆಯನ್ನು ಮಸ್ಕ್ ಮತ್ತಷ್ಟು ಮುಂದೂಡುತ್ತಿದ್ದು ಸ್ಪೇಸ್ ಎಕ್ಸ್ ಸಂಸ್ಥಾಪಕರಾದ ಎಲೋನ್ ಮಸ್ಕ್ ಬ್ಲ್ಯೂಟಿಕ್ ಅನ್ನು ಮಾರಾಟದ ಕೇಂದ್ರಬಿಂದುವಾಗಿ ಬಳಸುತ್ತಿದ್ದಾರೆ. ಪ್ರಸ್ತುತ ಟ್ವಿಟರ್ ಬ್ಲ್ಯೂ ಅನ್ನು ಭಾರತ, ಇಂಡೋನೇಷ್ಯಾ ಮತ್ತು ಬ್ರೆಜಿಲ್‌ನಲ್ಲಿ ಪ್ರಾರಂಭಿಸಲಾಗಿದೆ.

First published: