• Home
  • »
  • News
  • »
  • business
  • »
  • Twitter: ಟ್ವಿಟರ್‌ ಸಿಇಒ ಪರಾಗ್‌ ಅಗ್ರವಾಲ್ ವಜಾ! ಈಗ ಇಷ್ಟು ಹಣ ಅವರ ಖಾತೆ ಹೋಗುತ್ತಂತೆ!

Twitter: ಟ್ವಿಟರ್‌ ಸಿಇಒ ಪರಾಗ್‌ ಅಗ್ರವಾಲ್ ವಜಾ! ಈಗ ಇಷ್ಟು ಹಣ ಅವರ ಖಾತೆ ಹೋಗುತ್ತಂತೆ!

ಎಲಾನ್ ಮಸ್ಕ್ ಮತ್ತು ಪರಾಗ್ ಅಗ್ರವಾಲ್

ಎಲಾನ್ ಮಸ್ಕ್ ಮತ್ತು ಪರಾಗ್ ಅಗ್ರವಾಲ್

ಈವರೆಗೆ ಟ್ವಿಟರ್‌ನ ಸ್ವಾಧೀನ ಪಡಿಸಿಕೊಳ್ಳುವುದರ ಬಗ್ಗೆ ಕೇವಲ ಚರ್ಚೆಗಳು ಮಾತ್ರ ಇತ್ತು. ಆದರೆ ಅಕ್ಟೋಬರ್‌ 27ಕ್ಕೆ ಈ ಒಪ್ಪಂದದ ಬಗ್ಗೆ ಇದ್ದಂತಹ ಗೊಂದಲಗಳನ್ನು ಎಲೋನ್‌ ಮಸ್ಕ್‌ ಅವರು ತೆರೆ ಎಳೆದಿದ್ದಾರೆ. ಇದರೊಂದಿಗೆ ಸಿಇಒ ಪರಾಗ್ ಅಗ್ರವಾಲ್‌ ಅವರನ್ನು ವಜಾ ಮಾಡಿದ್ದು, ಭಾರೀ ಮೊತ್ತದ ಹಣ ನೀಡಲಿದ್ದಾರೆ!

ಮುಂದೆ ಓದಿ ...
  • Share this:

    ಇದುವರೆಗೆ ಟ್ವಿಟರ್‌ನ (Twitter) ಒಡೆತನದ ಮೇಲಿದ್ದ ಗೊಂದಲ ಈಗ ಕಡಿಮೆಯಾಗಿದೆ. ಇತ್ತೀಚಿನ ಕೆಲವು ವರ್ಷಗಳಿಂದ ಟ್ವಿಟರ್‌ನ ಸ್ವಾಧೀನಪಡಿಸಿಕೊಳ್ಳವುದರ ಬಗ್ಗೆ ಎಲೋನ್‌ ಮಸ್ಕ್‌ (Elon Musk) ಮತ್ತು ಪರಾಗ್‌ ಅಗ್ರವಾಲ್ (Parag Agarawal) ಮಧ್ಯೆ ಒಂದಿಷ್ಟು ಚರ್ಚೆಗಳಾಗಿತ್ತು. ಆದರೆ ಈ ತೊಂದರೆಗಳು ಇಲ್ಲದಂತೆ ಎಲೋನ್‌ ಮಸ್ಕ್ ಅವರು ನಿವಾರಿಸಿದರು. ಇದುವರೆಗೆ ಸಿಇಒ ಆಗಿದ್ದ ಪರಾಗ್‌ ಅಗ್ರವಾಲ್ ಅವರನ್ನು ಒಪ್ಪಂದದ ಪ್ರಕಾರದಲ್ಲಿ ಎಲೋನ್‌ ಮಸ್ಕ್‌ ಅವರು ವಜಾ ಮಾಡಿದ್ದಾರೆ. ಎಲೋನ್‌ ಮಸ್ಕ್‌ ಅವರು ಅಗ್ರವಾಲ್ ಜೊತೆಗೆ ಕಾನೂನು ಕಾರ್ಯನಿರ್ವಾಹಕರಾಗಿದ್ದ ವಿಜಯ ಗಡ್ಡೆ (Vijaya Gadde) ಅವರನ್ನು ವಜಾ ಮಾಡಿದರು.


    ಈವರೆಗೆ ಟ್ವಿಟರ್‌ನ ಸ್ವಾಧೀನ ಪಡಿಸಿಕೊಳ್ಳುವುದರ ಬಗ್ಗೆ ಕೇವಲ ಚರ್ಚೆಗಳು ಮಾತ್ರ ಇತ್ತು. ಆದರೆ ಅಕ್ಟೋಬರ್‌ 27ಕ್ಕೆ ಈ ಒಪ್ಪಂದದ ಬಗ್ಗೆ ಇದ್ದಂತಹ ಗೊಂದಲಗಳನ್ನು ಎಲೋನ್‌ ಮಸ್ಕ್‌ ಅವರು ತೆರೆ ಎಳೆದರು.


    ಈ ಹಿಂದೆ ಇದ್ದ ಒಪ್ಪಂದ


    ಸಾಮಾಜಿಕ ಮಾಧ್ಯಮ ಕಂಪನಿಯಲ್ಲಿ ನಿಯಂತ್ರಣವನ್ನು ಬದಲಾಯಿಸಿದ 12 ತಿಂಗಳೊಳಗೆ ಅಗ್ರವಾಲ್ ಅವರನ್ನು ವಜಾಗೊಳಿಸಿರುವುದರಿಂದ ಈಗ $42 ಮಿಲಿಯನ್ ಪಾವತಿಸುವ ನಿರೀಕ್ಷೆಯಿದೆ ಎಂದು ಸಂಶೋಧನಾ ಸಂಸ್ಥೆ ಈಕ್ವಿಲಾರ್‌ ಈ ಹಿಂದೆ ವರದಿ ಮಾಡಿತ್ತು. ಆದರೆ ಈಗ ವಜಾಗೊಳಿಸಿದ್ದರಿಂದ ಪರಾಗ್‌ ಅಗ್ರವಾಲ್ ಅವರಿಗೆ ಟ್ವಿಟರ್‌ ಸಂಸ್ಥೆ ಎಷ್ಟು ಪಾವತಿಸಬಹುದೆಂದು ಎಲ್ಲರಲ್ಲೂ ಪ್ರಶ್ನೆ ಮೂಡಿದೆ.


    ಇದನ್ನೂ ಓದಿ: ಸಾವಿನ ನಂತರ ನಿಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ ಏನಾಗುತ್ತೆ? ಶಾಕ್​ ಆಗ್ತೀರಾ ನೋಡಿ


    ಅಗ್ರವಾಲ್ ಅವರ ಟ್ವಿಟರ್‌ಗೆ ಆಗಮನ

     ಸಾಮಾಜಿಕ ಮಾಧ್ಯಮ ಸೈಟ್‌ನ ಸಹ-ಸಂಸ್ಥಾಪಕ ಜಾಕ್ ಡಾರ್ಸೆ ಅವರು ಅಧಿಕಾರದಿಂದ ಕೆಳಗಿಳಿದ ನಂತರ 38 ವರ್ಷದ ಅಗ್ರವಾಲ್ ಅವರನ್ನು ನವೆಂಬರ್ 2021 ರಲ್ಲಿ ಟ್ವಿಟರ್ ಸಿಇಒ ಆಗಿ ನೇಮಿಸಲಾಯಿತು.‌




    Twitter CIO Parag Agrawal sacked So much money goes to his account
    ಟ್ವಿಟರ್



     ಐಐಟಿ ಬಾಂಬೆ ಮತ್ತು ಸ್ಟ್ಯಾನ್‌ಫೋರ್ಡ್ ಹಳೆಯ ವಿದ್ಯಾರ್ಥಿ, ಅಗ್ರವಾಲ್ ಕಂಪನಿಯಲ್ಲಿ 1,000 ಕ್ಕಿಂತ ಕಡಿಮೆ ಉದ್ಯೋಗಿಗಳಿದ್ದಾಗ ಒಂದು ದಶಕದ ಹಿಂದೆ ಟ್ವಿಟರ್‌ಗೆ ಸೇರಿದ್ದರು.


    ಅಗರವಾಲ್‌ ವಜಾ ಆದಾಗ ಪಡೆಯುವ ಮೊತ್ತದ ಅಂದಾಜು ವರದಿ


    ಈ ವರ್ಷದ ಏಪ್ರಿಲ್‌ನಲ್ಲಿ ಎಲೋನ್ ಮಸ್ಕ್ ಅವರು ಟ್ವಿಟರ್ ಅನ್ನು ಸಾರ್ವಜನಿಕವಾಗಿ ಖರೀದಿಸುವ ವಿಷಯವನ್ನು ವ್ಯಕ್ತಪಡಿಸಿದಾಗ ಪರಾಗ್‌ ಅಗ್ರವಾಲ್ ಅವರನ್ನು ವಜಾಗೊಳಿಸಲಾಗುವುದು ಎಂಬ ವರದಿ ಇತ್ತು ಮತ್ತುಒಂದು ವೇಳೆ ಈ ರೀತಿ ಸಂಭವಿಸಿದಲ್ಲಿ ಅವರು ಎಷ್ಟು ಪಡೆಯುತ್ತಾರೆ ಎಂಬುದನ್ನು ಸಂಶೋಧನಾ ಸಂಸ್ಥೆ ಈಕ್ವಿಲಾರ್ ಲೆಕ್ಕಾಚಾರ ಮಾಡಿತ್ತು.


    ಇದನ್ನೂ ಓದಿ: ಈ ಆ್ಯಪ್ಸ್ ನಿಮ್ ಮೊಬೈಲ್​ನಲ್ಲಿದ್ರೆ ತಕ್ಷಣ ಡಿಲೀಟ್ ಮಾಡಿ! ಫೇಸ್ಬುಕ್ ಸೆಕ್ಯುರಿಟಿ ಅಲರ್ಟ್


    ಈಕ್ವಿಲಾರ್‌ನ ಅಂದಾಜಿನಲ್ಲಿ ಅಗ್ರವಾಲ್ ಮೂಲ ವೇತನದ ಒಂದು ವರ್ಷದ ಮೌಲ್ಯದ ಜೊತೆಗೆ ಎಲ್ಲವನ್ನು ಸೇರಿಸಿ ನೀಡಬೇಕಾಗುತ್ತದೆ ಎಂದು ಸುದ್ದಿ ಸಂಸ್ಥೆಯಾಗಿರುವ ರಾಯಿಟರ್ಸ್ ವರದಿ ಮಾಡಿದೆ.


    Twitter CIO Parag Agrawal sacked So much money goes to his account
    ಟ್ವಿಟರ್


    ಎಲೋನ್‌ ಮಸ್ಕ್‌ ಯಾರನ್ನೆಲ್ಲಾ ವಜಾಗೊಳಿಸಿದರು


    ಭಾರತೀಯ ಮೂಲದ ಸಿಇಒ ಹೊರತುಪಡಿಸಿ, ಟ್ವಿಟರ್‌ನಲ್ಲಿ ಕಾನೂನು, ನೀತಿ ಮತ್ತು ಟ್ರಸ್ಟ್‌ನ ಮುಖ್ಯಸ್ಥ ವಿಜಯ ಗಡ್ಡೆ ಮತ್ತು ಇನ್ನೂ ಇಬ್ಬರು ಉನ್ನತ ಕಾರ್ಯನಿರ್ವಾಹಕರನ್ನು ಮಸ್ಕ್ ವಜಾಗೊಳಿಸಿದ್ದಾರೆ ಎಂದು ಹೇಳಲಾಗಿದೆ.


    ಇದಿಷ್ಟು ಟ್ವಿಟರ್‌ನಲ್ಲಾದಂತಹ ಬದಲಾವಣೆಗಳಾಗಿವೆ. ಇದರಿಂದ ಇದುವರೆಗೆ ಟ್ವಿಟರ್‌ನ ಸ್ವಾಧೀನದ ಮೇಲಿದ್ದ ಗೊಂದಲಗಳು ಎಲೋನ್‌ ಮಸ್ಕ್‌ ಅವರು ಅಕ್ಟೋಬರ್‌ 27 ರಂದು ಮುಕ್ತಾಯಗೊಳಿಸಿದರು.


    ಇದನ್ನೂ ಓದಿ: ಮರೆತು ಹೋಯಿತೆ ಮೊಬೈಲ್ ಪಾಸ್‌ವರ್ಡ್? ಟೆನ್ಷನ್‌ ಬಿಡಿ, ಹುಡುಕುವ ಟಿಪ್ಸ್ ಇಲ್ಲಿದೆ ನೋಡಿ


    ಇದರಲ್ಲಿ ನಾವು ಮುಖ್ಯವಾಗಿ ಹೇಳುವುದಾದರೆ ಇದುವರೆಗೆ ಇದ್ದ ಚರ್ಚೆಗಳು ನಿವಾರಣೆಯಾಯ್ತು ಎಂದು ಹೇಳಬಹುದು.

    Published by:Harshith AS
    First published: